Bhagya Lakshmi Serial: ಟ್ವಿಸ್ಟ್ ಕೊಟ್ಟ ನಿರ್ದೇಶಕರು: ಭಾಗ್ಯ-ಆದೀಶ್ವರ್ ನಡುವೆ ಅರಳಿತು ಪ್ರೀತಿಯ ಹೂವು
ಪ್ರೋಮೋದಲ್ಲಿ ಆದೀಶ್ವರ್ ಮತ್ತು ಭಾಗ್ಯಾ ಪ್ರೇಮಾಂಕುರದ ಮೊದಲ ಹಂತವನ್ನು ತೋರಿಸಲಾಗಿದೆ. ಭ್ಯಾಗ್ಯ ಒಂದು ಕಡೆ ತೆರಳುತ್ತಿರುವಾಗ ರೋಡ್ ಮಧ್ಯೆ ಕಾರ್‌ನ ಹಿಂಭಾಗದ ಚಕ್ರ ಪಂಚರ್ ಆಗಿರುತ್ತದೆ. ಸ್ವಾವಲಂಭಿ ಭಾಗ್ಯಾ ಯಾರ ಸಹಾಯವಿಲ್ಲದೇ ಚಕ್ರ ಬದಲಿಸುತ್ತಾ ಒರಿತ್ತಾಳೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಆದಿ, ಕಾರ್ ನಿಲ್ಲಿಸಿ ಭಾಗ್ಯ ಕಷ್ಟ ಪಡುತ್ತಿರುವುದನ್ನು ಕಂಡು ಓಡಿ ಬಂದು ಸಹಾಯ ಮಾಡುತ್ತಾನೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆಯನ್ನು ಹೇಗಾದರು ಮಾಡಿ ಭಾಗ್ಯ ದೊಡ್ಡ ಜವಾಬ್ದಾರಿ ಮುಗಿಸಿಬಿಟ್ಟಿದ್ದಾಳೆ. ಈ ಮದುವೆ ಮಾಡಿಲು ಭಾಗ್ಯಾಗೆ ಎದುರಾದ ಸಂಕಷ್ಟ ಅಷ್ಟಿಟ್ಟಲ್ಲ.. ಹಣದ ಸಮಸ್ಯೆ ಒಂದು ಕಡೆಯಾದರೆ ಮತ್ತೊಂದೆಡೆ ಕಿಶನ್ ಮನೆಯವರು ಭಾಗ್ಯಾಳಿಗೆ ಬೆಂಬಿಡದೆ ತೊಂದರೆ ಕೊಡುತ್ತಿದ್ದರು. ಒಂದು ಹಂತದಲ್ಲಿ ಈ ಮದುವೆ ನಿಲ್ಲಿಸಲು ಆದೀಶ್ವರ್ ಕಾಮತ್ ಭಾಗ್ಯಾಳಿಗೆ ಕೋಟಿ ಕೋಟಿ ಹಣ ಕೊಡಲು ಮುಂದಾಗಿದ್ದ.. ಆ ಬಳಿಕ ಭಾಗ್ಯಾಳ ಒಳ್ಳೆಯ ಗುಣ ಆದೀಗೆ ತಿಳಿಯುತ್ತ ಬಂತು. ಅದೀಗ ಪ್ರೀತಿಯಡೆಗೆ ತಿರುಗುವ ಸೂಚನೆ ಕೊಟ್ಟಿದ್ದಾರೆ ನಿರ್ದೇಶಕರು.
ಹೌದು, ಭಾಗ್ಯ ತನ್ನ ತಂಗಿಯ ಮದುವೆ ಮಾಡಿಸಿ ಕೈತೊಳೆದುಕೊಂಡಿದ್ದಾಳೆ. ಆದರೆ, ತನ್ನ ಜೀವನ ಇನ್ನು ಹಾಗೇ ಇದೆ. ಗಂಡ ಎನಿಸಿಕೊಂಡ ತಾಂಡವ್ ಬೇರೆ ಹುಡುಗಿ ಜೊತೆ ಸಂತೋಷದಲ್ಲಿದ್ದಾನೆ. ಆದರೆ, ಭಾಗ್ಯ ಜೀವನದಲ್ಲಿ ಗಂಡು ದಿಕ್ಕಿಲ್ಲ. ಇಬ್ಬರು ಮಕ್ಕಳನ್ನೂ ಭಾಗ್ಯ ಸಾಕಬೇಕಿದೆ.. ಮನೆಯ ಇಎಮ್ಐ ಕಟ್ಟಬೇಕಿದೆ. ಮದುವೆಗೆ ಮಾಡಿದ ಸಾಲ ತೀರಿಸಬೇಕಿದೆ. ಹೀಗಿರುವಾಗ ಭಾಗ್ಯಾಳ ಕಷ್ಟ ಹಂಚಿಕೊಳ್ಳಲು ಆದೀಶ್ವರ್ ಕಾಮತ್ ಜೊತೆಯಾಗುವ ಸೂಚನೆ ಸಿಕ್ಕಿದೆ.
ಈಗಾಗಲೇ ಭಾಗ್ಯಾಳ ಗುಣಕ್ಕೆ ಆದೀಶ್ವರ್ ಕಾಮತ್ ಮನಸೋತಿದ್ದಾನೆ. ಇದಕ್ಕಾಗಿಯೇ ಆತ ಪೂಜಾಳ ಮದುವೆ ದಿನ ಭಾಗ್ಯಾಳ ಮುಂದೆ ಮಂಡಿಯೂರಿ, ಕೈ ಮುಗಿದು, ಕಣ್ಣೀರಿಟ್ಟು ಕ್ಷಮೆ ಕೇಳಿದ್ದು. ಭಾಗ್ಯಾಳ ಛಲ, ಆಕೆಯ ನಡವಳಿಕೆ, ಆಕೆಯ ಮಾತುಗಳೆಲ್ಲ ಆದೀಗೆ ಖುಷಿ ಆಗಿದೆ. ಮಿಡಲ್ ಕ್ಲಾಸ್ ಫ್ಯಾಮಿಲಿ ಎಂದರೆ ಹಣಕ್ಕೋಸ್ಕರ ಕೈಚಾಚುವವರು ಎಂಬ ಕೆಟ್ಟ ಭಾವನೆಯಲ್ಲಿದ್ದ ಆದೀಗೆ ಕಣ್ಣು ತೆರೆಸಿದ್ದು ಕೂಡ ಇದೇ ಭಾಗ್ಯ. ಇದೀಗ ಭಾಗ್ಯಾ ಜೀವನ ಹೊಸ ಆಯಾಮವನ್ನು ಪಡೆದುಕೊಳ್ಳಲಿದೆ.
ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಒಂದು ಪ್ರೋಮೋದಲ್ಲಿ ಆದೀಶ್ವರ್ ಮತ್ತು ಭಾಗ್ಯಾ ಪ್ರೇಮಾಂಕುರದ ಮೊದಲ ಹಂತವನ್ನು ತೋರಿಸಲಾಗಿದೆ. ಭ್ಯಾಗ್ಯ ಒಂದು ಕಡೆ ತೆರಳುತ್ತಿರುವಾಗ ರೋಡ್ ಮಧ್ಯೆ ಕಾರ್‌ನ ಹಿಂಭಾಗದ ಚಕ್ರ ಪಂಚರ್ ಆಗಿರುತ್ತದೆ. ಸ್ವಾವಲಂಭಿ ಭಾಗ್ಯಾ ಯಾರ ಸಹಾಯವಿಲ್ಲದೇ ಚಕ್ರ ಬದಲಿಸುತ್ತಾ ಒರಿತ್ತಾಳೆ. ಇದೇ ಮಾರ್ಗದಲ್ಲಿ ತೆರಳುತ್ತಿದ್ದ ಆದಿ, ಕಾರ್ ನಿಲ್ಲಿಸಿ ಭಾಗ್ಯ ಕಷ್ಟ ಪಡುತ್ತಿರುವುದನ್ನು ಕಂಡು ಓಡಿ ಬಂದು ಸಹಾಯ ಮಾಡುತ್ತಾನೆ. ಆತನೇ ಹೊಸ ಟೈಯರ್ ಹಾಕಿ ಕೊಡುತ್ತಾನೆ. ಭಾಗ್ಯ ಎಷ್ಟೇ ಬೇಡ ಎಂದರೂ ಆದೀ ಕೇಳುವುದಿಲ್ಲ.
ಬಳಿಕ ಕೈ ತೊಳೆದುಕೊಳ್ಳಲು ಭಾಗ್ಯಾ ನೀರು ನೀಡಲು ಬಂದಾಗ, ಮೊದಲು ನೀವು ಕೈಗಳನ್ನು ಸ್ವಚ್ಛಗೊಳಿಸಿ ಎಂದು ಆದೀ ಭಾಗ್ಯಾಳ ಕೈಗೆ ನೀರು ಹಾಕುತ್ತಾನೆ. ಈ ವೇಳೆ ಇಬ್ಬರು ಮುಖ-ಮುಖ ನೋಡಿಕೊಂಡಿದ್ದು, ಇಬ್ಬರ ಮುಖದಲ್ಲಿ ಮಂದಹಾಸ ಮೂಡಿದೆ. ಇದು ಪ್ರೀತಿಯ ಮುನ್ಸೂಚನೆಯಂತೆ ನಿರ್ದೇಶಕರು ತೋರಿಸಿದ್ದಾರೆ.
ಸದ್ಯ ಭಾಗ್ಯ-ಆದೀ ಲವ್ ಟ್ರ್ಯಾಕ್ ಸಾಕಷ್ಟು ಕುತೂಹಲ ಮೂಡಿಸಿದೆ. ಯಾಕೆಂದರೆ ತಾಂಡವ್ ಭಾಗ್ಯಾಳ ಗಂಡನೇ ಎಂಬುದು ಇನ್ನೂ ಆದೀಶ್ವರ್ಗೆ ತಿಳಿದಿಲ್ಲ. ವ್ಯವಹಾರದಲ್ಲಿ ಆದೀ ಮತ್ತು ತಾಂಡವ್ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದಾರೆ. ಒಬ್ಬರಿಗೊಬ್ಬರು ಬ್ರದರ್ ಅಂತ ಕರೆಯುವಷ್ಟು ಆಪ್ತರಾಗಿದ್ದಾರೆ. ಈಗ ತಾಂಡವ್ ಮಾಜಿ ಪತ್ನಿಯನ್ನೇ ಆದೀ ಲವ್ ಮಾಡುತ್ತಾನ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಉಂಟಾಗಿದೆ. ಇದು ತಾಂಡವ್ಗೆ ಗೊತ್ತಾದರೆ ಏನೆಲ್ಲ ನಡೆಯಲಿದೆ ಎಂಬುದು ನೋಡಬೇಕಿದೆ.
Bhagya Lakshmi TRP: ಪೂಜಾ-ಕಿಶನ್ ಕಲ್ಯಾಣೋತ್ಸವಕ್ಕೆ ಮನಸೋತ ಜನರು: ಸಿಕ್ಕ ಟಿಆರ್ಪಿ ಎಷ್ಟು ನೋಡಿ