Vijay Rashmika Wedding: ಎರಡು ಬಾರಿ ಮದುವೆ ಆಗಲಿದೆ ರಶ್ಮಿಕಾ-ವಿಜಯ್ ದೇವರಕೊಂಡ ಜೋಡಿ!
Rashmika Mandanna: ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಮದುವೆ ಕಾರ್ಯಕ್ರಮ ಶುರುವಾಗಿದೆ. ಇಂದು(ಫೆಬ್ರವರಿ 25) ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ. ಹತ್ತಿರದ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಎರಡು ಬಾರಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ.
ರಶ್ಮಿಕಾ ಮಂದಣ್ಣ -
ವಿಜಯ್ ದೇವರಕೊಂಡ (Vijay Devarakonda) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ಮದುವೆ ಕಾರ್ಯಕ್ರಮ ಶುರುವಾಗಿದೆ. ಇಂದು(ಫೆಬ್ರವರಿ 25) ಮೆಹಂದಿ ಮತ್ತು ಸಂಗೀತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಾಳೆ (ಫೆಬ್ರವರಿ 26) ಮದುವೆ ಕಾರ್ಯ ನಡೆಯಲಿದೆ. ಫೆಬ್ರವರಿ 26 ರಂದು ಉದಯಪುರದಲ್ಲಿ ಅದ್ಧೂರಿಯಾಗಿ ವಿವಾಹವಾಗಲಿದ್ದಾರೆ (wed in two ceremonies). ಹತ್ತಿರದ ಕುಟುಂಬ ಮತ್ತು ಆಪ್ತ ಸ್ನೇಹಿತರನ್ನು ಮಾತ್ರ ಆಹ್ವಾನಿಸಲಿದ್ದಾರೆ ಎಂದು ವರದಿಯಾಗಿದೆ. ವಿಶೇಷವೆಂದರೆ ರಶ್ಮಿಕಾ ಮತ್ತು ವಿಜಯ್ ಎರಡು ಬಾರಿ ಮದುವೆ ಆಗಲಿದ್ದಾರೆ ಎಂದು ವರದಿಯಾಗಿದೆ.
ತೆಲುಗು -ಕೊಡವ ಸಂಪ್ರದಾಯ
ವಿಜಯ್ ಮತ್ತು ರಶ್ಮಿಕಾ ಇಬ್ಬರೂ ಹಿಂದೂ ಧರ್ಮದವರೇ ಆಗಿದ್ದರೂ ಸಹ ಈ ಜೋಡಿ ಎರಡೆರಡು ಬಾರಿ ಮದುವೆ ಆಗುತ್ತಿದೆ ಎಂದು ವರದಿಯಾಗಿದೆ. ನಾಳೆ (ಫೆಬ್ರವರಿ 26) ಬೆಳಗ್ಗೆ ಮೊದಲಿಗೆ ವಿಜಯ್ ದೇವರಕೊಂಡ ಅವರ ಕುಟುಂಬ ಮತ್ತು ಸಮುದಾಯದ ಸಂಪ್ರದಾಯದಂತೆ ಮದುವೆ ನಡೆಯಲಿದೆ.
ಇದನ್ನೂ ಓದಿ: Toxic Movie: ಟಾಕ್ಸಿಕ್‌ನಲ್ಲಿ ಮತ್ತೊಂದು ರಗಡ್ ಪಾತ್ರ: ಯಾರಿದು ‘ಬೀರ’?
ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ಬೆಳಗ್ಗೆ ಮದುವೆ ಕಾರ್ಯ ನಡೆಯಲಿದೆ. ಅದಾದ ಬಳಿಕ ಸಂಜೆ ವೇಳೆಗೆ ರಶ್ಮಿಕಾ ಅವರ ಕೊಡವ ಸಂಪ್ರದಾಯದಂತೆ ಮದುವೆ ನಡೆಯಲಿದೆ. ಇಬ್ಬರೂ ಕುಟುಂಬಗಳ ಸಂಪ್ರದಾಯಗಳನ್ನು ಗೌರವಿಸಲೆಂದು ಈ ನಿರ್ಧಾರವನ್ನು ಮಾಡಲಾಗಿದೆ.
ಯಾರೆಲ್ಲ ಬರಲಿದ್ದಾರೆ?
ನಿರ್ದೇಶಕ ತರುಣ್ ಭಾಸ್ಕರ್, ನಟಿ ಈಶಾ ರೆಬ್ಬಾ , ನಿರ್ದೇಶಕ-ನಟ ರಾಹುಲ್ ರವೀಂದ್ರನ್ ಮತ್ತು ಸ್ಟೈಲಿಸ್ಟ್ ಶ್ರಾವ್ಯ ವರ್ಮಾ ಉದಯಪುರಕ್ಕೆ ಆಗಮಿಸಿದ್ದಾರೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಅವರನ್ನು ಸಹ ಮದುವೆಗೆ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.
ಜೋಡಿಯ ವಿವಾಹಪೂರ್ವ ಸಂಭ್ರಮವು ಎರಡೂ ಕುಟುಂಬಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯದೊಂದಿಗೆ ಪ್ರಾರಂಭವಾಯಿತು. ಮತ್ತಷ್ಟು ವಿಶಿಷ್ಟವಾದ ವಿವಾಹಪೂರ್ವ ಸಂಪ್ರದಾಯಗಳನ್ನು ಯೋಜಿಸಲಾಗಿದ್ದು, ಬುಧವಾರ ನಡೆಯಲಿರುವ ಮೆಹಂದಿ ಮತ್ತು ಸಂಗೀತದಂತಹ ಕ್ಲಾಸಿಕ್ ಸಮಾರಂಭ ನಡೆಯಲಿವೆ.
ಮದುವೆಗೂ ಮುನ್ನ, ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅಂತಿಮವಾಗಿ ತಮ್ಮ ಸಂಬಂಧವನ್ನು ಅಧಿಕೃತಗೊಳಿಸಿದರು ಮತ್ತು ಅವರ ಅಭಿಮಾನಿಗಳು ಇಟ್ಟಿದ್ದ ಅಡ್ಡಹೆಸರಿನೊಂದಿಗೆ ತಮ್ಮ ಮದುವೆಯನ್ನು ಘೋಷಿಸಿದರು. ಮಾರ್ಚ್ 4, 2026 ರಂದು ಹೈದರಾಬಾದ್‌ನ ತಾಜ್ ಕೃಷ್ಣಾದಲ್ಲಿ ಆರತಕ್ಷತೆಯನ್ನು ಆಯೋಜಿಸಲಿದ್ದಾರೆ. ಕನ್ನಡದ ನಟಿ ಆಶಿಕಾ ರಂಗನಾಥ್ ಸಹ ಭಾಗಿ ಆಗಿದ್ದಾರೆ.
ಇದನ್ನೂ ಓದಿ: Ram Charan: ಅಯ್ಯಪ್ಪ ಮಾಲೆ ಧರಿಸಿ ಪಾರ್ಟಿಗೆ ಹೋಗಿದ್ರಾ ರಾಮ್‌ಚರಣ್? ಅಲ್ಲು ಸಿರೀಶ್ ಹೇಳೋದೇನು?
ಈ ಮದುವೆಯು ಫೆಬ್ರವರಿ 26 ರಂದು ನಡೆಯಲಿದ್ದು, ಕೇವಲ 100 ಜನ ಆಪ್ತರಿಗೆ ಮಾತ್ರ ಆಹ್ವಾನ ನೀಡಲಾಗಿದೆಯಂತೆ. ಅತಿಥಿಗಳ ಪಟ್ಟಿಯಲ್ಲಿ ತೆಲುಗು ರಾಜ್ಯಗಳ ಕೆಲ ರಾಜಕಾರಣಿಗಳು, ಆಪ್ತ ಸಿನಿಮಾ ನಿರ್ದೇಶಕರು ಸೇರಿದ್ದಾರೆ. ಗಣ್ಯರ ಆಗಮನದ ಹಿನ್ನೆಲೆಯಲ್ಲಿ ಉದಯಪುರ ವಿಮಾನ ನಿಲ್ದಾಣದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.