ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻದಳಪತಿʼ ವಿಜಯ್‌, ಅಜಿತ್‌, ಸೂರ್ಯ ಪಾಲಿಗೆ ಲಕ್ಕಿಯಾದ ನಟಿ ತ್ರಿಶಾ ಕೃಷ್ಣನ್ ;‌ 25 ವರ್ಷಗಳಾದರೂ ಕುಂದದ ʻಕುಂದವೈʼ ಚಾರ್ಮ್‌!

ದಕ್ಷಿಣ ಭಾರತದ ಚಿತ್ರರಂಗದಲ್ಲಿ 25 ವರ್ಷಗಳನ್ನು ಪೂರೈಸಿದ್ದರೂ ನಟಿ ತ್ರಿಷಾ ಕೃಷ್ಣನ್ ಅವರ ವರ್ಚಸ್ಸು ಕೊಂಚವೂ ಕುಂದಿಲ್ಲ. ದಳಪತಿ ವಿಜಯ್, ಅಜಿತ್ ಕುಮಾರ್ ಹಾಗೂ ಸೂರ್ಯ ಅವರ ಸಾರ್ವಕಾಲಿಕ ಗರಿಷ್ಠ ಗಳಿಕೆಯ ಚಿತ್ರಗಳಿಗೆ ಇವರೇ ನಾಯಕಿಯಾಗಿದ್ದು, ತ್ರಿಶಾ ಈಗ ಉದ್ಯಮದ 'ಲಕ್ಕಿ ಚಾರ್ಮ್' ಆಗಿ ಹೊರಹೊಮ್ಮಿದ್ದಾರೆ.

ವಿಜಯ್, ಅಜಿತ್, ಸೂರ್ಯಗೆ ‌ನಟಿ ತ್ರಿಶಾ ಲಕ್ಕಿ ಚಾರ್ಮ್! ಹೇಗೆ ಗೊತ್ತಾ?

-

Avinash GR
Avinash GR May 25, 2026 7:16 PM

ದಳಪತಿ ವಿಜಯ್, ಅಜಿತ್ ಕುಮಾರ್ ಮತ್ತು ಸೂರ್ಯ ಅವರ ವೃತ್ತಿಜೀವನದ ಅತಿ ದೊಡ್ಡ ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳಲ್ಲಿ ಒಂದು 'ಕಾಮನ್ ಫ್ಯಾಕ್ಟರ್' ಇದೆ. ಅದೇನು ಗೊತ್ತಾ? ನಟಿ ತ್ರಿಶಾ ಕೃಷ್ಣನ್! ತಮಿಳು ಚಿತ್ರರಂಗದ ಈ ಸ್ಟಾರ್‌ ನಟರ ಅತಿ ದೊಡ್ಡ ಹಿಟ್‌ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿರುವುದು ತ್ರಿಶಾ. ಹಾಗಾಗಿ, ಕುಂದವೈ ತ್ರಿಶಾರನ್ನು ಫ್ಯಾನ್ಸ್‌ ಸ್ಟಾರ್‌ ಹೀರೋಗಳ ಲಕ್ಕಿ ಚಾರ್ಮ್‌ ಅಂತ ಕರೆಯುತ್ತಿದ್ದಾರೆ.

ಯಾವ್ಯಾವ ಸಿನಿಮಾದಲ್ಲಿ ತ್ರಿಶಾ ನಟಿಸಿದ್ದಾರೆ?

2023 ರಲ್ಲಿ ವಿಜಯ್ ಜೊತೆ ತ್ರಿಶಾ ನಟಿಸಿದ್ದ 'ಲಿಯೋ' ಸಿನಿಮಾ ವಿಶ್ವಾದ್ಯಂತ 650 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿತ್ತು. ಅದು ವಿಜಯ್‌ ಅವರ ವೃತ್ತಿಜೀವನದ ಬಿಗ್ಗೆಸ್ಟ್ ಹಿಟ್ ಸಿನಿಮಾ ಎನಿಸಿಕೊಂಡಿತು. ಎರಡು ವರ್ಷಗಳ ನಂತರ, ಅಜಿತ್ ಕುಮಾರ್ ಅಭಿನಯದ 'ಗುಡ್ ಬ್ಯಾಡ್ ಅಗ್ಲಿ' ಚಿತ್ರದಲ್ಲೂ ತ್ರಿಶಾ ನಟಿಸಿದ್ದರು. ಆ ಸಿನಿಮಾವು ವಿಶ್ವಾದ್ಯಂತ 250 ಕೋಟಿ ರೂಪಾಯಿಗಳ ಗಡಿಯನ್ನು ದಾಟಿತ್ತು. ಆ ಮೂಲಕ ಅಜಿತ್ ಅವರ ಕೆರಿಯರ್‌ನ ಟಾಪ್ ಗ್ರಾಸರ್ ಸಿನಿಮಾ ಎನಿಸಿಕೊಂಡಿತು. ಹೀಗೆ ಅಜಿತ್ ಮತ್ತು ವಿಜಯ್‌ ನಟನೆಯ ಸಿನಮಾಗಳಲ್ಲಿ ಮಿಂಚು ಹರಿಸಿದ್ದ ನಟಿ ತ್ರಿಶಾ ಈಗ ಸೂರ್ಯಗೂ ಲಕ್ಕಿ ಆಗಿದ್ದಾರೆ.

ಸಿಎಂ ವಿಜಯ್‌ - ತ್ರಿಶಾ ಬಗ್ಗೆ ಕೇಳಿದ್ದಕ್ಕೆ ಉರಿದುಬಿದ್ದ ನಟಿ ಮಾಳವಿಕಾ ಮೋಹನನ್;‌ ವಿಡಿಯೋ ವೈರಲ್‌!

ಹೌದು, ಸೂರ್ಯ ನಟನೆಯ 'ಕರುಪ್ಪು' ಸಿನಿಮಾ ವಿಶ್ವಾದ್ಯಂತ 225+ ಕೋಟಿ ರೂಪಾಯಿ ಬಾಚಿಕೊಂಡಿದ್ದು, 300 ಕೋಟಿ ಕ್ಲಬ್ ಸೇರುವ ತವಕದಲ್ಲಿದೆ. ಕರುಪ್ಪು ಈಗ ಸೂರ್ಯ ಅವರ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ. ಈ ಸಿನಿಮಾದಲ್ಲೂ ನಾಯಕಿಯಾಗಿ ನಟಿಸಿದ್ದಾರೆ. ತ್ರಿಶಾ ಸಿನಿಮಾರಂಗದಲ್ಲಿ 25 ವರ್ಷ ಪೂರೈಸಿದ್ದಾರೆ. ಆದರೂ, ಅವರ ಚಾರ್ಮ್‌ ಒಂಚೂರು ಕಮ್ಮ ಆಗಿಲ್ಲ, ಬದಲಿಗೆ ಸ್ಟಾರ್‌ ನಟರಿಗೆ ಲಕ್ಕಿಚಾರ್ಮ್‌ ಆಗಿದ್ದಾರೆ.

Trisha Krishnan: ದಳಪತಿ ವಿಜಯ್ ಹೆಸರು ಹೇಳುತ್ತಿದ್ದಂತೆ ನಾಚಿ ನೀರಾದ ನಟಿ ತ್ರಿಶಾ: ವಿಡಿಯೋ ವೈರಲ್

ಖುಷಿಪಟ್ಟ ನಟಿ ತ್ರಿಶಾ

ನಟಿ ತ್ರಿಶಾ ಅಭಿಮಾನಿಯೊಬ್ಬ ಈ ಕುರಿತು ಪೋಸ್ಟ್ ಹಾಕಿಕೊಂಡಿದ್ದರು. ಅದನ್ನು ತ್ರಿಶಾ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರೀಸ್‌ನಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ವಿಜಯ್ ವೃತ್ತಿಜೀವನದ ಅತಿ ಹೆಚ್ಚು ಗಳಿಕೆ ಮಾಡಿದ 'ಲಿಯೋ' (2023), ಅಜಿತ್ ಕುಮಾರ್ ಅವರ ಗರಿಷ್ಠ ಗಳಿಕೆಯ 'ಗುಡ್ ಬ್ಯಾಡ್ ಅಗ್ಲಿ' (2025), ಮತ್ತು ಸೂರ್ಯ ಅವರ ಅತಿ ದೊಡ್ಡ ಹಿಟ್ ಚಿತ್ರ 'ಕರುಪ್ಪು' (2026) — ಈ ಮೂರೂ ಸಿನಿಮಾಗಳಲ್ಲಿ ತ್ರಿಶಾ ಅವರೇ ನಾಯಕಿಯಾಗಿರುವುದು ವಿಶೇಷ. ಆ ಪೋಸ್ಟ್‌ನಲ್ಲಿ, "ವಿಜಯ್ ಅವರ ಹೈಯೆಸ್ಟ್ ಗ್ರಾಸರ್ (ಲಿಯೋ), ಅಜಿತ್ ಅವರ ಹೈಯೆಸ್ಟ್ ಗ್ರಾಸರ್ (ಜಿಬಿಯು), ಸೂರ್ಯ ಅವರ ಹೈಯೆಸ್ಟ್ ಗ್ರಾಸರ್ (ಕರುಪ್ಪು). ಇವೆಲ್ಲದರ ಹಿಂದಿರುವ ಕಾಮನ್ ಫ್ಯಾಕ್ಟರ್!!" ಎಂದು ಬರೆಯಲಾಗಿತ್ತು.