Pushkar Fair: 21 ಕೋಟಿ ರೂ. ಮೌಲ್ಯದ ಕೋಣ ಹಠಾತ್ ಸಾವು; ವಿಮೆ ಹಣಕ್ಕಾಗಿ ಮೂಕ ಪ್ರಾಣಿಯ ಕೊಲೆ?
Pushkar Animal Fair in Rajasthan: ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್ ಆಗಿ ಸಾವನ್ನಪ್ಪಿದ್ದು, ಪ್ರಾಣಿಪ್ರುಯರು ಆಘಾತ ವ್ಯಕ್ತಪಡಿಸಿದ್ದಾರೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು.
ರಾಜಸ್ಥಾನದ ಪುಷ್ಕರ್ ಮೇಳದಲ್ಲಿ ಸಾವನ್ನಪ್ಪಿದ 21 ಕೋಟಿ ರೂ. ಮೌಲ್ಯದ ಕೋಣ. -
Ramesh B
Nov 2, 2025 11:10 PM
ಜೈಪುರ, ನ. 2: ರಾಜಸ್ಥಾನದಲ್ಲಿ ಆಯೋಜಿಸಿರುವ ಪುಷ್ಕರ್ ಜಾನುವಾರು ಮೇಳದ (Pushkar Animal Fair in Rajasthan) ಪ್ರಧಾನ ಆಕರ್ಷಣೆಯಾಗಿದ್ದ 21 ಕೋಟಿ ರೂ. ಮೌಲ್ಯದ ಕೋಣ ಹಠಾತ್ ಆಗಿ ಸಾವನ್ನಪ್ಪಿದ್ದು, ಆಯೋಜಕರು ನಿರ್ಲಕ್ಷ್ಯ ತೋರಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅನಾರೋಗ್ಯದಿಂದ ಈ ದುಬಾರಿ ಕೋಣ ಅಕ್ಟೋಬರ್ 31ರಂದು ಅಸುನೀಗಿದೆ. ಪ್ರತಿದಿನ ಭೇಟಿ ನೀಡುವ ಸಾವಿರಾರು ಮಂದಿಗೆ ಈ ಕೋಣ ಬಹಳ ಪ್ರಿಯವಾಗಿತ್ತು. ಸದ್ಯ ಅದರ ಹಠಾತ್ ಮರಣ ಪ್ರಾಣಿ ಪ್ರಿಯರಿಗೆ ಆಘಾತ ತಂದಿತ್ತಿದೆ. ಕೋಣ ನೆಲಕ್ಕೆ ಒರಗಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದೆ.
''ಈ ಕೋಣಕ್ಕಾಗಿ ವಿಶೇಷ ಸವಲತ್ತುಗಳನ್ನು ಒದಗಿಸಲಾಗಿತ್ತು. ಕೋಣದ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ ಪಶುವೈದ್ಯರ ತಂಡ ಸ್ಥಳಕ್ಕೆ ಧಾವಿಸಿತು'' ಎಂದು ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Viral Video: ಪುರಸಭೆ ಕಚೇರಿಗೆ ನುಗ್ಗಿದ ಎಮ್ಮೆ; ಮಾಡಿದ ಅವಾಂತರ ಒಂದೆರಡಲ್ಲ
ʼʼತಕ್ಷಣ ಚಿಕಿತ್ಸೆ ನೀಡಲು ವೈದ್ಯರು ಎಷ್ಟೇ ಪ್ರಯತ್ನಿಸಿದರೂ ಅದರ ದೇಹದ ತೂಕ ಮತ್ತು ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿಲ್ಲ. ಅದನ್ನು ಉಳಿಸಲು ಸಾಧ್ಯವಾಗಲಿಲ್ಲʼʼ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಡಿಯೊವೊಂದರಲ್ಲಿ ನೂರಾರು ಮಂದಿ ಮೃತ ಕೋಣದ ಸುತ್ತ ನೆರೆದಿರುವುದು ಕಂಡು ಬಂದಿದೆ. ಕೆಲವರು ಕೋಣಕ್ಕೆ ವಿಷ ಪ್ರಶಾನವಾಗಿರುವ ಶಂಕೆ ವ್ಯಕ್ತಪಡಿಸಿದ್ದಾರೆ.
ವೈರಲ್ ವಿಡಿಯೊ ಇಲ್ಲಿದೆ:
ಕೊಬ್ಬಿನ ಚುಚ್ಚುಮದ್ದು ನೀಡಿದ್ದರೆ?
ಸದ್ಯ ಕೋಣದ ಸಾವಿಗೆ ಹಲವು ಅನುಮಾನ ವ್ಯಕ್ತವಾಗುತ್ತಿದೆ. ಬೇಕೆಂದೇ ಕೊಲೆ ಮಾಡಲಾಗಿದೆ ಎಂದು ಕೆಲವರು ಕಿಡಿ ಕಾರಿದ್ದಾರೆ. ಕೋಣದ ಗಾತ್ರ ಹೆಚ್ಚಲು ಅದಕ್ಕೆ ಕೊಬ್ಬಿನ ಚುಚ್ಚು ಮದ್ದು ನೀಡಲಾಗುತ್ತಿತ್ತು. ಓವರ್ ಡೋಸ್‌ನಿಂದ ಅದು ಅಸುನೀಗಿದೆ ಎಂದು ಹಲವರು ಆರೋಪಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.
ನೆಟ್ಟಿಗರು ಏನಂದ್ರು?
ಕೋಣದ ಸಾವಿಗೆ ಹಲವು ಕಾರಣಗಳಿವೆ. ಒತ್ತಡ, ಮೊದಲೇ ಇದ್ದ ಆರೋಗ್ಯ ಸಮಸ್ಯೆ ಇವುಗಳಲ್ಲಿ ಮುಖ್ಯವಾದವು. ಅದರಲ್ಲಿಯೂ ಲಾಭ ಗಳಿಸುವ ಉದ್ದೇಶದಿಂದ ಯಜಮಾನ ಸರಿಯಾದ ಆರೈಕೆ ಮಾಡಿಲ್ಲ ಎನ್ನಲಾಗಿದೆ. ʼʼಕೋಣ ಆರೋಗ್ಯವಂತವಾಗಿ ಕಾಣಬೇಕೆಂದು ಡ್ರಗ್ಸ್ ನೀಡಿದ್ದಾರೆʼʼ ಎಂದು ಒಬ್ಬರು ಬರೆದುಕೊಂಡಿದ್ದಾರೆ. ʼʼಹಾರ್ಮೋನ್ ಕೃತಕವಾಗಿ ಬೆಳವಣಿಗೆಯಾಗಬೇಕೆಂದು ಆ್ಯಂಟಿ ಬಯೋಟಿಕ್ ಅಧಿಕ ಪ್ರಮಾಣದಲ್ಲಿ ನೀಡಿದ್ದಾರೆ. ಹನ ಮಾಡಿವ ಉದ್ದೇಶದಿಂದ ನಿಸರ್ಗದ ವಿರುದ್ಧವಾಗಿ ನಡೆದುಕೊಂಡಿದ್ದಾರೆʼʼ ಎಂದು ಇನ್ನೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ʼʼವಿಮೆಗಾಗಿ ಕೊಲೆ ಮಾಡಿರಬಹುದುʼʼ ಎಂದು ಮತ್ತೊಬ್ಬರು ಶಂಕಿಸಿದ್ದಾರೆ. ಒಟ್ಟಿನಲ್ಲಿ ಕೋಣದ ಆಕಸ್ಮಿಕ ಸಾವು ಹಲವು ಅನುಮಾಕ್ಕೆ ಕಾರಣವಾಗಿದೆ.
ಏನಿದು ಪುಷ್ಕರ್ ಮೇಳ?
ರಾಜಸ್ಥಾನದ ಪುಷ್ಕರ್ ಪಟ್ಟಣದಲ್ಲಿ ಪ್ರತಿವರ್ಷ ವಾರಗಳ ಕಾಲ ಜಾನುವಾರು ಮೇಳ ನಡೆಯುತ್ತದೆ. ಈ ವರ್ಷದ ಮೇಳ ಅಕ್ಟೋಬರ್ 30ರಂದು ಆರಂಭವಾಗಿದ್ದು, ನವೆಂಬರ್ 5ರ ತನಕ ನಡೆಯಲಿದೆ. ಈ ಮೇಳದಲ್ಲಿ ಪಾಲ್ಗೊಳ್ಳಲು ದೇಶದ ನಾನಾ ಭಾಗಗಳಿಂದಲೇ ಅಲ್ಲದೆ, ವಿದೇಶಗಳಿಂದಲೂ ಪ್ರವಾಸಿಗರು ಆಗಮಿಸುತ್ತಾರೆ. ಈ ಮೇಳವು ವಿಶ್ವದ ಅತಿದೊಡ್ಡ ದನ ಮತ್ತು ಒಂಟೆ ಮೇಳಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಮೇಳದಲ್ಲಿ ಪ್ರಾಣಿಗಳ ವ್ಯಾಪಾರದ ಜತೆ ವಿವಿಧ ರೀತಿಯ ಸ್ಪರ್ಧೆಗಳೂ ನಡೆಯುತ್ತವೆ. ಈ ಬಾರಿ 4,300ಕ್ಕೂ ಹೆಚ್ಚು ಪ್ರಾಣಿಗಳನ್ನು ನೋಂದಾಯಿಸಲಾಗಿದೆ.