ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bhagya Lakshmi Serial: ಎಂಡಿ ಪೋಸ್ಟ್​ಗೆ ರಾತ್ರಿಯೆಲ್ಲ ಓದಿ ಇಂಟರ್​ವ್ಯೂಗೆ ರೆಡಿಯಾದ ಭಾಗ್ಯ

Bhagya Lakshmi Serial Todays Episode: ಕನ್ನಿಕಾ ಈ ಕೆಲಸ ಯಾವುದೇ ಕಾರಣಕ್ಕೂ ಭಾಗ್ಯಾಗೆ ಸಿಗಬಾರದು.. ನಾನು ರೆಫರ್ ಮಾಡಿರುವವನಿಗೆ ಸಿಗಬೇಕು ಎಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಸದ್ಯ ಈ ಕೆಲಸ ಯಾರಿಗೆ ಸಿಗುತ್ತೆ ಎಂಬುದು ನೋಡಬೇಕಿದೆ.

ಎಂಡಿ ಪೋಸ್ಟ್​ಗೆ ರಾತ್ರಿಯೆಲ್ಲ ಓದಿ ಇಂಟರ್​ವ್ಯೂಗೆ ರೆಡಿಯಾದ ಭಾಗ್ಯ

Bhagya lakshmi serial -

Profile Vinay Bhat Sep 16, 2025 11:58 AM

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಸದ್ಯ ಭಾಗ್ಯಾಗೆ ಮತ್ತೊಂದು ಅಗ್ನಿಪರೀಕ್ಷೆ ಎದುರಾಗಿದೆ. ಆದೀ ನಡೆಸಿಕೊಂಡು ಹೋಗುತ್ತಿರುವ ತೊಟ್ಟಿಲು ಚಾರಿಟೆಬಲ್ ಟ್ರಸ್ಟ್​ಗೆ ಎಂಡಿ ಆಗಲು ಭಾಗ್ಯ ಇಂಟರ್​ವ್ಯೂ ಅಟೆಂಡ್ ಮಾಡಲಿದ್ದಾಳೆ. ಇದಕ್ಕಾಗಿ ರಾತ್ರಿಯೆಲ್ಲ ಕೂತು ಭಾಗ್ಯ ಅಕೌಂಟ್ಸ್, ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಬುಕ್ಸ್​​ ಓದಿದ್ದಾಳೆ. ಅತ್ತ ಕನ್ನಿಕಾ ಈ ಕೆಲಸ ಯಾವುದೇ ಕಾರಣಕ್ಕೂ ಭಾಗ್ಯಾಗೆ ಸಿಗಬಾರದು.. ನಾನು ರೆಫರ್ ಮಾಡಿರುವವನಿಗೆ ಸಿಗಬೇಕು ಎಂದು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾಳೆ. ಸದ್ಯ ಈ ಕೆಲಸ ಯಾರಿಗೆ ಸಿಗುತ್ತೆ ಎಂಬುದು ನೋಡಬೇಕಿದೆ.

ಹಿಂದಿನ ಎಪಿಸೋಡ್​ನಲ್ಲಿ, ಈ ಸಂಸ್ಥೆಯಲ್ಲಿ ಎಂಡಿ ಅಂದರೆ ಮ್ಯಾನೇಜಿಂಗ್ ಡೈರೆಕ್ಟರ್ ಪೋಸ್ಟ್ ಖಾಲಿ ಇದೆ ಆದೀ ಯಾವುದೇ ಇಂಟರ್​ವ್ಯೂ, ಕಂಪನಿ ಪಾಲಿಸಿಯನ್ನು ಫಾಲೋ ಮಾಡದೆ ಭಾಗ್ಯಾಳನ್ನು ನೇಮಿಸಿದ್ದ. ಇದಕ್ಕೆ ಭಾಗ್ಯ ಕೂಡ ಒಪ್ಪಿಕೊಂಡಿದ್ದಳು. ಆದರೆ, ಈ ವಿಷಯ ಕನ್ನಿಕಾಗೆ ಗೊತ್ತಾಗಿ ಆಕೆ ರಂಪಮಾಡಿದ್ದಳು. ಕನ್ನಿಕಾಗೆ ಭಾಗ್ಯ ಎಂಡಿ ಆಗುವುದು ಇಷ್ಟವಿಲ್ಲ. ಯಾಕಂದ್ರೆ ಚಾರಿಟಿ ಸಂಸ್ಥೆಯಿಂದ ಕನ್ನಿಕಾ ಸುಳ್ಳು ಲೆಕ್ಕ ಕೊಟ್ಟು ದುಡ್ಡು ಬಾಚುತ್ತಿರುತ್ತಾಳೆ. ಎಂಡಿ ಆಗಿ ಬೇರೆಯವರು ಬಂದರೆ ತಮ್ಮ ಕೆಲಸ ಸಲೀಸಾಗಿ ಆಗುವುದಿಲ್ಲ, ತಮ್ಮವರೇ ಎಂಡಿ ಆಗಬೇಕು ಅಂತ ಕನ್ನಿಕಾ ಪ್ಲಾನ್ ಮಾಡಿರುತ್ತಾಳೆ.

ಆದರೆ, ಭಾಗ್ಯ ಟ್ರಸ್ಟ್ ಹೇಗಿದೆ ಎಂದು ನೋಡಲು ಹೋದಾಗ ಈ ಟ್ರಸ್ಟ್​ನಲ್ಲಿ ನಡೆಯುತ್ತಿರುವ ಕರ್ಮಕಾಂಡ ಆಕೆಗೆ ಗೊತ್ತಾಗಿದೆ. ಇದೇ ಕಾರಣಕ್ಕೆ ಈ ಮೋಸವನ್ನು ಬಯಲು ಮಾಡಬೇಕು ಭಾಗ್ಯ ಎಂಡಿ ಆಗಲು ಒಪ್ಪಿಕೊಂಡಿದ್ದು. ಆದರೆ, ಕನ್ನಿಕಾ ತಂದೆ ರಾಮ್​ದಾಸ್ ಬಳಿ, ಬ್ರೋ ಏನು ಅಂತ ಅಂದುಕೊಂಡಿದ್ದಾನೆ.. ಅವನೇ ಎಲ್ಲ ಡಿಸಿಷನ್ ತೆಗೋತಾನೆ ಅಂತದ್ರೆ ಆ ಬೋರ್ಡ್​ ಮೆಂಬರ್ ಆಗಿ ನಾನು ಯಾಕೆ ಇರುವುದು.. ಅಂತಹ ದೊಡ್ಡ ಪೋಸ್ಟ್​​ಗೆ ಒಬ್ಬರನ್ನು ಜಾಯಿನ್ ಮಾಡಬೇಕು ಅಂದ್ರೆ ಅದಕ್ಕೆ ಎಷ್ಟು ಪ್ರೊಸೀಜರ್ ಇದೆ ಎಂದು ರೇಗಾಡಿದ್ದಾಳೆ.

ರಾಮ್​ದಾಸ್ ಕೂಡ ಕನ್ನಿಕಾ ಮಾತಿಗೆ ಸಮ್ಮತಿ ಸೂಚಿಸಿ ಈ ಪೋಸ್ಟ್​ಗೆ ಆಯ್ಕೆ ಆಗಬೇಕು ಅಂದ್ರೆ ರೆಸ್ಯೂಮ್ ತೆಗೊಬೇಕು.. ಹೆಚ್​ಆರ್ ಭೇಟಿ ಆಗಬೇಕು.. ಇಂಟರ್​ವ್ಯೂ ಆಗಬೇಕು.. ಅದರಲ್ಲಿ ಪಾಸ್ ಆಗಬೇಕು ಎಂದಿದ್ದಾರೆ. ಈ ವಿಷಯವನ್ನು ಆದೀ, ಭಾಗ್ಯ ಮನೆಗೆ ಹೋಗಿ ಹೇಳಿದಾಗ ಭಾಗ್ಯಾಗೆ ಕೋಪ ಬಂದಿದೆ. ನಾನೇನಾದ್ರು ನಿಮ್ಮ ಬಳಿ ಬಂದು ನನಗೆ ನಿಮ್ಮ ಕಂಪನಿಯಲ್ಲಿ ಕೆಲಸ ಕೊಡಿ ಎಂದು ಕೇಳಿದ್ನಾ?, ನೀವೇ ತಾನೆ ಈ ಆಫರ್ ಕೊಟ್ಟಿದ್ದು, ನನಗೆ ಈ ಜಾಬ್ ಬೇಡ.. ಇಂಟರ್​ವ್ಯೂನು ಬೇಡ ನನ್ನ ಪಾಡಿಗೆ ನನ್ನ ಬಿಟ್ಟುಬಿಡಿ ಎಂದಿದ್ದಾಳೆ.

ಇದೇ ವಿಷಯವನ್ನು ಆದೀ ಬಂದು ರಾಮ್​ದಾಸ್​ಗೆ ಹೇಳಿದ್ದಾನೆ. ಛೇ.. ಭಾಗ್ಯ ಇಂಟರ್​ವ್ಯೂ ಅಟೆಂಡ್ ಮಾಡಿ ಅದರಲ್ಲಿ ಪಾಸ್ ಆಗಿ ಎಂಡಿ ಪೋಸ್ಟ್​ಗೆ ಬಂದರೆ ತುಂಬಾ ಚೆನ್ನಾಗಿರುತ್ತದೆ.. ನಾವೇ ಒಂದು ಸಲ ಅವರ ಮನೆಗೆ ಹೋಗಿ ಮಾತಾಡಿ ಬರೋಣ ಎಂದು ಇಬ್ಬರು ಹೋಗಿದ್ದಾರೆ. ಆದರೆ, ರಾಮ್​ದಾಸ್ ಬಂದು ಇಂಟರ್​ವ್ಯೂ ಅಟೆಂಡ್ ಮಾಡು ಎಂದು ಹೇಳಿದರೂ ಭಾಗ್ಯ ಇದಕ್ಕೆ ಆರಂಭದಲ್ಲಿ ಒಪ್ಪಲಿಲ್ಲ. ಬಳಿಕ ಆ ಕಂಪನಿಯಲ್ಲಿ ನಡೆಯುತ್ತಿರುವ ಮೋಸವನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ.. ಅಅವರನ್ನು ಸಾಕ್ಷಿ ಸಮೇತ ಹಿಡಿಯಬೇಕು ಅದಕ್ಕೆ ನಾನು ಇಂಟರ್​ವ್ಯೂ ಅಟೆಂಡ್ ಮಾಡಿ ಪಾಸ್ ಆಗಬೇಕು ಎಂದು ಅಂದುಕೊಂಡು ಒಕೆ ಹೇಳುತ್ತಾಳೆ.



ಈ ಇಂಟರ್​ವ್ಯೂಗೆ ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ಹೀಗಿರುವಾಗ ಭಾಗ್ಯ ಹೇಗೆ ಪ್ರಿಪೇರ್ ಆಗುತ್ತಾಳೆ ಎಂಬುದು ಎಲ್ಲರಲ್ಲಿ ಕುತೂಹಲ ಮಾಡಿಸಿತ್ತು. ಆದರೆ, ಭಾಗ್ಯ ಮಗಳು ತನ್ವಿ ತನ್ನ ಸ್ನೇಹಿತೆಯ ಅಕ್ಕನ ಮನೆಯಿಂದ ಭಾಗ್ಯಾಗೆ ಇಂಟರ್​ವ್ಯೂ ಅಟೆಂಡ್ ಆಗಲು ಬುಕ್ಸ್ ತಂದುಕೊಟ್ಟಿದ್ದಾಳೆ. ಇದನ್ನ ತೆರೆದು ನೋಡಿದಾಗ ಭಾಗ್ಯಾಗೆ ತಲೆಬುಡ ಅರ್ಥ ಆಗುವುದಿಲ್ಲ.. ಹೀಗಿದ್ದರೂ ಹೇಗೋ ರಾತ್ರಿ ಎಲ್ಲ ನಿದ್ದೆಗೆಟ್ಟು ಓದಿದ್ದಾಳೆ.



ಮರುದಿನ ಇಂಟರ್​ವ್ಯೂಗೆ ಎಂದು ಭಾಗ್ಯ ಆಫೀಸ್​ಗೆ ಬಂದಿದ್ದಾಳೆ. ಆದರೆ, ಭಾಗ್ಯ ಬರುವ ಹೊತ್ತಿಗೆ ಅನೇಕ ಜನರು ಅದಾಗಲೇ ಇಂಟರ್​ವ್ಯೂಗೆ ಎಂದು ಬಂದು ಕೂತಿದ್ದರು. ಮತ್ತೊಂದೆಡೆ ಕನ್ನಿಕಾ ತನ್ನ ಕ್ಯಾಂಡಿಡೇಟ್​ನ ಬಗ್ಗೆ ಇಂಟರ್​ವ್ಯೂ ಮಾಡುವವರ ಬಳಿ ಹೇಳಿದ್ದಾಳೆ. ಇವನನ್ನೇ ನೀವು ಸೆಲೆಕ್ಟ್ ಮಾಡಬೇಕು ಎಂದಿದ್ದಾಳೆ. ಅತ್ತ ತಾಂಡವ್​ ಕೂಡ ಆಫೀಸ್​ಗೆ ಬಂದಿದ್ದು ಈ ಕಾರ್ಪರೇಟ್ ಇಂಟರ್​ವ್ಯೂ ಪಾಸ್ ಆಗೋಕೆ ಭಾಗ್ಯಾಳಿಂದ ಸಾಧ್ಯನೇ ಇಲ್ಲ ಎಂದು ಅಂದುಕೊಂಡಿದ್ದಾನೆ. ಸದ್ಯ ಎಲ್ಲರ ಕಣ್ಣು ಈ ಇಂಟರ್​ವ್ಯೂ ಮೇಲಿದ್ದು, ಭಾಗ್ಯ ಪಾಸ್ ಆಗುತ್ತಾಳ ಎಂಬುದು ನೋಡಬೇಕಿದೆ.

Karna Serial: ಕೊನೆಗೂ ನಿಧಿಗೆ ಪ್ರಪೋಸ್ ಮಾಡಿದ ಕರ್ಣ: ಆದರೆ ಮದುವೆ..?