ನನ್ನ ಶೈಕ್ಷಣಿಕ ಪದವಿ ತೋರಿಸಲು ಸಿದ್ಧ, ನೀವು? ಪ್ರಧಾನಿ ನರೇಂದ್ರ ಮೋದಿಗೆ ಅಭಿಜಿತ್ ದೀಪ್ಕೆ ಸವಾಲು
Abhijit Deepke: ನಾವಿಬ್ಬರೂ ನಮ್ಮ ಶೈಕ್ಷಣಿಕ ಪದವಿಗಳನ್ನು ತೋರಿಸೋಣ ಬನ್ನಿ ಈ ವಿವಾದವನ್ನು ಕೊನೆಗೊಳಿಸೋಣ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಸವಾಲು ಹಾಕಿದ್ದಾರೆ. ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಅಭಿಜೀತ್ ದೀಪ್ಕೆ ಅವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಹೊಸ ವಿವಾದ ಹುಟ್ಟಿಕೊಂಡ ಬಳಿಕ ಅವರು ಈ ಕರೆ ನೀಡಿದ್ದಾರೆ.
ಸಂಗ್ರಹ ಚಿತ್ರ -
ನವದೆಹಲಿ: ಕಾಕ್ರೋಚ್ ಜನತಾ ಪಕ್ಷದ (Cockroach Janta Party) ಸಂಸ್ಥಾಪಕ (CJP founder) ಅಭಿಜೀತ್ ದೀಪ್ಕೆ (Abhijit Deepke) ಅವರು ಬೋಸ್ಟನ್ ನಲ್ಲಿ (Boston University) ಶಿಕ್ಷಣ ಪಡೆದ ಕುರಿತು ವಿವಾದ ಮತ್ತೆ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಅವರಿಗೆ ನಾವಿಬ್ಬರೂ ನಮ್ಮ ಶೈಕ್ಷಣಿಕ ಪದವಿಗಳನ್ನು ತೋರಿಸೋಣ ಬನ್ನಿ ಈ ವಿವಾದವನ್ನು ಕೊನೆಗೊಳಿಸೋಣ ಎಂದು ಕರೆ ನೀಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ಗುರುವಾರ ಬರೆದಿರುವ ಅವರು, ನಾನು ನನ್ನ ಶೈಕ್ಷಣಿಕ ಪದವಿ ಪ್ರಮಾಣವನ್ನು ತೋರಿಸಲು ಸಿದ್ದನಿದ್ದೇನೆ ಎಂದು ತಿಳಿಸಿದರು.
ಜನರು ನನ್ನ ಪದವಿ ಪ್ರಮಾಣವನ್ನು ನೋಡಲು ಕಾತರರಾಗಿದ್ದಾರೆ. ಆದರೆ 12 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಪ್ರಧಾನ ಮಂತ್ರಿಗಳ ಶೈಕ್ಷಣಿಕ ಅರ್ಹತೆ ಪ್ರಮಾಣ ಪತ್ರವನ್ನು ನೋಡಿಲ್ಲ ಎಂದು ನನಗೆ ಆಶ್ಚರ್ಯವಾಗುತ್ತದೆ ಎಂದು ತಿಳಿಸಿದ್ದಾರೆ.
“ತನ್ನ ಕಣ್ಮುಂದೆಯೇ ಜನರು ಕೊಚ್ಚಿಕೊಂಡು ಹೋದರು”: ನೇಪಾಳ ಪ್ರವಾಹದಲ್ಲಿ ಬದುಕುಳಿದ ವ್ಯಕ್ತಿ ಹೇಳಿದ್ದೇನು?
ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ತೋರಿಸಲು ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿದ ಅವರು, ಬನ್ನಿ ನಾವಿಬ್ಬರೂ ಕೂಡ ನಮ್ಮ ಪದವಿಗಳನ್ನು ತೋರಿಸೋಣ ಮತ್ತು ಇದನ್ನು ಕೊನೆಗೊಳಿಸೋಣ ಎಂದು ತಿಳಿಸಿದ್ದಾರೆ.
ಅಭಿಜೀತ್ ದೀಪ್ಕೆ ಅವರು ಈ ಸಂದೇಶವನ್ನು ಪೋಸ್ಟ್ ಮಾಡುವ ಮೊದಲು “BUComGrad” ಎಂಬ ಖಾತೆಯಿಂದ ಪೋಸ್ಟ್ ಮಾಡಲಾದ ಆಫ್ಟರ್ ಪಾರ್ಟಿಯನ್ನು ತೋರಿಸುವ ವಿಡಿಯೊ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ದೀಪ್ಕೆ ಅವರು ಟೇಬಲ್ ಬಳಿ ಕುಳಿತು ಕೆಲವರೊಂದಿಗೆ ಮಾತನಾಡುವುದನ್ನು ನೋಡಬಹುದು.
ಪ್ರಖರ್ ಗುಪ್ತಾ ಅವರು ಪಾಡ್‌ಕ್ಯಾಸ್ಟ್ ನಲ್ಲಿ ಇತ್ತೀಚೆಗೆ ಸಾಮಾಜಿಕ ಕಾರ್ಯಕರ್ತ ಸೋನಮ್ ವಾಂಗ್‌ಚುಕ್ ಅವರ ಸಂದರ್ಶನ ನಡೆಸಿದ್ದು, ಇದರಲ್ಲಿ ಅವರು ಅಭಿಜೀತ್ ದೀಪ್ಕೆ ಅವರ ಶೈಕ್ಷಣಿಕ ಅರ್ಹತೆ ಕುರಿತಾಗಿ ಪ್ರಶ್ನಿಸಿದ್ದರು. ಇದರ ಬಳಿಕ ವಿವಾದ ಹೆಚ್ಚಾಗಿತ್ತು.
Not my fault that his friends were not invited at BU Com Grad events. https://t.co/q1UIjKuqan pic.twitter.com/BpPvgaWzQg
— Abhijeet Dipke (@abhijeet_dipke) September 2, 2026
ಪ್ರಧಾನಿ ಮೋದಿ ಅವರ ಶೈಕ್ಷಣಿಕ ಅರ್ಹತೆಗಳ ಕುರಿತಾಗಿ ಪ್ರಶ್ನೆಗಳು ಎದ್ದಿರುವುದು ಇದು ಮೊದಲೇನಲ್ಲ. ಇದಕ್ಕೆ ಸಂಬಂಧಿಸಿ ಬಿಜೆಪಿ ಈ ಹಿಂದೆ ಮೋದಿಯವರ ಪದವಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದೆ ಮತ್ತು ಈಗ ಈ ವಿಷಯ ಇತ್ಯರ್ಥವಾಗಿದೆ ಎಂದು ಹೇಳಿಕೊಂಡಿದೆ.
ಪ್ರಧಾನಿಯವರ ವಿರುದ್ಧದ ಮತ್ತೊಂದು ಪೋಸ್ಟ್ ಮಾಡಿರುವ ಅಭಿಜೀತ್ ದೀಪ್ಕೆ, ದೆಹಲಿ ಹೈಕೋರ್ಟ್ ಪ್ರಧಾನಿಯವರ ಪದವಿಯನ್ನು ಬಹಿರಂಗಪಡಿಸಲು ಏಕೆ ನಿರಾಕರಿಸಿತು? ಎಂದು ಪ್ರಶ್ನಿಸಿದ್ದಾರೆ.
ಪ್ರಖರ್ ಗುಪ್ತಾ ಅವರು ಪಾಡ್‌ಕ್ಯಾಸ್ಟ್ ವಿಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಇದರಲ್ಲಿ ಗುಪ್ತಾ ಅವರ ಆಪ್ತ ಸ್ನೇಹಿತರೊಬ್ಬರು ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದು, ಸಿಜೆಪಿ ಪ್ರತಿಭಟನೆಯಲ್ಲೂ ಇದ್ದರು ಎಂದು ಹೇಳಿದ್ದಾರೆ. ಆದರೆ ಅವರು ತಮ್ಮ ಸ್ನೇಹಿತನ ಹೆಸರನ್ನು ಬಹಿರಂಗಪಡಿಸಲಿಲ್ಲ. ಆದರೆ ಆ ಸ್ನೇಹಿತ ಅಭಿಜೀತ್ ದೀಪ್ಕೆ ಅವರ ಶೈಕ್ಷಣಿಕ ಅರ್ಹತೆಗಳನ್ನು ಪರಿಶೀಲಿಸಲು ಪ್ರಾರಂಭಿಸಿದ್ದು, ಅವರು ಬೋಸ್ಟನ್ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಬಗ್ಗೆ ಯಾವುದೇ ದಾಖಲೆಗಳಿಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ತಿಳಿಸಿದ್ದರು.
ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ: ಆರು ವರ್ಷಗಳ ನಂತರ ಪ್ರಕರಣ ಬೆಳಕಿಗೆ, ಮದರಸಾ ಶಿಕ್ಷಕನ ಬಂಧನ
ಅಲ್ಲದೇ ಈ ಹಿಂದೆ ಅಮೆರಿಕದಲ್ಲಿ ಅಭಿಜೀತ್ ದೀಪ್ಕೆ ಅವರ ಶಿಕ್ಷಣಕ್ಕೆ ಸಂಬಂಧಿಸಿ ಹಣಕಾಸು ವೆಚ್ಚದ ಕುರಿತು ಮಾಹಿತಿ ಕೋರಿ ಸೂರತ್ ಮೂಲದ ಆರ್‌ಟಿಐ ಕಾರ್ಯಕರ್ತ ಅಮಿತ್ ತಿವಾರಿ ಅವರು ಮಾಹಿತಿ ಕೋರಿದ್ದರು. ಇದಕ್ಕೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದ ದೀಪ್ಕೆ, ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ತಮ್ಮ ಶಿಕ್ಷಣಕ್ಕೆ ವಿದ್ಯಾರ್ಥಿ ವೇತನ ದೊರೆತಿದೆ. ಸ್ವಲ್ಪ ಶಿಕ್ಷಣ ಸಾಲವನ್ನು ಪಡೆದಿದ್ದೇನೆ ಎಂದು ಹೇಳಿದ್ದರು. ಇದಕ್ಕೆ ಸಂಬಂಧಿಸಿ ವಿಶ್ವವಿದ್ಯಾಲಯದ ತಮ್ಮ ವಿದ್ಯಾರ್ಥಿವೇತನ ಪತ್ರವನ್ನು ಸಹ ತೋರಿಸಿದ್ದರು.