Thalapathy Vijay: ಡಿವೋರ್ಸ್ ವದಂತಿ ನಡುವೆ ದಳಪತಿ ವಿಜಯ್ ಬೇಸರದ ಮಾತು
Thalapathy Vijay: ಪತ್ನಿ ಸಂಗೀತಾ ಸೊರ್ನಲಿಂಗಂ ಅವರೊಂದಿಗಿನ ವಿಚ್ಛೇದನ ವದಂತಿ ನಡುವೆ, ವೈಯಕ್ತಿಕ ವಿಷಯಗಳ ಬಗ್ಗೆ ದಳಪತಿ ವಿಜಯ್ ಮೌನ ಮುರಿದಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ವಿಜಯ್ ತಮಿಳುನಾಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇಂದು(ಮಾರ್ಚ್ 7) ತಮ್ಮ ಪಕ್ಷದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಿದರು. ಸಾಕಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗಿ ಆಗಿದ್ದರು. ಇದೇ ವೇಳೆ ತಮ್ಮ ವೈಯಕ್ತಿಕ ಜೀವನದ ಕುರಿತಾದ ವಿವಾದದ ಬಗ್ಗೆ ವಿಜಯ್ ಮಾತನಾಡಿದ್ದಾರೆ.
ದಳಪತಿ ವಿಜಯ್ -
ಪತ್ನಿ ಸಂಗೀತಾ ಸೊರ್ನಲಿಂಗಂ ಅವರೊಂದಿಗಿನ ವಿಚ್ಛೇದನ 9divorce proceedings ) ವದಂತಿ ನಡುವೆ, ವೈಯಕ್ತಿಕ ವಿಷಯಗಳ ಬಗ್ಗೆ ದಳಪತಿ ವಿಜಯ್ (Thalapathy Vijay) ಮೌನ ಮುರಿದಿದ್ದಾರೆ. ಟಿವಿಕೆ ಪಕ್ಷ ಸ್ಥಾಪಿಸಿ ವಿಜಯ್ ತಮಿಳುನಾಡು ರಾಜಕೀಯ ಅಖಾಡಕ್ಕೆ ಇಳಿದಿದ್ದಾರೆ. ಇಂದು(ಮಾರ್ಚ್ 7) ತಮ್ಮ ಪಕ್ಷದ ವತಿಯಿಂದ ಮಹಿಳಾ ದಿನಾಚರಣೆ ಆಚರಿಸಿದರು. ಸಾಕಷ್ಟು ಮಹಿಳೆಯರು ಈ ಸಮಾವೇಶದಲ್ಲಿ ಭಾಗಿ ಆಗಿದ್ದರು. ಇದೇ ವೇಳೆ ತಮ್ಮ ವೈಯಕ್ತಿಕ (Vijay breaks the silence on personal issues) ಜೀವನದ ಕುರಿತಾದ ವಿವಾದದ ಬಗ್ಗೆ ವಿಜಯ್ ಮಾತನಾಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್
ಈ ಕಾರ್ಯಕ್ರಮದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ ದಳಪತಿ ವಿಜಯ್ ತಮ್ಮ ಅಭಿಮಾನಿಗಳಿಗೆ ತಮ್ಮ ಸಮಸ್ಯೆಗಳಿಂದಾಗಿ ದುಃಖಿತರಾಗಬೇಡಿ ಅಥವಾ ಒತ್ತಡಕ್ಕೊಳಗಾಗಬೇಡಿ ಎಂದು ಮನವಿ ಮಾಡುತ್ತಿದ್ದಾರೆ.
"ದಯವಿಟ್ಟು ನನ್ನನ್ನು ಸುತ್ತುವರೆದಿರುವ ಇತ್ತೀಚಿನ ಸಮಸ್ಯೆಗಳ ಬಗ್ಗೆ ಚಿಂತಿಸಬೇಡಿ. ಆ ಸಮಸ್ಯೆಗಳು ನಿಮ್ಮ ಸಮಯಕ್ಕೆ ಯೋಗ್ಯವಾಗಿಲ್ಲ. ನಾನೇ ಅವುಗಳನ್ನು ನೋಡಿಕೊಳ್ಳುತ್ತೇನೆ. ನನ್ನ ಸಮಸ್ಯೆಗಳಿಂದಾಗಿ ನೀವು ದುಃಖಿತರಾಗಿದ್ದೀರಿ ಹಾಗೂ ಒತ್ತಡಕ್ಕೊಳಗಾಗಿದ್ದೀರಿ ಎಂದು ನೋಡುವುದು ನನಗೆ ಹೆಚ್ಚು ನೋವುಂಟು ಮಾಡುತ್ತದೆ. ದಯವಿಟ್ಟು ನನಗಾಗಿ ಆ ಹೊರೆಯನ್ನು ಹೊರಬೇಡಿ. ಬದಲಾಗಿ, ಜನರ ಕಲ್ಯಾಣದತ್ತ ಗಮನ ಹರಿಸೋಣ" ಎಂದು ಅವರು ಹೇಳಿದರು. ವಿಜಯ್ ಹಾಗೂ ಸಂಗೀತಾ ಡಿವೋರ್ಸ್ ಬಗ್ಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆ ನಡೀತಿದೆ. ಮುಂದಿನ ತಮಿಳುನಾಡು ವಿಧಾನಸಭೆ ಚುನಾವಣೆ ಮೇಲೆ ವಿಜಯ್ ಕಣ್ಣಿಟ್ಟಿದ್ದಾರೆ.
ಸಂಗೀತಾ ಹೊಸ ಅರ್ಜಿ
ಈಗ, ಸಂಗೀತಾ ಜೀವನಾಂಶದ ಜೊತೆಗೆ ತಮ್ಮ ವೈವಾಹಿಕ ಮನೆಯ ಹಕ್ಕುಗಳನ್ನು ನೀಡುವಂತೆ ಸೂಪರ್‌ಸ್ಟಾರ್‌ಗೆ ಹೊಸ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ. ಅರ್ಜಿಯ ಪ್ರಕಾರ, "ಕಾನೂನುಬದ್ಧವಾಗಿ ಬೇರ್ಪಡಿಕೆಗಾಗಿ ನ್ಯಾಯಾಲಯವನ್ನು ಸಂಪರ್ಕಿಸಲು ಆಯ್ಕೆ ಮಾಡಿಕೊಂಡರೆ, ಅವರು ವೈವಾಹಿಕ ಮನೆಯಲ್ಲಿ ವಾಸಿಸಲು ಅನುಮತಿ ನೀಡುವುದಿಲ್ಲ ಎಂದು ವಿಜಯ್ ಸ್ಪಷ್ಟಪಡಿಸಿದ್ದಾರೆ."ಈ ನಿಟ್ಟಿನಲ್ಲಿ, ಪತ್ನಿ ನ್ಯಾಯಯುತ ಮತ್ತು ಸಮಂಜಸವಾದ ಶಾಶ್ವತ ಜೀವನಾಂಶವನ್ನು ಪಾವತಿಸುವಂತೆಯೂ ಕೇಳಿದ್ದಾರೆ.
Thalapathy Vijay:
— KARTHIK DP (@dp_karthik) March 7, 2026
Please don’t worry about the recent problems surrounding me. Those issues are not worth your time.. AVOLO WORTH ILLA 😂👌🏻. I will take care of them myself. What hurts me the most is seeing you feel sad or stressed because of my problems. Please don’t carry that… pic.twitter.com/dnezRxQdMG
ಕಾನೂನು ಪ್ರಕ್ರಿಯೆಗಳ ಸಮಯದಲ್ಲಿ ವಸತಿ ಇಲ್ಲದೆ ಉಳಿಯದಂತೆ ನೋಡಿಕೊಳ್ಳಲು ಸಂಗೀತಾ ಮಧ್ಯಂತರ ಪರಿಹಾರವನ್ನು ಕೋರಿದ್ದಾರೆ ಎಂದು ವರದಿಯಾಗಿದೆ. ಆದಾಗ್ಯೂ, ಯಾವುದೇ ಅಧಿಕೃತ ಮಾಹಿತಿ ಇದಲ್ಲ.ಸದ್ಯಕ್ಕೆ ಊಹಾಪೋಹಗಳಾಗಿವೆ.
ಕಳೆದೊಂದು ವಾರದಿಂದ ವಿಜಯ್ ಹಾಗೂ ಸಂಗೀತಾ ದಂಪತಿ ಡಿವೋರ್ಸ್ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ವಿಜಯ್ ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ತಮ್ಮ ಪಕ್ಷದ ಸಮಾವೇಶಗಳಲ್ಲಿ ಭಾಗಿ ಆಗುತ್ತಿದ್ದಾರೆ. ಇದೀಗ ತ್ರಿಶಾ ಜೊತೆಗೆ ಮದುವೆ ಸಮಾರಂಭಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದ್ದಾರೆ. ಅರ್ಜಿಯಲ್ಲಿ ವರದಿಯಾದ ಹೇಳಿಕೆಗಳ ಪ್ರಕಾರ, ವಿಜಯ್ ವಿದೇಶ ಪ್ರವಾಸ ಮತ್ತು ನಟಿಯೊಂದಿಗೆ ಕಾರ್ಯಕ್ರಮಗಳಿಗೆ ಹಾಜರಾಗುವುದನ್ನು ಮುಂದುವರೆಸಿದ್ದಾರೆ ಎಂದು ಸಂಗೀತಾ ಹೇಳಿದ್ದಾರೆ.
ಇದನ್ನೂ ಓದಿ: Radhika Pandit: ಬರ್ತ್‌ಡೇ ದಿನ ಫ್ಯಾನ್ಸ್ ಭೇಟಿ ಮಾಡಿದ ರಾಧಿಕಾ ಪಂಡಿತ್
ಅಂತಹ ಪ್ರವಾಸಗಳ ಛಾಯಾಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದ್ದು ಭಾವನಾತ್ಮಕ ಯಾತನೆಯನ್ನು ಉಂಟುಮಾಡಿದೆ ಎಂದು ಅರ್ಜಿಯಲ್ಲಿ ಸೂಚಿಸಲಾಗಿದೆ. .