Vijay Sethupathi: ಹಣದಾಸೆ ತೋರಿಸಿ ಮಂಚಕ್ಕೆ ಕರೆದ ಆರೋಪ- ನಟ ವಿಜಯ್ ಸೇತುಪತಿ ಫಸ್ಟ್ ರಿಯಾಕ್ಷನ್!
ನಟ ವಿಜಯ್ ಸೇತುಪತಿ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಚಿತ್ರ ರಂಗದಲ್ಲಿ ಗೊಂದಲ ಏರ್ಪಟ್ಟಿದ್ದು ಒಂದೇ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ವಿಜಯ್ ಸೇತುಪತಿಯ ಇಮೇಜ್ ಅನ್ನು ಪ್ರಶ್ನೆ ಮಾಡುವಂತೆ ಆಗಿದೆ. ಇದೀಗ ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಸೇತುಪತಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.


ನವದೆಹಲಿ: ದಕ್ಷಿಣ ಭಾರತದ ಖ್ಯಾತ ನಟ ವಿಜಯ್ ಸೇತುಪತಿ (Vijay Sethupathi) ಚಿತ್ರ ರಂಗ ದಲ್ಲಿ ಹಿಟ್ ಸಿನಿಮಾ ನೀಡಿ ಪ್ರಸಿದ್ದಿ ಪಡೆದಿದ್ದಾರೆ. ಬಹುಬೇಡಿಕೆಯ ನಟನಾಗಿಯು ಅವರು ಇಂದು ಬೆಳೆದು ನಿಂತಿದ್ದಾರೆ. 'ಸೂಪರ್ ಡಿಲಕ್ಸ್', '96', 'ವಿಕ್ರಮ್ ವೇದ' ಮತ್ತು 'ಮಹಾರಾಜ' ಇತ್ಯಾದಿ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ಇವರು ಇತ್ತೀಚಿಗೆ ಬಿಡುಗಡೆಯಾದ 'ತಲೈವನ್ ತಲೈವಿ' ಚಿತ್ರ ಕೂಡ ಭರ್ಜರಿ ಸಕ್ಸಸ್ ಕಾಣುತ್ತಿದೆ. ಈ ನಡುವೆ ನಟ ವಿಜಯ್ ಸೇತುಪತಿ ಮೇಲೆ ಗಂಭೀರ ಆರೋಪವೊಂದು ಕೇಳಿ ಬಂದಿದೆ. ವಿಜಯ್ ಸೇತುಪತಿ ವಿರುದ್ಧ ಮಹಿಳೆಯೊಬ್ಬರು ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದಾರೆ. ಇದೀಗ ಈ ವಿಚಾರದ ಬಗ್ಗೆ ಚಿತ್ರರಂಗದಲ್ಲಿ ಗೊಂದಲ ಏರ್ಪಟ್ಟಿದ್ದು ಒಂದೇ ಒಂದು ಸೋಶಿಯಲ್ ಮೀಡಿಯಾ ಪೋಸ್ಟ್ ವಿಜಯ್ ಸೇತುಪತಿಯ ಇಮೇಜ್ ಅನ್ನು ಪ್ರಶ್ನೆ ಮಾಡುವಂತೆ ಆಗಿದೆ. ಇದೀಗ ತಮ್ಮ ವಿರುದ್ಧ ಕೇಳಿ ಬಂದಿರುವ ಗಂಭೀರ ಆರೋಪಕ್ಕೆ ತಮಿಳು ಚಿತ್ರರಂಗದ ಸೂಪರ್‌ಸ್ಟಾರ್ ವಿಜಯ್ ಸೇತುಪತಿ ಕೊನೆಗೂ ಪ್ರತಿಕ್ರಿಯೆ ನೀಡಿದ್ದಾರೆ.
ವಿಜಯ್ ವಿರುದ್ಧ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ವಿಜಯ್ ಪ್ರತಿಕ್ರಿಯೆಗಾಗಿ ಅವರ ಫ್ಯಾನ್ಸ್ ಕಾದು ಕುಳಿತಿದ್ದರು. ಕೊನೆಗೂ ಪ್ರತಿಕ್ರಿಯೆ ನೀಡಿರುವ ವಿಜಯ್ ಈ ಆರೋಪಗಳು ಸುಳ್ಳು ಮತ್ತು ಆಧಾರ ರಹಿತವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಇಂತಹ ಅಸಹ್ಯಕರ ಆರೋಪಗಳು ನನ್ನನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ. ನನ್ನನ್ನು ತಿಳಿದಿರುವ ಯಾರಾದರೂ ಇದನ್ನು ಕೇಳಿದರೆ ನಗುತ್ತಾರೆ. ನನ್ನ ಕುಟುಂಬ ಮತ್ತು ಆಪ್ತ ಸ್ನೇಹಿತರು ಈ ವಿಚಾರವಾಗಿ ಬಹಳಷ್ಟು ಬೇಸರಗೊಂಡಿದ್ದಾರೆ, ಈ ಮಹಿಳೆ ತನ್ನತ್ತ ಗಮನ ಸೆಳೆಯಲು ಹೀಗೆ ಮಾಡಿದ್ದು ಅವರು ಕೆಲವು ನಿಮಿಷಗಳ ಕಾಲ ಈ ಖ್ಯಾತಿಯನ್ನು ಆನಂದಿಸಲಿ ಎಂದು ಪ್ರತ್ಯುತ್ತರ ನೀಡಿದ್ದಾರೆ. ನಾನು ಏಳು ವರ್ಷಗಳಿಂದ ಎಲ್ಲಾ ರೀತಿಯ ಸಮಸ್ಯೆಯನ್ನು ಎದುರಿಸಿದ್ದೇನೆ. ಇಂತಹ ಆರೋಪಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ.ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ. ಈ ಆರೋಪಗಳ ಸಂಬಂಧ ಸೈಬರ್ ಕ್ರೈಮ್ ದೂರು ಕೂಡ ದಾಖಲಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಏನಿದು ಆರೋಪ?
ರಮ್ಯಾ ಮೋಹನ್ ಎಂಬ ಮಹಿಳೆಯ ಹೆಸರಿನ ಎಕ್ಸ್ ಖಾತೆಯ ಮೂಲಕ ಕಾಸ್ಟಿಂಗ್ ಕೌಚ್ ಆರೋಪ ಹೊರಿಸಿದ್ದು, ಲೈಂಗಿಕ ದೌರ್ಜನ್ಯ, ಡ್ರಗ್ಸ್, ಕಾಸ್ಟಿಂಗ್ ಕೌಚ್ ಸೇರಿ ಹಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದರು. ಇದೇ ಸಂದರ್ಭ ದಲ್ಲಿ ನಟ ವಿಜಯ್ ಸೇತುಪಥಿ ಹೆಸರು ಉಲ್ಲೇಖಿಸಿ ದ್ದಾರೆ. ಕಾಸ್ಟಿಂಗ್ ಕೌಚ್‌ನಲ್ಲಿ ವಿಜಯ್ ಸೇತುಪಥಿ ಸಹ ಇದ್ದಾರೆ. ನನಗೆ ಗೊತ್ತಿರುವ ಯುವತಿ ಮೇಲೆ ನಿರಂತರ ದೌರ್ಜನ್ಯ ನಡೆಸಿದ್ದಾರೆ.ವಿಜಯ್ ಸೇತುಪತಿ ಯಂತಹ ನಟ 'ಕ್ಯಾರವಾನ್ ಫೇವರ್ಸ್'ಗಾಗಿ ಎರಡು ಲಕ್ಷ ರೂಪಾಯಿ ಆಫರ್ ನೀಡಿದ್ದರು. ಹಾಗೇ ಒಂದು ರಾತ್ರಿ ಜೊತೆಲ್ಲಿ ಇರುವುದಕ್ಕೆ ರೂ 50 ಸಾವಿರ ನೀಡುವುದಾಗಿ ಹೇಳಿದ್ದರು. ಇದೀಗ ಆಕೆ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ದೂರಿದ್ದರು. ಭಾರಿ ವಿವಾದ ಸೃಷ್ಟಿಯಾದ ಬೆನ್ನಲ್ಲೇ ಆ ಪೋಸ್ಟ್ ಅನ್ನು ಎಕ್ಸ್ ಖಾತೆಯಲ್ಲಿ ಮಹಿಳೆ ಡಿಲೀಟ್ ಮಾಡಿದ್ದರು.
ವಿಜಯ್ ಸೇತುಪತಿ ರಾಷ್ಟ್ರ ಪ್ರಶಸ್ತಿ ವಿಜೇತ ನಟರಾಗಿದ್ದು, ಮುಖ್ಯವಾಗಿ ತಮಿಳು ಸಿನಿಮಾದಲ್ಲಿ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಶಾರುಖ್ ಖಾನ್ ಜೊತೆಗಿನ ಜವಾನ್ ಮತ್ತು ಕತ್ರಿನಾ ಕೈಫ್ ಜೊತೆಗಿನ ಮೆರಿ ಕ್ರಿಸ್ಮಸ್ ನಂತಹ ಹಿಂದಿ ಚಿತ್ರಗಳಲ್ಲೂ ನಟಿಸಿದ್ದಾರೆ. ಸದ್ಯ ಇವರ ನಟನೆಯ "ತಲೈವನ್ ತಲೈವಿ" ಸಿನಿಮಾ ಜುಲೈ 25, ರಂದು ತೆರೆಗೆ ಬಂದಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಚಿತ್ರವು ಬಿಡುಗಡೆಯಾದ ಮೊದಲ ದಿನವೇ ರೂ 4.15 ಕೋಟಿ ಗಳಿಸಿ ಉತ್ತಮ ಆರಂಭ ಪಡೆದಿದೆ. ಆರು ದಿನಗಳಲ್ಲಿ 30 ಕೋಟಿಗೂ ಹೆಚ್ಚು ಗಳಿಕೆ ಕಂಡಿದ್ದು, ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿ ಪ್ರದರ್ಶನ ಕಂಡಿದೆ.