ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಭಾಗ್ಯಾಳ ನಡತೆಗೆ ಮನಸೋತ ಆದೀ: ಭಾಗ್ಯ ಲಕ್ಷ್ಮೀಯಲ್ಲಿ ಹೊಸ ಲವ್ ಟ್ರ್ಯಾಕ್

ಸದ್ಯ ಆದೀ ಒಂದೊಂದೆ ಹೆಜ್ಜೆ ಭಾಗ್ಯ ಕಡೆ ವಾಲುತ್ತಿದ್ದಾನೆ. ಆದರೆ, ಭಾಗ್ಯ ಇದಕ್ಕೆ ಒಪ್ಪುತ್ತಾಳ?, ಆದೀ ಸದ್ಯದಲ್ಲೇ ತನ್ನ ಭಯಕೆಯನ್ನು ಭಾಗ್ಯ ಬಳಿ ಹೇಳುವುದು ಖಚಿತ.. ಈ ಸಂದರ್ಭ ಭಾಗ್ಯ ರಿಯಾಕ್ಷನ್ ಏನು ಎಂಬುದು ನೋಡಬೇಕಿದೆ.

ಭಾಗ್ಯ ಲಕ್ಷ್ಮೀಯಲ್ಲಿ ಹೊಸ ಲವ್ ಟ್ರ್ಯಾಕ್

Bhagya lakshmi serial

Profile Vinay Bhat Jul 28, 2025 12:04 PM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಪೂಜಾ-ಕಿಶನ್ ಮದುವೆಯ ಬಳಿಕ ಎಪಿಸೋಡ್​ಗಳು ಏನಿರಬಹುದು ಎಂಬುದು ಕುತೂಹಲ ಮೂಡಿಸಿತ್ತು. ಯಾಕೆಂದರೆ ಭಾಗ್ಯಾಳ ಫುಡ್ ಬ್ಯುಸಿನೆಸ್ ಯಾವುದೇ ತೊಂದರೆಯಿಲ್ಲದೆ ಸಾಗುತ್ತಿದೆ.. ಒಂಟಿ ಹೆಣ್ಣಾಗಿ ಇಡೀ ಕುಟುಂಬದ ಜವಾಬ್ದಾರಿಯನ್ನ ಭಾಗ್ಯ ಹೊತ್ತಿದ್ದಾಳೆ. ಭಾಗ್ಯಗೆ ಡಿವೋರ್ಸ್ ಕೊಟ್ಟು ತಾಂಡವ್‌ ಶ್ರೇಷ್ಠಾಳನ್ನ ಮದುವೆಯಾಗಿದ್ದಾನೆ. ಕಥೆಯನ್ನು ಸಂಪೂರ್ಣವಾಗಿ ಪೂಜಾ ಕಡೆ ತಿರುಗಿಸಲು ಸಾಧ್ಯವಿಲ್ಲ.. ಹೀಗಾಗಿ ಮುಂದೆ ಏನಿರಬಹುದು ಎಂಬುದು ಪ್ರಶ್ನೆಯಾಗಿತ್ತು. ಈ ಸಂದರ್ಭ ನಿರ್ದೇಶಕರು ಕೊಟ್ಟಿದ್ದು ಆದೀಶ್ವರ್ ಕಾಮತ್-ಭಾಗ್ಯ ಲವ್​ಸ್ಟೋರಿ.

ಹೌದು, ಕಿಶನ್‌ ಅಣ್ಣ ಆದೀಶ್ವರ್ ಕಾಮತ್‌ ಮದುವೆ ಮ್ಯಾಟರ್‌ನಲ್ಲಿ ಮಿಡಲ್ ಕ್ಲಾಸ್‌ ಹುಡುಗಿಯಿಂದ ನೊಂದಿದ್ದಾರೆ. ನಂಬಿಕೆಗೆ ಮೋಸ ಆದ್ಮೇಲೆ ಆದೀಶ್ವರ್ ಕಾಮತ್ ಮದುವೆಯಾಗದೆ ಒಂಟಿಯಾಗಿಯೇ ಉಳಿದಿದ್ದಾರೆ. ಕಿಶನ್ - ಪೂಜಾ ಮದುವೆ ಮಾತುಕತೆ ವೇಳೆ ಭಾಗ್ಯ ಬಗ್ಗೆ ಇಲ್ಲಸಲ್ಲದ್ದೆಲ್ಲಾ ಆದೀಶ್ವರ್ ಕಿವಿಗೆ ಕನ್ನಿಕಾ ತುಂಬಿದ್ದಳು. ಕನ್ನಿಕಾ ಮಾತನ್ನ ಕಟ್ಟಿಕೊಂಡು ಭಾಗ್ಯ ಬಗ್ಗೆ ಆದಿ ತಪ್ಪು ಕಲ್ಪನೆ ಮಾಡಿಕೊಂಡಿದ್ದ. ಆದರೆ, ಭಾಗ್ಯಳ ಸ್ವಾಭಿಮಾನ - ನಿಷ್ಕಲ್ಮಶ ಮನಸ್ಸು ಆದಿಗೆ ಅರ್ಥವಾಗಿ ಈಗ ಆತನಿಗೆ ಭಾಗ್ಯ ಮೇಲೆ ಲವ್ ಆಗಿದೆ.

ಭಾಗ್ಯ ತನ್ನ ತಂಗಿಯನ್ನು ನೋಡಲು ರಾಮ್​ದಾಸ್ ಮನೆಗೆ ಬರುತ್ತಾಳೆ. ಆಗ ಪೂಜಾ ಅಡುಗೆ ಮಾಡಲು ಕಷ್ಟಪಡುತ್ತ ಇರುತ್ತಾಳೆ. ಇದನ್ನ ಗಮನಿಸಿದ ಭಾಗ್ಯ ಆಕೆಗೆ ತಿಂಡಿ ಮಾಡಲು ಸಹಾಯ ಮಾಡುತ್ತಾಳೆ. ಈ ತಿಂಡಿಯ ರುಚಿಗೆ ಕಾಮತ್ ಫ್ಯಾಮಿಲಿ ಮನಸೋತಿದೆ. ಅದರಲ್ಲೂ ಆದೀಶ್ವರ್ ಕಾಮತ್ ಇಂತಹ ರುಚಿಯನ್ನು ನಾನು ಈವರೆಗೆ ತಿಂದಿಲ್ಲ ಎಂದು ಭಾಗ್ಯ-ಪೂಜಾರನ್ನು ಹೊಗಳುತ್ತಾನೆ. ಇದೇವೇಳೆ ಕಾಮತ್ ಮನೆಯಲ್ಲಿ ಭಾಗ್ಯಾಳ ಹಣದ ಕಟ್ಟು ಕಳೆದು ಹೋಗಿರುತ್ತದೆ.

ಭಾಗ್ಯ ಪುನಃ ಮನೆಗೆ ಬಂದು ನೋಡಿದಾಗ ಆ ಹಣದ ಕಟ್ಟು ಬ್ಯಾಗ್​ನಲ್ಲಿ ಇರುವುದಿಲ್ಲ.. ಪೂಜಾಳಿಗೆ ಫೋನ್ ಮಾಡಿ ಹಣ ಕಳೆದು ಹೋದ ವಿಚಾರ ಭಾಗ್ಯ ಹೇಳಿದ್ದಾಳೆ.. ಒಂದು ಬಾರಿ ಮನೆಯಲ್ಲಿ ಹುಡುಕು ಎಂದು ಹೇಳಿದ್ದಾಳೆ. ಆಗ ಆದೀಶ್ವರ್ ನಾನು ಕೂಡ ಹುಡುಕುತ್ತೇನೆ ಎಂದು ಪೂಜಾ ಜೊತೆ ಸೇರಿ ಮನೆಯಿಡಿ ಹುಡುಕಿದ್ದಾನೆ. ಕೊನೆಗೂ ಆ ಹಣ ಸಿಕ್ಕಿದೆ. ಮರುದಿನ ಸ್ವತಃ ಆದೀಯೆ ಭಾಗ್ಯ ಮನೆಗೆ ಬಂದು ಆ ಹಣದ ಕಟ್ಟನ್ನು ಕೊಟ್ಟಿದ್ದಾನೆ. ಬಳಿಕ ನಾವು ದೇವಸ್ಥಾನಕ್ಕೆ ಹೋಗುತ್ತ ಇದ್ದೇವೆ ನೀವು ಕೂಡ ಬನ್ನಿ ಎಂದು ಭಾಗ್ಯ ಹೇಳಿದ್ದಾಳೆ.

ಅದಕ್ಕೆ ಆದೀಶ್ವರ್, ನಾನು ಸಾಮಾನ್ಯವಾಗಿ ದೇವಸ್ಥಾನಕ್ಕಾಗಿ ಹೋಗುವುದಿಲ್ಲ.. ಆದರೆ, ಈ ಸಲ ನೀವು ಕರೆಯುತ್ತಿದ್ದೀರಿ ಅಂತ ಬರ್ತಾ ಇದ್ದೇನೆ ಎಂದು ಭಾಗ್ಯ-ಕುಸುಮಾ ಜೊತೆ ದೇವಸ್ಥಾನಕ್ಕೆ ತೆರಳಿದ್ದಾನೆ. ಅಲ್ಲಿ ಅರ್ಚಕರು ಕುಂಕುಮವನ್ನು ಮೊದಲಿಗೆ ತಾಳಿಗೆ ಅಚ್ಚುಕೊಳ್ಳಿ ಎಂದು ಹೇಳಿದ್ದಾರೆ.. ಆದರೆ, ಭಾಗ್ಯ ಕೊರಳಲ್ಲಿ ತಾಳಿ ಇರುವುದಿಲ್ಲ.. ಗಂಡ ಇರಬೇಕಾದರೆನೇ ತಾಳಿ ಬಿಚ್ಚಿಟ್ಟಿದ್ದೀಯಾ?, ಅದೇನು ಸಂಸ್ಕಾರನೊ ಏನೋ ಎಂದು ಭಾಗ್ಯಾಗೆ ಹೇಳಿದ್ದಾರೆ.



ಇದರಿಂದ ಕೆರಳಿದ ಆದೀಶ್ವರ್, ಒಂದು ತಾಳಿ ಇಲ್ಲ ಅಂದ ಮಾತ್ರಕ್ಕೆ ಸಂಸ್ಕಾರ ಇಲ್ಲ ಅಂತಾನಾ?, ದೇವರ ಮೇಲೆ ಇಷ್ಟು ಭಯ-ಭಕ್ತಿ ಇರೋರು ತಾಳಿ ತೆಗೆದು ಇಟ್ಟಿದ್ದಾರೆ ಅಂದ್ರೆ ಏನೋ ದೊಡ್ಡದಾಗಿ ಆಗಿರಬೇಕು ಅಲ್ವಾ ಎಂದು ಹೇಳಿದ್ದಾನೆ. ಇದು ಭಾಗ್ಯಾಗೆ ಧೈರ್ಯ ತಂದಿದೆ. ಸದ್ಯ ಆದೀ ಒಂದೊಂದೆ ಹೆಜ್ಜೆ ಭಾಗ್ಯ ಕಡೆ ವಾಲುತ್ತಿದ್ದಾನೆ. ಆದರೆ, ಭಾಗ್ಯ ಇದಕ್ಕೆ ಒಪ್ಪುತ್ತಾಳ?, ಆದೀ ಸದ್ಯದಲ್ಲೇ ತನ್ನ ಭಯಕೆಯನ್ನು ಭಾಗ್ಯ ಬಳಿ ಹೇಳುವುದು ಖಚಿತ.. ಈ ಸಂದರ್ಭ ಭಾಗ್ಯ ರಿಯಾಕ್ಷನ್ ಏನು ಎಂಬುದು ನೋಡಬೇಕಿದೆ.

Bigg Boss Telugu: ಈ ಬಾರಿ ತೆಲುಗು ಬಿಗ್ ಬಾಸ್​ನಲ್ಲಿ ಕನ್ನಡದ ಕುವರಿ ಹವಾ: ಯಾರು ನೋಡಿ