ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss 19: ಬಿಗ್ ಬಾಸ್ ಮನೆಗೆ ಹಾನಿ: ಅಂದುಕೊಂಡ ಸಮಯಕ್ಕೆ ಶೋ ಆರಂಭ ಅನುಮಾನ

Bigg Boss House: ಬಿಗ್ ಬಾಸ್ ಮನೆಯನ್ನು ಮಂಗಳವಾರ ಮಾಧ್ಯಮಗಳಿಗೆ ತೆರೆಯಬೇಕಿತ್ತು ಆದರೆ ಅದು ಸಾಧ್ಯವಾಗಿಲ್ಲ. ನಿರಂತರ ಮಳೆಯಿಂದಾಗಿ, ನಗರದ ಅನೇಕ ಸ್ಥಳಗಳು ಜಲಾವೃತಗೊಂಡಿವೆ ಮತ್ತು ಇದರಿಂದಾಗಿ ಜಿಯೋ ಹಾಟ್‌ಸ್ಟಾರ್ ತಂಡವು ಈ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದುಗೊಳಿಸಿದೆ.

ಬಿಗ್ ಬಾಸ್ ಮನೆಗೆ ಹಾನಿ: ಶೋ ಆರಂಭ ಅನುಮಾನ

Bigg Boss House

Profile Vinay Bhat Aug 22, 2025 7:33 AM

ಬಿಗ್ ಬಾಸ್ 19 (Bigg Boss 19) ಆರಂಭವಾಗಲು ಕೇವಲ 2 ದಿನಗಳು ಮಾತ್ರ ಉಳಿದಿವೆ. ಈ ಶೋನ ಮನೆಯ ದೃಶ್ಯಗಳನ್ನು ನೋಡಲು ಜನರು ಕಾತರದಿಂದ ಕಾಯುತ್ತಿದ್ದಾರೆ. ಆದರೆ, ಮುಂಬೈನಲ್ಲಿ ಮಳೆ ಅವಾಂತರ ಬಿಗ್ ಬಾಸ್ 19 ಸೆಟ್‌ನಲ್ಲೂ ಹಾನಿ ಉಂಟುಮಾಡಿದೆ ಮತ್ತು ಇದರಿಂದಾಗಿ ಕಾರ್ಯಕ್ರಮದ ಮಾಧ್ಯಮ ಮನೆ ಪ್ರವಾಸವನ್ನು ರದ್ದುಗೊಳಿಸಲಾಗಿದೆ. ಹೌದು, ಮುಂಬೈನಲ್ಲಿ ನಿರಂತರ ಭಾರೀ ಮಳೆಯಿಂದಾಗಿ, ಶಾಲೆಗಳು ಮತ್ತು ಕಾಲೇಜುಗಳನ್ನು ಮುಚ್ಚಲಾಗಿದೆ. ವರದಿಗಳ ಪ್ರಕಾರ, ಈ ಮಳೆ ಬಿಗ್ ಬಾಸ್ 19 ಚಿತ್ರೀಕರಣದ ಮೇಲೂ ಪರಿಣಾಮ ಬೀರಿದೆ.

ಬಿಗ್ ಬಾಸ್ ಮನೆಯನ್ನು ಮಂಗಳವಾರ ಮಾಧ್ಯಮಗಳಿಗೆ ತೆರೆಯಬೇಕಿತ್ತು ಆದರೆ ಅದು ಸಾಧ್ಯವಾಗಿಲ್ಲ. ನಿರಂತರ ಮಳೆಯಿಂದಾಗಿ, ನಗರದ ಅನೇಕ ಸ್ಥಳಗಳು ಜಲಾವೃತಗೊಂಡಿವೆ ಮತ್ತು ಇದರಿಂದಾಗಿ ಜಿಯೋ ಹಾಟ್‌ಸ್ಟಾರ್ ತಂಡವು ಈ ಕಾರ್ಯಕ್ರಮವನ್ನು ಸದ್ಯಕ್ಕೆ ರದ್ದುಗೊಳಿಸಿದೆ. ‘ನಗರದಲ್ಲಿ ಭಾರೀ ಮಳೆಯಿಂದಾಗಿ, ಹಲವೆಡೆ ನೀರು ಸಂಗ್ರಹವಾಗಿದೆ. ಆದ್ದರಿಂದ, ಬಿಗ್ ಬಾಸ್ ಮನೆಯ ಪ್ರವಾಸ ಮತ್ತು ಸಂಬಂಧಿತ ಎಲ್ಲಾ ಚಟುವಟಿಕೆಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ. ನಿಮಗೆ ಉಂಟಾದ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ. ಮುಂದಿನ ಪರಿಸ್ಥಿತಿಯನ್ನು ಅವಲೋಕಿಸಿ ನಾವು ನಿಮಗೆ ಹೆಚ್ಚಿನ ಮಾಹಿತಿಯನ್ನು ನೀಡುತ್ತೇವೆ’ ಎಂದು ಹಾಟ್‌ಸ್ಟಾರ್ ತಂಡ ಸ್ಪಷ್ಟಪಡಿಸಿದೆ.

ಸದ್ಯ ಭಾರೀ ಮಳೆಯಿಂದಾಗಿ ಬಿಗ್ ಬಾಸ್ 19ರ ಹೊಸ ಮನೆಗೆ ಸಣ್ಣಪುಟ್ಟ ಹಾನಿ ಉಂಟಾಗಿದೆ ಎಂದು ಹೇಳಲಾಗಿದೆ. ಉಳಿದ ಯಾವುದೇ ಸಿನಿಮಾ ಶೂಟ್ ಮೇಲೆ ಈ ಮಳೆ ಪರಿಣಾಮ ಬೀರಿಲ್ಲ. ಬಹುತೇಕ ಎಲ್ಲಾ ಶೂಟಿಂಗ್‌ಗಳು ಅಗತ್ಯ ಮುನ್ನೆಚ್ಚರಿಕೆಗಳೊಂದಿಗೆ ನಡೆಯುತ್ತಿವೆ. ಫಿಲ್ಮ್ ಸಿಟಿಯ ಕೆಲವು ಸ್ಥಳಗಳಲ್ಲಿ ನೀರು ಸಂಗ್ರಹವಾಗಿದೆ. ಹೀಗಿರುವಾಗ ಬಿಗ್ ಬಾಸ್ ಅಂದುಕೊಂಡ ದಿನಾಂಕದಂದೇ ಆರಂಭ ಆಗುತ್ತ ಎಂಬುದು ನೋಡಬೇಕಿದೆ.

Kannada Serial TRP: ಕರ್ಣನ ಹತ್ತಿರವೂ ಸುಳಿಯದ ಇತರೆ ಧಾರಾವಾಹಿಗಳು: ಇಲ್ಲಿದೆ ಟಿಆರ್​ಪಿ

ಈ ಬಾರಿ ರಾಜಕೀಯದ ಗರ್​​​​​​ವಾಲೋನ್​​​ ಕಿ ಸರ್ಕಾರ್​​​ ಥೀಮ್ ನೊಂದಿಗೆ ಶೋ ಪ್ರಸಾರ ಕಾಣಲಿದೆ. ಸಲ್ಮಾನ್ ಮೊದಲ ದಿನವೇ ಎರಡು ಪಕ್ಷಗಳ ಸ್ಪರ್ಧಿಗಳನ್ನು ರಚಿಸುತ್ತಾರೆ, ಅವರು ತಮ್ಮ ನಾಯಕನನ್ನು ಆಯ್ಕೆ ಮಾಡುತ್ತಾರೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಮತ ಎಣಿಕೆಯ ಆಧಾರದ ಮೇಲೆ ವಿಜೇತರು ಮನೆಯ ನಾಯಕ ಆಗಿರುತ್ತಾರೆ ಮತ್ತು ತಮ್ಮದೇ ಆದ ಸರ್ಕಾರವನ್ನು ರಚಿಸುತ್ತಾರೆ. ವಿರೋಧ ಪಕ್ಷವು ಕಾಲಕಾಲಕ್ಕೆ ರಹಸ್ಯ ಕಾರ್ಯಗಳನ್ನು ನೀಡುವ ಮೂಲಕ ಸರ್ಕಾರವನ್ನು ಉರುಳಿಸಲು ಅವಕಾಶವನ್ನು ಪಡೆಯುತ್ತದೆ.