Bharjari Bachelors Winner: ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ವಿನ್ನರ್ ಸುನೀಲ್ಗೆ ಸಿಕ್ಕ ಹಣವೆಷ್ಟು ಗೊತ್ತೇ?
Bharjari Bachelors Final: ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಗ್ರ್ಯಾಂಡ್ ಫಿನಾಲೆ ಭಾನುವಾರ ಸಂಜೆ 6 ಗಂಟೆಗೆ ನಡೆದಿದೆ. ಕೊನೆಯಲ್ಲಿ ವಿಜೇತರಾಗಿ ಸುನೀಲ್ ಹೊರಹೊಮ್ಮಿದ್ದಾರೆ. ತೀರ್ಪುಗಾರರಾದ ರವಿಚಂದ್ರನ್ ‘ಸುನೀಲ್ ವಿನ್ನರ್’ ಎಂದು ಘೋಷಿಸಿದರು.

Bharjari Bachelors 2 Winner

ಝೀ ಕನ್ನಡ ವಾಹಿನಿಯಲ್ಲಿ ಪ್ರತಿ ಶನಿವಾರ ಹಾಗೂ ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ (Bharjari Bachelors) 2ಗೆ ತೆರೆಬಿದ್ದಿದೆ. ಮೊದಲ ಸೀಸನ್ನ ಯಶಸ್ಸಿನ ಬಳಿಕ ಶೂರುವಾದ ಎರಡನೇ ಸೀಸನ್ಗೂ ಅಮೋಘ ರೆಸ್ಪಾನ್ಸ್ ಕೇಳಿಬಂತು. ಇದರಲ್ಲಿ ಹತ್ತು ಬ್ಯಾಚುಲರ್ಸ್ಗೆ ಹತ್ತು ಸುಂದರಿಯರು ಮೆಂಟರ್ಸ್ ಇದ್ದರು. ಪ್ರತಿವಾರ ವಿಭಿನ್ನ ಕಾನ್ಪೆಪ್ಟ್ನೊಂದಿಗೆ ಪ್ರೇಕ್ಷಕರ ಮುಂದೆ ಬರುತ್ತಿದ್ದ ಈ ಶೋ ಇದೀಗ ಕೊನೆಯಾಗಿದೆ. ವಿನ್ನರ್ ಪಟ್ಟ ಸುನೀಲ್ಗೆ ದಕ್ಕಿದೆ.
ಭರ್ಜರಿ ಬ್ಯಾಚ್ಯುಲರ್ಸ್ ಸೀಸನ್ 2 ಫೆಬ್ರವರಿ 22ರಂದು ಅದ್ಧೂರಿಯಾಗಿ ಲಾಂಚ್ ಆಗಿತ್ತು. ಗ್ರ್ಯಾಂಡ್ ಫಿನಾಲೆ ಭಾನುವಾರ ಸಂಜೆ 6 ಗಂಟೆಗೆ ನಡೆದಿದೆ. ಕೊನೆಯಲ್ಲಿ ವಿಜೇತರಾಗಿ ಸುನೀಲ್ ಹೊರಹೊಮ್ಮಿದ್ದಾರೆ. ತೀರ್ಪುಗಾರರಾದ ರವಿಚಂದ್ರನ್ ‘ಸುನೀಲ್ ವಿನ್ನರ್’ ಎಂದು ಘೋಷಿಸಿದರು. ಆ ಮೂಲಕ ಸುನೀಲ್ ಹಾಗೂ ಅಮೃತಾ ಜೋಡಿ ವಿನ್ನರ್ ಪಟ್ಟಕ್ಕೇರಿದರು. ವಿಜೇತರಿಗೆ ವಿನ್ನರ್ ಕಪ್ ಹಾಗೂ 15 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಸಿಕ್ಕಿದೆ.
ವಿನ್ನರ್ ಅಂತ ಅನೌನ್ಸ್ ಆದ್ಮೇಲೆ ಸುನೀಲ್ ಅವರ ಕೈ ನಡುಗುತ್ತಿತ್ತು. ‘ಈ ಶೋಗೆ ಬರಬೇಕೋ ಅಥವಾ ಬೇಡವೋ ಅಂತ ಆಲೋಚಿಸುತ್ತಿದ್ದೆ. ಈಗ ಶೋಗೆ ಬಂದು ವಿನ್ನರ್ ಟ್ರೋಫಿ ಹಿಡಿದುಕೊಂಡಿದ್ದೇನೆ. ತುಂಬಾ ಖುಷಿಯಾಗುತ್ತಿದೆ. 20 ಜನರ ಟ್ರೋಫಿ ಇದು’ ಎಂದು ಮನತುಂಬಿ ಮಾತನಾಡಿದರು ಸುನೀಲ್.
ಅದರಂತೆ ಡ್ರೋನ್ ಪ್ರತಾಪ್ ಹಾಗೂ ಗಗನಾ ಜೋಡಿಗೆ ಎರಡನೇ ರನ್ನರ್ ಅಪ್ ಸ್ಥಾನ ಹಾಗೂ ರಕ್ಷಕ್ ಮತ್ತು ರಮೋಲಾ ಜೋಡಿಗೆ ಮೊದಲ ರನ್ನರ್ ಅಪ್ ಸ್ಥಾನ ಸಿಕ್ಕಿದೆ. ಪ್ರತಾಪ್ಗೆ 3 ಲಕ್ಷ ರೂಪಾಯಿ ಸಿಕ್ಕಿತು. ಅದರಲ್ಲಿ ಅರ್ಧ ಹಣವನ್ನು ಗಗನಾಗೆ ನೀಡೋದಾಗಿ ಪ್ರತಾಪ್ ವೇದಿಕೆ ಮೇಲೆ ಹೇಳಿದರು. ರಕ್ಷಕ್ಗೆ 10 ಲಕ್ಷ ರೂಪಾಯಿ ನೀಡಲಾಯಿತು. ಇನ್ನೂ ಸ್ಪೆಷಲ್ ಬ್ಯಾಚುಲರ್ ಪಟ್ಟ ಸೂರ್ಯ ಪಾಲಾಗಿದೆ. ಸೂರ್ಯ - ಅಭಿಜ್ಞಾ ಭಟ್ ಜೋಡಿಗೆ 1 ಲಕ್ಷ ರೂಪಾಯಿ ಕ್ಯಾಶ್ ಪ್ರೈಝ್ ಲಭಿಸಿದೆ.
Bhagya Lakshmi Serial: ಭಾಗ್ಯಾಳ ನಡತೆಗೆ ಮನಸೋತ ಆದೀ: ಭಾಗ್ಯ ಲಕ್ಷ್ಮೀಯಲ್ಲಿ ಹೊಸ ಲವ್ ಟ್ರ್ಯಾಕ್