ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vaishnavi Gowda: ಗಂಡನ ಜೊತೆ ಕೊನೆಗೂ ಒಂದು ಡ್ಯಾನ್ಸ್ ಮಾಡಿ ರೀಲ್ಸ್ ಹಂಚಿಕೊಂಡ ವೈಷ್ಣವಿ ಗೌಡ

ಮದುವೆಗೂ ಮುನ್ನ ಸೀತಾ ರಾಮ ಟೀಮ್ ಜೊತೆ ಸತತವಾಗಿ ವೈಶು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಆದರೆ, ಮದುವೆಯ ಬಳಿಕ ಇದು ಕಮ್ಮಿ ಆಗಿತ್ತು. ಇದೀಗ ದಿಢೀರ್ ಎಂದು ತಮ್ಮ ಗಂಡನಿಗೂ ಒಂದು ಸ್ಟೆಪ್ಸ್ ಕಲಿಸಿ ಕನ್ನಡದ ಟ್ರೆಂಡಿಂಗ್ ಹಾಡಿಗೆ ಇಬ್ಬರೂ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ.

ಗಂಡನ ಜೊತೆ ಡ್ಯಾನ್ಸ್ ಮಾಡಿ ರೀಲ್ಸ್ ಹಂಚಿಕೊಂಡ ವೈಷ್ಣವಿ

Vaishnavi Gowda Reels

Profile Vinay Bhat Aug 26, 2025 8:00 AM

ಅಗ್ನಿಸಾಕ್ಷಿ, ಸೀತಾ ರಾಮ ಧಾರಾವಾಹಿಗಳ ಮೂಲಕ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯತೆ ಪಡೆದ ನಟಿ ವೈಷ್ಣವಿ ಗೌಡ (Vaishnavi Gowda) ಇತ್ತೀಚೆಗಷ್ಟೆ ಹಸೆಮಣೆ ಏರಿದ್ದರು. ಏಪ್ರಿಲ್ 14ರಂದು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ವೈಶು, ಅನುಕೂಲ್ ಮಿಶ್ರಾ ಜೊತೆಗೆ ಜೂನ್ 4 ರಂದು ಬೆಂಗಳೂರಿನ ಖಾಸಗಿ ರೆಸಾರ್ಟ್‌ನಲ್ಲಿ ಹಿರಿಯರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಬಳಿಕ ಈ ಜೋಡಿ ಉತ್ತರಾಖಂಡ ಋಷಿಕೇಶ್, ಮನಾಲಿಗೆ ಹನಿಮೂನ್ ಹೋಗಿ ಸಖತ್ ಎಂಜಾಯ್ ಮಾಡಿದ್ದರು.

ವೈಷ್ಣವಿ ಅವರ ಪತಿ ಅನುಕೂಲ್‌ ಮಿಶ್ರಾ ಅವರು ಇಂಡಿಯನ್‌ ಆರ್ಮಿಯಲ್ಲಿ ಲೆಫ್ಟಿನೆಂಟ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಅನುಕೂಲ್‌ ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಕೂಡ ಇಲ್ಲಿಯೇ ಇದ್ದಾರೆ. ಮದುವೆ ಬಳಿಕ ವೈಷ್ಣವಿ ಅವರು ಇನ್​ಸ್ಟಾದಿಂದ ಕೊಂಚ ಅಂತರ ಕಾಯ್ದುಕೊಂಡಿದ್ದರು. ಯಾವುದಾದರು ಹಬ್ಬ ಅಥವಾ ಏನಾದರು ಪ್ರಮೋಷನಲ್ ವಿಡಿಯೋ ಇದ್ದರೆ ಮಾತ್ರ ಸಾಮಾಜಿಕ ತಾಣಗಳಲ್ಲಿ ಪ್ರತ್ಯಕ್ಷರಾಗುತ್ತಿದ್ದರು.

ಮದುವೆಗೂ ಮುನ್ನ ಸೀತಾ ರಾಮ ಟೀಮ್ ಜೊತೆ ಸತತವಾಗಿ ವೈಶು ರೀಲ್ಸ್ ಮಾಡಿ ಹಂಚಿಕೊಳ್ಳುತ್ತಿದ್ದರು. ಆದರೆ, ಮದುವೆಯ ಬಳಿಕ ಇದು ಕಮ್ಮಿ ಆಗಿತ್ತು. ಇದೀಗ ದಿಢೀರ್ ಎಂದು ತಮ್ಮ ಗಂಡನಿಗೂ ಒಂದು ಸ್ಟೆಪ್ಸ್ ಕಲಿಸಿ ಕನ್ನಡದ ಟ್ರೆಂಡಿಂಗ್ ಹಾಡಿಗೆ ಇಬ್ಬರೂ ಭರ್ಜರಿ ಸ್ಟೆಪ್ಸ್ ಹಾಕಿದ್ದಾರೆ. ಬಂದರೋ ಬಂದರೋ ಭಾವ ಬಂದರೋ ಅಂತ ಸ್ಟೆಪ್​ ಹಾಕುತ್ತಾ ಪತಿ ಜೊತೆ ವೈಷ್ಣವಿ ಗೌಡ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

su from so ಚಿತ್ರದ ಈ ಹಾಡಿಗೆ ಇದಾಗಲೇ ಹಲವಾರು ಸೆಲೆಬ್ರಿಟಿಗಳು ಡಾನ್ಸ್ ಮಾಡಿದ್ದಾರೆ. ಅದೇ ರೀತಿ ವೈಷ್ಣವಿ ಕೂಡ ತಮ್ಮ ಪತಿಯೊಂದಿಗೆ ನೃತ್ಯ ಮಾಡಿ ರೀಲ್ಸ್​ ಪ್ರಪಂಚಕ್ಕೆ ಪರಿಚಯಿಸಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅಣ್ಣ ಫುಲ್​ ರಾಕಿಂಗ್​, ಭಾವನ ಡ್ಯಾನ್ಸ್​ ಸೂಪರ್ ಅಂತ ಕಾಮೆಂಟ್ಸ್ ಹಾಕಿದ್ದಾರೆ.

Gautami Jadhav Movie: ಕೊನೆಗೂ ಗುಡ್ ನ್ಯೂಸ್ ಕೊಟ್ಟ ಗೌತಮಿ ಜಾಧವ್: ಬೆಳ್ಳಿ ತೆರೆಗೆ ಎಂಟ್ರಿ