ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ; ವಿಶ್ವವಿದ್ಯಾಲಯ ಧ್ವಂಸಗೊಳಿಸಿದ ಉದ್ರಿಕ್ತ ವಿದ್ಯಾರ್ಥಿಗಳು

Students Vandalise University: ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಫಾಗ್ವಾರಾದ ಕ್ಯಾಂಪಸ್‌ನಾದ್ಯಂತ ವದಂತಿಗಳು ಹರಡಿದ ನಂತರ ಸುಮಾರು 2,000 ವಿದ್ಯಾರ್ಥಿಗಳು ಹುಡುಗಿಯರ ಹಾಸ್ಟೆಲ್ ಬಳಿ ಜಮಾಯಿಸಿದರು. ಹೆದ್ದಾರಿಯನ್ನು ತಡೆದ ವಿದ್ಯಾರ್ಥಿಗಳು ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟಿಸಿದರು. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದ ಕಟ್ಟಡಗಳ ಭಾಗಗಳಿಗೆ ಬೆಂಕಿ ಹಚ್ಚಿದರು.

ವಿಶ್ವವಿದ್ಯಾಲಯ ಧ್ವಂಸಗೊಳಿಸಿದ ಉದ್ರಿಕ್ತ ವಿದ್ಯಾರ್ಥಿಗಳು

ವಿವಿ ಧ್ವಂಸಗೊಳಿಸಿದ ವಿದ್ಯಾರ್ಥಿಗಳು -

Priyanka P
Priyanka P Sep 27, 2026 2:54 PM

ಚಂಡೀಗಢ, ಸೆ.27: ಶನಿವಾರ (ಸೆ.26) ತಡರಾತ್ರಿ ಪಂಜಾಬ್‌ (Punjab)ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿ (LPU)ಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು. ವಿದ್ಯಾರ್ಥಿನಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಅಥವಾ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ಹರಡಿದ ನಂತರ ಕೆಲವು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಸ್ತಿಯನ್ನು ಧ್ವಂಸಗೊಳಿಸಿದರು. ಉದ್ರಿಕ್ತಗೊಂಡ ವಿದ್ಯಾರ್ಥಿಗಳ ಗುಂಪು, ಕಟ್ಟಡಗಳ ಕೆಲವು ಭಾಗಗಳಿಗೆ ಬೆಂಕಿ ಹಚ್ಚಿದರು. ಆದರೆ, (students protest) ವಿಶ್ವವಿದ್ಯಾಲಯವು ಈ ಆರೋಪಗಳನ್ನು ತಳ್ಳಿಹಾಕಿದ್ದು, ಇದೊಂದು ಸುಳ್ಳು, ಆಧಾರರಹಿತ ಮತ್ತು ಕಟ್ಟುಕಥೆ ಎಂದು ಹೇಳಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ ಮತ್ತು ಫಾಗ್ವಾರಾದ ಕ್ಯಾಂಪಸ್‌ನಾದ್ಯಂತ ವದಂತಿಗಳು ಹರಡಿದ ನಂತರ ಸುಮಾರು 2,000 ವಿದ್ಯಾರ್ಥಿಗಳು ಹುಡುಗಿಯರ ಹಾಸ್ಟೆಲ್ ಬಳಿ ಜಮಾಯಿಸಿದರು. ಹೆದ್ದಾರಿಯನ್ನು ತಡೆದ ವಿದ್ಯಾರ್ಥಿಗಳು ಸಂಚಾರ ಸ್ಥಗಿತಗೊಳಿಸಿ, ಪ್ರತಿಭಟಿಸಿದರು. ಅಷ್ಟೇ ಅಲ್ಲದೆ, ವಿಶ್ವವಿದ್ಯಾಲಯದೊಳಗೆ ಗಲಭೆ ನಡೆಸಿದರು. ಕಿಟಕಿ ಗಾಜುಗಳನ್ನು ಒಡೆದು, ಇಟ್ಟಿಗೆಗಳು ಮತ್ತು ಹೂವಿನ ಕುಂಡಗಳನ್ನು ಎಸೆದು, ವಿಶ್ವವಿದ್ಯಾಲಯದ ಕಟ್ಟಡಗಳ ಭಾಗಗಳಿಗೆ ಬೆಂಕಿ ಹಚ್ಚಿದರು.

ಪೊಲೀಸರ ಪ್ರಕಾರ, ನಾಲ್ಕು ಅಥವಾ ಐದು ದಿನಗಳ ಹಿಂದೆ ಕ್ಯಾಂಪಸ್‌ನ ಕೃಷಿ ವಿಭಾಗದ ಸಮೀಪ ಯುವತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆ ಘಟನೆಯ ವಿಡಿಯೋ ಕೂಡ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಆದರೆ, ವಿದ್ಯಾರ್ಥಿಗಳ ನಡುವೆ ಹರಿದಾಡುತ್ತಿದ್ದ ಅತ್ಯಾಚಾರದ ಆರೋಪಕ್ಕೂ, ಆ ವಿದ್ಯಾರ್ಥಿನಿಯ ಆಕೆಯ ಸಾವಿಗೆ ಸಂಬಂಧ ಕಲ್ಪಿಸುವ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದರು.

ವಿದ್ಯಾರ್ಥಿಗಳು ನೀಡಿದ ಗಿಫ್ಟ್‌ ನೋಡಿ ಭಾವುಕರಾದ ಕಾಲೇಜಿನ ವಾಚ್‌ಮೆನ್‌ ; ವಿಡಿಯೋ ನೋಡಿ

ಪೊಲೀಸರು ಸ್ಥಳಕ್ಕೆ ತಲುಪಿ ಹೆದ್ದಾರಿಯನ್ನು ತೆರವುಗೊಳಿಸಿದರು. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ವಿದ್ಯಾರ್ಥಿಗಳು ಮತ್ತು ವಿಶ್ವವಿದ್ಯಾಲಯ ಆಡಳಿತದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಕಪುರ್ತಲ ಗೌರವ್ ಟೂರಾ ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆತ್ಮಹತ್ಯೆ ವಿಡಿಯೊ ಆಗಸ್ಟ್ 11 ರದ್ದು ಎಂದು ಎಸ್‌ಎಸ್‌ಪಿ ಟೂರಾ ಹೇಳಿದ್ದಾರೆ. ಆ ಸಂಬಂಧ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು. ಹೇಳಿಕೆಗಳ ಆಧಾರದ ಮೇಲೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಸ್‌ಪಿ ತಿಳಿಸಿದ್ದಾರೆ. ಆಪಾದಿತ ಘಟನೆಯ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಲಾಗಿದೆ.

ಕ್ಯಾಂಪಸ್‌ನ ಕೃಷಿ ಇಲಾಖೆಯ ಸುತ್ತಮುತ್ತ ನಾಲ್ಕೈದು ದಿನಗಳ ಹಿಂದೆ ಒಬ್ಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಆ ಸಾವಿಗೆ ಈಗ ವಿದ್ಯಾರ್ಥಿಗಳಲ್ಲಿ ಹರಡುತ್ತಿರುವ ಅತ್ಯಾಚಾರ ಆರೋಪಗಳಿಗೆ ಸಂಬಂಧ ಕಲ್ಪಿಸುವ ಯಾವುದೇ ದೂರು ಬಂದಿಲ್ಲ ಎಂದು ಹೇಳಿದರು.

ಕೆಲವು ವಿದ್ಯಾರ್ಥಿಗಳು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾಳೆಂದು ಹೇಳಿದರೆ, ಕೆಲವರು ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ನಡೆದಿದೆ ಎಂದು ಹೇಳಿದ್ದಾರೆ. ಕೆಲವು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ಘಟನೆಯಲ್ಲಿ ಒಬ್ಬ ಕಾರ್ಮಿಕ ಭಾಗಿಯಾಗಿದ್ದಾನೆ ಎಂದು ಆರೋಪಿಸಿದ್ದವು. ಆದರೆ, ಪೊಲೀಸರು ಈ ಆರೋಪವನ್ನು ದೃಢಪಡಿಸಿಲ್ಲ.

ಇನ್ನು ವಿವಿಯು ಈ ಆರೋಪಗಳನ್ನು ನಿರಾಕರಿಸಿತು. ಸಮಾಜ ವಿರೋಧಿಗಳು ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಸಲು, ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿಯನ್ನು ಹರಡುತ್ತಿವೆ ಎಂದು ಹೇಳಿದೆ.