Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ 2 ವಿನ್ನರ್ ಇವರೇ?: ವೈರಲ್ ಆಗ್ತಿದೆ ಹೆಸರು
Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಇದೀಗ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಯಾವ ಜೋಡಿ ವಿನ್ನರ್ ಆಗುತ್ತೆ ಎಂದು ಗೊತ್ತಾಗಲಿದೆ.

Bharjari Bachelors Final

ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚ್ಯುಲರ್ಸ್ (Bharjari Bachelors) ಸೀಸನ್ 2 ಇದೀಗ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮೊದಲ ಸೀಸನ್‌ನ ಯಶಸ್ಸಿನ ಬಳಿಕ ಎರಡನೇ ಸೀಸನ್ಗೂ ಅಮೋಘ ರೆಸ್ಪಾನ್ಸ್ ಕೇಳಿಬಂದಿದೆ. ಇದರಲ್ಲಿ ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಆಗಿದ್ದಾರೆ. ಪ್ರತಿವಾರ ಒಂದಲ್ಲ ಒಂದು ವಿಭಿನ್ನ ಕಾನ್ಪೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದ ಈ ಶೋ ಇದೀಗ ಕೊನೆಯಾಗಲಿದೆ.
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಇದೀಗ ಗ್ರ್ಯಾಂಡ್ ಫಿನಾಲೆ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಕೊನೆಯಲ್ಲಿ ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ಯಾವ ಜೋಡಿ ವಿನ್ನರ್ ಆಗುತ್ತೆ ಎಂದು ಗೊತ್ತಾಗಲಿದೆ. ಫಿನಾಲೆ ಕಣದಲ್ಲಿ ಉಲ್ಲಾಸ್, ದರ್ಶನ್, ಹುಲಿ ಕಾರ್ತಿಕ್, ಪ್ರೇಮ್ ಥಾಪ, ಪ್ರವೀಣ, ಭುವನೇಶ್, ಡ್ರೋನ್ ಪ್ರತಾಪ್, ಸುನೀಲ, ಸೂರ್ಯ, ರಕ್ಷಕ್ ಬುಲೆಟ್ ಮಿಂಚುತ್ತಿದ್ದಾರೆ.
10 ಮೆಂಟರ್ಸ್ ಆಗಿ ಲಕ್ಷಣ ಖ್ಯಾತಿಯ ವಿಜಯಲಕ್ಷ್ಮೀ, ಅಮೃತಧಾರೆ ಖ್ಯಾತಿಯ ಅಮೃತಾ, ರಾಮಾಚಾರಿ ಖ್ಯಾತಿಯ ಅಭಿಗ್ನಾ ಭಟ್, ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಪವಿ ಪೂವಪ್ಪ, ಗಿಚ್ಚಿ ಗಿಲಿಗಿಲಿ ಖ್ಯಾತಿಯ ಅನನ್ಯ ಅಮರ್, ಕನ್ನಡತಿ ಖ್ಯಾತಿಯ ರಮೋಲಾ ಹಾಗೂ ಮಹಾನಟಿ ಶೋ ಖ್ಯಾತಿಯ ಗಗನಾ, ಧನ್ಯಶ್ರೀ, ಅಮೃತಾ ರಾಜ್ ಇದ್ದಾರೆ.
ಈ ಜೋಡಿಗಳ ಪೈಕಿ ಒಬ್ಬರು ಈ ಸೀಸನ್‌ನ ವಿನ್ನರ್ ಆಗಲಿದ್ದಾರೆ. ಈ ಮೂಲಕ ಇಷ್ಟು ದಿನಗಳ ಕಾಲ ವಿಭಿನ್ನವಾಗಿ ಪರ್ಫಾರ್ಮೆನ್ಸ್ ನೀಡಿದ ಸ್ಪರ್ಧಿಗಳಿಗೆ ಕೊನೆಗೂ ತಕ್ಕ ಫಲ ಸಿಗಲಿದೆ. ಸದಾ ವಿಭಿನ್ನ ಟಾಸ್‌ಗಳನ್ನು ನೀಡುತ್ತಿದ್ದ ತೀರ್ಪುಗಾರರಾದ ರವಿಚಂದ್ರನ್ ಹಾಗೂ ರಚಿತ ರಾಮ್ ಸ್ಪರ್ಧಿಗಳನ್ನು ತೂಗಿ ಅಳೆದು ಅಂತಿಮವಾಗಿ ಜಯಶಾಲಿಗಳನ್ನು ಘೋಷಿಸಲಿದ್ದಾರೆ.
ಇದೇ ಭಾನುವಾರ ಸಂಜೆ 6 ಗಂಟೆಗೆ ಫಿನಾಲೆ ಪ್ರಸಾರಗೊಳ್ಳಲಿದೆ. ಡ್ರೋನ್, ರಕ್ಷಕ್ ಬುಲೆಟ್ ಸೇರಿದಂತೆ 10 ಜೋಡಿಗಳು ಫಿನಾಲೆನಲ್ಲಿ ಮಿಂಚುತ್ತಿದ್ದು, ಇದರಲ್ಲಿ ಒಂದೇ ತಂಡ ಸೀಸನ್ ವಿನ್ನರ್ ಆಗಲಿದೆ. ಯಾರು ವಿಜೇತರಾಗುತ್ತಾರೆ ಎಂಬ ಕುತೂಹಲ ಹಾಗೆಯೇ ಉಳಿದಿದ್ದು, ಭಾನುವಾರ ಫಿನಾಲೆ ಪ್ರಸಾರದ ಬಳಿಕ ವಿಜೇತರ ಹೆಸರು ಅಧಿಕೃತವಾಗಿ ಹೊರಬೀಳಲಿದೆ.
Zee Kannada
— Harshavardhan_creations (@CreativeHarsha) July 22, 2025
Bharjari Bachelors Season 2
1 Sunil - amritha
2 Rakshak - Ramola
3 Drone Pratap - gagana pic.twitter.com/1iWPvSvBvM
ರಕ್ಷಕ್-ರಮೋಲಾ, ಡ್ರೋನ್ ಪ್ರತಾಪ್-ಗಗನಾ ಜೋಡಿಗೆ ಹೆಚ್ಚು ಕ್ರೇಜ್ ಇದ್ದು, ಸೋಷಿಯಲ್ ಮೀಡಿಯಾದಲ್ಲಿ ಇವರಿಬ್ಬರಿಗೂ ಹೆಚ್ಚಿನ ಬೆಂಬಲಿಗರಿದ್ದಾರೆ. ಅನೇಕರು ರಕ್ಷಕ್ ಗೆಲ್ಲಬೇಕು ಅಂತಿದ್ದಾರೆ. ಡ್ರೋನ್ ಪ್ರತಾಪ್ ಕೂಡ ಒಳ್ಳೆಯ ಸ್ಪರ್ಧಿ, ಆ ಜೋಡಿ ಗೆಲ್ಲುವುದು ಫಿಕ್ಸ್ ಎನ್ನುತ್ತಿದ್ದಾರೆ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆದಂತೆ ಸುನಿಲ್-ಅಮೃತಾ ಜೋಡಿ ವಿನ್ನರ್ ಪಟ್ಟ ತೊಟ್ಟಿದ್ದಾರಂತೆ. ರಕ್ಷಕ್- ರಮೋಲಾ ರನ್ನರ್-ಅಪ್, ಡ್ರೋನ್ ಪ್ರತಾಪ್- ಗಗನ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.
Bhagya Lakshmi Serial: ಟ್ವಿಸ್ಟ್ ಕೊಟ್ಟ ನಿರ್ದೇಶಕರು: ಭಾಗ್ಯ-ಆದೀಶ್ವರ್ ನಡುವೆ ಅರಳಿತು ಪ್ರೀತಿಯ ಹೂವು