ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಗಾಜಾ ಮೇಲಿನ ದಾಳಿ ಇಸ್ರೇಲ್‌ನ ಉದ್ದೇಶಪೂರ್ವಕ ತಂತ್ರ: ಈ ವಿಚಾರದಲ್ಲಿ ಕೇಂದ್ರ ಮೌನಕ್ಕೆ ಶರಣಾಗಿದ್ದು ಸರಿಯಲ್ಲ ಎಂದ ಸೋನಿಯಾ ಗಾಂಧಿ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸ್ನೇಹದ ಕಾರಣದಿಂದ ಗಾಜಾ ಮೇಲೆ ಇಸ್ರೇಲ್ ದಾಳಿಗೆ ಕೇಂದ್ರ ಮೌನವಾಗಿದೆ. ಗಾಜಾದ ಮೇಲೆ ಇಸ್ರೇಲ್ ಮಿಲಿಟರಿ ಪಡೆ ನಡೆಸಿದ ದಾಳಿ ಆಕಸ್ಮಿಕವಲ್ಲ ಅದು ಉದ್ದೇಶಪೂರ್ವಕ ತಂತ್ರವಾಗಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಹೇಳಿದ್ದಾರೆ.

ಗಾಜಾ ಬಗ್ಗೆ ಕೇಂದ್ರದ ಮೌನ ನೈತಿಕವಾದುದಲ್ಲ: ಸೋನಿಯಾ ಗಾಂಧಿ

ಸಂಗ್ರಹ ಚಿತ್ರ -

ನವದೆಹಲಿ: ಇಸ್ರೇಲ್ ಮಿಲಿಟರಿಯು (Israel military) ಗಾಜಾದಲ್ಲಿ (Gaza) ನಡೆಸಿದ ವಿನಾಶ ಕಾರ್ಯಾಚರಣೆ ಬಗ್ಗೆ ಕೇಂದ್ರ ಸರ್ಕಾರ ಮೌನವಾಗಿದೆ ಮತ್ತು ನಿಷ್ಕ್ರಿಯತೆಯನ್ನು ಕಾಯ್ದುಕೊಂಡಿದೆ ಎಂದು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ (Congress Parliamentary Party chairperson) ಸೋನಿಯಾ ಗಾಂಧಿ (Sonia Gandhi) ಟೀಕಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ (PM Narendra modi) ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Israeli Prime Minister Benjamin Netanyahu) ಅವರ ನಡುವಿನ ಸ್ನೇಹ ಈ ಕುರಿತು ಪ್ರತಿಕ್ರಿಯಿಸಲು ಅಡ್ಡಿಯಾಗಿದೆ ಎಂದು ಹೇಳಿರುವ ಅವರು ಸಂಘರ್ಷದ ಕುರಿತು ಭಾರತದ ಪ್ರತಿಕ್ರಿಯೆಯು ಅದರ ನೈತಿಕತೆ ಮತ್ತು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ತಿಳಿಸಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಲೇಖನದಲ್ಲಿ ಅವರು ಗಾಜಾ ಯುದ್ಧದ ವರದಿಯನ್ನು ಉಲ್ಲೇಖಿಸಿ ಕೇಂದ್ರ ಸರ್ಕಾರದ ಮೌನವನ್ನು ಟೀಕಿಸಿದರು. ಗಾಜಾದಲ್ಲಿ ಇಸ್ರೇಲ್ ನಡೆಸಿರುವ ವಿನಾಶ ಮತ್ತು ಅದಕ್ಕೆ ಆಧಾರವಾಗಿರುವ ನರಮೇಧದ ಉದ್ದೇಶವನ್ನು ಅವರು ವಿಸ್ತೃತವಾಗಿ ತಿಳಿಸಿದ್ದಾರೆ.

ವೆನೆಜುವೆಲಾದಲ್ಲಿ ಶತಮಾನದಲ್ಲೇ ಅತ್ಯಂತ ಪ್ರಬಲ ಭೂಕಂಪ: ಕುಸಿದ ಕಟ್ಟಡಗಳು ಸುನಾಮಿ ಎಚ್ಚರಿಕೆ, 32 ಸಾವು 700 ಮಂದಿಗೆ ಗಂಭೀರ ಗಾಯ

ಗಾಜಾದಲ್ಲಿ ಮಕ್ಕಳನ್ನು ಗುರಿಯಾಗಿಸಿಕೊಂಡಿರುವುದು ಆಕಸ್ಮಿಕವಲ್ಲ. ಇದರ ಹಿಂದೆ ಉದ್ದೇಶಪೂರ್ವಕ ತಂತ್ರವಿದೆ. ಶಾಲೆ ಮತ್ತು ಆರೋಗ್ಯ ಮೂಲಸೌಕರ್ಯಗಳ ನಾಶ ಮಾನವೀಯತ ಬಿಕ್ಕಟ್ಟನ್ನು ಪ್ರದರ್ಶಿಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ದಾಳಿ ಕೂಡ ಸ್ವೀಕಾರಾರ್ಹವಲ್ಲ. ಆದರೆ ಅನಂತರ ಇಸ್ರೇಲ್ ಮಿಲಿಟರಿ ಪ್ರತಿಕ್ರಿಯೆಯು ಕೂಡ ಕ್ರೌರ್ಯ ಮತ್ತು ಅನಾಗರಿಕತೆಯಿಂದ ಕೂಡಿದೆ ಎಂದು ಅವರು ತಿಳಿಸಿದ್ದಾರೆ.

ಈ ಕ್ರೌರ್ಯಕ್ಕೆ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಅವರ ಹಿರಿಯ ಸಂಪುಟ ಸಹೋದ್ಯೋಗಿಗಳೇ ಕರೆ ನೀಡಿದ್ದಾರೆ. ಇದು ನರಮೇಧದ ಉದ್ದೇಶವನ್ನು ಪ್ರತಿಬಿಂಬಿಸುತ್ತವೆ ಎಂದ ಅವರು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಕೂಡ ಟೀಕಿಸಿದ್ದಾರೆ.

ಈ ಸಂಘರ್ಷದಲ್ಲಿ ಅಮೆರಿಕದ ಪಾತ್ರವು ಕ್ರೌರ್ಯವನ್ನು ಮತ್ತಷ್ಟು ಹೆಚ್ಚಿಸಲು ಪ್ರೋತ್ಸಾಹ ನೀಡಿತ್ತು. ಬಳಿಕ ಹಲವಾರು ದೇಶಗಳು ಪ್ಯಾಲೆಸ್ಟೈನ್ ಅನ್ನೇ ದೂಷಿಸಿವೆ. ಗಾಜಾದಲ್ಲಿನ ಪರಿಸ್ಥಿತಿಯ ಬಗ್ಗೆ ಅಂತಾರಾಷ್ಟ್ರೀಯ ಕಳವಳ ಹೆಚ್ಚುತ್ತಿರುವ ಭಾರತವು ಮೌನವಾಗಿರುವುದು ಸರಿಯಲ್ಲ ಎಂದು ಅವರು ಹೇಳಿದರು.

ಗಾಜಾ ವಿಷಯದ ಕುರಿತು ನ್ಯಾಯಮೂರ್ತಿ ಮುರಳೀಧರ್ ಅವರ ವರದಿಯನ್ನು ಪ್ರಧಾನಿ ಮೋದಿ ಅವರ ಸರ್ಕಾರ ನಿರ್ಲಕ್ಷಿಸಿದೆ ಎಂದು ಆರೋಪಿಸಿರುವ ಸೋನಿಯಾ ಗಾಂಧಿ, ಭಾರತವು ಒಗ್ಗಟ್ಟು, ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಅಂತಾರಾಷ್ಟ್ರೀಯ ಶಾಂತಿಗಾಗಿ ನಿಲ್ಲಬೇಕಿದೆ. ಆದರೆ ಪ್ಯಾಲೆಸ್ಟೀನಿಯನ್ನರ ನೋವಿನ ಬಗ್ಗೆ ನಮ್ಮ ಮೌನ ಸರಿಯಲ್ಲ ಎಂದು ತಿಳಿಸಿದರು.

ಗಾಜಾ ಯುದ್ಧದ ಸಮಯದಲ್ಲಿ ಸಾವನ್ನಪ್ಪಿದ ಐದು ವರ್ಷದ ಹಿಂದ್ ರಜಬ್ ಪ್ರಕರಣದ ಬಗ್ಗೆಯೂ ಉಲ್ಲೇಖಿಸಿರುವ ಸೋನಿಯಾ ಗಾಂಧಿ, ಕೇಂದ್ರ ಸರ್ಕಾರದ ಮೌನ ಮತ್ತು ನಿಷ್ಕ್ರಿಯತೆಯು ಖಂಡನೀಯವಾಗಿದೆ ಎಂದು ವಿವರಿಸಿದ್ದಾರೆ.

ಪ್ಯಾಲೆಸ್ಟೈನ್, ಇರಾನ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳು ನಮ್ಮ ಐತಿಹಾಸಿಕ ಮಿತ್ರರಾಷ್ಟ್ರಗಳಾಗಿವೆ. ಆದರೆ ನಾವು ಅವರನ್ನು ದೂರವಿಟ್ಟಿದ್ದೇವೆ. ಈ ಮೂಲಕ ನಮ್ಮ ಜಾಗವನ್ನು ಪಾಕಿಸ್ತಾನ ಆಕ್ರಮಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದೇವೆ ಎಂದು ತಿಳಿಸಿದ್ದಾರೆ.

ಭಾರತವು ಈಗ ಪ್ಯಾಲೆಸ್ಟೀನಿಯನ್ ಸಹೋದರ ಸಹೋದರಿಯರ ಪರವಾಗಿ ಮಾತನಾಡಬೇಕು. ಈ ಕುರಿತು ಸರ್ಕಾರದ ನಿರಂತರ ಮೌನವನ್ನು ನೈತಿಕವಾಗಿ ಸಹಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿ ಅವರ ಈ ಲೇಖನವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿರುವ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ ಅವರ ಈ ಲೇಖನವು ನಮ್ಮ ಈಗಿನ ವಿದೇಶಾಂಗ ನೀತಿಯು ಪ್ಯಾಲೆಸ್ಟೈನ್, ಇರಾನ್ ಮತ್ತು ಮಧ್ಯಪ್ರಾಚ್ಯಗಳ ಮಿತ್ರರಾಷ್ಟ್ರಗಳನ್ನು ನಮ್ಮಿಂದ ಹೇಗೆ ದೂರವಿಟ್ಟಿದೆ ಎಂಬುದನ್ನು ನೆನಪಿಸಿದೆ ಎಂದು ಹೇಳಿದ್ದಾರೆ.

ಭಾರತೀಯ ವಾಯು ಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ 3 ವಿಮಾನಗಳು; ಸೇಫ್‌ ಲ್ಯಾಂಡಿಂಗ್‌ಗೆ ಸಹಾಯ ಮಾಡಿದ ಭಾರತ

ಭಾರತವು ತನ್ನ ಸ್ವತಂತ್ರ ವಿದೇಶಾಂಗ ನೀತಿಯನ್ನು ಮರಳಿ ಪಡೆಯಬೇಕು, ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯಬೇಕು ಮತ್ತು ಗಾಜಾದ ಬಗ್ಗೆ ನೈತಿಕವಾಗಿ ಮಾತನಾಡಬೇಕು ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ಪ್ರಿಯಾಂಕಾ ಗಾಂಧಿ ಅವರು ಈ ಕುರಿತು ಪ್ರತಿಕ್ರಿಯಿಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ನಿರಂತರ ಮೌನ ತಾರ್ಕಿಕವಾಗಿ ಸರಿ ಎಂದು ಹೇಳಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.