Bhagya Lakshmi Serial: ಹಣ ಉಳಿಸಲು ತಾನೇ ಅಡುಗೆ ಮಾಡಲು ಮುಂದಾದ ಆದೀಶ್ವರ್
ಆದೀ ದಿನಕ್ಕೆ 150 ರೂಪಾಯಿಗಿಂತ ಹೆಚ್ಚಿ ಖರ್ಚು ಮಾಡದಂತೆ ಹಾಗೂ ಸಾಮಾನ್ಯ ಮಿಡಲ್ ಕ್ಲಾಸ್ ಜನರಂತೆ ಇರಬೇಕಿರುವುದರಿಂದ ಈ ಹಣ ದಿನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಹೋಟೆಲ್ನಲ್ಲಿ ಊಟ ಮಾಡುವುದು ಬಿಟ್ಟು ತಾನೇ ತರಕಾರಿ ತಂದು ಅಡುಗೆ ಮಾಡಿದ್ದಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಆದೀಶ್ವರ್ ಕಾಮತ್, ಭಾಗ್ಯಾಗೆ ಚಾಲೆಂಜ್ ಮಾಡಿ ಒಂದು ವಾರ ನಾನು ಮಿಡಲ್ ಕ್ಲಾಸ್ ಜೀವನ ನಡೆಸುತ್ತೇನೆ ಎಂದು ಹೇಳಿದ್ದಾನೆ. ಇದಕ್ಕೆ ಭಾಗ್ಯ ಕೂಡ ಒಪ್ಪಿದ್ದಾಳೆ. ಅದರಂತೆ ಆದೀ ಭಾಗ್ಯ ಮನೆಗೆ ಬಂದು ಏಳು ದಿನಗಳ ಚಾಲೆಂಜ್ ಅನ್ನು ಶುರುಮಾಡಿದ್ದಾನೆ. ಆದರೆ, ಆದೀ ದಿನಕ್ಕೆ 150 ರೂಪಾಯಿಗಿಂತ ಹೆಚ್ಚಿ ಖರ್ಚು ಮಾಡದಂತೆ ಹಾಗೂ ಸಾಮಾನ್ಯ ಮಿಡಲ್ ಕ್ಲಾಸ್ ಜನರಂತೆ ಇರಬೇಕಿರುವುದರಿಂದ ಈ ಹಣ ದಿನಕ್ಕೆ ಸಾಕಾಗುತ್ತಿಲ್ಲ. ಹೀಗಾಗಿ ಹೋಟೆಲ್ನಲ್ಲಿ ಊಟ ಮಾಡುವುದು ಬಿಟ್ಟು ತಾನೇ ತರಕಾರಿ ತಂದು ಅಡುಗೆ ಮಾಡಿದ್ದಾನೆ.
ಮೊದಲ ದಿನ ಆದೀ ಹೊರಗಡೆ ಊಟ ಮಾಡಿದ್ದ ಅಲ್ಲದೆ ಬಸ್ನಲ್ಲಿ ಆಫೀಸ್ ಹೋಗಿ ಬಂದಿದ್ದ ಹೀಗಾಗಿ ಹಣ ಉಳಿದಿರಲಿಲ್ಲ.. ಮರುದಿನ ನಾನು ಮನೆಯಿಂದಲೇ ಕೆಲಸ ಮಾಡುವುದಾಗಿ ಆಫೀಸ್ನಲ್ಲಿ ತಾಂಡವ್ ಬಳಿ ಹೇಳಿ ಬಂದಿದ್ದಾನೆ. ಅದರಂತೆ ಮರುದಿನ ಬೇಗನೆ ತಿಂಡಿ ಮಾಡೋಣ ಎಂದು ಹೋಟೆಲ್ ಹೋಗಲು ಹೊರಟಿದ್ದಾನೆ. ಆಗ ಆದೀಗೆ ಈ ಹೋಟೆಲ್ಗೆ ಹಣ ಕೊಡುವ ಬದಲು ನಾನೇ ತರಕಾರಿ ತಂದು ಅಡುಗೆ ಮಾಡಬಹುದು ಅಲ್ವಾ ಎಂಬ ಆಲೋಚನೆ ಬರುತ್ತದೆ.
ಅದರಂತೆ ಆದೀ ತರಕಾರಿ ತರಲು ಹೊರಟಿದ್ದಾನೆ. ಇದೇ ಸಂದರ್ಭ ಭಾಗ್ಯ ಕೂಡ ತರಕಾರಿ ತರಲು ಅಂಗಡಿಗೆ ಹೊರಟಿದ್ದಾಳೆ. ಬಳಿಕ ಇಬ್ಬರೂ ಒಟ್ಟಿಗೆ ಅಂಗಡಿಗೆ ಹೋಗಿದ್ದಾರೆ. ಇಲ್ಲಿ ಆದೀಗೆ ಯಾವುದು ತೆಗೆದುಕೊಳ್ಳಬೇಕು ಎಂದು ಅರ್ಥ ಆಗುವುದಿಲ್ಲ.. ಅಲ್ಲದೆ ತರಕಾರಿ ಬೆಲೆ ಕೇಳಿ ತಲೆ ಬಿಸಿ ಆಗುತ್ತದೆ.. ಟೊಮೆಟೊ ತೆಗೆದುಕೊಳ್ಳುತ್ತೇನೆ ಎಂದು ಹಸಿರು-ಹಸಿರು ಆಗಿರುವ ಕಾಯಿ ಟೊಮೆಟೊ ತೆಗೆದುಕೊಳ್ಳುತ್ತಾನೆ. ಇದನ್ನು ಗಮನಿಸಿದ ಭಾಗ್ಯ, ಇದು ನಿಮಗೆ ಇವತ್ತಿಗೆ ಅಡುಗೆ ಮಾಡಲು ಅಲ್ವಾ.. ಕಾಯಿ ಟೊಮೊಟೊ ಯಾಕೆ ಎಂದು ಕೇಳುತ್ತಾಳೆ. ಆಗ ಆದೀ, ಹೋ.. ಇದು ಕಾಯಿ ಟೊಮೆಟೊನಾ? ಬೇಡ ಹಣ್ಣಿನದ್ದೆ ತೆಗೆದುಕೊಳ್ಳುತ್ತೇನೆ ಎಂದು ಬೇಕಾದ ತರಕಾರಿ ತೆಗೆದುಕೊಂಡಿದ್ದಾರೆ.
ಆದೀಶ್ವರ್ ಹೀಗೆ ತರಕಾರಿ ತೆಗೆದುಕೊಳ್ಳುವಾಗ ಆತನ ಆಫೀಸ್ ಸ್ಟಾಫ್ ಒಬ್ಬರು ಬಂದಿದ್ದಾರೆ. ಆತನನ್ನು ಗಮನಿಸಿದ ಆದೀ, ಇವನು ನನ್ನನ್ನು ನೋಡಿದರೆ ಅಷ್ಟೇ ಕತೆ ಎಂದು ಭಾಗ್ಯಾಳ ಹಿಂದೆ ಅವನಿಗೆ ಗೊತ್ತಾಗದಂತೆ ಅಡಗಿ ಕುಳಿತುಕೊಳ್ಳುತ್ತಾನೆ. ಆತ ಹೋದ ನಂತರ ಹಣಕೊಟ್ಟು ಇಬ್ಬರು ಜೊತೆಯಾಗಿ ಮನೆಗೆ ಬಂದಿದ್ದಾರೆ. ನಂತರ ಆದೀ ಅಡುಗೆ ಮಾಡಲು ಶುರುಮಾಡಿದ್ದಾನೆ. ಆದೀ ಅಡುಗೆಯಲ್ಲಿ ಎಕ್ಸ್ಪರ್ಟ್ ಅಲ್ಲ.. ಹೀಗಾಗಿ ಮಧ್ಯಾಹ್ನಕ್ಕೂ ಮುನ್ನ ಅಡುಗೆಗೆ ಕುಳಿತ ಆದೀ ಅಡುಗೆ ಮಾಡಿ ಮುಗಿಸುವಾಗ ಸಂಜೆ ಆಗಿದೆ.
ಇದರ ಮಧ್ಯೆ ಆದೀ ಆಫೀಸ್ನಲ್ಲಿ ತಾಂಡವ್ಗೆ ಮೀಟಿಂಗ್ ಅಟೆಂಡ್ ಆಗಿ ಪ್ರಾಜೆಕ್ಟ್ ಬಗ್ಗೆ ಪ್ರೆಸೆಂಟೇಷನ್ ಮಾಡುವಂತೆ ಹೇಳಿದ್ದ. ಅದರಂತೆ ಬಂದ ಕ್ಲೈಂಟ್ ಜೊತೆ ತಾಂಡವ್ ಪ್ರೆಸೆಂಟೇಷನ್ ಮಾಡಿದ್ದಾನೆ. ಆದರೆ, ಇಲ್ಲಿ ತಾಂಡವ್ಗೆ ಆದೀಶ್ವರ್ ಇಲ್ಲದೆ ಗಲಿಬಿಲಿ ಆಗಿದೆ. ಕೆಲವೊಂದನ್ನು ಎಕ್ಸ್ಪ್ಲೇನ್ ಮಾಡಲೇ ಸಾಧ್ಯವಾಗಲಿಲ್ಲ.. ಇದರಿಂದ ಬಂದ ಕ್ಲೈಂಟ್ಗಳು ಕೋಪಗೊಂಡಿದ್ದಾರೆ. ಅವರನ್ನು ಸಮಾಧನ ಪಡಿಸಲು ಆದೀಶ್ವರ್ಗೆ ಗೊತ್ತು.. ಅವರು ಬಂದು ಎಲ್ಲ ಎಕ್ಸ್ಪ್ಲೇನ್ ಮಾಡುತ್ತಾರೆ ಎಂದಿದ್ದಾನೆ.
ಛೇ ಇವತ್ತಿನ ಮೀಟಿಂಗ್ ವೇಸ್ಟ್ ಆಯಿತು.. ನೆಕ್ಸ್ ಪ್ರೆಸೆಂಟೇಷನ್ ಮಾಡುವಾಗ ಸರಿಯಾಗಿ ಪ್ರಿಪೇರ್ ಆಗಿ ಬನ್ನಿ ಎಂದು ಕ್ಲೈಂಟ್ಗಳು ತಾಂಡವ್ನ ಮುಖಕ್ಕೆ ಹೊಡೆದಂತೆ ಹೇಳಿ ಕಳುಹಿಸಿದ್ದಾರೆ. ಅತ್ತ ರಾಮ್ದಾಸ್ ಮನೆಯಲ್ಲಿ ಪೂಜಾಗೆ ಏಕಾಂಗಿ ತನ ಕಾಡುತ್ತಿದೆ. ಹೀಗಾಗಿ ರಾತ್ರಿವೇಳೆ ಕಿಶನ್ ಮದುವೆ ಆಲ್ಬಂ ನೋಡೋಣ ಎಂದು ತೋರಿಸಲು ಮುಂದಾಗಿದ್ದಾನೆ. ಇದರಲ್ಲಿ ಭಾಗ್ಯಾಳ ಫೋಟೋ ನೋಡಿ ಪೂಜಾ ಭಾವುಕಳಾಗಿದ್ದಾಳೆ. ನನಗೆ ಅಕ್ಕನನ್ನು ನೋಡಬೇಕು ಎಂದು ಹೇಳಿದ್ದಾಳೆ.
ಹೆಂಡತಿಯ ಆಸೆಯನ್ನು ಪೂರೈಸಲು ಕಿಶನ್ ಆ ರಾತ್ರಿಯೇ ಭಾಗ್ಯ ಮನೆಗೆ ಹೋಗೋಣ ಎಂದು ಪೂಜಾಳ ಕರೆದುಕೊಂಡು ಹೊರಟಿದ್ದಾನೆ. ಆಗ ಕನ್ನಿಕಾ ಈ ರಾತ್ರಿ ನೀವು ಯಾವಕಡೆ ಹೋಗುತ್ತಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾಳೆ. ಅದಕ್ಕೆ ಕಿಶನ್, ಪೂಜಾಗೆ ಅಕ್ಕ ಭಾಗ್ಯಾಳನ್ನು ನೋಡಬೇಕು ಅಂತ ಅನಿಸಿದೆ.. ಹೀಗಾಗಿ ಅಲ್ಲಿಗೆ ಹೋಗುತ್ತಿದ್ದೇವೆ ಎಂದಿದ್ದಾನೆ. ಕನ್ನಿಕಾಗೆ ಅನುಮಾನ ಬರುತ್ತದೆ.. ಸರಿ ನನಗೂ ಭಾಗ್ಯಾಳನ್ನು ನೋಡಬೇಕು.. ಮಾತನಾಡದೆ ತುಂಬಾ ದಿನ ಆಯಿತು.. ನಾನೂ ಬರುತ್ತೇನೆ ಒಟ್ಟಿಗೆ ಹೋಗೋಣ ಎಂದು ಹೊರಟಿದ್ದಾಳೆ.
Bigg Boss House Video: ಹೊಸ ಬಿಗ್ ಬಾಸ್ ಮನೆ ಹೇಗಿದೆ?: ಇಲ್ಲಿದೆ ನೋಡಿ ವಿಡಿಯೋ
ಸದ್ಯ ಇಲ್ಲಿಗೆ ಸಂಚಿಕೆ ಅಂತ್ಯವಾಗಿದೆ. ಈಗ ಇರುವ ಕುತೂಹಲ ಎಂದರೆ ಭಾಗ್ಯ ಮನೆಯಲ್ಲಿ ಆದೀಶ್ವರ್ ಇರುವುದು ಕನ್ನಿಕಾ, ಕಿಶನ್, ಪೂಜಾಗೆ ಗೊತ್ತಿಲ್ಲ.. ಇವರು ಭಾಗ್ಯ ಮನೆಗೆ ಬಂದಾಗ ಆದೀಯನ್ನು ನೋಡುತ್ತಾರ.. ಗೊತ್ತಾದರೆ ಏನಾಗುತ್ತೆ ಎಂಬುದು ಮುಂದಿನ ಸಂಚಿಕೆಯಲ್ಲಿ ನೋಡಬೇಕಿದೆ.