ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

BBK 12: ಬಿಗ್ ಬಾಸ್​ನಲ್ಲಿ ಭರ್ಜರಿ ಕಂಟೆಂಟ್ ಕೊಡುತ್ತಿರುವ ಗಿಲ್ಲಿ ನಟ: ಅಶ್ವಿನಿ ಗೌಡ ಸುಸ್ತು

ಗಿಲ್ಲಿ ನಟ ಹಾಗೂ ಅಶ್ವಿನಿ ನಡುವೆ ಪದೇ ಪದೇ ಜಗಳ ಆಗುತ್ತಿದೆ. ಹಾಲ್ನಲ್ಲಿ ನಡೆದ ಈ ಜಗಳ ಇದೀಗ ಬಾತ್ರೂಮ್ ಏರಿಯಾಕ್ಕೂ ಬಂದಿದೆ. ಗಿಲ್ಲಿ-ಕಾವ್ಯಾ ಬಾತ್ ರೂಮ್ ಏರಿಯಾ ಕ್ಲೀನ್ ಮಾಡುತ್ತಿರುತ್ತಾರೆ. ಇವರನ್ನು ಕ್ಲೀನ್ ಮಾಡಿಸುವ ಕೆಲಸ ಒಂಟಿ ತಂಡದ್ದು. ಹೀಗಾಗಿ ಇವರಿಬ್ಬರು ಹೇಗೆ ಕ್ಲೀನ್ ಮಾಡುತ್ತಾರೆ ಎಂದು ನೋಡಿ ಕೊಳ್ಳಲು ಅಶ್ವಿನಿ ಬಂದಿದ್ದಾರೆ.

ಬಿಗ್ ಬಾಸ್​ನಲ್ಲಿ ಭರ್ಜರಿ ಕಂಟೆಂಟ್ ಕೊಡುತ್ತಿರುವ ಗಿಲ್ಲಿ ನಟ

Ashwini and Gilli Nata Fight BBK 12 -

Profile Vinay Bhat Oct 2, 2025 4:06 PM

ಬಿಗ್ ಬಾಸ್ ಕನ್ನಡ ಸೀಸನ್ 12 (Bigg boss kannada 12) ಶುರುವಾಗಿ ಮೂರು ದಿನ ಕಳೆದಿದೆ. ಸಾಮಾನ್ಯವಾಗಿ ಹೊಸ ಸೀಸನ್ ಶುರುವಾದಾಗ ಮೊದಲ ವಾರ ಎಲ್ಲರೂ ಹೊಂದಿಕೊಳ್ಳಲು ಸಮಯ ತೆಗೆದುಕೊಳ್ಳುತ್ತಾರೆ. ಪರಸ್ಪರ ಪ್ರೀತಿಯಿಂದ ಮಾತನಾಡಿಕೊಂಡು ಸಮಯ ಕಳೆಯುತ್ತಾರೆ. ಜಗಳಗಳ ಸನ್ನಿವೇಶ ಎರಡು-ಮೂರು ವಾರಗಳ ನಂತರ ಶುರುವಾಗುತ್ತೆ. ಆದರೆ, ಈ ಬಾರಿಯ ಬಿಗ್ ಬಾಸ್​ ಸೀಸನ್ ಹಿಂದಿನಂತಿಲ್ಲ.. ಪ್ರಾರಂಭವಾದ ಎರಡೇ ದಿನಕ್ಕೆ ಜಗಳ ಶುರುವಾಗಿತ್ತು. ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ನಡುವೆ ನಿನ್ನೆ ಫೈಟ್ ನಡೆದಿತ್ತು, ಇದು ಮೂರನೇ ದಿನ ಕೂಡ ಮುಂದುವರೆದಿದೆ.

ಗಿಲ್ಲಿ ನಟ ಹಾಗೂ ಅಶ್ವಿನಿ ನಡುವೆ ಪದೇ ಪದೇ ಜಗಳ ಆಗುತ್ತಿದೆ. ಇಂದು ಬೆಳಗ್ಗೆ ಕಲರ್ಸ್ ಇವರಿಬ್ಬರ ನಡುವಣ ಫೈಟ್​ನ ಒಂದು ಪ್ರೋಮೋ ರಿಲೀಸ್ ಮಾಡಿತ್ತು. ಇದರಲ್ಲಿ ಅಶ್ವಿನಿ ಅವರು, ಸ್ಲಾಪ್ ಎಲ್ಲ ಗಲೀಜಾಗಿದೆ.. ನೀವು ದರ್ಪ ತೋರ್ಸಿ ನಾವು ಇಲ್ಲಿಂದಲೇ ಮಜಾ ತೆಗೋತೀನಿ ಎಂದು ಹೇಳಿದ್ದರು. ಅಲ್ಲದೆ ಗಿಲ್ಲಿಯನ್ನು ನೋಡಿಕೊಂಡು ನಾವು-ನೀವು ಒಂದೇ ಅಲ್ಲ.. ನೀವು ಸೇವಕರು ಎಂದಿದ್ದಾರೆ.

ಅಶ್ವಿನಿ ಅವರು ಹೀಗೆ ಮಾತನಾಡುತ್ತಿರುವಾಗ ಗಿಲ್ಲಿ ನಟ ಎಲ್ಲೋ ನೋಡುತ್ತಿದ್ದರು. ಇದರಿಂದ ಕೆರಳಿದ ಅಶ್ವಿನಿ, ನನ್ನ ಕಣ್ಣಿದೆ ಅಲ್ವಾ.. ನನ್ನ ಕಣ್ಣನ್ನು ನೋಡು.. ನೀವಿಬ್ರು ನನ್ನನ್ನ ನೋಡಿ ಎಂದು ಗಿಲ್ಲಿ-ಕಾವ್ಯಾಗೆ ಹೇಳಿದ್ದಾರೆ. ಇದು ಗಿಲ್ಲಿಗೆ ಕೋಪ ತರಿಸಿದೆ. ಕೇಳಿಸಿಕೊಳ್ತಾ ಇದ್ದೀವಿ ಅಲ್ವಾ ನಾವು ಎಂದು ಏರು ಧ್ವನಿಯಲ್ಲಿ ಹೇಳಿದ್ದಾರೆ. ಇಲ್ಲಿ ಕೇಳಿಸ್ಕೋಬೇಡಿ ನೀವು ರೂಮ್​ಗೆ ಹೋಗಿ ಎಂದು ಅಶ್ವಿನಿ ಹೇಳಿದಾಗ.. ಅದನ್ನ ಹೇಳೋದಕ್ಕೆ ನೀವು ಯಾರು ಎಂದು ಗಿಲ್ಲಿ ಪ್ರಶ್ನಿಸಿದ್ದಾರೆ. ನೀನು ತುಂಬಾ ಮಾತಾಡ್ತಾ ಇದ್ದೀಯಾ ಎಂದು ಅಶ್ವಿನಿ ಹೇಳಿದ್ದಕ್ಕೆ ನೀವೂ ಕೂಡ ತುಂಬಾ ಮಾತಾಡ್ತಾ ಇದ್ದೀರಾ ಎಂದು ಗಿಲ್ಲಿ ಹೇಳಿದ್ದಾರೆ.



ಹಾಲ್​ನಲ್ಲಿ ನಡೆದ ಈ ಜಗಳ ಇದೀಗ ಬಾತ್​ರೂಮ್​ ಏರಿಯಾಕ್ಕೂ ಬಂದಿದೆ. ಗಿಲ್ಲಿ-ಕಾವ್ಯಾ ಬಾತ್ ರೂಮ್ ಏರಿಯಾ ಕ್ಲೀನ್ ಮಾಡುತ್ತಿರುತ್ತಾರೆ. ಇವರನ್ನು ಕ್ಲೀನ್ ಮಾಡಿಸುವ ಕೆಲಸ ಒಂಟಿ ತಂಡದ್ದು. ಹೀಗಾಗಿ ಇವರಿಬ್ಬರು ಹೇಗೆ ಕ್ಲೀನ್ ಮಾಡುತ್ತಾರೆ ಎಂದು ನೋಡಿ ಕೊಳ್ಳಲು ಅಶ್ವಿನಿ ಬಂದಿದ್ದಾರೆ. ಈ ಸಂದರ್ಭ ಗಿಲ್ಲಿ ಬೇಕಂತಲೇ ನನ್ನ ನೀನು ಗೆಲ್ಲಲಾರೆ ಸಾಂಗ್ ಹಾಡಿದ್ದಾರೆ. ಅಲ್ಲದೆ ಟಿಶ್ ಪೇಪರ್ ಹಾಳು ಮಾಡುವಂತಿಲ್ಲ ಎಂದು ಅಶ್ವಿನಿ ಹೇಳಿದಾಗ, ನನ್ನ ಕೈಗಳು ಗಲೀಜಾಗಿದೆ ಎಂದು ಟಿಶ್ ಇಂದ ಉಜ್ಜಿ ಅದನ್ನು ಡಸ್ಟ್ ಬಿನ್​ಗೆ ಬಿಸಾಕಿದ್ದಾರೆ. ಮ್ಯಾಟ್ ಅಲ್ಲಿ ಧೂಳು ಇರುತ್ತದೆ ಎಂದು ಆ ಮ್ಯಾಟ್ ಅನ್ನು ಅಶ್ವಿನಿ ಅವರ ನಿಂತ ಪಕ್ಕವೇ ನೆಲಕ್ಕೆ ಹೊಡೆದಿದ್ದಾರೆ.

ಹೀಗೆ ಗಿಲ್ಲಿ ನಟ ಅಶ್ವಿನಿ ಅವರ ಪಿತ್ತ ನೆತ್ತಿಗೇರಿಸಿದ್ದಾರೆ. ಆದರೆ, ಈ ಪ್ರೋಮೋವನ್ನು ಕಂಡ ಗಿಲ್ಲಿ ಫ್ಯಾನ್ಸ್, ಇದು ಒಳ್ಳೆಯ ಕಂಟೆಂಟ್.. ಬಿಗ್ ಬಾಸ್ ಶೋಗೆ ಇದೇರೀತಿಯ ಕಂಟೆಂಟ್ ಬೇಕಿರೋದು ಎಂದು ಹೇಳಿದ್ದಾರೆ. ಸದ್ಯ ಇವರ ಜಗಳ ಯಾವ ಮಟ್ಟಕ್ಕೆ ಹೋಗುತ್ತೆ ಎಂಬುದು ನೋಡಬೇಕಿದೆ.

Mallamma: ಮಲ್ಲಮ್ಮ ಫಿನಾಲೆ ಕಂಟೆಂಡರ್: ವೀಕೆಂಡ್​ನಲ್ಲಿ ಒಂಟಿಗಳ ಚಳಿ ಬಿಡಿಸಲಿದ್ದಾರೆ ಸುದೀಪ್