Kannada Serial TRP: ಕನ್ನಡ ಕಿರುತೆರೆಯಲ್ಲಿ ಮುಂದೆವರೆದ ಕರ್ಣನ ಆರ್ಭಟ: ಮತ್ತೊಮ್ಮೆ ನಂಬರ್ 1
ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿಯನ್ನು ಜನರು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಕೆಲ ಸಮಸ್ಯೆಯಿಂದ ಕರ್ಣ ಧಾರಾವಾಹಿ ಪ್ರಸಾರ ತಡವಾಗಿ ಆರಂಭವಾದರೂ ಸತತ ನಾಲ್ಕನೇ ವಾರ ಕೂಡ ತನ್ನ ದಾಖಲೆ ಮುಂದೆವರೆಸಿದೆ.

Karna Serial

ಕನ್ನಡ ಕಿರುತೆರೆಯಲ್ಲಿ ಸೀರಿಯಲ್ಗಳ (Kannada Serial) ಲೆಕ್ಕಾಚಾರ ವಾರದಿಂದ ವಾರಕ್ಕೆ ಬದಲಾಗುತ್ತ ಇರುತ್ತದೆ. ಪ್ರತಿವಾರ ನಿರ್ದೇಶಕರು ಜನರನ್ನು ಸೆಳೆಯಲು ಒಂದಲ್ಲ ಒಂದು ಟ್ವಿಸ್ಟ್ ಕೊಡುತ್ತಾ ಇರುತ್ತಾರೆ. ಯಾವ ಧಾರಾವಾಹಿ ಹಿಟ್ ಆಯಿತು-ಫ್ಲಾಫ್ ಆಯಿತು ಎಂಬುದು ಪ್ರತಿ ವಾರದ ಟಿಆರ್‌ಪಿ ಮೂಲಕ ತಿಳಿಯಲಿದೆ. ಇದೀಗ 29ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಈ ವಾರದ ವಿಶೇಷ ಎಂದರೆ, ಝೀ ಕನ್ನಡದಲ್ಲಿ ಇತ್ತೀಚೆಗಷ್ಟೆ ಪ್ರಾರಂಭವಾದ ಕರ್ಣ ಧಾರಾವಾಹಿ ಕಿರುತೆರೆ ಲೋಕದಲ್ಲಿ ಸತತ ನಾಲ್ಕನೇ ವಾರವೂ ನಂಬರ್ ಒನ್ ಆಗಿ ಕಿರುತೆರೆ ಲೋಕದಲ್ಲಿ ಇತಿಹಾಸ ನಿರ್ಮಿಸಿದೆ.
ತನ್ನ ಪ್ರೊಮೋ ಮೂಲಕ ದೊಡ್ಡ ಹೈಪ್ ಕ್ರಿಯೆಟ್ ಮಾಡಿದ್ದ ಕರ್ಣ ಧಾರಾವಾಹಿಯನ್ನು ಜನರು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಕೆಲ ಸಮಸ್ಯೆಯಿಂದ ಕರ್ಣ ಧಾರಾವಾಹಿ ಪ್ರಸಾರ ತಡವಾಗಿ ಆರಂಭವಾದರೂ ಸತತ ನಾಲ್ಕನೇ ವಾರ ಕೂಡ ತನ್ನ ದಾಖಲೆ ಮುಂದೆವರೆಸಿದೆ.
ಮೊದಲ ವಾರ ಕರ್ಣ ಧಾರಾವಾಹಿಗೆ ಅರ್ಬನ್ + ರೂರಲ್‌ನಲ್ಲಿ 10.2 ಟಿವಿಆರ್, ಎರಡನೇ ವಾರ 10.4 ಟಿವಿಆರ್, ಮೂರನೇ ವಾರ 10.2 ಟಿವಿಆರ್ ಲಭಿಸಿತ್ತು. ಇದೀಗ ನಾಲ್ಕನೇ ವಾರ ಕೂಡ ಅರ್ಬನ್ + ರೂರಲ್ ಮಾರ್ಕೆಟ್‌ನಲ್ಲಿ 9.6 ಟಿವಿಆರ್ ಪಡೆದು ಕನ್ನಡ ಕಿರುತೆರೆಯ ನಂಬರ್ ಒನ್ ಧಾರಾವಾಹಿ ಪಟ್ಟವನ್ನು ಉಳಿಸಿಕೊಂಡಿದೆ. ಆದರೆ, ಮೊದಲ ಮೂರು ವಾರಗಳಿಗೆ ಹೋಲಿಸಿದರೆ ನಾಲ್ಕನೇ ವಾರ ಕರ್ಣ ಧಾರಾವಾಹಿಯ ಟಿವಿಆರ್ ಡೌನ್ ಆಗಿದೆ. ಯಾಕೆಂದರೆ ಮೊದಲ ಮೂರು ವಾರ ಕರ್ಣನಿಗೆ ಡಬಲ್ ಡಿಜಿಟ್ ಸಿಕ್ಕಿತು.. ಆದರೆ ಈ ಬಾರಿ ಸಿಂಗಲ್ ಡಿಜಿಟ್ಗೆ ಇಳಿದಿದ್ದಾನೆ.. ಹೀಗಿದ್ದರೂ ನಂಬರ್ ಒನ್ ಪಟ್ಟ ಕಾಪಾಡಿಕೊಂಡಿದ್ದಾನೆ.
Shobha Shetty: ಅತಿ ಹೆಚ್ಚು ಸಂಭಾವನೆ: ಬಿಗ್ ಬಾಸ್ನಿಂದ ಶೋಭಾ ಶೆಟ್ಟಿಗೆ ಎಷ್ಟು ಹಣ ಸಿಕ್ಕಿತು ಗೊತ್ತೇ?
ಕಿರಣ್ ರಾಜ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಈ ಧಾರಾವಾಹಿಯಲ್ಲಿ ಭವ್ಯಾ ಗೌಡ ಹಾಗೂ ನಮ್ರತಾ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಕರ್ಣ ತ್ರಿಕೋನ ಪ್ರೇಮಕಥೆಯ ಧಾರಾವಾಹಿ ಆಗಿದೆ. ಶ್ರುತಿ ನಾಯ್ಡು ಅವರ ನಿರ್ಮಾಣ ಸಂಸ್ಥೆಯಲ್ಲಿ ಮೂಡಿ ಬರ್ತಿರುವ ಕರ್ಣ ಧಾರಾವಾಹಿಯಲ್ಲಿ ಈಗಾಗಲೇ ದೊಡ್ಡ ತಾರೆಯರ ದಂಡೇ ಇದೆ. ನಾಗಾಭರಣ, ಹಿರಿಯ ನಟಿ ಆಶಾ ರಾಣಿ, ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ನಟಿಸಿದ್ದ ವರಲಕ್ಷ್ಮೀ ಶ್ರೀನಿವಾಸ್ ಮತ್ತು ಶ್ಯಾಮ್ ಸಿಮ್ರನ್ ನಟಿಸುತ್ತಿದ್ದಾರೆ.