Naxal Encounter: ಭದ್ರತಾಪಡೆಗಳ ಬೇಟೆ ; 35 ಲಕ್ಷ ರೂ. ಇನಾಮು ಹೊಂದಿದ್ದ ನಕ್ಸಲರ ಎನ್‌ಕೌಂಟರ್
ಛತ್ತೀಸ್‌ಗಢದಲ್ಲಿ (Chattisghar) ಭದ್ರತಾಪಡೆಗಳು ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿವೆ. ಬುಧವಾರ ಇಬ್ಬರು ಹಿರಿಯ ಮಾವೋವಾದಿ ಕಮಾಂಡರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಮನ್ಪುರ್-ಮೊಹ್ಲಾ-ಅಂಬಾಘರ್ ಚೌಕಿ ಜಿಲ್ಲೆಯ ಮದನ್‌ವಾಡಾದ ದಟ್ಟ ಕಾಡುಗಳಲ್ಲಿ ಈ ಎನ್‌ಕೌಂಟರ್ ನಡೆದಿದೆ.


ರಾಯ್ಪುರ್: ಛತ್ತೀಸ್‌ಗಢದಲ್ಲಿ ಭದ್ರತಾಪಡೆಗಳು ಮಾವೋವಾದಿಗಳ (Naxal Encounter) ವಿರುದ್ಧ ಕಾರ್ಯಾಚರಣೆ ನಡೆಸಿವೆ. ಬುಧವಾರ ಇಬ್ಬರು ಹಿರಿಯ ಮಾವೋವಾದಿ ಕಮಾಂಡರ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಮನ್ಪುರ್-ಮೊಹ್ಲಾ-ಅಂಬಾಘರ್ ಚೌಕಿ ಜಿಲ್ಲೆಯ ಮದನ್‌ವಾಡಾದ ದಟ್ಟ ಕಾಡುಗಳಲ್ಲಿ ಈ ಎನ್‌ಕೌಂಟರ್ ನಡೆದಿದೆ. ಹತ್ಯೆಗೀಡಾದ ನಕ್ಸಲರನ್ನು ದಂಡಕಾರಣ್ಯ ವಿಶೇಷ ವಲಯ ಸಮಿತಿ (DKSZCM) ಸದಸ್ಯ ವಿಜಯ್ ರೆಡ್ಡಿ ಮತ್ತು ವಿಭಾಗೀಯ ಸಮಿತಿ ಸದಸ್ಯ (DVCM) ಲೋಕೇಶ್ ಸಲಾಮೆ ಎಂದು ಗುರುತಿಸಲಾಗಿದೆ. ರೆಡ್ಡಿ ತಲೆಗೆ 25 ಲಕ್ಷ ರೂಪಾಯಿ ಬಹುಮಾನವಿದ್ದರೆ, ಸಲಾಮೆಗೆ 10 ಲಕ್ಷ ರೂಪಾಯಿ ಬಹುಮಾನವಿತ್ತು.
ಆಂಧ್ರಪ್ರದೇಶದ ರೆಡ್ಡಿ, ರಾಜನಂದಗಾಂವ್-ಕಾಂಕೇರ್ ಗಡಿ (RKB) ವಿಭಾಗದಲ್ಲಿ ಹತ್ತು ವರ್ಷಗಳಿಗೂ ಹೆಚ್ಚು ಕಾಲ ಇವರು ಸಕ್ರಿರಾಗಿದ್ದರು. ಸಲಾಮೆ ಈ ಹಿಂದೆ ಶರಣಾಗಿದ್ದರೂ ಕೂಡ ಕೋಟ್ರಿ ಪ್ರದೇಶ ಸಮಿತಿಗೆ ರಹಸ್ಯವಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಜಿಲ್ಲಾ ಮೀಸಲು ಪಡೆ (DRG) ಮತ್ತು ಇಂಡೋ-ಟಿಬೆಟಿಯನ್ ಗಡಿ ಪೊಲೀಸ್ (ITBP) ನ 27 ನೇ ಬೆಟಾಲಿಯನ್ ಜಂಟಿ ಸಹಯೋಗದೊಂದಿಗೆ ಈ ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸಲಾಯಿತು. ಬಂದಪಹಾಡ್ ಪ್ರದೇಶದಲ್ಲಿ ಮಾವೋವಾದಿಗಳು ಇರುವ ಮಾಹಿತಿಯ ಮೇರೆಗೆ ಈ ಕಾರ್ಯಾಚರಣೆ ನಡೆಸಲಾಗಿದೆ. ಭಾರೀ ಮಳೆಯಿದ್ದರೂ ಕಾರ್ಯಾಚರಣೆ ನಡೆಸಲಾಗಿದೆ. ಈ ವರ್ಷ ಛತ್ತೀಸ್‌ಗಢದಲ್ಲಿ 229 ನಕ್ಸಲರನ್ನು ಎನ್‌ಕೌಂಟರ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: Naxal Encounter: ಛತ್ತೀಸ್‌ಗಢದ ನಾರಾಯಣಪುರದಲ್ಲಿ 6 ನಕ್ಸಲರ ಎನ್‌ಕೌಂಟರ್; ಮುಂದುವರಿದ ಕಾರ್ಯಾಚರಣೆ
ಜುಲೈ 18 ರಂದು ಛತ್ತೀಸ್‌ಗಢದ ನಾರಾಯಣಪುರ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ 6 ನಕ್ಸಲರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿದ್ದವು. ಅಬುಜ್ಮದ್ ಪ್ರದೇಶದ ಕಾಡಿನಲ್ಲಿ ಈ ಎನ್‌ಕೌಂಟರ್ ನಡೆದಿತ್ತು. ಮಾವೋವಾದಿ ಪೀಡಿತ ಪ್ರದೇಶಗಳಲ್ಲಿ ನಕ್ಸಲರನ್ನು ನಿಗ್ರಹಿಸುವ ಪ್ರಯತ್ನದಲ್ಲಿ ಭದ್ರತಾ ಪಡೆಗಳು ಬಹು ಕಾರ್ಯಾಚರಣೆಗಳನ್ನು ಪ್ರಾರಂಭಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೆಲವು ದಿನಗಳ ಹಿಂದೆ 2026ರ ಮಾರ್ಚ್ 31ರೊಳಗೆ ಭಾರತ ದೇಶವನ್ನು ನಕ್ಸಲಿಸಂನಿಂದ ಮುಕ್ತಗೊಳಿಸುವುದಾಗಿ ಭರವಸೆ ನೀಡಿದ್ದರು. ನಕ್ಸಲಿಸಂ ಅನ್ನು ಕೊನೆಗೊಳಿಸುವ ತಮ್ಮ ಸರ್ಕಾರದ ಬದ್ಧತೆಯನ್ನು ಪ್ರಧಾನಿ ಮೋದಿ ಕೂಡ ಪುನರುಚ್ಚರಿಸಿದ್ದಾರೆ.