Mallamma: ಮಲ್ಲಮ್ಮ ಫಿನಾಲೆ ಕಂಟೆಂಡರ್: ವೀಕೆಂಡ್ನಲ್ಲಿ ಒಂಟಿಗಳ ಚಳಿ ಬಿಡಿಸಲಿದ್ದಾರೆ ಸುದೀಪ್
ಈ ವಾರ ಸದ್ಯ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್ನಲ್ಲಿ ಯಾರು ಗೆಲ್ಲುತ್ತಾರೊ ಅವರು ಫಿನಾಲೆ ಕಂಟೆಂಡರ್ ಆಗುತ್ತಾರೆ. ಇದೀಗ ಮೊದಲ ಫಿನಾಲೆ ಕಂಟೆಂಡ್ ಯಾರು ಎಂಬ ವಿಚಾರ ಹೊರಬಿದ್ದಿದೆ. ಅದು ಮತ್ಯಾರು ಅಲ್ಲ ಮಲ್ಲಮ್ಮ. ನಿನ್ನೆ ನಡೆದ ಒಂಟಿ ಹಾಗೂ ಜಂಟಿ ನಡುವಣ ಸಿಕ್ಕಿನ ಕಾಳಗದಲ್ಲಿ ಒಂಟಿ ತಂಡ ಗೆದ್ದುಕೊಂಡಿದೆ.

Mallamma and Sudeep -

ಬಿಗ್ ಬಾಸ್ ಕನ್ನಡ ಸೀಸನ್ 12 (Bigg Boss Kannada 12) ದಿನದಿಂದ ದಿನಕ್ಕೆ ರೋಚಕತೆ ಸೃಷ್ಟಿಸುತ್ತಿದೆ. ಹಿಂದಿನ ಸೀಸನ್ಗಳಂತೆ ಈ ಬಾರಿ ಇಲ್ಲ. ಪ್ರತಿ ದಿನ ಒಂದಲ್ಲ ಒಂದು ಟ್ವಿಸ್ಟ್ ಆ್ಯಂಡ್ ಟರ್ನ್ ಮೂಲಕ ಸ್ಪರ್ಧಿಗಳಿಗೆ ಹಾಗೂ ವೀಕ್ಷಕರಿಗೆ ಬಿಗ್ ಬಾಸ್ ಶಾಕ್ ನೀಡುತ್ತಿದ್ದಾರೆ. ಸದ್ಯ ಬಿಗ್ ಬಾಸ್ನ ಹೊಸ ನಿಯಮದ ಪ್ರಕಾರ ಮೂರನೇ ವಾರದಲ್ಲಿ ಒಂದು ಫಿನಾಲೆ ನಡೆಯಲಿದೆ. 18 ಜನ ಸ್ಪರ್ಧಿಗಳ ಪೈಕಿ ಯಾರೆಲ್ಲ ಫಿನಾಲೆಗೆ ಹೋಗುತ್ತಾರೆ ಎಂಬುದನ್ನ ಬಿಗ್ ಬಾಸ್ ಈಗಾಗಲೇ ತಿಳಿಸಿದ್ದಾರೆ ಕೂಡ.
ಮೊದಲನೆಯದಾಗಿ ಮೊದಲ ಮೂರು ವಾರ ಅಂದರೆ ಫಸ್ಟ್ ಫೈನಲ್ ನಡೆಯುವವರೆಗೆ ದೊಡ್ಮನೆಯಲ್ಲಿ ಕ್ಯಾಪ್ಟರ್ ಇರುವುದಿಲ್ಲ. ಎಲಿಮಿನೇಷನ್ ಭಯದಿಂದ ಮುಕ್ತರಾಗಿ ಸ್ಪರ್ಧಿಗಳು ಮೊದಲ ಫೈನಲ್ ತಲುಪಬೇಕು ಎಂದರೆ ಸರಣಿ ಟಾಸ್ಕ್ ಗೆಲ್ಲಬೇಕು. ಪ್ರತೀ ವಾರದ ಅಂತ್ಯದಲ್ಲಿ ಸರಣಿ ಟಾಸ್ಕ್ ಗೆಲ್ಲುವವರು ನೇರವಾಗಿ ಫೈನಲಿಸ್ಟ್ ಆಗಿ ಆಯ್ಕೆ ಆಗುತ್ತಾರೆ. ಆ ಫೈನಲಿಸ್ಟ್ಗಳ ಪೈಕಿ ಒಬ್ಬರು ಮೂರನೇ ವಾರ ನಡೆಯಲಿರುವ ಮೊದಲ ಫಿನಾಲೆಯನ್ನು ಗೆಲ್ಲುತ್ತಾರೆ.
ಮೊದಲ ವಾರದ ವಿಚಾರ ಮಾತನಾಡುವುದಾದರೆ, ಈ ವಾರ ಸದ್ಯ ಟಾಸ್ಕ್ ನಡೆಯುತ್ತಿದೆ. ಈ ಟಾಸ್ಕ್ನಲ್ಲಿ ಯಾರು ಗೆಲ್ಲುತ್ತಾರೊ ಅವರು ಫಿನಾಲೆ ಕಂಟೆಂಡರ್ ಆಗುತ್ತಾರೆ. ಇದೀಗ ಮೊದಲ ಫಿನಾಲೆ ಕಂಟೆಂಡ್ ಯಾರು ಎಂಬ ವಿಚಾರ ಹೊರಬಿದ್ದಿದೆ. ಅದು ಮತ್ಯಾರು ಅಲ್ಲ ಮಲ್ಲಮ್ಮ. ನಿನ್ನೆ ನಡೆದ ಒಂಟಿ ಹಾಗೂ ಜಂಟಿ ನಡುವಣ ಸಿಕ್ಕಿನ ಕಾಳಗದಲ್ಲಿ ಒಂಟಿ ತಂಡ ಗೆದ್ದುಕೊಂಡಿದೆ.
ಹೀಗಾಗಿ ಒಂಟಿ ತಂಡದಿಂದ ಓರ್ವ ಫೈನಲಿಸ್ಟ್ ಆಗಬೇಕಿತ್ತು. ಅದನ್ನ ಒಂಟಿ ಸದಸ್ಯರು ಚರ್ಚೆ ಮಾಡಿ ಬಿಗ್ ಬಾಸ್ಗೆ ಸೂಚಿಸಬೇಕು. ಧ್ರುವಂತ್, ಕಾಕ್ರೋಚ್ ಸುಧಿ, ಧನುಷ್ ಗೌಡ, ಮಲ್ಲಮ್ಮ, ಅಶ್ವಿನಿ ಗೌಡ, ಜಾಹ್ನವಿ ಅವರು ಚರ್ಚೆ ಮಾಡಿ ಓರ್ವ ಫೈನಲಿಸ್ಟ್ ಹೆಸರನ್ನು ಹೇಳಬೇಕಿತ್ತು. ಅದರಂತೆ ಒಂಟಿಗಳು ಚರ್ಚೆ ನಡೆಸಿದ ಬಳಿಕ ಅಶ್ವಿನಿ ಗೌಡ ಅವರು ನಿರ್ಧಾರ ಪ್ರಕಟಿಸಿದರು. ‘ನಮ್ಮೆಲ್ಲರಿಗೂ ಫಿನಾಲೆಗೆ ಹೋಗುವ ಭರವಸೆ ಇದೆ. ಎಲ್ಲರೂ ಸೇರಿ ನಾವು ಒಮ್ಮತದಿಂದ ಮಲ್ಲಮ್ಮ ಅವರನ್ನು ಸೇವ್ ಮಾಡುತ್ತಿದ್ದೇವೆ’ ಎಂದು ಹೇಳಿದರು.
‘‘ಜನರು ನೋಡುತ್ತಾರೆ ಅಥವಾ ಎಮೋಶನಲ್ ಆಗಿಯಾದರೂ ಪರವಾಗಿಲ್ಲ. ಮಲ್ಲಮ್ಮ ಅವರನ್ನು ಸೇವ್ ಮಾಡೋಣ. ಈ ವಯಸ್ಸಿನಲ್ಲಿ ಇಷ್ಟು ಕಷ್ಟಪಡುವ ಮಲ್ಲಮ್ಮನನ್ನು ನಾವು ನಾಮಿನೇಟ್ ಮಾಡಿದ್ರೆ ಜನರು ಬಯ್ತಾರೆ ಅಂತ ಅಂದುಕೊಂಡು ಕೆಲವರು ನಾಮಿನೇಟ್ ಮಾಡಲ್ಲ, ಹೀಗಾಗಿ ನಾವು ಮಲ್ಲಮ್ಮನನ್ನು ಸೇವ್ ಮಾಡೋಣ’’ ಎಂದು ಕಾಕ್ರೋಚ್ ಸುಧಿ ಹೇಳಿದರೆ, ನಾವು ಹೋರಾಟ ಮಾಡಿ ಸೇವ್ ಆಗಬಹುದು, ಆದರೆ ಮಲ್ಲಮ್ಮನಿಗೆ ಕಷ್ಟ ಆಗಬಹುದು ಎಂದು ನಾವು ಅವರನ್ನು ಸೇವ್ ಮಾಡ್ತೀವಿ ಎಂದು ಅಶ್ವಿನಿ ಹೇಳಿದ್ದಾರೆ.
ಮಲ್ಲಮ್ಮ ಅವರು ತುಂಬ ಮುಗ್ಧರು. ಬಿಗ್ ಬಾಸ್ ನಿಯಮಗಳನ್ನು ಅರ್ಥ ಮಾಡಿಕೊಳ್ಳಲು ಅವರು ಕಷ್ಟಪಡುತ್ತಾರೆ. ಇನ್ನುಳಿದವರ ತಂತ್ರಗಾರಿಕೆಯನ್ನು ಅರ್ಥ ಮಾಡಿಕೊಳ್ಳಲು ಅವರು ಸೋಲುತ್ತಾರೆ. ಎಲ್ಲರೂ ಸರಿಯಾಗಿ ಕಠಿಣ ಪೈಪೋಟಿ ನೀಡಿದರೆ ಅಂಥವರ ಜೊತೆ ಮಲ್ಲಮ್ಮ ಸ್ಪರ್ಧಿಸುವುದು ಕಷ್ಟ ಆಗುತ್ತದೆ. ಹಾಗಾಗಿ ಎಲ್ಲರೂ ಒಟ್ಟಾಗಿ ಚರ್ಚಿಸಿ ಮಲ್ಲಮ್ಮ ಅವರನ್ನು ಫಿನಾಲೆ ಕಂಟೆಂಡರ್ ಮಾಡಿದ್ದಾರೆ.
BBK 12: ತಾರಕಕ್ಕೇರಿದ ಅಶ್ವಿನಿ-ಗಿಲ್ಲಿ ಮಾತಿನ ಯುದ್ಧ: ಹೊಸ ಪ್ರೋಮೋ ಔಟ್
ಬಿಗ್ ಬಾಸ್ ಪ್ರಕಾರ ಇಲ್ಲಿ ಎಲ್ಲ ಸ್ಪರ್ಧಿಗಳು ಸಮಾನರು. ಈ ಹಿಂದಿನ ಸೀಸನ್ಗಳಲ್ಲು ಕೂಡ ಅವರು ಹಿರಿಯರು, ಅವರಿಗೆ ಕಷ್ಟವಾಗುತ್ತದೆ ಎಂದು ಇತರೆ ಸ್ಪರ್ಧಿಗಳು ಅವರನ್ನು ಸೇವ್ ಮಾಡಿದ್ದು ನಡೆದಿದೆ. ಆ ಸಂದರ್ಭ ಸುದೀಪ್ ವೀಕೆಂಡ್ ಬಂದು ಅಂತವರ ಮೈಚಳಿ ಬಿಡಿಸಿದ್ದು ನೋಡಿದ್ದೇವೆ. ಯಾರಿಗೆ ಅರ್ಹತೆ ಇದೆಯೋ ಅವರನ್ನು ಫಿನಾಲೆ ಕಂಟೆಂಡರ್ ಮಾಡಿ, ಮುಗ್ಧರು, ನಿಯಮ ಅರ್ಥ ಆಗಲ್ಲ ಅನ್ನೊ ಕಾರಣಕ್ಕೆ ಇಂತಹ ದೊಡ್ಡ ನಿರ್ಧಾರ ತೆಗೆದುಕೊಂಡ ಬಗ್ಗೆ ಸುದೀಪ್ ಒಂಟಿ ತಂಡದ ಸದಸ್ಯರನ್ನು ಪ್ರಶ್ನೆ ಮಾಡುವ ಸಾಧ್ಯತೆ ಇದೆ.