ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Jayamma: ವಿಜಯ್‌ ರಾಘವೇಂದ್ರ, ಶ್ರೀ ಮುರಳಿಗೆ ಮಾತೃ ವಿಯೋಗ

vijay Raghavendra: ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ( ಅವರ ಪತ್ನಿ ಜಯಮ್ಮ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು (ಜೂನ್‌ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಸಹೋದರರಾಗಿರುವ ಚಿನ್ನೇಗೌಡರು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಚಿತ್ರರಂಗದ ಪ್ರತಿಭಾವಂತ ನಾಯಕ ನಟರಾದ ವಿಜಯ ರಾಘವೇಂದ್ರ ಹಾಗೂ ಶ್ರೀಮುರಳಿ ಇವರ ಮಕ್ಕಳು.

ವಿಜಯ್‌ ರಾಘವೇಂದ್ರ, ಶ್ರೀ ಮುರಳಿಗೆ  ಮಾತೃ ವಿಯೋಗ

ವಿಜಯ್‌ ರಾಘವೇಂದ್ರ ತಾಯಿ -

Yashaswi Devadiga
Yashaswi Devadiga Jun 16, 2026 9:21 AM

ಫಿಲ್ಮ್ ಚೇಂಬರ್ ನ ಮಾಜಿ ಅಧ್ಯಕ್ಷ ಹಾಗೂ ನಿರ್ಮಾಪಕ ಚಿನ್ನೇಗೌಡ ಅವರ ಪತ್ನಿ ಜಯಮ್ಮ (Jayamma) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಇಂದು (ಜೂನ್‌ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಪಾರ್ವತಮ್ಮ ರಾಜ್‌ಕುಮಾರ್ ಸಹೋದರರಾಗಿರುವ ಚಿನ್ನೇಗೌಡರು (chinnegowdru) ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರಲ್ಲಿ ಒಬ್ಬರು. ಚಿತ್ರರಂಗದ ಪ್ರತಿಭಾವಂತ ನಾಯಕ ನಟರಾದ ವಿಜಯ ರಾಘವೇಂದ್ರ (Vijay Raghavendra) ಹಾಗೂ ಶ್ರೀಮುರಳಿ ಇವರ ಮಕ್ಕಳು.

ಕಳೆದೊಂದು ವಾರದಿಂದ ಜಯಮ್ಮ ಅವರು ವಯೋಸಹಜ ಅನಾರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅನಾರೋಗ್ಯ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಇದನ್ನೂ ಓದಿ: Gilli Nata: ಗಿಲ್ಲಿ ನಟನಿಂದ ಇಂದು ಫ್ಯಾನ್ಸ್‌ಗೆ ಸರ್‌ಪ್ರೈಸ್‌! ಏನದು?

ಚಿನ್ನೇಗೌಡ ಹಾಗು ಎಸ್​​.ಎ. ಗೋವಿಂದ್ ರಾಜ್ ಇವತ್ತಿಗೂ, ಚಿತ್ರರಂಗದಲ್ಲಿ ಸಿನಿಮಾ ನಿರ್ಮಾಣ ಮಾಡುವ ಮೂಲಕ ಬ್ಯುಸಿಯಾಗಿದ್ದಾರೆ. ಅದರಲ್ಲಿ ಚಿನ್ನೇಗೌಡ್ರು ಕೂಡಾ, ಪಾರ್ವತಮ್ಮ ರಾಜ್ ಕುಮಾರ್ ಕಟ್ಟಿ ಬೆಳೆಸಿದ ವಜ್ರೇಶ್ವರಿ ಕಂಬೆನ್ಸ್​​​​ ಸಂಸ್ಥೆ ಮೂಲಕ ಪ್ರೊಡಕ್ಷನ್ಸ್​​​​​​​​​​ ಕೆಲಸಗಳನ್ನು ಮಾಡುತ್ತಾ ನಿರ್ಮಾಪಕರಾಗಿದ್ದಾರೆ.

ಮನ ಮೆಚ್ಚಿದ ಹುಡುಗಿ, ರೂಪಾಯಿ ರಾಜ, ಶ್ರೀ ಹರಿಕಥೆ, ಮಿಂಚಿನ ಓಟ ಹೀಗೆ ಹಲವು ಚಿತ್ರಗಳನ್ನು ಚಿನ್ನೇಗೌಡ ನಿರ್ಮಾಣ ಮಾಡಿದ್ದಾರೆ. ಅಷ್ಟೇ ಅಲ್ಲ, 2019ರಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾಗಿ ಕೂಡಾ ಚಿನ್ನೇಗೌಡ ಕಾರ್ಯ ನಿರ್ವಹಿಸಿದ್ರು.

Vijay Raghavendra Sri Murali mother Jayamma passed away

ಜಯಮ್ಮ ಅವರ ನಿಧನಕ್ಕೆ ಸ್ಯಾಂಡಲ್‌ವುಡ್‌ನ ಅನೇಕ ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ. ತಾಯಿಯನ್ನು ಕಳೆದುಕೊಂಡ ಶ್ರೀಮುರಳಿ ಮತ್ತು ವಿಜಯ್ ರಾಘವೇಂದ್ರ ಅವರಿಗೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಅಭಿಮಾನಿಗಳು ಹಾಗೂ ಚಿತ್ರರಂಗದ ಮಿತ್ರರು ಪ್ರಾರ್ಥಿಸಿದ್ದಾರೆ.

ಇದನ್ನೂ ಓದಿ: Amruthadhaare Serial: ಜೆಡಿ ಜೈದೇವ್‌ ಸಂಚುಗಳಿಗೆ ಕೊನೆ ಯಾವಾಗ? ಅಮೃತಧಾರೆ ಧಾರವಾಹಿಯಲ್ಲಿ ರೋಚಕ ಟ್ವಿಸ್ಟ್

ಕಳೆದ ವರ್ಷವಷ್ಟೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಅಗಲಿಕೆಯಿಂದ ಕುಟುಂಬ ತೀವ್ರ ಆಘಾತಕ್ಕೊಳಗಾಗಿತ್ತು.