ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Kannada Serial TRP: ಕರ್ಣನ ಹತ್ತಿರವೂ ಸುಳಿಯದ ಇತರೆ ಧಾರಾವಾಹಿಗಳು: ಇಲ್ಲಿದೆ ಟಿಆರ್​ಪಿ

ಕನ್ನಡ ಕಿರುತೆರೆಯಲ್ಲಿ ಕರ್ಣನ ಆಗಮನದ ನಂತರ ಸೀರಿಯಲ್ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಟಿಆರ್ಪಿಯಲ್ಲಿ ಮೇಲೇಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕರ್ಣನ ಮುಂದೆ ಇದು ಯಾವುದೂ ವರ್ಕ್ ಆಗುತ್ತಿಲ್ಲ. ಇದೀಗ 32ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ.

ಕರ್ಣನ ಹತ್ತಿರವೂ ಸುಳಿಯದ ಇತರೆ ಧಾರಾವಾಹಿಗಳು: ಇಲ್ಲಿದೆ TRP

Karna Serial

Profile Vinay Bhat Aug 22, 2025 7:23 AM

ಕನ್ನಡ ಕಿರುತೆರೆಯಲ್ಲಿ ಕರ್ಣನ (Karna Serial) ಆಗಮನದ ನಂತರ ಸೀರಿಯಲ್​ಗಳ ಲೆಕ್ಕಾಚಾರವೆಲ್ಲ ತಲೆಕೆಳಗಾಗಿದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಟಿಆರ್​ಪಿಯಲ್ಲಿ ಮೇಲೇಳಲು ಹರಸಾಹಸ ಪಡುತ್ತಿದ್ದಾರೆ. ಆದರೆ, ಕರ್ಣನ ಮುಂದೆ ಇದು ಯಾವುದೂ ವರ್ಕ್ ಆಗುತ್ತಿಲ್ಲ. ಇದೀಗ 32ನೇ ವಾರದ ಟಿಆರ್‌ಪಿ ರೇಟಿಂಗ್ಸ್‌ ಹೊರಬಿದ್ದಿದೆ. ಈ ವಾರ ಕೂಡ ಝೀ ಕನ್ನಡದಲ್ಲಿ ಕರ್ಣನ ಆರ್ಭಟ ಮುಂದುವರೆದಿದೆ. ಕಿರುತೆರೆ ಲೋಕದಲ್ಲಿ ಸತತ ಏಳನೇ ವಾರವೂ ನಂಬರ್ ಒನ್ ಧಾರಾವಾಹಿ ಆಗಿ ಕರ್ಣ ಇತಿಹಾಸ ನಿರ್ಮಿಸಿದ್ದಾನೆ.

ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್‌ + ರೂರಲ್‌ನಲ್ಲಿ 10.2 ಟಿವಿಆರ್‌, ಎರಡನೇ ವಾರ 10.4 ಟಿವಿಆರ್‌, ಮೂರನೇ ವಾರ 10.2 ಟಿವಿಆರ್‌ ಲಭಿಸಿತ್ತು. ನಾಲ್ಕನೇ ವಾರ 9.6 ಟಿವಿಆರ್‌ ಪಡೆದಿತ್ತು. ಐದನೇ ವಾರ ಕರ್ಣ ಸೀರಿಯಲ್‌ಗೆ 10.1 ಟಿವಿಆರ್‌ (ಅರ್ಬನ್ + ರೂರಲ್‌ ಮಾರ್ಕೆಟ್‌) ಲಭಿಸಿದರೆ ಆರನೇ ವಾರ 9.1 ಟಿವಿಆರ್‌ (ಅರ್ಬನ್ + ರೂರಲ್‌ ಮಾರ್ಕೆಟ್‌) ಸಿಕ್ಕಿತ್ತು. ಇದೀಗ ಏಳನೇ ವಾರವೂ 9.2 ಟಿವಿಆರ್‌ ದಾಖಲಿಸಿ ಕರ್ಣ ಧಾರಾವಾಹಿ ನಂಬರ್‌ 1 ಸ್ಥಾನದಲ್ಲಿ ಭದ್ರವಾಗಿದೆ.

ಇನ್ನು 8.7 ಟಿವಿಆರ್ ದಾಖಲಿಸಿ ಅಣ್ಣಯ್ಯ ಎರಡನೇ ಸ್ಥಾನ ಪಡೆದುಕೊಂಡರೆ, ಲಕ್ಷ್ಮೀ ನಿವಾಸ ಸೀರಿಯಲ್‌ 8.4 ಟಿವಿಆರ್‌ ಪಡೆದುಕೊಂಡು ಮೂರನೇ ಸ್ಥಾನದಲ್ಲಿದೆ. ಅಮೃತಧಾರೆ ಮತ್ತು ನಾ ನಿನ್ನ ಬಿಡಲಾರೆ ಸೀರಿಯಲ್‌ ಕ್ರಮವಾಗಿ 8.3 ಮತ್ತು 8.1 ಟಿವಿಆರ್‌ನೊಂದಿಗೆ ನಾಲ್ಕನೇ ಮತ್ತು ಐದನೇ ಸ್ಥಾನದಲ್ಲಿದೆ.

ಇನ್ನು ಕಲರ್ಸ್ ಕನ್ನಡದ ವಿಚಾರಕ್ಕೆ ಬಂದರೆ, ಭಾರ್ಗವಿ ಎಲ್‌ಎಲ್‌ಬಿ ಧಾರಾವಾಹಿಗೆ ಅರ್ಬಲ್‌ + ರೂರಲ್‌ ಮಾರ್ಕೆಟ್‌ನಲ್ಲಿ 5.7 ಟಿವಿಆರ್‌ ಪಡೆದು ಕಲರ್ಸ್​ನ ನಂಬರ್ ಒನ್ ಧಾರಾವಾಹಿ ಆಗಿದೆ. ನಂದಗೋಕುಲ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 5.6 ಟಿವಿಆರ್‌ ಪಡೆದುಕೊಂಡು ಎರಡನೇ ಸ್ಥಾನದಲ್ಲಿದೆ. 5.3 ಟಿವಿಆರ್‌ ನೊಂದಿಗೆ ಭಾಗ್ಯ ಲಕ್ಷ್ಮೀ ಸೀರಿಯಲ್‌ ಮೂರನೇ ಸ್ಥಾನಲ್ಲಿದೆ.

Aishwarya Shindogi Birthday: ಐಶ್ವರ್ಯಾ ಸಿಂಧೋಗಿ ಬರ್ತ್ ಡೇ ಪಾರ್ಟಿಯಲ್ಲಿ ಮಿಂಚಿದ ಶಿಶಿರ್ ಶಾಸ್ತ್ರೀ

ಇನ್ನು ಕಲರ್ಸ್​ನಲ್ಲಿ ಕಳೆದ ವಾರ ಶುರುವಾದ ಹೊಸ ಧಾರಾವಾಹಿ ಪ್ರೇಮ ಕಾವ್ಯಕ್ಕೆ ನೀರಸ ವೀಕ್ಷಣೆ ಲಭಿಸಿದೆ. ಇದಕ್ಕೆ ಅರ್ಬನ್‌ + ರೂರಲ್‌ ಮಾರ್ಕೆಟ್‌ನಲ್ಲಿ 3.0 ಟಿವಿಆರ್ ಸಿಕ್ಕಿದೆಯಷ್ಟೆ. ಝೀ ಕನ್ನಡದಲ್ಲಿ ಶುರುವಾದ ಹೊಸ ರಿಯಾಲಿಟಿ ಶೋ ನಾವು ನಮ್ಮವರು ಲಾಂಚ್ ವೀಕ್​ಗೆ 5.2 ಟಿವಿಆರ್ ಲಭಿಸಿದೆ.