Chikkaballapur News: ಭಾರತೀಯ ಸಂಸ್ಕೃತಿಯಲ್ಲಿ ಬಾಗಿನಕ್ಕೆ ವಿಶೇಷ ಸ್ಥಾನಮಾನ, ಸಂಬಂಧಗಳ ಬೆಸೆಯುವಿಕೆ
ಆದಿಚುಂಚನಗಿರಿ ಶ್ರೀಮಠದ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾ ನದ ಸದಸ್ಯರಿಗೆ ಬಾಗೀನ ನೀಡುವ ಸತ್‌ಸಂಪ್ರದಾಯವನ್ನು ಪ್ರಾರಂಭಿಸಲಾಗಿದೆ. ಕಾರಣ ಎಷ್ಟೋ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ತವರಿಗೆ ಕರೆಸಿ ಹರಿಸಿಣ ಕುಂಕುಮ ಸಹಿತ ಬಾಗೀನ ಕೊಡುವ ಅವಕಾಶ ಇರುವುದಿಲ್ಲ

ಭಾರತೀಯ ಸಂಸ್ಕೃತಿಯಲ್ಲಿ ಬಾಗೀನಕ್ಕೆ ವಿಶೇಷವಾದ ಸ್ಥಾನಮಾನವಿದ್ದು,ಗೌರಿಹಬ್ಬದಲ್ಲಿ ತವರಿನ ಸಿರಿಯಾಗಿ ತಂದೆತಾಯಿ ಅಥವಾ ಅಣ್ಣ ತಮ್ಮಂದಿರು ಬಾಗೀನ ನೀಡುವುದರಿಂದ ಸಂಬAಧಗಳು ವೃದ್ಧಿಯಾಗಿ ಮನೆಯಲ್ಲಿ ಸುಖ ಸಂತೋಷ ನೆಲೆಸಲಿದೆ ಎಂದು ಆದಿಚುಂಚನಗಿರಿ ಶಾಖಾಮಠದ ಶ್ರೀಮಂಗಳನಾಥಸ್ವಾಮೀಜಿ ಹೇಳಿದರು.

ಚಿಕ್ಕಬಳ್ಳಾಪುರ: ಭಾರತೀಯ ಸಂಸ್ಕೃತಿಯಲ್ಲಿ ಬಾಗಿನಕ್ಕೆ ವಿಶೇಷವಾದ ಸ್ಥಾನಮಾನವಿದ್ದು, ಗೌರಿಹಬ್ಬದಲ್ಲಿ ತವರಿನ ಸಿರಿಯಾಗಿ ತಂದೆತಾಯಿ ಅಥವಾ ಅಣ್ಣ ತಮ್ಮಂದಿರು ಬಾಗೀನ ನೀಡುವು ದರಿಂದ ಸಂಬಂಧಗಳು ವೃದ್ಧಿಯಾಗಿ ಮನೆಯಲ್ಲಿ ಸುಖ ಸಂತೋಷ ನೆಲೆಸಲಿದೆ ಎಂದು ಆದಿಚುಂಚ ನಗಿರಿ ಶಾಖಾಮಠದ ಶ್ರೀಮಂಗಳನಾಥಸ್ವಾಮೀಜಿ ಹೇಳಿದರು.
ನಗರ ಹೊರವಲಯ ಸೂಲಾಲಪ್ಪನದಿನ್ನೆ ಶ್ರೀ ವೀರಾಂಜನೇಯಸ್ವಾಮಿ ಸನ್ನಿಧಿಯಲ್ಲಿ ಸೋಮ ವಾರ ನಡೆದ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಸದಸ್ಯರಿಗೆ ಶ್ರೀಮಠದಿಂದ ಏರ್ಪಡಿಸಿದ್ದ ಬಾಗಿನ ಸಮರ್ಪಣೆ ಕಾರ್ಯಕ್ರಮದಲ್ಲಿ ಅವರು ಬಾಗೀನ ಸಮರ್ಪಿಸಿ ಅವರು ಮಾತನಾಡಿದರು.
ಆದಿಚುಂಚನಗಿರಿ ಶ್ರೀಮಠದ ವತಿಯಿಂದ ಇದೇ ಮೊದಲ ಬಾರಿಗೆ ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ಸದಸ್ಯರಿಗೆ ಬಾಗೀನ ನೀಡುವ ಸತ್‌ಸಂಪ್ರದಾಯವನ್ನು ಪ್ರಾರಂಭಿಸಲಾಗಿದೆ. ಕಾರಣ ಎಷ್ಟೋ ಕುಟುಂಬಗಳಲ್ಲಿ ಹೆಣ್ಣು ಮಕ್ಕಳನ್ನು ತವರಿಗೆ ಕರೆಸಿ ಹರಿಸಿಣ ಕುಂಕುಮ ಸಹಿತ ಬಾಗೀನ ಕೊಡುವ ಅವಕಾಶ ಇರುವುದಿಲ್ಲ. ಇದನ್ನು ಮನಗಂಡು ಗೌರಿಗಣಪತಿ ಹಬ್ಬದಲ್ಲಿ ಹೆಣ್ಣುಮಕ್ಕಳು ಸಂಕಟಪಡಬಾರದು, ಸಂತೋಷದಿಂದ ಹಬ್ಬದಲ್ಲಿ ತೊಡಗಬೇಕು ಎಂಬ ಮಹದಾಸೆಯಿಂದ ಅನುಸರಿಸದವರಿಗೆ ಸಂಸ್ಕಾರವಿಲ್ಲ ಎಂದು ಭಾವಿಸಬೇಕು ಎಂದರು.
ಇದನ್ನೂ ಓದಿ: Chinthamani News: ಭಕ್ತಿಯಿಂದ ಅಂತರಂಗದ ಶುದ್ಧಿ ಸಾಧ್ಯ: ಕೈವಾರ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ.ಎಂ.ಆರ್.ಜಯರಾಮ್ ಅಭಿಮತ
ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ೬೦ಕ್ಕೂ ಹೆಚ್ಚು ಗೌಡ್ತಿಯರನ್ನು ಶ್ರೀಮಠದ ಆಶ್ರಯದಲ್ಲಿ ಬಾಗೀನ ಸಮರ್ಪಣೆ ಕಾರ್ಯಕ್ರಮ ಏರ್ಪಡಿಸುತ್ತುರುವುದು ಶುಭ ಸೂಚನೆಯ ಲಕ್ಷಣವಾಗಿದೆ. ಚುಂಚಶ್ರೀಗಳ ಆಶೀರ್ವಾದದಿಂದ ಈ ಮೂರು ಜಿಲ್ಲೆಗಳಲ್ಲಿ ಸಮರ್ಥ ವಾದ ಮಹಿಳಾ ಸಂಘಟನೆ ಕಟ್ಟುವುದು ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಜಿ ಅವರ ಸಂಕಲ್ಪವಾಗಿದೆ.ಶ್ರೀಮಠದ ಆಶ್ರಯದಲ್ಲಿ ಮುನ್ನಡೆಯುವ ಈ ಸಂಘಟನೆ ಇಂದು ೬೦ ಮಹಿಳೆ ಯರಿಂದ ಪ್ರಾರಂಭವಾಗುತ್ತಿದ್ದರೂ ಭವಿಷ್ಯದಲ್ಲಿ ಬೈರವೇಶ್ವರನ ಆಶೀವಾದ ಬಲದಿಂದ ೬೦ ಲಕ್ಷವನ್ನು ಮುಟ್ಟುವ ವಿಶ್ವಾಸವಿದೆ ಎಂದರು.
ಇದೇ ವೇಳೆ ಹಲವು ಮಹಿಳೆಯರು ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನವನ್ನು ಸಶಕ್ತವಾಗಿ ಕಟ್ಟುವ ವಿಶ್ವಾಸ ವ್ಯಕ್ತಪಡಿಸಿದರಲ್ಲದೆ, ಸಂಘಟನೆಗೆ ಪೀಠಾಧ್ಯಕ್ಷರೇ ತಂದೆ ತಾಯಿ. ಅವರ ಮಾರ್ಗ ದರ್ಶನದಲ್ಲಿ ರಾಜ್ಯ ಮಾತ್ರವಲ್ಲ ದೇಶಕ್ಕೆ ಮಾದರಿಯಾದ ಪ್ರತಿಷ್ಠಾನ ನಮ್ಮದು ಎಂದು ಹೆಮ್ಮೆ ಪಡುವ ಹಾಗೆ ಇದನ್ನು ಮುನ್ನಡೆಸಿಕೊಂಡು ಹೋಗೋಣ, ಇದಕ್ಕೆ ನೀವೇ ಸಾಕ್ಷಿಗುರುಗಳೇ ಎಂದು ಮಂಗಳನಾಥಸ್ವಾಮೀಜಿ ಸಮಕ್ಷಮದಲ್ಲಿ ಸಂಕಲ್ಪ ಕೈಗೊಂಡರು.
ಈ ವೇಳೆ ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥಸ್ವಾಮಿ, ಬಿಜಿಎಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಮಾಲೂರು ಬೈಯಣ್ಣ,ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಠಾನದ ರಾಜ್ಯ ಉಪಾ ಧ್ಯಕ್ಷೆ ಉಷಾ ಆಂಜನೇಯರೆಡ್ಡಿ, ನಿರ್ದೇಕರಾದ ಅನುಸೂಯ ಆನಂದ್, ವನಿತಾ ಶ್ರೀನಿವಾಸ್ ಮತ್ತಿತರರು ಇದ್ದರು.