Vijay Surya: ವಿಜಯ್ ಸೂರ್ಯ ಮನೆಯಲ್ಲಿ ಅದ್ಧೂರಿ ಲಕ್ಷ್ಮೀ ಪೂಜೆ: ಮನೆಗೆ ಬಂದ್ರು ಕಿರುತೆರೆ ಎಲ್ಲ ಮಹಾಲಕ್ಷ್ಮಿಯರು
ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ದತ್ತಾ ಭಾಯ್ ಪಾತ್ರಕ್ಕೆ ವಿಜಯ್ ಸೂರ್ಯ ಜೀವ ತುಂಬುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಯಶಸ್ಸು ಗಳಿಸಿರುವ ವಿಜಯ್ ಸೂರ್ಯ ಇದೀಗ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ವಿಜಯ್ ಸೂರ್ಯ - ಚೈತ್ರಾ ಶ್ರೀನಿವಾಸ್ ದಂಪತಿ ತಮ್ಮ ನಿವಾಸದಲ್ಲಿ ಗ್ರ್ಯಾಂಡ್ ಆಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ.

Vijay Surya House Lakshmi Pooja -

ವಿಜಯ್ ಸೂರ್ಯ (Vijay Surya) 2012ರಲ್ಲಿ ಕ್ರೇಜಿ ಲೋಕ ಸಿನಿಮಾ ಮೂಲಕ ಬಣ್ಣದ ಬದುಕಿಗೆ ಕಾಲಿಟ್ಟರು. ಬಳಿಕ 2013ರಲ್ಲಿ ಲಕ್ಷ್ಮಿ ಬಾರಮ್ಮ ಕೊನೆಯ ಎಪಿಸೋಡ್‌ಗಳಲ್ಲಿ ಕಾಣಿಸಿಕೊಂಡಿದ್ದ ವಿಜಯ್ ಸೂರ್ಯ, ನಂತರ ಅಗ್ನಿಸಾಕ್ಷಿ ಧಾರಾವಾಹಿಯಲ್ಲಿ ನಾಯಕನ ಪಾತ್ರಕ್ಕೆ ಆಯ್ಕೆ ಆದರು. ಈಗಲೂ ಜನರು ಅವರನ್ನು ಅಗ್ನಿಸಾಕ್ಷಿ ಸಿದ್ದಾರ್ಥ್ ಎಂದೇ ಗುರುತಿಸುತ್ತಾರೆ. ಆ ಧಾರಾವಾಹಿ ಅಷ್ಟರ ಮಟ್ಟಿಗೆ ಹೆಸರು ತಂದುಕೊಟ್ಟಿದೆ.
ಸದ್ಯ ದೃಷ್ಟಿಬೊಟ್ಟು ಸೀರಿಯಲ್‌ನಲ್ಲಿ ದತ್ತಾ ಭಾಯ್ ಪಾತ್ರಕ್ಕೆ ವಿಜಯ್ ಸೂರ್ಯ ಜೀವ ತುಂಬುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಯಶಸ್ಸು ಗಳಿಸಿರುವ ವಿಜಯ್ ಸೂರ್ಯ ಇದೀಗ ತಮ್ಮ ಮನೆಯಲ್ಲಿ ಅದ್ಧೂರಿಯಾಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ವಿಜಯ್ ಸೂರ್ಯ - ಚೈತ್ರಾ ಶ್ರೀನಿವಾಸ್ ದಂಪತಿ ತಮ್ಮ ನಿವಾಸದಲ್ಲಿ ಗ್ರ್ಯಾಂಡ್ ಆಗಿ ಲಕ್ಷ್ಮೀ ಪೂಜೆ ನೆರವೇರಿಸಿದ್ದಾರೆ. ವಿಶೇಷ ಎಂದರೆ ಈ ಪೂಜೆಗೆ ಕಿರುತೆರೆಯ ಬಹುತೇಕ ಎಲ್ಲ ಮಹಾಲಕ್ಷ್ಮೀಯರು ಸೇರಿದಂತೆ, ದೃಷ್ಟಿ ಬೊಟ್ಟು ತಂಡದ ಎಲ್ಲಾ ನಟ-ನಟಿಯರು ಭಾಗಿಯಾಗಿದ್ದರು.
ಹಬ್ಬದ ಸಂಭ್ರಮದಲ್ಲಿ ಕಿರುತೆರೆಯ ನಟಿಯರಾದ ಹಿರಿಯ ನಟಿ ವಾಣಿಶ್ರೀ, ಅನುಪಮಾ ಗೌಡ, ಕೃಷಿ ತಾಪಂಡ, ಇಶಿತಾ ವರ್ಷ, ಮುರುಗಾ, ಹಾಗೂ ದೃಷ್ಟಿ ಬೊಟ್ಟು ಧಾರಾವಾಹಿಯ ನಟ-ನಟಿಯರಾದ ಅರ್ಪಿತಾ ಮೋಹಿತೆ, ತನ್ಮಯಾ ಕಷ್ಯಪಾ, ಮೋಕ್ಷಿತಾ ವಷಿಷ್ಟ, ಧನ್ಯಾ ಪಾಟೀಲ್, ಗೌತಮಿ ಜಯರಾಮ್, ಅಮೃತಾ ಮೂರ್ತಿ ಭಾಗವಹಿಸಿದ್ದರು.
ಹಿರಿಯ ನಟಿ ವಾಣಿಶ್ರೀ ಅವರು ತಮ್ಮ ಸೋಶಿಯಲ್ ಮಿಡಿಯಾದಲ್ಲಿ ಹಬ್ಬದ ಸಂಭ್ರಮದ ಫೋಟೊಗಳನ್ನು ಸೆರೆ ಹಿಡಿದು, ಶೇರ್ ಮಾಡಿದ್ದಾರೆ. ನಾನು ಈ ಉದ್ಯಮದಲ್ಲಿ ಸಂಪರ್ಕದಲ್ಲಿರೋದು ಬಹಳ ಕಡಿಮೆ ಜನರೊಂದಿಗೆ. ನಾವು ದಶಕದಿಂದ ಒಬ್ಬರಿಗೊಬ್ಬರು ಪರಿಚಿತರು. ನೀವು ನನಗೆ ತಿಳಿದಿರುವ ಅತ್ಯಂತ ಅದ್ಭುತ ಮನುಷ್ಯ. ತುಂಬಾ ವೃತ್ತಿಪರ, ಸಮಯಪ್ರಜ್ಞೆ, ಪ್ರತಿಭಾನ್ವಿತ. ನಿಮ್ಮ ಭವಿಷ್ಯಕ್ಕೆ ನನ್ನ ಎಲ್ಲಾ ಶುಭಾಶಯಗಳು. ಆದರೆ ಇನ್ನೂ ಮುಂದೆ ನಿಮ್ಮ ತಾಯಿಯನ್ನು ಪ್ರೀತಿಸುತ್ತೇನೆ. ಈ ಎಲ್ಲಾ ಮೌಲ್ಯಗಳನ್ನು ನಿಮಗೆ ನೀಡಿದ್ದಕ್ಕಾಗಿ ಮತ್ತು ನಿಮಗೆ ರಕ್ಷಣೆಯಾಗಿರುವುದಕ್ಕೆ. ಥ್ಯಾಂಕ್ಯೂ ಎಂದು ವಾಣಿಶ್ರೀ ಬರೆದುಕೊಂಡಿದ್ದಾರೆ.
Bhagya Lakshmi Serial: ಭಾಗ್ಯ ಅರೆಸ್ಟ್: ಪೊಲೀಸ್ ಸ್ಟೇಷನ್ಗೆ ಓಡೋಡಿ ಬಂದ ಆದೀಶ್ವರ್