ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಇಂದು ಮಿಡ್ ವೀಕ್ ಎಲಿಮಿನೇಷನ್: ಮಧ್ಯರಾತ್ರಿ ಆಯ್ತು ಸೈರನ್

ಇಂದು ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕೆ ಎಲಿಮಿನೇಷನ್ ನಡೆಯಲಿದೆ. ಇದರಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಮಾಡಿ ಸೈರನ್ ಸೌಂಡ್ ಆಗಿದೆ. ಎಲ್ಲರನ್ನೂ ಹೊರಗಿನ ಗಾರ್ಡರ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಗಿದೆ.

ಇಂದು ಮಿಡ್ ವೀಕ್ ಎಲಿಮಿನೇಷನ್: ಮಧ್ಯರಾತ್ರಿ ಆಯ್ತು ಸೈರನ್

BBK 12 Mid week elimination -

Profile Vinay Bhat Oct 16, 2025 8:26 AM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss kannada 12) ಆರಂಭವಾದ ಮೊದಲ ಎರಡು ವಾರಗಳಲ್ಲೇ ಸಾಕಷ್ಟು ಟ್ವಿಸ್ಟ್​ಗಳಿದ್ದವು. ಇದೀಗ ಮೂರನೇ ನಡೆಯುತ್ತಿದೆ. ಈ ವಾರಾಂತ್ಯದಲ್ಲಿ ಈ ಸೀಸನ್​ನ ಮೊದಲ ಫಿನಾಲೆ ನಡೆಯಲಿದೆ. ಹೀಗಾಗಿ ಈ ವಾರ ಕೂಡ ಬಿಗ್ ಬಾಸ್ ಒಂದರ ಹಿಂದೆ ಒಂದರಂತೆ ಟ್ವಿಸ್ಟ್- ಟರ್ನ್ ನೀಡುತ್ತಿದ್ದಾರೆ. ಇದೀಗ ಮಧ್ಯರಾತ್ರಿ ಸ್ಪರ್ಧಿಗಳನ್ನು ಎಬ್ಬಿಸಿ ಬಿಗ್ ಬಾಸ್ ಶಾಕ್ ನೀಡಿದ್ದಾರೆ. ಅದೇ ಮಿಡ್ ವೀಕೆ ಎಲಿಮಿನೇಷನ್.

ಹೌದು, ಇಂದು ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕೆ ಎಲಿಮಿನೇಷನ್ ನಡೆಯಲಿದೆ. ಇದರಲ್ಲಿ ಒಬ್ಬರು ಅಥವಾ ಇಬ್ಬರು ಎಲಿಮಿನೇಟ್ ಆಗಲಿದ್ದಾರೆ. ಮಧ್ಯರಾತ್ರಿ ಎಲ್ಲರೂ ಮಲಗಿರುವಾಗ ಬಿಗ್ ಬಾಸ್ ಕಡೆಯಿಂದ ರೆಡ್ ಲೈಟ್ ಆನ್ ಮಾಡಿ ಸೈರನ್ ಸೌಂಡ್ ಆಗಿದೆ. ಎಲ್ಲರನ್ನೂ ಹೊರಗಿನ ಗಾರ್ಡರ್ ಏರಿಯಾದಲ್ಲಿ ಸಾಲಾಗಿ ನಿಲ್ಲಿಸಲಾಗಿದೆ. ‘ಗ್ರ್ಯಾಂಡ್ ಫಿನಾಲೆಗು ಮುನ್ನವೇ ಒಬ್ಬರ ಆಟ ಇಲ್ಲಿಗೆ ಮುಗಿದು ಬಿಗ್ ಬಾಸ್ ಮನೆಯಿಂದ ಹೊರಹೋಗಲಿದ್ದಾರೆ. ಯಾರನ್ನ ಈ ಮನೆಯಿಂದ ಹೊರಹಾಕಲು ಇಚ್ಚಿಸುತ್ತೀರಿ ಎಂದು ಘೋಷಿಸಬೇಕು’ ಎಂದು ಬಿಗ್ ಬಾಸ್ ಹೇಳಿದ್ದಾರೆ.



ಪ್ರೋಮೋದಲ್ಲಿ ತೋರಿಸಿರುವಂತೆ ಹೆಚ್ಚಿನ ಸ್ಪರ್ಧಿಗಳು ಡಾಗ್ ಸತೀಶ್, ರಕ್ಷಿತಾ ಶೆಟ್ಟಿ, ಸ್ಪಂದನಾ, ಜಾನ್ವಿ ಹೆಸರು ತೆಗೆದುಕೊಂಡಿದ್ದಾರೆ. ಆದರೆ, ಮೂಲಗಳ ಪ್ರಕಾರ ಇಂದು ಇಬ್ಬರು ಸ್ಪರ್ಧಿಗಳು ಹೊರಹೋಗಲಿದ್ದಾರೆ. ಮಂಜು ಭಾಷಿಣಿ ಹಾಗೂ ಸತೀಶ್ ಮಿಡ್ ವೀಕ್ ಎಲಿಮಿನೇಷನ್​ನಲ್ಲಿ ಡೊಡ್ಮನೆಯಿಂದ ಆಚೆ ಬಂದಿದ್ದಾರೆ ಎಂದು ಹೇಳಲಾಗಿದೆ. ಈ ಕುರಿತ ಅಧಿಕೃತ ಮಾಹಿತಿಗೆ ಇಂದಿನ ಎಪಿಸೋಡ್ ಅನ್ನೇ ನೋಡಬೇಕಿದೆ.

ಬಿಗ್ ಬಾಸ್ ಫಿನಾಲೆ ಅಕ್ಟೋಬರ್ 18 ಹಾಗೂ 19 ರಂದು ನಡೆಯಲಿದೆ. ಸದ್ಯ ದೊಡ್ಮನೆಯಲ್ಲಿ 17 ಮಂದಿ ಇದ್ದು, ಇವರಲ್ಲಿ ಇಬ್ಬರು ವಾರದ ಮಧ್ಯವೇ ಹೊರ ಹೋಗಲಿದ್ದಾರೆ. ಆ ಬಳಿಕ ವಾರಾಂತ್ಯದಲ್ಲಿ ನಾಲ್ಕರಿಂದ ಐದು ಜನ ಔಟ್ ಆಗಬಹುದು ಎಂದು ಹೇಳಲಾಗುತ್ತಿದೆ. ಈಗಾಗಲೇ ಫಿನಾಲೆಗೆ ಸ್ಪರ್ಧಿಗಳು ಆಯ್ಕೆ ಆಗಿ ಆಗಿದೆ. ಕಾಕ್ರೋಚ್ ಸುಧಿ, ಅಶ್ವಿನಿ ಗೌಡ, ಮಾಲು ಹಾಗೂ ರಾಶಿಕಾ ಫಿನಾಲೆಯಲ್ಲಿ ಸ್ಥಾನ ಪಡೆದಿದ್ದಾರೆ. ಇನ್ನೂ ಕೆಲವರು ಫಿನಾಲೆಯಲ್ಲಿ ಸ್ಥಾನ ಪಡೆಯುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

BBK 12: ಬಿಗ್ ಬಾಸ್ ಮೊದಲ ಫಿನಾಲೆಯಲ್ಲಿ ಎಲಿಮಿನೇಟ್ ಆಗೋದು ಎಷ್ಟು ಮಂದಿ: ಇಲ್ಲಿದೆ ಮಾಹಿತಿ