Karna Serial: ಕೊನೆಗೂ ನಿಧಿಗೆ ಪ್ರಪೋಸ್ ಮಾಡಿದ ಕರ್ಣ: ಆದರೆ ಮದುವೆ..?
ಕರ್ಣ ಧಾರಾವಾಹಿಯಲ್ಲಿ ಬಹುದೊಡ್ಡ ಟ್ವಿಸ್ಟ್ ನೀಡಲಾಗಿದೆ. ಕರ್ಣ ಕೊನೆಗೂ ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾನೆ. ಅದೂ ನದಿಯ ಮಧ್ಯೆ ಎಂಬುದು ವಿಶೇಷ. ಈ ಸಂದರ್ಭದ ಪ್ರೋಮೋವನ್ನು ಝೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಸದ್ಯದಲ್ಲೇ ಈ ಎಪಿಸೋಡ್ ಟೆಲಿಕಾಸ್ಟ್ ಕಾಣಲಿದೆ.

Karna Serial -

ಝೀ ಕನ್ನಡ ವಾಹಿನಿಯಲ್ಲಿ ಆರಂಭದಲ್ಲಿ ವಿವಾದಗಳ ಮೂಲಕ ಸುದ್ದಿಯಾಗಿದ್ದ ಕರ್ಣ ಧಾರಾವಾಹಿ (Karna Serial) ಈಗ ಶುರುವಾಗಿ ಧೂಳೆಬ್ಬಿಸುತ್ತಿದೆ. ಕಿರುತೆರೆ ಲೋಕದಲ್ಲಿ ನಂಬರ್ ಒನ್ ಧಾರಾವಾಹಿ ಆಗಿ ಕರ್ಣ ಮುನ್ನುಗ್ಗುತ್ತಿದ್ದಾರೆ. ಜನರು ಈ ಧಾರಾವಾಹಿಯನ್ನು ಎರಡು ಕೈಗಳಿಂದ ಬಾಚಿಕೊಂಡಿದ್ದಾರೆ ಮೆಚ್ಚಿಕೊಳ್ಳುತ್ತಿದ್ದಾರೆ. ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಇದ್ದಾರೆ.
ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಎಂದು ಆರಂಭದಲ್ಲಿ ಹೇಳಲಾಗಿತ್ತು. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬಂದಿರುವ ಕರ್ಣ ಧಾರಾವಾಹಿಯಲ್ಲಿ ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ಕೂಡ ಇದ್ದಾರೆ.
ಸದ್ಯ ಕರ್ಣ ಧಾರಾವಾಹಿಯಲ್ಲಿ ಬಹುದೊಡ್ಡ ಟ್ವಿಸ್ಟ್ ನೀಡಲಾಗಿದೆ. ಕರ್ಣ ಕೊನೆಗೂ ನಿಧಿಗೆ ಪ್ರಪೋಸ್ ಮಾಡಿಯೇ ಬಿಟ್ಟಿದ್ದಾನೆ. ಅದೂ ನದಿಯ ಮಧ್ಯೆ ಎಂಬುದು ವಿಶೇಷ. ಈ ಸಂದರ್ಭದ ಪ್ರೋಮೋವನ್ನು ಝೀ ಕನ್ನಡ ವಾಹಿನಿಯು ಹಂಚಿಕೊಂಡಿದೆ. ಸದ್ಯದಲ್ಲೇ ಈ ಎಪಿಸೋಡ್ ಟೆಲಿಕಾಸ್ಟ್ ಕಾಣಲಿದೆ.
ನಿಧಿಗೆ (ಭವ್ಯಾ ಗೌಡ) ಕರ್ಣನನ್ನು ಎಲ್ಲಿಲ್ಲದ ಪ್ರೀತಿ. ಅದನ್ನು ಕರ್ಣನಿಗೆ ಆಕೆ ಹೇಳಿದ್ದಾಳೆ ಕೂಡ. ಆದರೆ, ಕರ್ಣ ಈವರೆಗೆ ಇದಕ್ಕೆ ಉತ್ತರಿಸಿರಲಿಲ್ಲ.. ಹಾಗಂತ ನಿಧಿಯನ್ನು ತಿರಸ್ಕರಿಯೂ ಇಲ್ಲ. ತನಗೆ ಕುಟುಂಬದ ಪ್ರೀತಿಯನ್ನು ಕೊಟ್ಟಿರೋ ನಿಧಿ ಕಂಡರೆ ಕರ್ಣನಿಗೂ ಇಷ್ಟ. ಆದರೆ, ಹೇಳಿಕೊಳ್ಳುವಂತಹ ಸಂದರ್ಭ ಇನ್ನೂ ಬಂದಿರಲಿಲ್ಲ.
ಆದರೀಗ ಕರ್ಣನೇ ಬಂದು ನಿಧಿಗೆ ಪ್ರಪೋಸ್ ಮಾಡಿದ್ದಾನೆ. ಕರ್ಣನು ತೆಪ್ಪದ ಮೇಲೆ ಕುಳಿತು, ಇವನು ಕಳ್ಳ. ಮೊದಲು ಹಾರ್ಟ್ ನನಗೋಸ್ಕರ ಮಾತ್ರ ಲಬ್ಡಬ್ ಅಂತಿದ್ದ, ಈಗ ನಿಂಗೂ ಸೇರಿ ಲಬ್ಡಬ್ ಅಂತಿದಾನೆ. ಐ ಲವ್ ಯೂ ನಿಧಿ ಎಂದು ಕರ್ಣ ಹೇಳಿದ್ದಾನೆ. ಆ ಬಳಿಕ ಮಗುವಿನಂತೆ ನಿಧಿ ಮಡಿಲಲ್ಲಿ ಕರ್ಣ ಮಲಗಿದ್ದಾನೆ. ಆದರೆ, ಇಲ್ಲಿ ಕರ್ಣ ಮತ್ತಿನ ಅಮಲಿನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಎದ್ದಕೂಡಲೇ ಪ್ರೀತಿ ವಿಚಾರ ಹೇಳಿಕೊಂಡಿರೋದು ಇವರಿಬ್ಬರಿಗೂ ನೆನಪಿರುತ್ತದೆಯೋ ಇಲ್ಲವೋ ಎಂಬುದು ನೋಡಬೇಕಿದೆ.
ಮತ್ತೊಂದೆಡೆ ನಿಧಿ ಅಕ್ಕ ನಿತ್ಯಾ, ತೇಜಸ್ ಜೊತೆ ಮದುವೆ ಆಗಲು ರೆಡಿಯಾಗಿದ್ದಾಳೆ. ಕರ್ಣದ ಮುಂದಾಳತ್ವದಲ್ಲೇ ಈ ಮದುವೆ ನಡೆಯಲಿದೆ. ಈ ಹಿಂದೆ ಅನೇಕ ಸಂದರ್ಭದಲ್ಲಿ ಅಪಾಯದಿಂದ ತೇಜಸ್ ಅನ್ನು ಪಾರು ಮಾಡಿದ್ದ ಕರ್ಣ. ಎಂಗೇಜ್ಮೆಂಟ್ಗೆ ತೇಜಸ್ನ ಅಪ್ಪ-ಅಮ್ಮ ಬರದಿದ್ದಾಗ ತಪ್ಪನ್ನೆಲ್ಲ ತನ್ನ ಮೈಮೇಲೆ ಹಾಕಿ ಮ್ಯಾನೇಜ್ ಮಾಡಿದ್ದ.
BBK 12 AI Concept: ಈ ಬಾರಿಯ ಬಿಗ್ ಬಾಸ್ ಸೀಸನ್ನಲ್ಲಿ ಊಹಿಸಲಾಗದ ಕಾನ್ಸೆಪ್ಟ್
ಸದ್ಯ ಕರ್ಣ ಹಾಗೂ ನಿಧಿ ಮದುವೆ ಆಗಬೇಕು ಅಂತ ವೀಕ್ಷಕರು ಬಯಸುತ್ತಿದ್ದಾರೆ. ಆದರೆ ತೇಜಸ್ ಹಾಗೂ ನಿತ್ಯಾ ಮದುವೆ ಆಗೋದು ಅನುಮಾನ ಎಂಬಂತಾಗಿದೆ. ಮದುವೆ ಮಂಟಪದಲ್ಲಿ ತೇಜಸ್ ಹಾಗೂ ನಿತ್ಯಾ ಮದುವೆ ನಿಲ್ಲೋದು ಗ್ಯಾರಂಟಿ ಎನ್ನಲಾಗಿದೆ. ಹಸೆಮಣೆ ಮೇಲೆ ಕೂತ ನಿತ್ಯಾಳನ್ನು ಕಾಪಾಡಲು ಕರ್ಣ ಅವಳನ್ನು ಮದುವೆ ಆಗೋ ಚಾನ್ಸ್ ಜಾಸ್ತಿ ಇದೆ ಎಂಬ ಸುದ್ದಿ ಕೂಡ ಇದೆ.