Bigg Boss 7: ಆಗಸ್ಟ್ 3 ರಿಂದ ಬಿಗ್ ಬಾಸ್ ಆರಂಭ: ಈ ಬಾರಿಯೂ ಸ್ವರ್ಗ-ನರಕ ಕಾನ್ಸೆಪ್ಟ್
ಈ ಬಾರಿ ಬಿಗ್ ಬಾಸ್ ಮಲಯಾಳಂ ತುಂಬಾ ತಡವಾಗಿ ಪ್ರಾರಂಭವಾಗುತ್ತಿದೆ. ಫೆಬ್ರವರಿಯಲ್ಲಿ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ, ಆರು ತಿಂಗಳು ತಡವಾಗಿ ಬರುತ್ತಿದೆ. ಇದೀಗ ಆಗಸ್ಟ್ 3 ರ ಭಾನುವಾರದಂದು ಗ್ರ್ಯಾಂಡ್ ಮೆಗಾ ಲಾಂಚ್ ಎಪಿಸೋಡ್‌ನೊಂದಿಗೆ ಪ್ರಾರಂಭವಾಗಲಿದೆ.

Bigg Boss Malayalam

ಬಿಗ್ ಬಾಸ್ ಮಲಯಾಳಂ ಸೀಸನ್ 7 (Bigg Boss Malayalm 7) ಆರಂಭಕ್ಕೆ ಇನ್ನೂ 2 ದಿನಗಳು ಮಾತ್ರ ಬಾಕಿ ಉಳಿದಿವೆ. ಹೊಸ ಸೀಸನ್ ಆಗಸ್ಟ್ 3 ರ ಭಾನುವಾರದಂದು ಗ್ರ್ಯಾಂಡ್ ಮೆಗಾ ಲಾಂಚ್ ಎಪಿಸೋಡ್‌ನೊಂದಿಗೆ ಪ್ರಾರಂಭವಾಗಲಿದೆ. ಈ ಬಾರಿಯ ಮಲಯಾಳಂ ಬಿಗ್ ಬಾಸ್ ಸಾಕಷ್ಟು ವಿಶೇಷತೆಯಿಂದ ಕೂಡಿರಲಿದೆ. ಮುಖ್ಯವಾಗಿ ಜನಸಾಮಾನ್ಯರಿಗೆ ದೊಡ್ಮನೆಯ ಬಾಗಿಲನ್ನು ಆಯೋಜಕರು ತೆರೆದಿದ್ದು, ಇವರ ಹಾಗೂ ಸೆಲೆಬ್ರಿಟಿಗಳ ನಡುವಣ ಜಟಾಪಟಿ ನೋಡಲು ವೀಕ್ಷಕರು ಕಾತುರರಾಗಿದ್ದಾರೆ.
ಈ ಬಾರಿ ಬಿಗ್ ಬಾಸ್ ಮಲಯಾಳಂ ತುಂಬಾ ತಡವಾಗಿ ಪ್ರಾರಂಭವಾಗುತ್ತಿದೆ. ಫೆಬ್ರವರಿಯಲ್ಲಿ ಪ್ರಾರಂಭವಾಗಬೇಕಿದ್ದ ಕಾರ್ಯಕ್ರಮ, ಆರು ತಿಂಗಳು ತಡವಾಗಿ ಬರುತ್ತಿದೆ. ಇದೀಗ ಆಗಸ್ಟ್ 3 ರ ಭಾನುವಾರದಂದು ಗ್ರ್ಯಾಂಡ್ ಮೆಗಾ ಲಾಂಚ್ ಎಪಿಸೋಡ್‌ನೊಂದಿಗೆ ಪ್ರಾರಂಭವಾಗಲಿದೆ. ಹೊಸ ಸೀಸನ್‌ನ ಟ್ಯಾಗ್‌ಲೈನ್ "ಎಝೈನ್ನೆ ಪಾನಿ". ಇದು ಕೇವಲ ಟ್ಯಾಗ್‌ಲೈನ್ ಆಗಿರುವುದಿಲ್ಲ ಎಂದು ಸೂಚಿಸಲಾಗಿದೆ.
ಸೀಸನ್ 7 ಸಾಂಪ್ರದಾಯಿಕ ರಚನೆಯಲ್ಲಿ ಪ್ರಮುಖ ಬದಲಾವಣೆಗಳು, ಪ್ರೇಕ್ಷಕರ ಅಭಿಪ್ರಾಯಗಳನ್ನು ಒಳಗೊಂಡಿರುವ ಬದಲಾವಣೆಗಳು, ಯುದ್ಧತಂತ್ರದ ಆಟಗಳು, ಆಟಗಾರರು, ಅನಿರೀಕ್ಷಿತ ಟ್ವಿಸ್ಟ್ ಇತ್ಯಾದಿಗಳೊಂದಿಗೆ ಹೊಸ ಸ್ವರೂಪದಲ್ಲಿ ಬರಲಿದೆ. ಈ ಸೀಸನ್‌ನಲ್ಲಿ ಸ್ಪರ್ಧಿಗಳು ಹಿಂದೆಂದೂ ಕಾಣದ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಹೆಚ್ಚು ಕಷ್ಟಕರವಾದ ಕೆಲಸ, ಬುದ್ಧಿವಂತಿಕೆ ಅಗತ್ಯವಾಗಿ ಬೇಕಂತೆ.
Prema Kavya: ಕಲರ್ಸ್ನಲ್ಲಿ ಆಗಸ್ಟ್ 4 ರಿಂದ ಈ ಹೊಸ ಧಾರಾವಾಹಿ ಶುರು
ಮತ್ತೊಂದು ವಿಶೇಷ ಎಂದರೆ ಈ ಬಾರಿಯ ಸೀಸನ್‌ನಲ್ಲಿ ''ಸ್ವರ್ಗ'' ಮತ್ತು ''ನರಕ'' ಎಂಬ ಕಾನ್ಸೆಪ್ಟ್‌ನಡಿ ಮನರಂಜನೆಯ ರಸದೌತಣ ಬಡಿಸುವ ಪ್ರಯತ್ನ ಮಾಡಲಾಗಿದೆ. ಈ ಹಿಂದೆ ಬಿಗ್ ಬಾಸ್ ಕನ್ನಡ ಸೀಸನ್ 11 ರಲ್ಲಿ ಇದೇ ಕಾನ್ಸೆಪ್ಟ್ ತರಲಾಗಿತ್ತು. ಇದೀಗ ಮೊದಲ ಬಾರಿಗೆ ಮಲಯಾಳಂನಲ್ಲಿ ಈ ಪ್ರಯೋಗ ಮಾಡಲಾಗಿದೆ. ಮನೆಯ ವಿನ್ಯಾಸವನ್ನು ಕೂಡ ಸ್ವರ್ಗ ಮತ್ತು ನರಕದಂತೆಯೇ ಮಾಡಲಾಗಿದೆಯಂತೆ.
ಆಗಸ್ಟ್ 3 ರ ಭಾನುವಾರ ಸಂಜೆ 7 ಗಂಟೆಗೆ ಪ್ರಾರಂಭವಾಗುವ ಅದ್ದೂರಿ ಲಾಂಚ್ ಸಂಚಿಕೆಯಲ್ಲಿ ಮೋಹನ್ ಲಾಲ್ ಬಿಗ್ ಬಾಸ್ ಸ್ಪರ್ಧಿಗಳನ್ನು ಪ್ರೇಕ್ಷಕರಿಗೆ ಪರಿಚಯಿಸಲಿದ್ದಾರೆ. ನಂತರ ಈ ಕಾರ್ಯಕ್ರಮವು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 9.30 ಕ್ಕೆ ಏಷ್ಯಾನೆಟ್‌ನಲ್ಲಿ ಮತ್ತು ಶನಿವಾರ ಮತ್ತು ಭಾನುವಾರ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ. ಇದು ಜಿಯೋ ಹಾಟ್‌ಸ್ಟಾರ್‌ನಲ್ಲಿ ದಿನದ 24 ಗಂಟೆಗಳ ಕಾಲವೂ ಪ್ರಸಾರವಾಗಲಿದೆ.