Actor Darshan: ದರ್ಶನ್ ಜಾಮೀನು ರದ್ದು ಬೆನ್ನಲ್ಲೇ ಗಮನ ಸೆಳೆದ ರಮ್ಯಾ ಪೋಸ್ಟ್
Renuka swamy murder case: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಇದರ ಬೆನ್ನಲ್ಲೇ ನಟಿ ರಮ್ಯಾ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದು, ಭಾರೀ ಗಮನ ಸೆಳೆಯುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ರಮ್ಯಾ ಹಾಗೂ ಡಿಬಾಸ್ ಫ್ಯಾನ್ಸ್ ವಾರ್ ಬಹಳ ಸದ್ದು ಮಾಡಿತ್ತು.
 
                                -
 Rakshita Karkera
                            
                                Aug 14, 2025 11:51 AM
                                
                                Rakshita Karkera
                            
                                Aug 14, 2025 11:51 AM
                            ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renuka swamy murder case) ಪ್ರಕರಣದಲ್ಲಿ ನಟ ದರ್ಶನ್‌ಗೆ (Actor Darshan) ಮತ್ತು ಪವಿತ್ರಾ ಗೌಡ ಸೇರಿದಂತೆ ಒಟ್ಟು ಏಳು ಆರೋಪಿಗಳ ಜಾಮೀನು ರದ್ದುಗೊಂಡಿದೆ. ಬೇಲ್ ರದ್ದುಗೊಳಿಸಿ ಇಂದು ಮಹತ್ವದ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ತಕ್ಷಣ ಎಲ್ಲಾ ಆರೋಪಿಗಳನ್ನು ಬಂಧಿಸುವಂತೆ ಸೂಚನೆ ನೀಡಿದೆ. ಆ ಮೂಲಕ ದರ್ಶನ್ ಬೇಲ್ ರದ್ದುಗೊಳಿಸಲು ಕಾನೂನು ಸಮರ ನಡೆಸಿದ್ದ ರಾಜ್ಯ ಸರ್ಕಾರಕ್ಕೆ ದೊಡ್ಡ ಗೆಲುವು ಸಿಕ್ಕಂತಾಗಿದೆ. ಇನ್ನು ದರ್ಶನ್ ಬೇಲ್ ರದ್ದಾಗುತ್ತಿದ್ದಂತೆ ನಟಿ ರಮ್ಯಾ ಪೋಸ್ಟ್‌ವೊಂದನ್ನು ಮಾಡಿದ್ದು, ಭಾರೀ ಗಮನ ಸೆಳೆಯುತ್ತಿದೆ.
ಕೆಲವು ದಿನಗಳ ಹಿಂದೆ ನಟಿ ರಮ್ಯಾಗೆ ಡಿ ಬಾಸ್ ಫ್ಯಾನ್ಸ್ ಅಶ್ಲೀಲ ಮೆಸೇಜ್ ಮಾಡಿ ಭಾರೀ ವಿವಾ ಸೃಷ್ಟಿಯಾಗಿತ್ತು. ಇದೇ ವಿಚಾರವಾಗಿ ರಮ್ಯಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಬಳಿಕ ಐದು ಜನರನ್ನೂ ಅರೆಸ್ಟ್ ಮಾಡಲಾಗಿತ್ತು. ಅಲ್ಲದೇ ದರ್ಶನ್ ತಮ್ಮ ಫ್ಯಾನ್ಸ್‌ಗೆ ಬುದ್ದಿ ಹೇಳಬೇಕೆಂದೂ ರಮ್ಯಾ ಬಹಿರಂಗವಾಗಿಯೇ ವಾಗ್ದಾಳಿ ನಡೆಸಿದ್ದರು. ಇದೀಗ ದರ್ಶನ್ ಜಾಮೀನು ರದ್ದಾಗುತ್ತಿದ್ದಂತೆ ರಮ್ಯಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದನ್ನು ಮಾಡಿದ್ದಾರೆ. ಆ ಮೂಲಕ ದರ್ಶನ್ ಆಂಡ್ ಟೀಮ್‌ಗೆ ಟಾಂಗ್ ಕೊಟ್ಟಿದ್ದಾರೆ.

ಈ ಸುದ್ದಿಯನ್ನೂ ಓದಿ: Actor Darshan: ನಟ ದರ್ಶನ್ ಬೇಲ್ ಕ್ಯಾನ್ಸಲ್; ದಾಸನಿಗೆ ಜೈಲೇ ಗತಿ! ಸುಪ್ರೀಂನಿಂದ ಮಹತ್ವದ ತೀರ್ಪು
ರಮ್ಯಾ ಪೋಸ್ಟ್‌ನಲ್ಲಿ ಏನಿದೆ?
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಮತ್ತು ಇತರೆ ಆರೋಪಿಗಳ ಜಾಮೀನು ರದ್ದುಗೊಂಡಿದೆ. ಇದು ಕಾನೂನಿನ ಮುಂದೆ ಎಲ್ಲರೂ ಸಮಾನ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸುತ್ತದೆ. ನಮ್ಮ ಕರ್ತವ್ಯವನ್ನು ನಾವು ಮಾಡೋಣ. ಕಾನೂನಿನ ಮೇಲೆ ನಂಬಿಕೆ ಇಡೋಣ. ಹಾದಿ ಕಷ್ಟ ಇರಬಹುದು. ಆದರೆ ಕೊನೆಯಲ್ಲಿ ಬರವಸೆಯ ಬೆಳಕು ಇದ್ದೇ ಇದೆ. ಕಾನೂನನ್ನು ಎಂದೂ ಕೈಗೆ ತಗೋಬೇಡಿ. ನ್ಯಾಯ ಎಲ್ಲರಿಗೂ ಸಿಕ್ಕೇ ಸಿಗುತ್ತದೆ ಎಂದು ಬರೆದುಕೊಂಡಿದ್ದಾರೆ.
 
            