Su From So Movie: ಬಾಯ್ಸ್ ಪಾರ್ಟಿಗೆ ಹೇಳ್ ಮಾಡ್ಸಿದ ಹಾಡಿದು! ಸೂಪರ್ ಡೂಪರ್ ಸಾಂಗ್ ರಿಲೀಸ್ ಮಾಡಿದ ರಾಜ್ ಬಿ ಶೆಟ್ಟಿ
Su From So Movie: ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ ʼಸು ಫ್ರಮ್ ಸೋʼ ಕನ್ನಡ ಸಿನಿಮಾದ ʼಡ್ಯಾಂಕ್ಸ್ ಅಂಥಮ್ʼ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ.


ಬೆಂಗಳೂರು: ರಾಜ್ ಬಿ ಶೆಟ್ಟಿ ಅವರ ಲೈಟರ್ ಬುದ್ಧ ಫಿಲಂಸ್ ನಿರ್ಮಾಣ ಸಂಸ್ಥೆಯಲ್ಲಿ ನಿರ್ಮಾಣಗೊಂಡ ʼಸು ಫ್ರಮ್ ಸೋʼ ಕನ್ನಡ ಸಿನಿಮಾದ (Su From So Movie) ʼಡ್ಯಾಂಕ್ಸ್ ಅಂಥಮ್ʼ ವಿಡಿಯೋ ಸಾಂಗ್ ಬಿಡುಗಡೆ ಆಗಿ ಜನರ ಮನ ಸೆಳೆಯುತ್ತಿದೆ. ಮುಂದೆ ಎಲ್ಲಾ ಪಾರ್ಟಿ ಹಾಗೂ ಇತರೆ ಕಾರ್ಯಕ್ರಮದಲ್ಲಿ ಈ ಹಾಡು ಕೇಳಿಸೋದು ಕನ್ಫರ್ಮ್ ಅನ್ನಿಸುತ್ತಿದೆ. ಈ ಹಾಡಿಗೆ ಸಾಹಿತ್ಯ ರಾಜ್ ಬಿ ಶೆಟ್ಟಿ ಅವರದ್ದು. ಅನುರಾಗ್ ಕುಲಕರ್ಣಿ ಅವರು ಸೊಗಸಾಗಿ ಹಾಡಿದ್ದಾರೆ ಹಾಗು ಸುಮೇಧ್ ಕೆ ಅವರು ಉತ್ತಮ ಸಂಗೀತ ನೀಡಿದ್ದಾರೆ. ಇದರ ನೃತ್ಯ ಸಂಯೋಜನೆಯನ್ನು ವಿನಾಯಕ ಆಚಾರ್ಯ ಮಾಡಿದ್ದಾರೆ.
ಈ ಹಾಡಿನಲ್ಲಿ ಜೆಪಿ ತುಮಿನಾಡು, ಶನೀಲ್ ಗೌತಮ್, ಪ್ರಕಾಶ್ ಕೆ. ತುಮಿನಾಡು, ದೀಪಕ್ ರೈ ಪಣಜೆ, ಮೈಮ್ ರಾಮದಾಸ್, ಅರ್ಜುನ್ ಕಜೆ ಹಾಗೂ ಇತರರು ಹೆಜ್ಜೆ ಹಾಕಿದ್ದಾರೆ. ʼಸು ಫ್ರಮ್ ಸೋʼ ಸಿನಿಮಾವನ್ನು ಜೆಪಿ ತುಮಿನಾಡು ನಟಿಸಿ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಛಾಯಾಗ್ರಾಹಕರಾಗಿ ಎಸ್. ಚಂದ್ರಸೆಕರನ್ ಕಾರ್ಯ ನಿರ್ವಹಿಸಿದ್ದಾರೆ. ಈ ಸಿನಿಮಾವನ್ನು ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ, ರಾಜ್ ಬಿ ಶೆಟ್ಟಿ ಮೂವರು ಸೇರಿ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸಂದೀಪ್ ತುಳಸಿದಾಸ್ ಅವರ ಹಿನ್ನೆಲೆ ಸಂಗೀತ ಇರುವ ಈ ಚಿತ್ರಕ್ಕಿದೆ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದಾರೆ.
ಈ ಸುದ್ದಿಯನ್ನೂ ಓದಿ | Monsoon jewel Fashion 2025: ಮಾನ್ಸೂನ್ ಫ್ಯಾಷನ್ ಜ್ಯುವೆಲರಿಯಲ್ಲಿ ಮಿನಿ ಛತ್ರಿಗಳ ಹಂಗಾಮ!
ಮಂಗಳೂರು ಸುತ್ತಮುತ್ತಲಿನ ಊರಾದ ವೇಣೂರು, ಕಕ್ಯಪದವು ಹಾಗೂ ಇತರ ಕಡೆ ಸಿನಿಮಾ 50 ದಿನಗಳ ಕಾಲ ಚಿತ್ರಕರಣಗೊಂಡು ಇದೀಗ ಮುಂದಿನ ತಿಂಗಳು ಜುಲೈ 25ಕ್ಕೆ ಬಿಡುಗಡೆಯಾಗುತ್ತಿದೆ.