ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi TRP: ಪೂಜಾ-ಕಿಶನ್ ಕಲ್ಯಾಣೋತ್ಸವಕ್ಕೆ ಮನಸೋತ ಜನರು: ಸಿಕ್ಕ ಟಿಆರ್​ಪಿ ಎಷ್ಟು ನೋಡಿ

Bhagya Lakshmi Serial TRP: ಹೌದು, ಕಳೆದ ವಾರ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ-ಕಿಶನ್ ಕಲ್ಯಾಣೋತ್ಸವ ನಡೆಯಿತು. ಇದು ಸಾಕಷ್ಟು ಟ್ವಿಸ್ಟ್-ಟರ್ನ್ ಮೂಲಕ ವೀಕ್ಷಕರಲ್ಲಿ ರೋಚಕತೆ ಸೃಷ್ಟಿಸಿತು. ಇವೆಲ್ಲದರ ಪರಿಣಾಮ ಭಾಗ್ಯಲಕ್ಷ್ಮೀ ಟಿಆರ್ಪಿ ಚೇತರಿಕೆ ಕಂಡಿದೆ.

ಪೂಜಾ-ಕಿಶನ್ ಕಲ್ಯಾಣೋತ್ಸವಕ್ಕೆ ಮನಸೋತ ಜನರು

Bhagya lakshmi serial

Profile Vinay Bhat Jul 25, 2025 7:44 AM

ಕನ್ನಡ ಕಿರುತೆರೆಯಲ್ಲಿ (Kannada Serial) ಸುಮಾರು 30ಕ್ಕೂ ಅಧಿಕ ಧಾರಾವಾಹಿಗಳು ಪ್ರಸಾರ ಕಾಣುತ್ತಿದೆ. ಇವುಗಳಲ್ಲಿ ನಂಬರ್ ಒನ್ ಧಾರಾವಾಹಿ ಯಾವುದು ಮತ್ತು ಯಾವ ಸ್ಥಾನಕ್ಕೆ ಟಿಆರ್​ಪಿಯೇ ಇಲ್ಲ ಎಂಬುದು ಪ್ರತಿ ವಾರ ಹೊರಬೀಳುತ್ತದೆ. ಸೀರಿಯಲ್​ಗಳ ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಅದರಂತೆ ಇದೀಗ 28ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಈ ವಾರದ ಬಿಗ್ ಅಪ್ಡೇಟ್ ಎಂದರೆ ಕಲರ್ಸ್ ಕನ್ನಡದಲ್ಲಿ ಕಳೆದ ಕೆಲವು ವಾರಗಳಿಂದ ಕುಸಿದಿದ್ದ ಭಾಗ್ಯಲಕ್ಷ್ಮೀ ಧಾರಾವಾಹಿ ಟಿಆರ್​ಪಿ ಈಗ ಪುಟಿದೆದ್ದಿದೆ.

ಹೌದು, ಕಳೆದ ವಾರ ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಪೂಜಾ-ಕಿಶನ್ ಕಲ್ಯಾಣೋತ್ಸವ ನಡೆಯಿತು. ಇದು ಸಾಕಷ್ಟು ಟ್ವಿಸ್ಟ್-ಟರ್ನ್ ಮೂಲಕ ವೀಕ್ಷಕರಲ್ಲಿ ರೋಚಕತೆ ಸೃಷ್ಟಿಸಿತು. ಒಂದುಕಡೆ ಭಾಗ್ಯನೇ ಮದುವೆ ನಿಲ್ಲಿಸಿದ ಪ್ರೋಮೋ ಸದ್ದು ಮಾಡಿದರೆ ಮತ್ತೊಂದೆಡೆ, ತಾಂಡವ್​ ದಿಢೀರ್ ಎಂಟ್ರಿ ಮಾತ್ರವಲ್ಲದೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್ - ಲಕ್ಷ್ಮೀ ಕೂಡ ಪೂಜಾ ಮದುವೆಗೆ ಬಂದಿದ್ದು ವೀಕ್ಷರನ್ನು ಹಿಡಿದು ಕೂರಿಸಿತ್ತು. ಇವೆಲ್ಲದರ ಪರಿಣಾಮ ಭಾಗ್ಯಲಕ್ಷ್ಮೀ ಟಿಆರ್​ಪಿ ಚೇತರಿಕೆ ಕಂಡಿದೆ.

ಭಾಗ್ಯಲಕ್ಷ್ಮೀ ಧಾರಾವಾಹಿ 4.6 ಟಿವಿಆರ್‌ ದಾಖಲಿಸಿದೆ. ಆ ಮೂಲಕ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ಮೊದಲ ಸ್ಥಾನ ನಂದಗೋಕುಲ ಧಾರಾವಾಹಿಗೆ ಸಿಕ್ಕಿದೆ. ಇದು 4.9 ಟಿವಿಆರ್‌ ದಾಖಲಿಸಿದೆ. ನ್ಯಾಯಕ್ಕಾಗಿ ಹೋರಾಡುವ ಲಾಯರ್ ಭಾರ್ಗವಿ ಕಥೆ ಇರುವ ಭಾರ್ಗವಿ ಎಲ್‌ಎಲ್‌ಬಿ 4.6 ಟಿವಿಆರ್‌ ಮೂಲಕ ಮೂರನೇ ಸ್ಥಾನ ಹಾಗೂ ಮುದ್ದು ಸೊಸೆಗೆ (4.5 ಟಿವಿಆರ್‌) ನಾಲ್ಕನೇ ಸ್ಥಾನ ಲಭಿಸಿದೆ.

Kannada Serial TRP: ಕನ್ನಡ ಕಿರುತೆರೆಯಲ್ಲಿ ಇತಿಹಾಸ ಬರೆದ ಕರ್ಣ: ಸತತ ಮೂರನೇ ವಾರ ನಂ. 1

ಇನ್ನು ಒಟ್ಟಾರೆಯಾಗಿ ನೋಡುವುದಾದರೆ, 28ನೇ ವಾರದ ನಂಬರ್ ಧಾರಾವಾಹಿ ಕರ್ಣ ಆಗಿದೆ. ಇದಕ್ಕೆ ಅರ್ಬನ್ + ರೂರಲ್ 10.2 ಟಿವಿಆರ್‌ ಲಭಿಸಿದೆ. 9.0 ಟಿವಿಆರ್ ದಾಖಲಿಸಿ ಲಕ್ಷ್ಮೀ ನಿವಾಸ ಎರಡನೇ ಸ್ಥಾನ ಪಡೆದುಕೊಂಡರೆ, ಅಣ್ಣಯ್ಯ ಸೀರಿಯಲ್‌ 8.5 ಟಿವಿಆರ್‌ ಪಡೆದುಕೊಂಡು ಮೂರನೇ ಸ್ಥಾನಕ್ಕೆ ಕುಸಿದಿದೆ. ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್‌ 8.3 ಟಿವಿಆರ್‌ ಪಡೆದು ನಾಲ್ಕನೇ ಸ್ಥಾನ ಮತ್ತು ನಾ ನಿನ್ನ ಬಿಡಲಾರೆ ಧಾರಾವಾಹಿ 8.2 ಟಿವಿಆರ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.