ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂದು ವಿವರಿಸಿದ ವಾಷಿಂಗ್ಟನ್‌ ಸುಂದರ್‌!

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವೆ ಮ್ಯಾಂಚೆಸ್ಟರ್‌ನ ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದಿದ್ದ ನಾಲ್ಕನೇ ಟೆಸ್ಟ್‌ ಪಂದ್ಯದ ಡ್ರಾನಲ್ಲಿ ಅಂತ್ಯವಾಯಿತು. ಶತಕ ಸಿಡಿಸುವ ಮೂಲಕ ವಾಷಿಂಗ್ಟನ್‌ ಸುಂದರ್‌ ಸೋಲಿನ ಸುಳಿಗೆ ಸಿಲುಕಿಸಿದ್ದ ಭಾರತ ತಂಡವನ್ನು ಮೇಲೆತ್ತಿದ್ದರು. ಇವರ ಜೊತೆಗೆ ರವೀಂದ್ರ ಜಡೇಜಾ ಕೂಡ ಶತಕವನ್ನು ಬಾರಿಸಿದ್ದರು. ತಮ್ಮ ಶ್ರೇಷ್ಠ ಇನಿಂಗ್ಸ್‌ ಬಗ್ಗೆ ವಾಷಿಂಗ್ಟನ್‌ ಸುಂದರ್‌ ಮಾತನಾಡಿದ್ದಾರೆ.

ಶತಕ ಸಿಡಿಸಿದ ಬ್ಯಾಟಿಂಗ್‌ ಗೇಮ್‌ಪ್ಲ್ಯಾನ್‌ ತಿಳಿಸಿದ ವಾಷಿಂಗ್ಟನ್‌!

ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ತಿಳಿಸಿದ ವಾಷಿಂಗ್ಟನ್‌ ಸುಂದರ್‌.

Profile Ramesh Kote Jul 28, 2025 7:15 PM

ಮ್ಯಾಂಚೆಸ್ಟರ್‌: ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ (IND vs ENG) ನಡುವಣ ನಾಲ್ಕನೇ ಟೆಸ್ಟ್‌ ಪಂದ್ಯ ಅತ್ಯಂತ ತೀವ್ರ ರೋಚಕವಾಗಿ ಕೂಡಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ 300ಕ್ಕೂ ಅಧಿಕ ರನ್‌ಗಳ ಹಿನ್ನಡೆ ಅನುಭವಿಸಿದ್ದ ಭಾರತ ತಂಡ (India) ಸೋಲಿನ ಭೀತಿಗೆ ಒಳಗಾಗಿತ್ತು. ಆದರೆ, ಶುಭಮನ್‌ ಗಿಲ್‌, ರವೀಂದ್ರ ಜಡೇಜಾ, ವಾಷಿಂಗ್ಟನ್‌ ಸುಂದರ್‌ ಅವರ ಶತಕಗಳು ಹಾಗೂ ಕೆಎಲ್‌ ರಾಹುಲ್‌ ಅವರ ಮಾಸ್ಟರ್‌ ಕ್ಲಾಸ್‌ ಬ್ಯಾಟಿಂಗ್‌ ಪ್ರದರ್ಶನದ ಸಹಾಯದಿಂದ ಟೀಮ್‌ ಇಂಡಿಯಾ ಸೋಳಿನ ಸುಳಿಯಿಂದ ಪಾರಾಗಿತ್ತು. ಅಂತಿಮವಾಗಿ ನಾಲ್ಕನೇ ಟಸ್ಟ್‌ ಪಂದ್ಯ ಡ್ರಾನಲ್ಲಿ ಅಂತ್ಯ ಕಂಡಿತ್ತು. ಪಂದ್ಯದ ಬಳಿಕ ಮಾತನಾಡಿದ ವಾಷಿಂಗ್ಟನ್‌ ಸುಂದರ್‌ (Washington Sundar), ಚೊಚ್ಚಲ ಟೆಸ್ಟ್‌ ಶತಕ ಸಿಡಿಸಿದ ತಮ್ಮ ಬ್ಯಾಟಿಂಗ್‌ ಗೇಮ್‌ ಪ್ಲ್ಯಾನ್‌ ಏನೆಂಬುದನ್ನು ರಿವೀಲ್‌ ಮಾಡಿದ್ದಾರೆ. ಶತಕದ ಜೊತೆಗೆ ವಾಷಿಂಗ್ಟನ್‌ ಸುಂದರ್ ಐದನೇ ವಿಕೆಟ್‌ಗೆ ರವೀಂದ್ರ ಜಡೇಜಾ ಜೊತೆ 203 ರನ್‌ಗಳ ಜೊತೆಯಾಟವನ್ನು ಆಡಿ ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದ್ದರು.

ಪಂದ್ಯದ ಬಳಿಕ ಜಿಯೋ ಹಾಟ್‌ಸ್ಟಾರ್‌ ಜೊತೆ ಮಾತನಾಡಿದ ವಾಷಿಂಗ್ಟನ್‌ ಸುಂದರ್‌, ತಮ್ಮ ಬ್ಯಾಟಿಂಗ್‌ ಇನಿಂಗ್ಸ್‌ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ಬ್ಯಾಟಿಂಗ್‌ ಪ್ರದರ್ಶನದ ಬಗ್ಗೆ ಮಾತನಾಡಲು ಪದಗಳಿಲ್ಲ ಎಂದು ಹೇಳಿಕೊಂಡಿದ್ದಾರೆ. ರಿಷಭ್‌ ಪಂತ್‌ ಗಾಯಕ್ಕೆ ತುತ್ತಾಗಿದ್ದ ಕಾರಣ, ವಾಷಿಂಗ್ಟನ್‌ ಸುಂದರ್‌ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದರು. ಆ ಮೂಲಕ ಭಾರತ ತಂಡವನ್ನು ಸೋಲಿನಿ ಸುಳಿಯಿಂದ ಹೊರತರಲು ಪ್ರಮುಖ ಪಾತ್ರವನ್ನು ವಹಿಸಿದ್ದರು. ಈ ವೇಳೆ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ನೀಡಿದ್ದ ಸಂದೇಶವನ್ನೂ ಕೂಡ ಸ್ಪಿನ್‌ ಆಲ್‌ರೌಂಡರ್‌ ರಿವೀಲ್‌ ಮಾಡಿದ್ದಾರೆ.

IND vs ENG: ಇಂಗ್ಲೆಂಡ್‌ ಪರ ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಬೆನ್‌ ಸ್ಟೋಕ್ಸ್‌!

"ಇದು ತುಂಬಾ ವಿಶೇಷವೆನಿಸುತ್ತದೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಭಾವನೆಯನ್ನು ಪದಗಳಲ್ಲಿ ವರ್ಣಿಸುವುದು ಕಷ್ಟ ಏಕೆಂದರೆ ಟೆಸ್ಟ್ ಶತಕವು ನಿಜವಾಗಿಯೂ ವಿಶಿಷ್ಟವಾದದ್ದು. ಪ್ರತಿ ಶತಕವು ಮುಖ್ಯವಾಗಿದೆ, ಆದರೆ ಇದು ಬಹಳಷ್ಟು ಅರ್ಥಪೂರ್ಣವಾಗಿದೆ. ನನಗೆ 5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡುವ ಅವಕಾಶ ಸಿಕ್ಕಿತು ಮತ್ತು ನನ್ನ ಏಕೈಕ ಗಮನ ಇಡೀ ದಿನ ಹೋರಾಡುವುದಾಗಿತ್ತು. ಅದು ತರಬೇತುದಾರರಿಂದ ಬಂದ ಏಕೈಕ ಸಂದೇಶವಾಗಿತ್ತು. ನಾವು ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ನನಗೆ ನಿಜವಾಗಿಯೂ ಸಂತೋಷವಾಗಿದೆ," ಎಂದು ವಾಷಿಂಗ್ಟನ್‌ ಸುಂದರ್ ಹೇಳಿದ್ದಾರೆ.

ಮೆರಿಟ್‌ ಆಫ್‌ ದಿ ಬಾಲ್‌ ಆಡುವುದು ನನ್ನ ಗುರಿಯಾಗಿತ್ತು: ವಾಷಿಂಗ್ಟನ್‌

ಪಂದ್ಯದ ಐದನೇ ದಿನ 203 ರನ್‌ಗಳ ಜೊತೆಯಾಟವನ್ನು ಆಡಿದ್ದ ರವೀಂದ್ರ ಜಡೇಜಾ ಹಾಗೂ ತಮ್ಮ ನಡುವೆ ನಡೆದಿದ್ದ ಸಂಭಾಷಣೆಯನ್ನು ಕೂಡ ಚೆನ್ನೈ ಮೂಲಕ ಆಟಗಾರ ಬಹಿರಂಗಪಡಿಸಿದ್ದಾರೆ. ಚೆಂಡು ಬಂದ ಹಾಗೆ ಆಡುವುದು ನಮ್ಮ ಗುರಿಯಾಗಿತ್ತು, ಆ ಮೂಲಕ ದೊಡ್ಡ ಜೊತೆಯಾಟವನ್ನು ಆಡಬೇಕೆಂದು ನಾವು ಬಯಸಿದ್ದೆವು. ಇದೀಗ ಈ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡರೂ ಟೀಮ್‌ ಇಂಡಿಯಾ ಸರಣಿಯಲ್ಲಿ 1-2 ಹಿನ್ನಡೆಯಲ್ಲಿದೆ. ಈ ಸರಣಿಯನ್ನು ಗೆಲ್ಲುವ ಅವಕಾಶವನ್ನು ಟೀಮ್‌ ಇಂಡಿಯಾ ಕಳೆದುಕೊಂಡಿದೆ. ಆದರೆ, ಐದನೇ ಹಾಗೂ ಕೊನೆಯ ಪಂದ್ಯವನ್ನು ಗೆದ್ದರೆ, ಸರಣಿಯಲ್ಲಿ ಸಮಬಲ ಸಾಧಿಸಬಹುದು.

IND vs ENG 5th Test: 5ನೇ ಟೆಸ್ಟ್‌ನಲ್ಲೂ ವೇಗಿ ಜಸ್‌ಪ್ರೀತ್‌ ಬುಮ್ರಾ ಕಣಕ್ಕೆ

"ನಾವು ಮೆರಿಟ್‌ ಆಫ್‌ ದಿ ಬಾಲ್‌ ಆಡಬೇಕೆಂದು ಬಯಸಿದ್ದೆವು, ವಿಶೇಷವಾಗಿ ವೇಗಿಗಳು ಮತ್ತು ಸ್ಪಿನ್ನರ್‌ಗಳಿಗೆ ಪಿಚ್‌ ಸಹಕಾರಿಯಾಗಿತ್ತು. ಶಿಸ್ತಿನಿಂದ ಇರುವುದು ಮತ್ತು ನಮ್ಮಿಂದ ಸಾಧ್ಯವಿರುವ ಎಲ್ಲವನ್ನೂ ನೀಡುವುದು ನಮ್ಮ ಗಮನವಾಗಿತ್ತು. ಇಂದು (ಭಾನುವಾರ) ನಾವು ಮಾಡಿದ ಕ್ಷಣಗಳನ್ನು ಅನುಭವಿಸುವುದು, ವಿಶೇಷವಾಗಿ ಪಂದ್ಯವನ್ನು ಡ್ರಾ ಮಾಡಿಕೊಂಡ ನಂತರ, ಅದ್ಭುತವೆನಿಸುತ್ತದೆ. ಟೆಸ್ಟ್ ಪಂದ್ಯದುದ್ದಕ್ಕೂ ಇಡೀ ತಂಡ ನಿಜವಾಗಿಯೂ ಉತ್ತಮವಾಗಿ ಆಡಿದೆ ಎಂದು ನಾನು ಭಾವಿಸುತ್ತೇನೆ ಮತ್ತು ಈಗ ಮುಂದಿನ ಪಂದ್ಯಕ್ಕೆ ಹೋಗುವುದು ಇನ್ನಷ್ಟು ರೋಮಾಂಚಕಾರಿಯಾಗಲಿದೆ," ಎಂದು ವಾಷಿಂಗ್ಟನ್‌ ಸುಂದರ್ ತಿಳಿಸಿದ್ದಾರೆ.