ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vece Paes: ಒಲಿಂಪಿಕ್ ಕಂಚಿನ ಪದಕ ವಿಜೇತ, ಲಿಯಾಂಡರ್ ಪೇಸ್ ತಂದೆ ವೆಸ್ ಪೇಸ್ ನಿಧನ

ಡಾ. ವೆಸ್ ಪೇಸ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿಯಲ್ಲಿ ಮಿಡ್ ಫೀಲ್ಡರ್ ಆಗಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಡಾ.ವೆಸ್ ಪೇಸ್ ಭಾರತೀಯ ಹಾಕಿ ತಂಡದಲ್ಲಿ ಮಿಡ್‌ಫೀಲ್ಡರ್‌ ಆಗಿದ್ದರು. 1996 ರಿಂದ 2002 ರವರೆಗೆ ಭಾರತೀಯ ರಗ್ಬಿ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಒಲಿಂಪಿಕ್ ಹಾಕಿ ಕಂಚಿನ ಪದಕ ವಿಜೇತ ವೆಸ್ ಪೇಸ್ ನಿಧನ

Abhilash BC Abhilash BC Aug 14, 2025 11:51 AM

ಕೋಲ್ಕತ್ತಾ: ಭಾರತದ ಟೆನಿಸ್ ದಿಗ್ಗಜ ಲಿಯಾಂಡರ್ ಪೇಸ್(Leander Paes) ಅವರ ತಂದೆ, 1972ರ ಮ್ಯೂನಿಚ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ವಿಜೇತ ಭಾರತೀಯ ಹಾಕಿ ತಂಡದ ಸದಸ್ಯ ಡಾ. ವೆಸ್ ಪೇಸ್(Vece Paes) ಗುರುವಾರ(ಆ.14) ನಿಧನರಾದರು. ಅವರಿಗೆ 80 ವರ್ಷ ವಯಸ್ಸಾಗಿತ್ತು. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಪೇಸ್ ಅವರನ್ನು ಮಂಗಳವಾರ ಬೆಳಿಗ್ಗೆ ನಗರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಗುರುವಾರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ವಿದೇಶದಲ್ಲಿ ನೆಲೆಸಿರುವ ಪೇಸ್‌ ಪ್ರತಿಯರ ಆಗಮನಕ್ಕಾಗಿ ಕುಟುಂಬ ಕಾಯುತ್ತಿರುವ ಕಾರಣ ಸೋಮವಾರ ಅಥವಾ ಮಂಗಳವಾರ ಪೇಸ್‌ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದುಬಂದಿದೆ.

ಡಾ. ವೆಸ್ ಪೇಸ್‌ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಕಿಯಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ. ಡಾ.ವೆಸ್ ಪೇಸ್ ಭಾರತೀಯ ಹಾಕಿ ತಂಡದಲ್ಲಿ ಮಿಡ್‌ಫೀಲ್ಡರ್‌ ಆಗಿದ್ದರು. 1996 ರಿಂದ 2002 ರವರೆಗೆ ಭಾರತೀಯ ರಗ್ಬಿ ಫುಟ್ಬಾಲ್ ಒಕ್ಕೂಟದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಡಾ.ವೆಸ್ ಪೇಸ್ ಅವರು ಏಷ್ಯನ್ ಕ್ರಿಕೆಟ್ ಕೌನ್ಸಿಲ್, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಭಾರತೀಯ ಡೇವಿಸ್ ಕಪ್ ತಂಡಗಳಲ್ಲಿ ಹಲವಾರು ಕ್ರೀಡಾ ಸಂಸ್ಥೆಗಳೊಂದಿಗೆ ವೈದ್ಯಕೀಯ ಸಲಹೆಗಾರರಾಗಿ ಕೆಲಸ ಮಾಡಿದ್ದರು. ಅವರ ನಿಧನಕ್ಕೆ ಹಾಕಿ ಇಂಡಿಯಾ, ಬಿಸಿಸಿಐ ಸೇರಿ ಹಲವು ಭಾರತೀಯ ಕ್ರೀಡಾ ಮಂಡಳಿಗಳು ಸಂತಾಪ ಸೂಚಿಸಿದೆ.



"ಇದು ನಮಗೆ ದುಃಖದ ದಿನ. ಡಾ. ಪೇಸ್ ಅವರ ನಿಧನವು ಹಾಕಿಯ ಮಹಾನ್ ಯುಗಕ್ಕೆ ತೆರೆ ಎಳೆಯುತ್ತದೆ. ಮ್ಯೂನಿಚ್‌ನಲ್ಲಿನ ಒಲಿಂಪಿಕ್ ಪದಕವು ಅವರ ಧೈರ್ಯ ಮತ್ತು ದೃಢಸಂಕಲ್ಪಕ್ಕೆ ಸಾಕ್ಷಿಯಾಗಿದೆ. ಅವರನ್ನು ಕೆಲವು ಬಾರಿ ಭೇಟಿಯಾಗುವ ಅದೃಷ್ಟ ನನಗೆ ಸಿಕ್ಕಿತು ಮತ್ತು ಸಾಮಾನ್ಯವಾಗಿ ಕ್ರೀಡೆಗಳ ಬಗ್ಗೆ ಅವರ ಉತ್ಸಾಹದಿಂದ ನಾನು ಯಾವಾಗಲೂ ಸ್ಫೂರ್ತಿ ಪಡೆದಿದ್ದೇನೆ" ಎಂದು ಹಾಕಿ ಇಂಡಿಯಾ ಅಧ್ಯಕ್ಷ ಮತ್ತು ಭಾರತದ ಮಾಜಿ ನಾಯಕ ದಿಲೀಪ್ ಟಿರ್ಕಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ Santhosh Balaraj: ಜಾಂಡೀಸ್‌ನಿಂದ ಬಳಲುತ್ತಿದ್ದ ಕನ್ನಡ ನಟ ಸಂತೋಷ್‌ ಬಾಲರಾಜ್‌ ನಿಧನ