ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ʻದಳಪತಿʼ ವಿಜಯ್‌ - ತ್ರಿಷಾ ಒಟ್ಟಿಗೆ ಯಾವ್ಯಾವ ಸಿನಿಮಾಗಳಲ್ಲಿ ನಟಿಸಿದ್ದಾರೆ? ಇವರಿಬ್ಬರ ಫ್ರೆಂಡ್‌ಶಿಪ್‌ಗೆ ಎಷ್ಟು ವರ್ಷ?

Thalapathy Vijay: ಟಿವಿಕೆ ಪಕ್ಷದ ಸಂಸ್ಥಾಪಕ ವಿಜಯ್‌ ಮತ್ತು ನಟಿ ತ್ರಿಷಾ ಮದುವೆ ಸಮಾರಂಭವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿರುವುದು ತಮಿಳು ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ವಿಜಯ್ ಪತ್ನಿ ಸಂಗೀತಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. 2003ರ 'ಗಿಲ್ಲಿ' ಚಿತ್ರದಿಂದ ಆರಂಭವಾದ ವಿಜಯ್‌ - ತ್ರಿಷಾ ಅವರ 23 ವರ್ಷಗಳ ಸ್ನೇಹ ಈಗ ವದಂತಿಗಳಿಗೆ ಕಾರಣವಾಗಿದೆ.‌

ವಿಜಯ್‌-ತ್ರಿಷಾ ಸ್ನೇಹ; ʻಗಿಲ್ಲಿʼಯಿಂದ ಗಲ್ಲಿ ಗಲ್ಲಿಯಲ್ಲಿ ಸುದ್ದಿಯಾಗೋ ತನಕ

-

Avinash GR
Avinash GR Mar 6, 2026 3:34 PM

‌ʻದಳಪತಿʼ ವಿಜಯ್ ಮತ್ತು ತ್ರಿಷಾ ಹೆಸರು ಸದ್ಯ ಟಾಪ್‌ ಟ್ರೆಂಡಿಂಗ್‌ನಲ್ಲಿವೆ. ಕೆಲ ದಿನಗಳ ಹಿಂದಷ್ಟೇ, "ನನ್ನ ಪತಿಯಿಂದ ನನಗೆ ವಿಚ್ಛೇದನ ಬೇಕು, ಅವರು ನಟಿಯೊಬ್ಬರ ಜೊತೆಗೆ ಸಂಬಂಧ ಹೊಂದಿದ್ದಾರೆ" ಎಂದು ವಿಜಯ್‌ ಪತ್ನಿ ಸಂಗೀತಾ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಅದರ ಬೆನ್ನಲ್ಲೇ ನಟಿ ತ್ರಿಷಾ ಜೊತೆಗೆ ವಿಜಯ್‌ ಅವರು ನಿರ್ಮಾಪಕರ ಕುಟುಂಬದ ಮದುವೆಯೊಂದಕ್ಕೆ ಒಟ್ಟಿಗೆ ಹೋಗಿದ್ದಾರೆ. ಇದೇ ವಿಚಾರವೀಗ ಸಾಕಷ್ಟು ಚರ್ಚೆ ಆಗುತ್ತಿದೆ.

ವಿಜಯ್‌ ಮತ್ತು ತ್ರಿಷಾ ಬಗ್ಗೆ ಜೋರು ಚರ್ಚೆ

ಯಾವಾಗ ತ್ರಿಷಾ ಅವರ ಜೊತೆಗೆ ವಿಜಯ್‌ ಒಂದೇ ಕಾರಿನಲ್ಲಿ ಬಂದರೋ, ಈ ಚರ್ಚೆಗೆ ಪೆಟ್ರೋಲ್‌ ಸುರಿದಂತೆ ಆಗಿದೆ. ಅತ್ತ ಪತ್ನಿ ಸಂಗೀತಾ ಅವರು "ನನ್ನ ಪತಿ ನಟಿಯೊಬ್ಬರ ಜೊತೆಗೆ ಸಂಬಂಧ ಹೊಂದಿದ್ದಾರೆ" ಎಂದು ಹೇಳುವುದಕ್ಕೂ ಇತ್ತ ವಿಜಯ್‌ ತ್ರಿಷಾ ಜೊತೆ ಬಹಿರಂಗವಾಗಿ ಕಾಣಿಸಿಕೊಳ್ಳುವುದಕ್ಕೂ ಸರಿಹೋಗಿದೆ. ವಿಜಯ್‌ ಅವರಿಗೆ ತ್ರಿಷಾ ಜೊತೆಗೆ ಸಂಬಂಧ ಇದೆ ಎಂಬೆಲ್ಲಾ ಮಾತುಗಳು ಕೇಳಿಬರುತ್ತಿವೆ. ಮುಂದೆ ಚುನಾವಣೆ ಇದೆ. ರಾಜಕೀಯಕ್ಕೆ ಕಾಲಿಟ್ಟಿರುವ ವಿಜಯ್‌ಗೆ ಇದು ಈಗ ಬೇಕಿತ್ತಾ ಎಂಬ ಮಾತುಗಳು ಕೂಡ ಕೇಳಿಬಂದಿವೆ. ಅಷ್ಟಕ್ಕೂ ಇವರ ಗೆಳೆತನ ಯಾವಾಗಿನದ್ದು? ಎಷ್ಟು ಸಿನಿಮಾಗಳಲ್ಲಿ ಇವರು ಒಟ್ಟಿಗೆ ನಟಿಸಿದ್ದಾರೆ? ಮುಂದೆ ಓದಿ.

Thalapathy Vijay: ಪತ್ನಿ ವಿಚ್ಛೇದನ ಅರ್ಜಿ ಮಧ್ಯೆ ದಳಪತಿ ವಿಜಯ್ ಹಾಗೂ ತ್ರಿಷಾ ಒಂದೇ ಕಾರಿನಲ್ಲಿ ಸುತ್ತಾಟ!

ಗಿಲ್ಲಿ ಚಿತ್ರದಿಂದ ಒಂದಾದ ಜೋಡಿ

ವಿಜಯ್‌ ಮತ್ತು ತ್ರಿಷಾ ಅವರ ಗೆಳೆತನಕ್ಕೆ ಭರ್ತಿ 23 ವರ್ಷ ತುಂಬಿದೆ. 2003ರಲ್ಲಿ ʻಗಿಲ್ಲಿʼ ಸಿನಿಮಾ ಶುರುವಾಗಿತ್ತು. ಆ ಸಿನಿಮಾದಲ್ಲಿ ಮೊದಲ ಬಾರಿಗೆ ಜೋಡಿಯಾಗಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. 2004ರ ಏಪ್ರಿಲ್‌ನಲ್ಲಿ ಈ ಸಿನಿಮಾ ತೆರೆಕಂಡಿದ್ದೇ, ಬ್ಲಾಕ್‌ ಬಸ್ಟರ್‌ ಹಿಟ್‌ ಎನಿಸಿಕೊಂಡಿತ್ತು. ಬಳಿಕ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಲ್ಲಿ ತ್ರಿಷಾ ಮತ್ತು ವಿಜಯ್‌ ಒಟ್ಟೊಟ್ಟಿಗೆ ನಟಿಸಲು ಆರಂಭಿಸಿದರು.

ಹಿಟ್‌ ಸಿನಿಮಾಗಳಲ್ಲಿ ನಟನೆ

ಗಿಲ್ಲಿ ಸಿನಿಮಾದ ಯಶಸ್ಸಿನ ನಂತರ 2005ರಲ್ಲಿ ತೆರೆಕಂಡ ತಿರುಪ್ಪಾಚಿ ಚಿತ್ರಕ್ಕೂ ತ್ರಿಷಾ ಅವರನ್ನೇ ಸೆಲೆಕ್ಟ್‌ ಮಾಡಲಾಯಿತು. ವಿಜಯ್‌ ಕರಿಯರ್‌ಗೆ ತಿರುಪ್ಪಾಚಿ ದೊಡ್ಡ ಗೆಲುವನ್ನು ತಂದುಕೊಟ್ಟಿತ್ತು. ಬಳಿಕ 2006ರಲ್ಲಿ ಆದಿ ಸಿನಿಮಾದಲ್ಲೂ ವಿಜಯ್‌ ಮತ್ತು ತ್ರಿಷಾ ಒಟ್ಟಿಗೆ ನಟಿಸಿದ್ದರು. ಹೀಗೆ ಮೂರು ವರ್ಷ ಒಟ್ಟಿಗೆ ಮೂರು ಸಿನಿಮಾಗಳಲ್ಲಿ ಈ ಕಾಣಿಸಿಕೊಂಡ ಈ ಜೋಡಿ, 2008ರಲ್ಲಿ ಕುರುವಿ ಸಿನಿಮಾದಲ್ಲೂ ಮತ್ತೊಮ್ಮೆ ಜೋಡಿಯಾಗಿತ್ತು. ಈ ಸಿನಿಮಾ ಕೂಡ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿತ್ತು. ನಂತರ ಅದೇನಾಯಿತೋ ಏನೋ, ವಿಜಯ್‌ ಮತ್ತು ತ್ರಿಷಾ ಜೋಡಿ ದೂರವಾಯಿತು.

16 ವರ್ಷಗಳ ನಂತರ ಒಂದಾದ ಜೋಡಿ

ಕುರುವಿ ನಂತರ 2023ರಲ್ಲಿ ತೆರೆಕಂಡ ಲಿಯೋ ಸಿನಿಮಾಕ್ಕಾಗಿ ವಿಜಯ್‌ ಮತ್ತು ತ್ರಿಷಾ ಜೊತೆಯಾದರು. ಆ ಚಿತ್ರದಲ್ಲಿನ ಇವರ ಕಿಸ್ಸಿಂಗ್‌ ಸೀನ್‌ ಬಹಳ ಸುದ್ದಿಯಾಗಿತ್ತು. 2024ರಲ್ಲಿ ತೆರೆಕಂಡ ವಿಜಯ್‌ ಅವರ ಗೋಟ್‌ (The Greatest of All Time) ಸಿನಿಮಾದ ಒಂದು ಹಾಡಿನಲ್ಲೂ ತ್ರಿಷಾ ಭರ್ಜರಿಯಾಗಿ ಕುಣಿದಿದ್ದರು. ಇದುವ ಇವರಿಬ್ಬರ ಇಲ್ಲಿವರೆಗಿನ ಸಿನಿಮಾ ಜರ್ನಿ ಆಗಿದೆ.

ಸದ್ಯ ವಿಜಯ್ ಮತ್ತು ತ್ರಿಷಾ ಸಾಕಷ್ಟು ವದಂತಿಗಳು ಹರಿದಾಡುತ್ತಿದ್ದು, ಇಬ್ಬರು ಕೂಡ ಒಟ್ಟಿಗೆ ಮದುವೆ ಬಂದರೇ ವಿನಃ ಯಾವುದೇ ರಿಯಾಕ್ಷನ್‌ ನೀಡಿಲ್ಲ. ಅತ್ತ ವಿಜಯ್‌ ಅವರ ಮಗ ಜೇಸನ್‌ ಸಂಜಯ್‌ಗೆ ಈಗ 26 ವರ್ಷ ಮತ್ತು ಮಗಳು ದಿವ್ಯಾ ಸಾಷಾಗೆ 21 ವರ್ಷ. ಹೀಗಿರುವಾಗ ಕೌಟುಂಬಿಕ ಸಮಸ್ಯೆಯನ್ನು ವಿಜಯ್ ಇಷ್ಟೊಂದು ಜಟಿಲ ಮಾಡಿಕೊಳ್ಳುವ ಅವಶ್ಯಕತೆ ಏನಿತ್ತು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಮಕ್ಕಳ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ,