ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ: ಕೇಂದ್ರ ಸಚಿವ ಸಂಪುಟದಿಂದ ಮಹತ್ವದ ನಿರ್ಧಾರ
ಅಗ್ನಿಪಥ್ ನೇಮಕಾತಿ ಯೋಜನೆಯಡಿ ದೇಶದ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿರುವ ಅಗ್ನಿವೀರರಿಗೆ ಕೇಂದ್ರ ಸರ್ಕಾರವು ದೀಪಾವಳಿ ಹಬ್ಬಕ್ಕೂ ಮುನ್ನವೇ ಸಿಹಿಸುದ್ದಿ ನೀಡಿದೆ. ಅಗ್ನಿವೀರರ ಸೇವಾ ಅವಧಿಯನ್ನು ಇನ್ನು ಎರಡು ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಅಧಿಕೃತ ಅನುಮೋದನೆ ನೀಡಿದೆ.
ಅಗ್ನಿವೀರರ ಸೇವಾ ಅವಧಿ 2 ವರ್ಷ ವಿಸ್ತರಣೆ -
ನವದೆಹಲಿ: ಅಗ್ನಿಪಥ್ ನೇಮಕಾತಿ ಯೋಜನೆಯಡಿ ದೇಶದ ಸಶಸ್ತ್ರ ಪಡೆಗಳಿಗೆ ಸೇರ್ಪಡೆಗೊಂಡಿರುವ ಅಗ್ನಿವೀರರಿಗೆ (Central Government) ಕೇಂದ್ರ (Agniveer service) ಸರ್ಕಾರವು ದೀಪಾವಳಿ ಹಬ್ಬಕ್ಕೂ ಮುನ್ನವೇ ಸಿಹಿಸುದ್ದಿ ನೀಡಿದೆ. ಅಗ್ನಿವೀರರ ಸೇವಾ ಅವಧಿಯನ್ನು ಇನ್ನು ಎರಡು ವರ್ಷಗಳ ಕಾಲ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಬುಧವಾರ ಅಧಿಕೃತ ಅನುಮೋದನೆ ನೀಡಿದೆ. ಈ ನೂತನ ನಿರ್ಧಾರದಿಂದಾಗಿ ಅಗ್ನಿವೀರರ ಒಟ್ಟು ಸೇವಾ ಅವಧಿಯು ಪ್ರಸ್ತುತ ಇರುವ 4 ವರ್ಷಗಳಿಂದ 6 ವರ್ಷಗಳಿಗೆ ಹೆಚ್ಚಳವಾಗಲಿದೆ.
ಭಾರತೀಯ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (CDS) ಜನರಲ್ ಎನ್.ಎಸ್. ರಾಜಾಸುಬ್ರಮಣಿ ಅವರು ನವದೆಹಲಿಯಲ್ಲಿ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಈ ಐತಿಹಾಸಿಕ ಬದಲಾವಣೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ. ಅಗ್ನಿಪಥ್ ಯೋಜನೆಯ ಮೂಲ ನಿಯಮದ ಪ್ರಕಾರ, 4 ವರ್ಷಗಳ ಸೇವೆ ಪೂರ್ಣಗೊಂಡ ಬಳಿಕ ಕೇವಲ ಶೇ. 25ರಷ್ಟು ಅಗ್ನಿವೀರರನ್ನು ಮಾತ್ರ ಶ್ರೇಯಾಂಕದ ಆಧಾರದ ಮೇಲೆ ಸೈನ್ಯದಲ್ಲಿ ಕಾಯಂಗೊಳಿಸಲಾಗುತ್ತಿತ್ತು. ಉಳಿದ ಶೇ. 75ರಷ್ಟು ಸಿಬ್ಬಂದಿ ಬಿಡುಗಡೆಯಾಗಬೇಕಿತ್ತು. ಆದರೆ, ಹೊಸ ನಿರ್ಧಾರದ ಪ್ರಕಾರ ಈ ಶೇ. 75ರಷ್ಟು ಅಗ್ನಿವೀರರಿಗೆ ಹೆಚ್ಚುವರಿಯಾಗಿ 2 ವರ್ಷಗಳ ಕಾಲ 'ಸೆಕೆಂಡ್ ಟೂರ್ ಆಫ್ ಡ್ಯೂಟಿ' ಅಡಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಸಿಗಲಿದೆ.
ಈ ವಿಸ್ತರಿತ 2 ವರ್ಷಗಳ ಅವಧಿ ಮುಗಿದ ನಂತರ, ಆಸಕ್ತಿ ಹೊಂದಿರುವ ಮತ್ತು ಅರ್ಹತೆ ಪಡೆಯುವ ಎಲ್ಲ ಅಗ್ನಿವೀರರನ್ನು ವಸ್ತುನಿಷ್ಠ ಆಯ್ಕೆ ಮಾನದಂಡಗಳ ಆಧಾರದ ಮೇಲೆ ನಿಯಮಿತ ಸೈನಿಕರಾಗಿ ಕಾಯಂ ಸೇವೆಗೆ ಸೇರಿಸಿಕೊಳ್ಳಲು ಮತ್ತೊಂದು ಅವಕಾಶ ನೀಡಲಾಗುತ್ತದೆ. ಹೆಚ್ಚುವರಿ 2 ವರ್ಷಗಳ ಅವಧಿಯಲ್ಲಿ ಅಗ್ನಿವೀರರಿಗೆ ಹೆಚ್ಚಿನ ವೇತನ ನೀಡಲಾಗುವುದು. ಐದನೇ ವರ್ಷದಲ್ಲಿ 43,500 ರೂ. ಹಾಗೂ ಆರನೇ ವರ್ಷದಲ್ಲಿ 47,000 ರೂ. ಮಾಸಿಕ ವೇತನ ಲಭ್ಯವಾಗಲಿದೆ. ಇದರೊಂದಿಗೆ 'ಸೇವಾ ನಿಧಿ' ಪ್ಯಾಕೇಜ್ ಮತ್ತು ಇತರ ಆರ್ಥಿಕ ಭದ್ರತೆಗಳು ಮುಂದುವರಿಯಲಿವೆ.
IAF Agniveervayu Recruitment 2025: ಅಗ್ನಿವೀರ್ವಾಯು ಹುದ್ದೆಗಳಿಗೆ ಅರ್ಜಿ ಆಹ್ವಾನ; ಹೀಗೆ ಅಪ್ಲೈ ಮಾಡಿ
2022ರಲ್ಲಿ ನೇಮಕಗೊಂಡ ಮೊದಲ ಬ್ಯಾಚ್ನ ಅಗ್ನಿವೀರರ 4 ವರ್ಷಗಳ ಅವಧಿಯು ಇದೇ ನವೆಂಬರ್ ಮತ್ತು ಡಿಸೆಂಬರ್ ತಿಂಗಳಲ್ಲಿ ಮುಕ್ತಾಯಗೊಳ್ಳಬೇಕಿತ್ತು. ದೇಶಾದ್ಯಂತ ಸುಮಾರು 18,000ಕ್ಕೂ ಹೆಚ್ಚು ಅಗ್ನಿವೀರರು ಸೈನ್ಯದಿಂದ ಹೊರಹೋಗಬೇಕಿದ್ದ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಈ ಪರಿಷ್ಕೃತ ಆದೇಶ ಹೊರಡಿಸಿದೆ.