Vastu Tips: ಅಡುಗೆ ಮನೆ ವಿನ್ಯಾಸದಲ್ಲಿ ಈ ಮೂರು ಟೈಲ್ಸ್ ಗಳನ್ನು ಬಳಸಲೇಬೇಡಿ..
ಅಲಂಕಾರ, ಸೌಂದರ್ಯಕ್ಕೆಂದು ನಾವು ಅಡುಗೆ ಮನೆಯಲ್ಲಿ ಬಳಸುವ ಕೆಲವೊಂದು ವಸ್ತುಗಳು ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಅದರಲ್ಲೂ ಮುಖ್ಯವಾಗಿ ಟೈಲ್ಸ್ ಗಳು. ಚೆನ್ನಾಗಿ ಒಪ್ಪುತ್ತೆ, ನಮಗೆ ಇಷ್ಟವಾಗುತ್ತೆ ಎಂದುಕೊಂಡು ನಾವು ಹಾಕುವ ಟೈಲ್ಸ್ ಗಳು ಕೆಲವೊಮ್ಮೆ ಮನೆಯಲ್ಲಿ ನಾನಾ ರೀತಿಯ ತೊಂದರೆಯನ್ನು ಉಂಟು ಮಾಡಬಹುದು. ಹೀಗಾಗಿ ಇವುಗಳ ಬಗ್ಗೆ ಮೊದಲೇ ತಿಳಿದುಕೊಂಡಿರುವುದು ಒಳ್ಳೆಯದು.


ನಿಮ್ಮ ಜೀವನದ ಪ್ರತಿಯೊಂದು ಅಂಶಗಳು ವಾಸ್ತುವಿನಿಂದ (Vastu tips) ಪ್ರಭಾವಿತವಾಗಿರುತ್ತದೆ. ಹೀಗಾಗಿಯೇ ನಾವು ಮನೆ ನಿರ್ಮಿಸುವಾಗ ವಾಸ್ತುಶಾಸ್ತ್ರಕ್ಕೆ (vastu shastra) ಹೆಚ್ಚಿನ ಆದ್ಯತೆ ನೀಡುತ್ತೇವೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಕೂಡ ವಾಸ್ತುವಿನ (vastu for home) ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಯಾವುದು ಮನೆಗೆ ಒಳ್ಳೆಯದು ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು. ಅಡುಗೆ ಮನೆಯ (vastu for kitchen) ಅಲಂಕಾರ ಅಥವಾ ಸೌಂದರ್ಯಕ್ಕೆಂದು ಬಳಸುವ ಟೈಲ್ಸ್ ಗಳು ಮನೆಯಲ್ಲಿ ನಾನಾ ರೀತಿಯ ತೊಂದರೆಗಳಿಗೆ ಆಹ್ವಾನಕೊಡಬಹುದು ಎಚ್ಚರ. ಯಾಕೆಂದರೆ ಕೆಲವೊಂದು ಟೈಲ್ಸ್ ಗಳು ಮನೆಯಲ್ಲಿ ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಗೆ ಟೈಲ್ಸ್ ಗಳನ್ನು (vastu for kitchen tiles) ಆಯ್ದುಕೊಳ್ಳುವಾಗ ಅವುಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಸಮಯ ಮತ್ತು ಹಣ ಎರಡು ವ್ಯರ್ಥವಾಗುವುದು.
ಅಡುಗೆ ಮನೆಯಲ್ಲಿ ಬಳಸಲೇಬಾರದ ಮೂರು ಟೈಲ್ಸ್ ಗಳಿವೆ. ಯಾಕೆಂದರೆ ಈ ಮೂರು ವಿಧದ ಟೈಲ್ಸ್ ಗಳು ಮನೆಯ ವಾಸ್ತುವಿನ ಮೇಲೆ ನೇರವಾದ ಪರಿಣಾಮ ಬೀರುತ್ತದೆ. ಇದರಿಂದ ಮನೆಯಲ್ಲಿ ನಕಾರಾತ್ಮಕತೆಯ ಪ್ರಭಾವ ಹೆಚ್ಚಾಗುವುದು.
ಅಡುಗೆ ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನು ಸರಿಯಾಗಿ ನೋಡಿಕೊಂಡರೆ ಅದು ಮನೆಯಲ್ಲಿ ಸಕಾರಾತ್ಮಕ ಅಂಶವನ್ನು ವೃದ್ಧಿಸುತ್ತದೆ. ಹೀಗಾಗಿ ಅಡುಗೆ ಮನೆಯಲ್ಲಿ ಬಳಸುವ ಟೈಲ್ಸ್‌ಗಳ ವಿನ್ಯಾಸದ ಬಗ್ಗೆಯೂ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರಾದ ಪಂಡಿತ್ ಜನ್ಮೇಶ್ ದ್ವಿವೇದಿ. ಇವರು ಅಡುಗೆ ಮನೆಯಲ್ಲಿ ಬಳಸಬಾರದ ಟೈಲ್ಸ್‌ಗಳ ಕುರಿತು ಹೇಳಿರುವುದು ಹೀಗೆ.
ಕಪ್ಪು ಅಥವಾ ಗಾಢ ಬಣ್ಣ
ಅಡುಗೆ ಮನೆಯ ವಾಸ್ತುವನ್ನು ಸುಧಾರಿಸಲು ಬಯಸಿದರೆ ಉಬ್ಬು ವಿನ್ಯಾಸಗಳನ್ನು ಹೊಂದಿರುವ ಕಪ್ಪು ಅಥವಾ ಗಾಢ ಬಣ್ಣದ ಟೈಲ್ಸ್‌ಗಳನ್ನು ಅಳವಡಿಸಬಾರದು. ಯಾಕೆಂದರೆ ಈ ಬಣ್ಣವು ನಮ್ಮ ಸುತ್ತಲೂ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಹೆಚ್ಚಿಸುತ್ತದೆ. ಇದರಿಂದ ಮನೆಯ ಸದಸ್ಯರಲ್ಲಿ ಜಗಳಗಳು, ಹೊಂದಾಣಿಕೆಯ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅಡುಗೆ ಮನೆಯಲ್ಲಿ ಸರಳ ತಿಳಿ ಬಣ್ಣ ಮತ್ತು ವಿನ್ಯಾಸದ ಟೈಲ್ಸ್‌ಗಳನ್ನು ಅಳವಡಿಸಿ. ಇದರಿಂದ ಅಡುಗೆ ಮನೆಯಲ್ಲಿ ಸಕಾರಾತ್ಮಕತೆಯನ್ನು ಕಾಪಾಡಿಕೊಳ್ಳುತ್ತದೆ.
ಮುರಿದ ಅಥವಾ ಬಿರುಕು ಬಿಟ್ಟ ವಿನ್ಯಾಸ
ಅಡುಗೆ ಮನೆಯಲ್ಲಿ ಬಿರುಕು ಬಿಟ್ಟ ಅಥವಾ ಮುರಿದ ಮಾದರಿಯನ್ನು ಹೊಂದಿರುವ ಟೈಲ್ಸ್‌ಗಳನ್ನು ಅಳವಡಿಸುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಇದು ಮನೆಯ ಸಮೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ. ಮನೆಯವರಲ್ಲಿ ವಿವಾದಗಳು ಮತ್ತು ಮಾನಸಿಕ ಒತ್ತಡಕ್ಕೆ ಕಾರಣವಾಗುತ್ತದೆ. ಅಡುಗೆ ಮನೆಯಲ್ಲಿ ಸರಳ ಗ್ರಿಡ್ ವಿನ್ಯಾಸವನ್ನು ಹೊಂದಿರುವ ಟೈಲ್ಸ್‌ಗಳನ್ನು ಅಳವಡಿಸುವುದರಿಂದ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸಬಹುದು.
ಈ ಸುದ್ದಿಯನ್ನೂ ಓದಿ: Vastu Tips: ಕನಸಿನ ಉದ್ಯೋಗ ಪಡೆಯಲು ಈ ನಿಯಮಗಳನ್ನು ಪಾಲಿಸಿ
ಹೊಳೆಯುವ ಟೈಲ್ಸ್‌ಗಳು
ಅಡುಗೆ ಮನೆಯಲ್ಲಿ ಹೊಳಪುಳ್ಳ ಟೈಲ್ಸ್‌ಗಳನ್ನು ಬಳಸದಿರುವುದು ಒಳ್ಳೆಯದು. ಇದು ಮನೆಯವರಲ್ಲಿ ಚಂಚಲತೆ, ಚಡಪಡಿಕೆಯನ್ನು ಹೆಚ್ಚಿಸುತ್ತದೆ. ಅಸಮತೋಲನ ಹೆಚ್ಚಾಗುವುದು. ಕಡಿಮೆ ಹೊಳಪಿನ ಟೈಲ್ಸ್‌ಗಳನ್ನು ಬಳಸಬಹುದು. ಇದು ವಾಸ್ತು ಅಂಶವನ್ನು ಅನುಕೂಲಕರವಾಗಿಡುತ್ತದೆ. ಇದರಿಂದ ಕುಟುಂಬದಲ್ಲಿ ಸಕಾರಾತ್ಮಕತೆ ಉಳಿಯುತ್ತದೆ.
ನಮ್ಮ ಜೀವನದ ಪ್ರತಿಯೊಂದು ಅಂಶಗಳು ವಾಸ್ತುವಿನಿಂದ (Vastu tips) ಪ್ರಭಾವಿತವಾಗಿರುತ್ತದೆ. ಹೀಗಾಗಿಯೇ ನಾವು ಮನೆ ನಿರ್ಮಿಸುವಾಗ ವಾಸ್ತುಶಾಸ್ತ್ರಕ್ಕೆ (vastu shastra) ಹೆಚ್ಚಿನ ಆದ್ಯತೆ ನೀಡುತ್ತೇವೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುವು ಕೂಡ ವಾಸ್ತುವಿನ (vastu for home) ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಯಾವುದು ಮನೆಗೆ ಒಳ್ಳೆಯದು ಎಂಬುದನ್ನು ಮೊದಲೇ ತಿಳಿದುಕೊಂಡಿರಬೇಕು. ಅಡುಗೆ ಮನೆಯ (vastu for kitchen) ಅಲಂಕಾರ ಅಥವಾ ಸೌಂದರ್ಯಕ್ಕೆಂದು ಬಳಸುವ ಟೈಲ್ಸ್ ಗಳು ಮನೆಯಲ್ಲಿ ನಾನಾ ರೀತಿಯ ತೊಂದರೆಗಳಿಗೆ ಆಹ್ವಾನಕೊಡಬಹುದು ಎಚ್ಚರ. ಯಾಕೆಂದರೆ ಕೆಲವೊಂದು ಟೈಲ್ಸ್ ಗಳು ಮನೆಯಲ್ಲಿ ವಾಸ್ತು ದೋಷವನ್ನು ಉಂಟು ಮಾಡುತ್ತದೆ. ಹೀಗಾಗಿ ಅಡುಗೆ ಮನೆಗೆ ಟೈಲ್ಸ್ ಗಳನ್ನು (vastu for kitchen tiles) ಆಯ್ದುಕೊಳ್ಳುವಾಗ ಅವುಗಳ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ಉತ್ತಮ. ಇಲ್ಲವಾದರೆ ಸಮಯ ಮತ್ತು ಹಣ ಎರಡು ವ್ಯರ್ಥವಾಗುವುದು.