ಭಾರತೀಯ ಕಾಲೇಜುಗಳಲ್ಲಿ ಉಚಿತ AI ಪ್ರಮಾಣೀಕರಣಗಳನ್ನು ನೀಡಲು AI CERTs® ‘ಮಿಷನ್ AI-ಸಕ್ಷಮ್’ ಎಂಬ ಉಪಕ್ರಮ ಪ್ರಾರಂಭ
ಭಾರತದಲ್ಲಿ ಯುವಜನರ ಸಂಖ್ಯೆಯು ದೊಡ್ಡದಾಗಿದ್ದು, ವಿಸ್ತಾರವಾದ ಶಿಕ್ಷಣ ಜಾಲವಿದ್ದರೂ, AI ವೃತ್ತಿಜೀವನಕ್ಕೆ ಹೊಂದಿಕೊಳ್ಳುವುದಕ್ಕೆ ವಿದ್ಯಾರ್ಥಿಗಳ ಸಿದ್ಧತೆ ತೀರಾ ಕಡಿಮೆ ಇದೆ. ಉದ್ಯಮದ ಅಂದಾ ಜಿನ ಪ್ರಕಾರ, ಭಾರತದ AI ವಲಯವು 2027 ರ ವೇಳೆಗೆ 2.3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಆದರೆ ಕೇವಲ 1.2 ಮಿಲಿಯನ್ ಅರ್ಹ ವೃತ್ತಿಪರರು ಮಾತ್ರ ಲಭ್ಯವಿರು ತ್ತಾರೆ ಎಂದು ನಿರೀಕ್ಷಿಸಲಾಗಿದೆ.


ಮಾರಾಟಗಾರರೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಮತ್ತು ಪಾತ್ರ-ಕೇಂದ್ರಿತ ವಾಗಿರುವ AI (ಕೃತಕ ಬುದ್ಧಿಮತ್ತೆ) ಪ್ರಮಾಣೀಕರಣಗಳ ಪ್ರಮುಖ ಜಾಗತಿಕ ಪೂರೈಕೆದಾರರಾದ AI CERTs®, ಭಾರತದಲ್ಲಿ ಹೆಚ್ಚುತ್ತಿರುವ AI ಕೌಶಲ್ಯದ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಪ್ರಮುಖ ಉಪಕ್ರಮವಾದ ʼಮಿಷನ್ AI-ಸಕ್ಷಮ್ʼ ಅನ್ನು ಪ್ರಾರಂಭಿಸಲು ಹೆಮ್ಮೆ ಪಡುತ್ತದೆ.
ಈ ಉಪಕ್ರಮದ ಅಡಿಯಲ್ಲಿ, AI CERT ಗಳು ಇಂಜಿನಿಯರಿಂಗ್, ಮ್ಯಾನೇಜ್‌ಮೆಂಟ್ (ನಿರ್ವಹಣೆ), ಕಲೆ, ವಾಣಿಜ್ಯ ಮತ್ತು ಇತರ ವಿಭಾಗಗಳನ್ನು ಒಳಗೊಂಡಂತೆ ವಿಶ್ವವಿದ್ಯಾಲಯಗಳು, ಕಾಲೇಜುಗಳು ಮತ್ತು ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದ್ದು, ಅವರ ವಿದ್ಯಾರ್ಥಿಗಳಿಗೆ AI CERT ಯವರ ಉದ್ಯಮಗಳೊಂದಿಗೆ ಹೊಂದಾಣಿಕೆಯಿರುವಂತಹ ಪ್ರಮಾಣೀಕರಣ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.
ಭಾರತದಲ್ಲಿ ಯುವಜನರ ಸಂಖ್ಯೆಯು ದೊಡ್ಡದಾಗಿದ್ದು, ವಿಸ್ತಾರವಾದ ಶಿಕ್ಷಣ ಜಾಲವಿದ್ದರೂ, AI ವೃತ್ತಿಜೀವನಕ್ಕೆ ಹೊಂದಿಕೊಳ್ಳುವುದಕ್ಕೆ ವಿದ್ಯಾರ್ಥಿಗಳ ಸಿದ್ಧತೆ ತೀರಾ ಕಡಿಮೆ ಇದೆ. ಉದ್ಯಮದ ಅಂದಾಜಿನ ಪ್ರಕಾರ, ಭಾರತದ AI ವಲಯವು 2027 ರ ವೇಳೆಗೆ 2.3 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ, ಆದರೆ ಕೇವಲ 1.2 ಮಿಲಿಯನ್ ಅರ್ಹ ವೃತ್ತಿಪರರು ಮಾತ್ರ ಲಭ್ಯವಿರು ತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಇದು ಕೌಶಲ್ಯ ಸುಧಾರಣೆ ಮತ್ತು ಉದ್ದೇಶಿತ ತರಬೇತಿಯ ಮೂಲಕ ತುರ್ತಾಗಿ ಪರಿಹರಿಸ ಬೇಕಾಗಿರುವ ನಿರ್ಣಾಯಕ ಕೌಶಲ್ಯದ ಕೊರತೆಯನ್ನು ಎತ್ತಿ ತೋರಿಸುತ್ತದೆ. AI CERT ಗಳ ‘ಮಿಷನ್ AI-ಸಕ್ಷಮ್’ ಎಂಬುದು ಈ ಸವಾಲಿಗೆ ನೇರ ಪ್ರತಿಕ್ರಿಯೆಯಾಗಿದ್ದು, ಪ್ರವೇಶಿಸಬಹುದಾದ, ಉದ್ಯಮ-ಹೊಂದಾಣಿಕೆಯಾಗಿರುವ ಮತ್ತು ಭವಿಷ್ಯ-ಕೇಂದ್ರಿತ AI ಶಿಕ್ಷಣದೊಂದಿಗೆ ಇದನ್ನು ಅಂತರವನ್ನು ಕಡಿಮೆ ಮಾಡುವುದಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಈ ಉಪಕ್ರಮದ ಬಗ್ಗೆ ಮಾತನಾಡಿದ AI CERT ಗಳ ಪ್ರಧಾನ ವ್ಯವಸ್ಥಾಪಕರಾದ ಚಿಂತನ್ ಡೇವ್ ಅವರು, “ಕೃತಕ ಬುದ್ಧಿಮತ್ತೆಯು ಜಾಗತಿಕ ಕೈಗಾರಿಕೆಗಳನ್ನು ಮರುರೂಪಿಸುತ್ತಿದ್ದಂತೆ, ಶೈಕ್ಷಣಿಕ ಪಠ್ಯಕ್ರಮ ಮತ್ತು ನೈಜ-ಪ್ರಪಂಚದಲ್ಲಿನ ಉದ್ಯೋಗದ ಅವಶ್ಯಕತೆಗಳ ನಡುವಿನ ಅಸಾಮರಸ್ಯವು ಹಿಂದೆಂದೂ ಸ್ಪಷ್ಟವಾಗಿಲ್ಲ.
ಈ ಸವಾಲಿಗೆ ನಮ್ಮ ʼಮಿಷನ್ AI-ಸಕ್ಷಮ್ʼ ಒಂದು ಪ್ರತಿಕ್ರಿಯೆಯಾಗಿದೆ. ಚುರುಕಾಗಿರುವ, ಎಲ್ಲವನ್ನೂ ಒಳಗೊಂಡಿರುವ ಮತ್ತು ನಾಳೆಯ ಬೇಡಿಕೆಗಳಿಗೆ ಅನುಗುಣವಾಗಿರುವಂತಹ ಕಲಿಕಾ ಪರಿಸರ ವ್ಯವಸ್ಥೆಯನ್ನು ಸಹ-ರಚಿಸಲು ಸಂಸ್ಥೆಗಳು ಮತ್ತು ವಿದ್ಯಾರ್ಥಿಗಳಿಗೆ ಇದು ಆಹ್ವಾನ ವಾಗಿದೆ” ಎಂದು ಹೇಳಿದರು.
ಕಾರ್ಯಾಗಾರಗಳು, ಸಂಯೋಜಿತ AI ಮಾಡ್ಯೂಲ್‌ಗಳು ಮತ್ತು ಸಮುದಾಯ-ನಿರ್ಮಾಣ ಕಾರ್ಯಕ್ರಮಗಳ ಮೂಲಕ, AI CERT ಗಳು ಡಿಜಿಟಲ್ ರೂಪಾಂತರಕ್ಕೆ ವೇಗವರ್ಧಕಗಳಾಗುವಲ್ಲಿ ಸಂಸ್ಥೆಗಳನ್ನು ಸಕ್ರಿಯವಾಗಿ ಬೆಂಬಲಿಸುತ್ತಿವೆ. ಈ ಆಂದೋಲನದ ಹೃದಯ ಭಾಗದಲ್ಲಿ ಒಂದು ದಿಟ್ಟ ದೃಷ್ಟಿಕೋನವಿದೆ: AI ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ವಿಶ್ವಾದ್ಯಂತ ಒಂದು ಶತಕೋಟಿಯಷ್ಟು ಕಲಿಯುವವರನ್ನು ಪ್ರಮಾಣೀಕರಿಸುವುದು.
‘ಮಿಷನ್ AI-ಸಕ್ಷಮ್’ ನೊಂದಿಗೆ, ಆ ದೃಷ್ಟಿಕೋನವು ಭಾರತದಲ್ಲಿ ಬೇರೂರುತ್ತದೆ, ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುತ್ತದೆ, ಸಂಸ್ಥೆಗಳಿಗೆ ಶಕ್ತಿಯನ್ನು ತುಂಬುತ್ತದೆ ಮತ್ತು ರಾಷ್ಟ್ರದ AI ಮಹತ್ವಾಕಾಂಕ್ಷೆಯನ್ನು ಬೆಳಗಿಸುತ್ತದೆ. AI CERTs® ಬಗ್ಗೆ: AI CERTs® ಎಂಬುದು ಕೃತಕ ಬುದ್ಧಿಮತ್ತೆ ಮತ್ತು ಬ್ಲಾಕ್‌ಚೈನ್ ತಂತ್ರಜ್ಞಾನಗಳಲ್ಲಿ ಪಾತ್ರ-ಆಧಾರಿತ ರುಜುವಾತುಗಳಲ್ಲಿ ಜಾಗತಿಕವಾಗಿ ಗುರುತಿಸಲ್ಪಟ್ಟ ಪ್ರಮಾಣೀಕರಣ ಸಂಸ್ಥೆಯಾಗಿದೆ. ISO 17024:2012 ಮಾನದಂಡ ಗಳಿಗೆ ಅನುಗುಣವಾಗಿ, ಇದರ ಕಾರ್ಯಕ್ರಮಗಳು ಗುಣಮಟ್ಟ ಮತ್ತು ವಿಶ್ವಾಸಾರ್ಹತೆಗೆ ಜಾಗತಿಕ ಮಾನದಂಡವನ್ನು ನಿಗದಿಪಡಿಸುವುದರ ಜೊತೆಗೆ ನೇರ ಭಾಗವಹಿಸುವಿಕೆ ಮತ್ತು ನೈಜ-ಪ್ರಪಂಚದ ಅಪ್ಲಿಕೇಶನ್ ಮೂಲಕ ಪ್ರಾಯೋಗಿಕ ಹಾಗೂ ಉದ್ಯೋಗ-ಸಿದ್ಧ ಕೌಶಲ್ಯಗಳೊಂದಿಗೆ ವೃತ್ತಿಪರರನ್ನು ಸಬಲೀಕರಣಗೊಳಿಸುತ್ತವೆ.
ಡೆವಲಪರ್‌ಗಳು ಮತ್ತು ಡೇಟಾ ವಿಶ್ಲೇಷಕರಿಂದ ಹಿಡಿದು ವ್ಯಾಪಾರ ಮುಖಂಡರು ಮತ್ತು ಮುಂಚೂಣಿ ತಂಡಗಳವರೆಗೆ ವ್ಯಾಪಕ ಶ್ರೇಣಿಯ ಪಾತ್ರಗಳನ್ನು AI CERTs® ನಿರ್ವಹಿಸುತ್ತಿದ್ದು, ತನ್ನ ನಿರಂತರವಾಗಿ ವಿಸ್ತರಿಸಲ್ಪಡುತ್ತಿರುವ ಪೋರ್ಟ್‌ಫೋಲಿಯೊದೊಂದಿಗೆ ಜಾಗತಿಕ ತಾಂತ್ರಿಕ ಕೌಶಲ್ಯಗಳ ಅಂತರವನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 50 ಸ್ಥಾಪಿತ ಪಾತ್ರ-ಆಧಾರಿತ ಪ್ರಮಾಣೀಕರಣಗಳು ಮತ್ತು 50+ ಕ್ಕೂ ಅಧಿಕ ಹೊಸ ಪ್ರಮಾಣೀಕರಣಗಳೊಂದಿಗೆ, ಸಂಸ್ಥೆಯು ಉದಯೋನ್ಮುಖ ತಂತ್ರಜ್ಞಾನ ಶಿಕ್ಷಣದ ಮುಂಚೂಣಿಯಲ್ಲಿ ದೃಢವಾದ ಸ್ಥಾನದಲ್ಲಿದೆ.