Bhagya Lakshmi Serial: ಪೂಜಾಳ ಹುಟ್ಟುಹಬ್ಬಕ್ಕೆ ನಾನು ಬರಲ್ಲ ಎಂದ ಭಾಗ್ಯ: ಆದೀಶ್ವರ್ ಶಾಕ್
ಆದೀಶ್ವರ್ ಹಾಗೂ ಕಿಶನ್ ಪೂಜಾ ಬರ್ತ್ ಡೇಯನ್ನು ಮನೆಯಲ್ಲಿ ಗ್ರ್ಯಾಂಡ್ ಆಗಿ ಆಚರಿಸಿ ಆಕೆಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾರೆ. ಆದರೆ, ಈ ಹುಟ್ಟುಹಬ್ಬದ ಆಚರಣೆಗೆ ನಮ್ಮ ಮನೆಯಿಂದ ಯಾರೂ ಬರಲ್ಲ ಎಂದು ಭಾಗ್ಯ ಹೇಳಿದ್ದಾಳೆ.

Bhagya Lakshmi Serial

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಭಾಗ್ಯಲಕ್ಷ್ಮೀ’ (Bhagya Lakshmi) ಧಾರಾವಾಹಿಯಲ್ಲಿ ಭಾಗ್ಯ ತಂಗಿ ಪೂಜಾ ರಾಮ್ದಾಸ್ ಮನೆಗೆ ಸೊಸೆಯಾಗಿ ಬಂದಾಗಿನಿಂದ ಆದೀಶ್ವರ್ ಕಾಮತ್ ಆಕೆಗೆ ಶ್ರೀರಕ್ಷೆಯಾಗಿ ನಿಂತಿದ್ದಾನೆ. ಭಾಗ್ಯಾಗೆ ಕೊಟ್ಟ ಮಾತಿನಂತೆ ಆದೀ ನಡೆದುಕೊಳ್ಳುತ್ತಿದ್ದಾರೆ. ಇದೀಗ ಜ್ವರದಿಂದ ಸಂಪೂರ್ಣ ಹುಷಾರಾಗಿರುವ ಪೂಜಾ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾಳೆ. ಆದೀಶ್ವರ್ ಹಾಗೂ ಕಿಶನ್ ಪೂಜಾಳ ಬರ್ತ್ ಡೇಯನ್ನು ಮನೆಯಲ್ಲಿ ಗ್ರ್ಯಾಂಡ್ ಆಗಿ ಆಚರಿಸಿ ಆಕೆಗೆ ಸರ್ಪ್ರೈಸ್ ನೀಡಲು ಮುಂದಾಗಿದ್ದಾರೆ. ಆದರೆ, ಈ ಹುಟ್ಟುಹಬ್ಬದ ಆಚರಣೆಗೆ ನಮ್ಮ ಮನೆಯಿಂದ ಯಾರೂ ಬರಲ್ಲ ಎಂದು ಭಾಗ್ಯ ಹೇಳಿದ್ದಾಳೆ.
ಮೀನಾಕ್ಷಿ-ಕನ್ನಿಕಾ, ಪೂಜಾಳ ಕೈಯಿಂದ ಇಲ್ಲಸಲ್ಲದ ಕೆಲಸ ಮಾಡಿಸಿದ್ದರು. ಇದರಿಂದ ಆಕೆಗೆ ವಿಪರೀತ ಜ್ವರಬಂತು. ಜ್ವರ ಇದ್ದರೂ ಬಿಡದೆ ಆಕೆಯ ಕೈಯಿಂದ ಕೆಲಸ ಮಾಡಿಸಿದ್ದಾರೆ. ಇದು ಆದೀಶ್ವರ್ ಹಾಗೂ ರಾಮ್ದಾಸ್ಗೆ ಗೊತ್ತಾಗಿದೆ. ಇದು ಆದೀಗೆ ಕೆರಳಿಸಿದೆ. ಪೂಜಾನ ನೀವು ಏನು ಅಂತ ಅಂದುಕೊಂಡಿದ್ದೀರಾ?, ಅವಳಿಗೆ ಜ್ವರ ಇದ್ದು ಇಷ್ಟೊಂದು ಕೆಲಸ ಮಾಡಿಸಿದ್ದೀರಾ, ಶಾಸ್ತ್ರ ಎಲ್ಲ ಈ ಟೈಮ್ನಲ್ಲಿ ಬೇಕಾ?, ಆರೋಗ್ಯ ಮುಖ್ಯ ಆರೋಗ್ಯದ ಮುಂದೆ ಯಾವ ಶಾಸ್ತ್ರನೂ ಇಲ್ಲ.. ಕನ್ನಿಕಾ ನೀನು ಈ ಮನೆಗೆ ಹೇಗೋ ಹಾಗೆ ಪೂಜಾ ಕೂಡ.. ಇವಳು ಈ ಮನೆಯ ಕೆಲಸದವಳಲ್ಲ.. ಮನೆ ಯಜಮಾನಿ ಎಂದು ಹೇಳಿದ್ದಾನೆ.
ಈ ಘಟನೆಯ ಬಳಿಕ ಪೂಜಾ ಮಾತ್ರೆ ತೆಗೆದುಕೊಂಡು ಹುಷಾರಾಗಿದ್ದಾಳೆ. ಮರುದಿನ ಆಕೆಯ ಬರ್ತ್ ಡೇ. ಆದರೆ, ಕಿಶನ್ ಆಗಲಿ ರಾಮ್ದಾಸ್ ಮನೆಯವರಾಗಲಿ ಯಾರುಕೂಡ ಪೂಜಾಗೆ ವಿಶ್ ಮಾಡಿಲ್ಲ. ಅವರಿಗೆ ಪೂಜಾಳ ಹುಟ್ಟುಹಬ್ಬ ಎಂಬ ವಿಚಾರವೇ ಗೊತ್ತಿರುವುದಿಲ್ಲ. ಭಾಗ್ಯ ಬೆಳಗ್ಗೆ ಕಾಲ್ ಮಾಡಿ ವಿಶ್ ಮಾಡಿದ್ದಾಳೆ.. ಈ ಸಂದರ್ಭ ಯಾರೆಲ್ಲ ಶುಭಕೋರಿದರು ಎಂದು ಭಾಗ್ಯ ಕೇಳಿದ್ದಾಳೆ. ಆಗ ಪೂಜಾ ಇಲ್ಲಿ ಯಾರಿಗೂ ಇವತ್ತು ನನ್ನ ಬರ್ತ್ ಡೇ ಅಂತಾನೆ ಗೊತ್ತಿಲ್ಲ ಎಂದು ಹೇಳುತ್ತಾಳೆ. ಇದನ್ನು ಆದೀಶ್ವರ್ ಕೇಳಿಸಿಕೊಂಡಿದ್ದಾನೆ.
ಬಳಿಕ ಆದೀ ಕಿಶನ್ನ ಕರೆದು ಇವತ್ತು ಬರ್ತ್ ಡೇ ಪಾರ್ಟಿ ಮಾಡಬೇಕು.. ಎಲ್ಲ ಅರೇಂಜ್ಮೆಂಟ್ ಚೆನ್ನಾಗಿ ಮಾಡಬೇಕು.. ಪೂಜಾ ಈ ಮನೆಗೆ ಬಂದು ನಡೆಯುತ್ತಿರುವ ಮೊದಲ ಸೆಲೆಬ್ರೆಷನ್ ಇದು ಗ್ರ್ಯಾಂಡ್ ಆಗಿ ಆಗಬೇಕು ಎಂದು ಹೇಳಿದ್ದಾನೆ. ಬಳಿಕ ಆದೀ, ಭಾಗ್ಯಾಳ ಮನೆಯವರನ್ನು ಕರೆಯಲು ಕಾಲ್ ಮಾಡಿದ್ದಾನೆ. ಮೊದಲಿಗೆ ಕಾಲ್ ಕುಸುಮಾ ಮಾಡಿದ್ದಾರೆ. ಇವತ್ತು ಪೂಜಾ ಬರ್ತ್ ಡೇ ಅಲ್ವಾ.. ಸಂಜೆ ಒಂದು ಸೆಲೆಬ್ರೇಷನ್ ಇಟ್ಟುಕೊಂಡಿದ್ದೇವೆ.. ನೀವೆಲ್ಲ ಬರಬೇಕು ಎಂದು ಹೇಳಿದ್ದಾನೆ. ಅದಕ್ಕೆ ಕುಸುಮಾ, ಅದಕ್ಕೇನಂತೆ ಬರೋಣ ಎಂದು ಹೇಳಿದ್ದಾರೆ.
ಆದರೆ, ತಕ್ಷಣ ಫೋನ್ ತೆಗೆದುಕೊಂಡ ಭಾಗ್ಯ, ಆದೀ ಅವರೆ ನಾನು ಹೀಗೆ ಹೇಳ್ತಾ ಇದ್ದೇನೆ ಎಂದು ತಪ್ಪು ತಿಳಿದುಕೊಳ್ಳಬೇಡಿ ಬರ್ತ್ ಡೇ ಪಾರ್ಟಿಗೆ ನಾವು ಯಾರೂ ಬರೋಕೆ ಆಗಲ್ಲ.. ಬೇಜಾರಿ ಮಾಡಿಕೊಳ್ಳಬೇಡಿ.. ನಮಗೆ ಖಂಡಿತಾ ಈ ಸಲ ಬರೋಕೆ ಆಗಲ್ಲ ಎಂದು ಹೇಳಿ ಕಾಲ್ ಕಟ್ ಮಾಡಿದ್ದಾಳೆ. ಇದು ಆದೀಗೆ ಅಚ್ಚರಿ ತರಿಸಿದೆ. ಅತ್ತ ಕಾಲ್ ಕಟ್ ಮಾಡಿದ ಬಳಿಕ, ಏನಾಯಿತು ಭಾಗ್ಯ, ಯಾಕೆ ಬರಲ್ಲ ಅಂತ ಹೇಳಿದೆ ಎಂದು ಕುಸುಮಾ ಕೇಳಿದ್ದಾರೆ.
ಅತ್ತೆ.. ನಮ್ಮ ಪೂಜಾನ ಕೊಟ್ಟಿರೊ ಮನೆ ಅದು.. ಪದೇ ಪದೇ ನಾವು ಅಲ್ಲಿಗೆ ಹೋಗೋದು ಸರಿ ಇರಲಿಲ್ಲ.. ಹಾಗೆ ಹೋಗೋಕೆ ಶುರು ಮಾಡಿದ್ರೆ ಜನ ಏನೇನೋ ಮಾತನಾಡಿ ಕೊಳ್ಳುತ್ತಾರೆ.. ಪೂಜಾಗೆ ವಿಶ್ ಮಾಡಿದ್ವಿ ಅಲ್ವಾ ಅಷ್ಟೇ ಸಾಕು ಎಂದು ಹೇಳಿದ್ದಾಳೆ. ಸದ್ಯ ಪೂಜಾ ಬರ್ತ್ ಡೇ ಪಾರ್ಟಿ ಸಾಕಷ್ಟು ಕುತೂಹಲ ಮೂಡಿಸಿದೆ.. ಅಕ್ಕ ಬರದಿದ್ದರೆ ಪೂಜಾ ಕೇಕ್ ಕಟ್ ಮಾಡುತ್ತಾಳ ಅಥವಾ ಈ ಸೆಲೆಬ್ರೇಷನ್ ಹಾಳು ಮಾಡಲು ಕನ್ನಿಕಾ-ಮೀನಾಕ್ಷಿ ಏನು ಮಾಡುತ್ತಾರೆ ಎಂಬುದು ನೋಡಬೇಕಿದೆ.
Bhagya Lakshmi TRP: ನಂದಗೋಕುಲ ಹಿಂದಿಕ್ಕಿ ಟಿಆರ್ಪಿ ಕಿಂಗ್ ಆದ ಭಾಗ್ಯಲಕ್ಷ್ಮೀ