Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಿಂದ ಹೊರಬಂದ ಸ್ಟಾರ್ ನಟಿ: ಕಾರಣವೇನು?
ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ಶ್ವೇತಾ ಅವರು ಕಳೆದ ವರ್ಷ ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಎದುರು ಬಂದಿದ್ದರು. ಈ ಸೀರಿಯಲ್‌ನಿಂದ ಉತ್ತಮ ಹೆಸರನ್ನು ಕೂಡ ಅವರು ಸಂಪಾದಿಸಿದ್ದರು. ಲಕ್ಷ್ಮೀ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶ್ವೇತಾ ಅವರು ಈ ಧಾರಾವಾಹಿಯ ಕೇಂದ್ರಬಿಂದು ಎನ್ನುವಂತೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು.

Lakshmi Nivasa Serial

ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಲಕ್ಷ್ಮೀ ನಿವಾಸದಲ್ಲಿ (Lakshmi Nivasa) ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದ ನಟಿ ಹೊರಬಂದಿದ್ದಾರೆ. ಬಹುದೊಡ್ಡ ತಾರಗಣ ಹೊಂದಿರುವ ಈ ಧಾರಾವಾಹಿಯ ವೀಕ್ಷಕರ ನೆಚ್ಚಿನ ಸೀರಿಯಲ್ನಲ್ಲಿ ಒಂದಾಗಿದೆ. ಮೊನ್ನೆಯಷ್ಟೇ ಲಕ್ಷ್ಮೀ ನಿವಾಸ ಸೀರಿಯಲ್‌ನಿಂದ ತನು ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಯುಕ್ತಾ ಅವರು ಹೊರಬಂದಿದ್ದರು. ಇದೀಗ ಮತ್ತೊಂದು ಸ್ಟಾರ್ ಲಕ್ಷ್ಮೀ ಪಾತ್ರ ನಿರ್ವಹಿಸುತ್ತಿರುವ ಶ್ವೇತಾ ಅವರು ಸೀರಿಯಲ್‌ನಿಂದ ಆಚೆ ಬಂದು ವೀಕ್ಷಕರಿಗೆ ಶಾಕ್ ಕೊಟ್ಟಿದ್ದಾರೆ. ವೈಯಕ್ತಿಕ ಕಾರಣಗಳಿಂದ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ.
ಲಕ್ಷ್ಮೀ ನಿವಾಸ ಧಾರಾವಾಹಿ ಮಧ್ಯಮ ವರ್ಗದ ಕಥೆಯನ್ನು ಹೇಳುತ್ತದೆ. ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎನ್ನುವ ಲೋಕರೂಢಿಯ ಮಾತಿದೆ. ಇಡೀ ಧಾರಾವಾಹಿಗೆ ಅದುವೇ ಜೀವಾಳ. ಮಧ್ಯಮ ವರ್ಗದ ಜನರು ತಮ್ಮ ಕನಸು ನನಸಾಗಿಸಲು ಎಷ್ಟು ಕಷ್ಟಪಡುತ್ತಾರೆ ಎಂದು ತೋರಿಸಲಾಗಿದೆ. ಮನೆಯ ಯಜಮಾನನ ಪಾತ್ರದಲ್ಲಿ ಅಶೋಕ್ ಜೆಂಬೆ ನಟಿಸುತ್ತಿದ್ದಾರೆ. ಅವರ ಪತ್ನಿ ಲಕ್ಮೀ ಪಾತ್ರದಲ್ಲಿ ಶ್ವೇತಾ ಇದ್ದರು.
ಕನ್ನಡ ಚಿತ್ರರಂಗದಿಂದ ದೂರವಾಗಿದ್ದ ಶ್ವೇತಾ ಅವರು ಕಳೆದ ವರ್ಷ ಲಕ್ಷ್ಮೀ ನಿವಾಸ ಧಾರಾವಾಹಿ ಮೂಲಕ ಕನ್ನಡ ಪ್ರೇಕ್ಷಕರ ಎದುರು ಬಂದಿದ್ದರು. ಈ ಸೀರಿಯಲ್‌ನಿಂದ ಉತ್ತಮ ಹೆಸರನ್ನು ಕೂಡ ಅವರು ಸಂಪಾದಿಸಿದ್ದರು. ಲಕ್ಷ್ಮೀ ಪಾತ್ರಕ್ಕೆ ಬಣ್ಣ ಹಚ್ಚಿದ್ದ ಶ್ವೇತಾ ಅವರು ಈ ಧಾರಾವಾಹಿಯ ಕೇಂದ್ರಬಿಂದು ಎನ್ನುವಂತೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ಆದರೆ ಇದೀಗ ಅಚ್ಚರಿಯ ಎಂಬಂತೆ ಈ ಧಾರಾವಾಹಿಯಿಂದ ನಿರ್ಗಮಿಸಿದ್ದಾರೆ.
ತಾಯಿಯ ಅನಾರೋಗ್ಯ ಹಾಗೂ ವೈಯಕ್ತಿಕ ಕಾರಣಕ್ಕೆ ಅವರು ಧಾರಾವಾಹಿಯಿಂದ ಹೊರಗಡೆ ಬಂದಿದ್ದಾರೆ. ಹೀಗಾಗಿ ಇವರ ಪಾತ್ರಕ್ಕೆ ಹೊಸ ನಟಿ ಎಂಟ್ರಿ ಕೊಟ್ಟಿದ್ದಾರೆ. ಅವರು ಕೂಡ ಕನ್ನಡದ ಅನೇಕ ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರ ಹೆಸರು ಮಾಧುರಿ. ಸದ್ಯ ಲಕ್ಷ್ಮೀ ನಿವಾಸದ ಲಕ್ಷ್ಮೀ ಪ್ರಾತದಲ್ಲಿ ನಟಿಸುತ್ತಿದ್ದಾರೆ.
ಇನ್ನೂ ಸೀರಿಯಲ್‌ನಿಂದ ಆಚೆ ಬಂದ ನಟಿ ಈ ಬಗ್ಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಮತ್ತು ನನ್ನ ತಾಯಿಯ ಆರೋಗ್ಯ ಸಮಸ್ಯೆಯಿಂದಾಗಿ ಲಕ್ಷ್ಮಿ ನಿವಾಸದಿಂದ ವಿರಾಮ ತೆಗೆದುಕೊಳ್ಳುತ್ತಿದ್ದೇನೆ. ಕರ್ನಾಟಕವು ತುಂಬಾ ದಯೆಯಿಂದ ವರ್ತಿಸಿದ್ದಕ್ಕಾಗಿ ಮತ್ತು ನನ್ನನ್ನು ಸಂಪೂರ್ಣವಾಗಿ ಸ್ವೀಕರಿಸಿದ್ದಕ್ಕಾಗಿ ಧನ್ಯವಾದಗಳು. ಸೆಟ್‌ಗಳಲ್ಲಿ ಕೆಲವರನ್ನು ಮಿಸ್ ಮಾಡಿಕೊಳ್ಳುತ್ತೇನೆ. ಮತ್ತು ನನ್ನನ್ನು ಮತ್ತೆ ಕನ್ನಡ ಪ್ರೇಕ್ಷಕರಿಗೆ ಪರಿಚಯಿಸಿದ್ದಕ್ಕಾಗಿ ಜೀ ಕನ್ನಡ ಅವರಿಗೆ ತುಂಬಾ ಧನ್ಯವಾದಗಳು, ನೀವು ಅದ್ಭುತರು. ಶೀಘ್ರದಲ್ಲೇ ನಿಮ್ಮೆಲ್ಲರನ್ನೂ ಭೇಟಿಯಾಗುತ್ತೇವೆ ಎಂದಿದ್ದಾರೆ.
90ರ ದಶಕದಲ್ಲಿ ನಟಿ ಶ್ವೇತಾ ಅವರು ಸ್ಯಾಂಡಲ್‌ವುಡ್‌ನಲ್ಲಿ ದೊಡ್ಡ ಹೆಸರು ಸಂಪಾದಿಸಿದ್ದರು. ಇವರ ಮೂಲ ಹೆಸರು ವಿನೋದಿನಿ. ಮೂಲತಃ ತಮಿಳುನಾಡಿನವರಾದ ಅವರು ಕನ್ನಡದಲ್ಲಿ ಹಲವು ಸಿನಿಮಾಗಳಲ್ಲಿ ನಟಿಸಿ ಎಲ್ಲರ ಗಮನ ಸೆಳೆದಿದ್ದರು. ಬಳಿಕ ತಮಿಳು ಕಿರುತೆರೆಗೆ ಎಂಟ್ರಿ ನೀಡಿದ್ದ ಅವರು ಲಕ್ಷ್ಮೀ ನಿವಾಸ ಸೀರಿಯಲ್ ಮೂಲಕ ಕನ್ನಡ ಕಿರುತೆರೆಗೆ ಕಾಲಿಟ್ಟರು.
Kannada Serial TRP: ಟಿಆರ್ಪಿಯಲ್ಲಿ ದಾಖಲೆ ಬರೆದ ತ್ರಿವಿಕ್ರಮ್ ನಟನೆಯ ಮುದ್ದು ಸೊಸೆ ಧಾರಾವಾಹಿ