ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಲೋಕಸಭಾ ಸದಸ್ಯತ್ವಕ್ಕೆ ಅಖಿಲೇಶ್ ರಾಜೀನಾಮೆ

ಲೋಕಸಭಾ ಸದಸ್ಯತ್ವಕ್ಕೆ ಅಖಿಲೇಶ್ ರಾಜೀನಾಮೆ

ಲೋಕಸಭಾ ಸದಸ್ಯತ್ವಕ್ಕೆ ಅಖಿಲೇಶ್ ರಾಜೀನಾಮೆ

-

Profile Vishwavani News Mar 22, 2022 5:35 PM
image-026f098d-e30c-41c2-b351-bcc64d5f6c95.jpg
image-5feb469f-9830-41e9-837e-590c2e3bde65.jpg
ಲಕ್ನೋ: ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಮಂಗಳವಾರ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಕರ್ಹಾಲ್‌ನಿಂದ ಶಾಸಕರಾಗಿ ಮುಂದುವರಿಯಲು ಅಜಮ್‌ಗಢದ ಲೋಕಸಭಾ ಸಂಸದ ಸ್ಥಾನಕ್ಕೆ ಅಖಿಲೇಶ್ ಯಾದವ್ ರಾಜೀನಾಮೆ ನೀಡಿದರು. ಅಖಿಲೇಶ್ ಅವರು 2019 ರ ಸಾರ್ವತ್ರಿಕ ಚುನಾವಣೆಯಲ್ಲಿ ಅಜಂಗಢ ಲೋಕ ಸಭಾ ಕ್ಷೇತ್ರದಿಂದ ಗೆದ್ದಿದ್ದರು. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ಮುಕ್ತಾಯ ಗೊಂಡ ಚುನಾವಣೆ ಯಲ್ಲಿ ಅಖಿಲೇಶ್ ಮೈನ್‌ಪುರಿ ಜಿಲ್ಲೆಯ ಕರ್ಹಾಲ್ ವಿಧಾನಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಕರ್ಹಾಲ್ ವಿಧಾನಸಭಾ ಕ್ಷೇತ್ರದಲ್ಲಿ 67,504 ಮತಗಳ ಅಂತರದಿಂದ ಜಯ ಸಾಧಿಸಿದ್ದು 1,48,196 ಮತಗಳನ್ನು ಗಳಿಸಿದ್ದಾರೆ. ಕರ್ಹಾಲ್ ಎಸ್ಪಿಯ ಭದ್ರಕೋಟೆ ಎಂದು ಪರಿಗಣಿಸ ಲಾಗುತ್ತದೆ. ಯಾದವ್ ಅವರು ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ. ಮೈನ್‌ಪುರಿ ಸಂಸದೀಯ ಸ್ಥಾನವನ್ನು ಅಖಿಲೇಶ್ ಅವರ ತಂದೆ ಮತ್ತು ಎಸ್‌ಪಿ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಹೊಂದಿದ್ದಾರೆ.