ʻಬ್ರೇಕ್‌ಅಪ್ʼ ಎಂದವರಿಗೆ ʻಬ್ರೇಕಿಂಗ್ ನ್ಯೂಸ್ʼ ಕೊಟ್ಟ ನಟಿ ತ್ರಿಶಾ; ಸಿಎಂ ವಿಜಯ್‌ಗೆ ತಡವಾಗಿ ವಿಶ್ ಮಾಡಿದ ಆಪ್ತ ಗೆಳತಿ!
ತಮಿಳುನಾಡು ಮುಖ್ಯಮಂತ್ರಿ, ನಟ ‘ದಳಪತಿ’ ವಿಜಯ್ ಮತ್ತು ನಟಿ ತ್ರಿಶಾ ನಡುವೆ ಬ್ರೇಕಪ್ ಆಗಿದೆ ಎಂಬ ವದಂತಿಗಳಿಗೆ ಬ್ರೇಕ್ ಬಿದ್ದಿದೆ. ವಿಜಯ್ ಜೊತೆಗಿನ ಮಧ್ಯರಾತ್ರಿಯ ಬರ್ತ್‌ಡೇ ಸೆಲೆಬ್ರೇಷನ್ ಫೋಟೋವನ್ನು ಹಂಚಿಕೊಳ್ಳುವ ಮೂಲಕ ತ್ರಿಶಾ ಗಾಸಿಪ್ಪಿಗರ ಬಾಯಿ ಬಂದ್ ಮಾಡಿದ್ದಾರೆ.
-
ತಮಿಳುನಾಡು ಮುಖ್ಯಮಂತ್ರಿ, ನಟ ʻದಳಪತಿʼ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ನಡುವೆ ಎಲ್ಲವೂ ಸರಿಯಿಲ್ಲ, ಇಬ್ಬರ ನಡುವಿನ ಆಪ್ತತೆಗೆ ಬ್ರೇಕ್ ಬಿದ್ದಿದೆ ಎಂಬ ವದಂತಿಗಳು ಮಿಂಚಿನ ವೇಗದಲ್ಲಿ ವೈರಲ್ ಆಗಿದ್ದವು. ಆದರೆ, ನಟಿ ತ್ರಿಶಾ ಮಾತ್ರ ಅದೇ ವೇಗದಲ್ಲೇ ಎಲ್ಲಾ ವದಂತಿಗಳಿಗೂ ಬ್ರೇಕ್ ಹಾಕಿದ್ದಾರೆ. ಸಿಎಂ ವಿಜಿ ಜೊತೆಗಿನ ಒಡನಾಟ ಹಂಗೇ ಇದೆ ಎಂದು ಒಂದೇ ಒಂದು ಪೋಸ್ಟ್ ಮೂಲಕ ಹೇಳಿದ್ದಾರೆ.
ಮಧ್ಯರಾತ್ರಿಯೇ ಸೆಲೆಬ್ರೇಷನ್
ಹೌದು, ತ್ರಿಶಾ ಅವರು ವಿಜಯ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ. ಸೋಮವಾರ (ಜೂನ್ 22) ನಡೆದ ವಿಜಯ್ ಅವರ 52ನೇ ಹುಟ್ಟುಹಬ್ಬಕ್ಕೆ ಶುಭ ಕೋರದೆ ನಿರ್ಲಕ್ಷಿಸಿದ್ದಾರೆ ಎಂಬ ವದಂತಿಗಳು ಹರಡಿದ್ದವು. ವಿಜಯ್ ಜೊತೆ ತ್ರಿಶಾ ಮುನಿಸಿಕೊಂಡಿದ್ದಾರೆ ಎಂದೆಲ್ಲಾ ಮಂಗಳವಾರ (ಜೂನ್ 23) ಬೆಳಗ್ಗೆಯಿಂದಲೇ ಸುದ್ದಿ ಹರಿದಾಡಿದ್ದವು. ಅದಕ್ಕೆ ಕೆಲವೇ ಗಂಟೆಗಳಲ್ಲಿ ತ್ರಿಶಾ ಫುಲ್‌ಸ್ಟಾಪ್ ಇಟ್ಟಿದ್ದಾರೆ. ಮಧ್ಯರಾತ್ರಿಯೇ ವಿಜಯ್ ಜೊತೆ ಬರ್ತ್‌ಡೇ ಸೆಲೆಬ್ರೇಷನ್ ಮಾಡಿದ್ದೇನೆ ಎಂಬುದನ್ನು ಫೋಟೋಸಮೇತ ಹಂಚಿಕೊಂಡಿದ್ದಾರೆ.
Thalapathy Vijay: ನಟ ವಿಜಯ್-ಸಂಗೀತಾ ಡಿವೋರ್ಸ್ ಪ್ರಕರಣ; ವಿಚಾರಣೆ ಮುಂದೂಡಿದ ಕೋರ್ಟ್
ಎಲ್ಲವನ್ನೂ ಸಾರ್ಥಕಗೊಳಿಸುವ ವ್ಯಕ್ತಿ
ತ್ರಿಶಾ ಹಂಚಿಕೊಂಡಿರುವ ಫೋಟೋದಲ್ಲಿ ವಿಜಯ್ ಪ್ರಿಂಟೆಡ್ ಶರ್ಟ್ ಧರಿಸಿ ಕ್ಯಾಶುಯಲ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದು, ತಮ್ಮ ಮುಂದಿಟ್ಟಿರುವ ಬರ್ತ್‌ಡೇ ಕೇಕ್‌ಗಳನ್ನು ನೋಡುತ್ತಾ ಮುಗುಳ್ನಗುತ್ತಿದ್ದಾರೆ. ಅವರ ಪಕ್ಕದಲ್ಲೇ ನಿಂತಿರುವ ತ್ರಿಶಾ, ವಿಜಯ್ ಅವರನ್ನು ಪ್ರೀತಿಯಿಂದ ನೋಡುತ್ತಾ ನಿಂತಿದ್ದಾರೆ. ಈ ಫೋಟೋ ಜೊತೆಗೆ ತುಂಬಾ ಶಾರ್ಟ್ ಆಗಿ ಕ್ಯಾಪ್ಷನ್ ಬರೆದಿರುವ ತ್ರಿಶಾ, "ಎಲ್ಲವನ್ನೂ ಸಾರ್ಥಕಗೊಳಿಸುವ ಆ ವಿಶೇಷ ವ್ಯಕ್ತಿಗೆ, ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು" ಎಂದು ಬರೆದುಕೊಂಡಿದ್ದಾರೆ. ಜೊತೆಗೆ "00.00" ಎಂದು ಬರೆದಿರುವುದರಿಂದ, ಇದು ಮಧ್ಯರಾತ್ರಿ 12 ಗಂಟೆಗೆ ತೆಗೆದ ಫೋಟೋ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.
ಅನಫಾಲೋ ಮಾಡಿದ್ದು ನಿಜವೇ?
ಈ ಮಧ್ಯೆ ತ್ರಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಕೆಲವು ವದಂತಿಗಳು ಕೇಳಿಬಂದಿವೆ. ಆದರೆ, ಅಸಲಿಗೆ, ತ್ರಿಶಾ ಅವರು ಎಂದಿಗೂ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಫಾಲೋ ಮಾಡುತ್ತಲೇ ಇರಲಿಲ್ಲ, ಹಾಗಾಗಿ ಈ 'ಅನ್‌ಫಾಲೋ' ಸುದ್ದಿ ಸಂಪೂರ್ಣ ಆಧಾರರಹಿತ ಎಂಬ ಮಾಹಿತಿ ಕೇಳಿಬಂದಿದೆ. ಸದ್ಯ ಈ ಜೋಡಿ ಕಳೆದ ಕೆಲವು ತಿಂಗಳುಗಳಿಂದ ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುವುದರಿಂದ ಸದಾ ಸುದ್ದಿಯಲ್ಲಿದೆ.
ತ್ರಿಶಾ ಹಂಚಿಕೊಂಡಿರುವ ಟ್ವೀಟ್
To the person who makes it all worth it,HBD❤️🧿
— Trish (@trishtrashers) June 23, 2026
00.00✨ pic.twitter.com/2e6QcueVRP
ವಿಜಯ್ ವಿಚ್ಛೇದನ ಪ್ರಕರಣದ ಅಪ್ಡೇಟ್ ಏನು?
ಇನ್ನೊಂದೆಡೆ, ವಿಜಯ್ ಅವರ ವೈಯಕ್ತಿಕ ಜೀವನವೂ ಸದ್ಯ ಚರ್ಚೆಯಲ್ಲಿದೆ. ವಿಜಯ್ ಮತ್ತು ಅವರ ಪತ್ನಿ ಸಂಗೀತಾ ಸ್ವರ್ಣಲಿಂಗಂ ನಡುವಿನ ವಿಚ್ಛೇದನ ಪ್ರಕರಣದ ವಿಚಾರಣೆ ಈಚೆಗೆ ನಡೆದಿದ್ದು, ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಆಗಸ್ಟ್ 7 ಕ್ಕೆ ಮುಂದೂಡಿದೆ. ಕಳೆದ ಫೆಬ್ರವರಿಯಲ್ಲಿ ವಿಜಯ್ ಪತ್ನಿ ಸಂಗೀತಾ ಅವರು ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು, ವಿಜಯ್ ಅವರಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿದ್ದರು.