ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 19: ಬಿಗ್ ಬಾಸ್ ಶುರುವಾಗುವ ದಿನಾಂಕ ಪ್ರಕಟ: ಕಾದು ಕುಳಿತ ವೀಕ್ಷಕರು

ಆಗಸ್ಟ್ 24ರಂದು ಅದ್ದೂರಿಯಾಗಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲಿದೆ. ಈ ಹಿಂದೆ ಆಗಸ್ಟ್ ಅಂತ್ಯದಲ್ಲಿ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೀಗ ಅಧಿಕೃತವಾಗಿ ವಾಹಿನಿ ಪ್ರೊಮೋ ಬಿಡುಗಡೆ ಮಾಡುವ ಮೂಲಕ ಖಚಿತತೆ ನೀಡಿದೆ.

ಬಿಗ್ ಬಾಸ್ ಶುರುವಾಗುವ ದಿನಾಂಕ ಪ್ರಕಟ: ಕಾದು ಕುಳಿತ ವೀಕ್ಷಕರು

Bigg Boss

Profile Vinay Bhat Aug 1, 2025 4:28 PM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ಆರಂಭಕ್ಕೂ ಮುನ್ನ ಇತರೆ ಭಾಷೆಗಳಲ್ಲಿ ಶೋ ಆರಂಭವಾಗಲಿದೆ. ಈಗಾಗಲೇ ಹಿಂದಿ, ಮಲಯಾಳಂ ಮತ್ತು ತೆಲುಗು ಬಿಗ್​ ಬಾಸ್​ನ ಪ್ರೊಮೋ ಕೂಡ ಔಟ್ ಆಗಿದೆ. ಆಗಸ್ಟ್ 3 ರಿಂದ ಮೋಹನ್ ಲಾಲ್ ನೇತೃತ್ವದಲ್ಲಿ ಬಿಗ್ ಬಾಸ್ ಮಲಯಾಂಳ ಶುರುವಾಗಲಿದೆ. ಇದೀಗ ಸಲ್ಮಾನ್ ಖಾನ್ ನಡೆಸಿಕೊಡುವ ಹಿಂದಿ ಬಿಗ್ ಬಾಸ್​ನ ಆರಂಭದ ದಿನಾಂಕ ಕೂಡ ಔಟ್ ಆಗಿದೆ. ಸಣ್ಣದೊಂದು ಪ್ರೊಮೋ ಝಲಕ್ ಮೂಲಕ ವಾಹಿನಿ ಬಿಗ್ ಬಾಸ್ ಹಿಂದಿ ಶುರುವಾಗುವ ಡೇಟ್ ಅನೌನ್ಸ್ ಮಾಡಿದೆ.

ಬಿಗ್ ಬಾಸ್ 19 ಅನ್ನು ತಯಾರಕರು ಇದುವರೆಗಿನ ಅತಿ ಉದ್ದದ ಸೀಸನ್ ಮಾಡಲಿದ್ದಾರೆ ಎಂದು ಈಗಾಗಲೇ ವರದಿಯಾಗಿದೆ. ಈ ಬಾರಿ ಈ ಕಾರ್ಯಕ್ರಮ ಐದು ತಿಂಗಳುಗಳ ಕಾಲ ನಡೆಯಲಿದೆ. ಆಗಸ್ಟ್ 24ರಂದು ಅದ್ದೂರಿಯಾಗಿ ಹಿಂದಿ ಬಿಗ್ ಬಾಸ್ ಹೊಸ ಸೀಸನ್ ಶುರು ಆಗಲಿದೆ. ಈ ಹಿಂದೆ ಆಗಸ್ಟ್ ಅಂತ್ಯದಲ್ಲಿ ಗ್ರ್ಯಾಂಡ್ ಓಪನಿಂಗ್ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೀಗ ಅಧಿಕೃತವಾಗಿ ವಾಹಿನಿ ಪ್ರೊಮೋ ಬಿಡುಗಡೆ ಮಾಡುವ ಮೂಲಕ ಖಚಿತತೆ ನೀಡಿದೆ.

ಆಗಸ್ಟ್ 24ರಂದು ರಾತ್ರಿ 9 ಗಂಟೆಗೆ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಅದ್ಧೂರಿ ಚಾಲನೆ ಸಿಗಲಿದೆ. ಆಗಸ್ಟ್ 24ರಿಂದ ಪ್ರತಿ ದಿನ ರಾತ್ರಿ 9:00ಕ್ಕೆ ಜೀಯೋ ಹಾಟ್‌ ಸ್ಟಾರ್‌ ನಲ್ಲಿ ಪ್ರಸಾರವಾಗಲಿರುವ ಕಾರ್ಯಕ್ರಮ ಆ ನಂತರ ರಾತ್ರಿ 10-30ಕ್ಕೆ ಕಲರ್ಸ್‌ನಲ್ಲಿ ಪ್ರಸಾರವಾಗಲಿದೆ. ಸಲ್ಮಾನ್ ಖಾನ್ ಅವರು ಸಿನಿಮಾ ಮತ್ತು ಬಿಗ್ ಬಾಸ್ ಎರಡನ್ನೂ ನಿಭಾಯಿಸಬೇಕಿದೆ. 5 ತಿಂಗಳು ಬಿಗ್ ಬಾಸ್ ನಡೆದರೆ ಎಲ್ಲ ವಾರ ಅವರೇ ನಿರೂಪಣೆ ಮಾಡುವುದು ಕಷ್ಟ. ಸಿನಿಮಾ ಶೂಟಿಂಗ್ ಇದ್ದಾಗ ಬೇರೆ ನಟರು ಬಿಗ್ ಬಾಸ್ ನಡೆಸಿಕೊಡಬೇಕಾಗಬಹುದು. ಆ ಜವಾಬ್ದಾರಿ ನಿಭಾಯಿಸಲು ಕೆಲವು ಸೆಲೆಬ್ರಿಟಿಗಳ ಜೊತೆ ಮಾತುಕಥೆ ನಡೆಯುತ್ತಿದೆ ಎನ್ನಲಾಗಿದೆ.

ಈ ಬಾರಿ ಬಿಗ್ ಬಾಸ್‌ನ ಥೀಮ್ ಆರ್ಟಿಫಿಷಿಯಲ್ ಇಂಟೆಲಿಜೆನ್ಸಿ ಇರಲಿದ್ದು ಟೆಕ್ನಾಲಜಿಯೇ ಈ ಬಾರಿಯ ಬೆನ್ನೆಲುಬು ಎನ್ನುವ ಮಾತು ಕೂಡ ಸದ್ಯ ಇದೇ ವೇಳೆ ಕೇಳಿ ಬರುತ್ತಿದೆ. ಅಂತೆಯೆ ತಯಾರಕರು ಈ ಸೀಸನ್ ಅನ್ನು ಡಿಜಿಟಲಲ್​ಗೆ ಹೆಚ್ಚು ಒತ್ತು ನೀಡಿದ್ದಾರೆ. ಇದರರ್ಥ ಕಾರ್ಯಕ್ರಮವು ಟಿವಿ ಮತ್ತು ಒಟಿಟಿಯಲ್ಲಿ ಏಕಕಾಲದಲ್ಲಿ ಪ್ರಸಾರವಾಗಲಿದೆ. ಆದಾಗ್ಯೂ, ಹೊಸ ಕಂತುಗಳು ಮೊದಲು ಒಟಿಟಿ ಪ್ಲಾಟ್‌ಫಾರ್ಮ್ ಜಿಯೋಹಾಟ್‌ಸ್ಟಾರ್‌ನಲ್ಲಿ ಬರುತ್ತವೆ, ಒಂದೂವರೆ ಗಂಟೆಗಳ ನಂತರ ಅದೇ ಕಂತು ಕಲರ್ಸ್ ಟಿವಿಯಲ್ಲಿ ಕಾಣಿಸಿಕೊಳ್ಳುತ್ತದೆ.

Bhagya Lakshmi Serial: ಪೂಜಾಳ ಹುಟ್ಟುಹಬ್ಬಕ್ಕೆ ನಾನು ಬರಲ್ಲ ಎಂದ ಭಾಗ್ಯ: ಆದೀಶ್ವರ್ ಶಾಕ್