ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ ಸುಧಾರಾಣಿ

ಈ ಬಾರಿ ದೊಡ್ಮನೆಯೊಳಗೆ ಯಾವೆಲ್ಲಾ ಕಂಟೆಸ್ಟೆಂಟ್‌ ಹೋಗಬಹುದು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಬಲ್ಲ ಮೂಲಗಳಿಂದ ಬಿಬಿಕೆ 12ಗೆ ಕನ್ನಡದ ನಟಿ ಸುಧಾರಾಣಿ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಈ ಬಾರಿ ಬಿಗ್ ಬಾಸ್​ಗೆ ಹೋಗಲಿದ್ದಾರೆ ಕನ್ನಡದ ಎವರ್ ಗ್ರೀನ್ ನಟಿ

Sudharani BBK 12 -

Profile Vinay Bhat Sep 8, 2025 7:33 AM

ಕನ್ನಡದ ಜನಪ್ರಿಯ ಹಾಗೂ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 12 (Bigg Boss Kannada) ಆರಂಭಕ್ಕೆ ದಿನಗಣನೆ ಶುರುವಾಗಿದೆ. ಇದೇ ಸೆಪ್ಟೆಂಬರ್ 28 ರಿಂದ ದೊಡ್ಮನೆ ಆಟ ಶುರುವಾಗಿದೆ. ಇತ್ತೀಚೆಗಷ್ಟೆ ಕಿಚ್ಚ ಸುದೀಪ್ ಅವರ ಹುಟ್ಟುಹಬ್ಬದ ದಿನ ಬಿಗ್ ಬಾಸ್ ಕನ್ನಡ ಸೀಸನ್ 12ರ ಮೊದಲ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಬಿಡುಗಡೆ ಮಾಡಿತು. ಇದರ ಬೆನ್ನಲ್ಲೇ ಬಿಗ್ ಬಾಸ್ ಕುರಿತು ಒಂದೊಂದೆ ದೊಡ್ಡ ಅಪ್ಡೇಟ್ ಹೊರಬೀಳುತ್ತಿದೆ.

ಈ ಬಾರಿ ದೊಡ್ಮನೆಯೊಳಗೆ ಯಾವೆಲ್ಲಾ ಕಂಟೆಸ್ಟೆಂಟ್‌ ಹೋಗಬಹುದು ಎಂಬ ಪ್ರಶ್ನೆ ಎಲ್ಲರಲ್ಲಿಯೂ ಇನ್ನೂ ಹಾಗೇ ಕುತೂಹಲಕಾರಿಯಾಗಿ ಉಳಿದಿದೆ. ಸೋಷಿಯಲ್ ಮೀಡಿಯಾದಲ್ಲಿ ಒಂದಿಷ್ಟು ಹೆಸರು ಓಡಾಡುತ್ತಿದ್ದರೂ ಖಚಿತ ಮಾಹಿತಿ ಇಲ್ಲ. ಹೀಗಿರುವಾಗ ಬಲ್ಲ ಮೂಲಗಳಿಂದ ಬಿಬಿಕೆ 12ಗೆ ಕನ್ನಡದ ನಟಿ ಸುಧಾರಾಣಿ ಹೋಗಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

ಹೌದು, ಕನ್ನಡ ಹಿರಿತೆರೆ ಮತ್ತು ಕಿರಿತೆರೆಯಲ್ಲಿ ಗುರಿತಿಸಿರುವ ಚಂದನವನದ ಎವರ್ ಗ್ರೀನ್ ನಟಿ ಸುಧಾರಾಣಿ ಈ ಬಾರಿಯ ಬಿಗ್ ಬಾಸ್ ಸ್ಪರ್ಧಿ ಎನ್ನಲಾಗಿದೆ. ಇದಕ್ಕೆ ಪುಷ್ಠಿ ಎಂಬಂತೆ ಇತ್ತೀಚೆಗಷ್ಟೆ ಝೀ ಕನ್ನಡ ವಾಹಿನಿಯಲ್ಲಿ ಇವರು ನಟಿಸುತ್ತಿದ್ದ ಶ್ರೀರಸ್ತು ಶುಭಮಸ್ತು ಧಾರಾವಾಹಿ ಮುಕ್ತಾಯಗೊಂಡಿದೆ. ಹೀಗಾಗಿ ಅವರು ಬಿಗ್‌ ಬಾಸ್‌ಗೆ ಹೋಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.

BBK 12 Common People: ಈ ಬಾರಿ ಬಿಗ್ ಬಾಸ್ ಕನ್ನಡ ಮನೆಯೊಳಗೆ ನೀವೂ ಹೋಗಬಹುದು: ಜಸ್ಟ್ ಹೀಗೆ ಮಾಡಿ ಸಾಕು

ಈ ಹಿಂದೆ ನಟಿ ಶ್ರುತಿ ಅವರು ಬಿಗ್‌ ಬಾಸ್‌ ಸೀಸನ್‌ 3ರಲ್ಲಿ ಸ್ಪರ್ಧಿಸಿದ್ದರು. ಅವರೇ ಗೆದ್ದಿದ್ದರು.. ಸೀಸನ್‌ 4ರಲ್ಲಿ ನಟಿಯರಾದ ಸ್ಪರ್ಶ ರೇಖಾ, ಮಾಳವಿಕಾ ಅವಿನಾಶ್‌ ಸ್ಪರ್ಧೆ ಮಾಡಿದ್ದರು. ಆದರೆ ಬಿಗ್‌ಬಾಸ್‌ನಲ್ಲಿ ಈ 11 ವರ್ಷಗಳಲ್ಲಿ ಶ್ರುತಿ ಬಿಟ್ಟರೆ, ಇನ್ಯಾವುದೇ ಸೀಸನ್‌ನಲ್ಲಿ ಮಹಿಳಾ ಸ್ಪರ್ಧಿಗಳು ಗೆದ್ದಿಲ್ಲ. ನಟಿ ಶ್ರುತಿ ಅವರಂತೆ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿರುವ ನಟಿ ಸುಧಾರಾಣಿ ಅವರು ಈ ಬಾರೀ ಬಿಗ್‌ ಬಾಸ್‌ ಕನ್ನಡ ಸೀಸನ್‌ಗೆ ಬರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದ್ದು, ಬಂದರೆ ಅವರೇ ಗೆಲ್ಲುವುದು ಖಚಿತ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.