ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಜಾತಿ ಆಧಾರಿತ ಮೀಸಲಾತಿ ಪರಿಶೀಲನೆ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ

Cockroach Janata Party Questions: ಮೀಸಲಾತಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಸರ್ಕಾರ ನಡೆಸಿದ ಮಾತುಕತೆಯ ನಂತರ, ಕಾಕ್ರೋಚ್ ಜನತಾ ಪಾರ್ಟಿಯು ಜಾತಿ ಆಧಾರಿತ ಮೀಸಲಾತಿ ಪರಿಶೀಲನೆಯ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದೆ. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಅಭಿಪ್ರಾಯವೇನು ಎಂದು ಪ್ರಶ್ನಿಸಿದೆ.

ಕೇಂದ್ರ ಸರ್ಕಾರದ ನಿಲುವು ಪ್ರಶ್ನಿಸಿದ ಕಾಕ್ರೋಚ್ ಜನತಾ ಪಾರ್ಟಿ

ಸಿಜೆಪಿ ಸಂಸ್ಥಾಪಕ ಮತ್ತು ಸಂಚಾಲಕ ಅಭಿಜೀತ್ ದೀಪ್ಕೆ -

Priyanka P
Priyanka P Aug 28, 2026 4:59 PM

ನವದೆಹಲಿ, ಆ.28: ಮೀಸಲಾತಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಸರ್ಕಾರ ನಡೆಸಿದ ಮಾತುಕತೆಯ ನಂತರ, ಕಾಕ್ರೋಚ್ ಜನತಾ ಪಾರ್ಟಿಯು (Cockroach Janta Party) ಜಾತಿ ಆಧಾರಿತ ಮೀಸಲಾತಿ ಪರಿಶೀಲನೆಯ ಬೇಡಿಕೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ನಿಲುವನ್ನು ಪ್ರಶ್ನಿಸಿದೆ. ಕೇಂದ್ರ ಸಚಿವ ಜೆ.ಪಿ. ನಡ್ಡಾ (JP Nadda) ಅವರು ಗುರುವಾರ 'ಮೀಸಲಾತಿ ಹಠಾವೋ' ಆಂದೋಲನದ ನೇತೃತ್ವ ವಹಿಸಿರುವ ಗುಂಪುಗಳೊಂದಿಗೆ ಸೌಹಾರ್ದಯುತ ಚರ್ಚೆ ನಡೆಸಿದ್ದಾರೆ.

ಸಭೆಯ ನಂತರ, ಈ ವಿಷಯದ ಬಗ್ಗೆ ಸಿಜೆಪಿ ಸಂಸ್ಥಾಪಕ ಮತ್ತು ಸಂಚಾಲಕ ಅಭಿಜೀತ್ ದೀಪ್ಕೆ ಅವರು ಸರ್ಕಾರದ ನಿಲುವಿನ ಬಗ್ಗೆ ಸ್ಪಷ್ಟತೆ ಕೋರಿದರು. ಈ ವಿಷಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯ ಅಭಿಪ್ರಾಯವೇನು ಎಂದು ಪ್ರಶ್ನಿಸಿದರು.

ಆಗಸ್ಟ್ 21 ರಂದು, ಜಾತಿ ಆಧಾರಿತ ಮೀಸಲಾತಿ ನೀತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿಯಲ್ಲಿ ಹಲವಾರು ಜನರು ಪ್ರತಿಭಟನೆ ನಡೆಸಿದರು. ಇನ್‌ಸ್ಟಾಗ್ರಾಮ್ ಆಧಾರಿತ ಪುಟವಾದ ರಿಸರ್ವೇಶನ್ ಹಟಾವೋ ಆಂದೋಲನ್ ನೀಡಿದ ಪ್ರತಿಭಟನಾ ಕರೆಯನ್ನು ಅನುಸರಿಸಿ ಅವರು ಒಟ್ಟುಗೂಡಿದ್ದರು. “ಆಗಸ್ಟ್ 21 ರ ಚಳುವಳಿಯ ಬಗ್ಗೆ ಪ್ರಧಾನಿ ಏನು ಹೇಳುತ್ತಾರೆ? ಇದರ ಹೆಸರನ್ನು ತೆಗೆದುಕೊಳ್ಳಲು ನಡ್ಡಾ ಅವರು ಸಿದ್ಧರಿಲ್ಲವೇಕೆ? ಈ ವಿಷಯವನ್ನು ದೇಶವು ತಿಳಿಯಲು ಬಯಸುತ್ತದೆ” ಎಂದು ದೀಪ್ಕೆ ಎಕ್ಸ್ ಸಾಮಾಜಿಕ ಜಾಲತಾಣದ ಮೂಲಕ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮತ್ತೊಂದು ಸುತ್ತಿನ ಸಮರಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ; ಸೆಪ್ಟೆಂಬರ್‌ 5ರಂದು ನೀಟ್ ಅಕ್ರಮದ ವಿರುದ್ಧ ಪ್ರತಿಭಟನೆಗೆ ಸಿದ್ಧತೆ

'ಮೀಸಲಾತಿ ಹಠಾವೋ' ಆಂದೋಲನದ ಪ್ರತಿನಿಧಿಗಳೊಂದಿಗೆ ನಡ್ಡಾ ಅವರು ನಡೆಸಿದ ಸಭೆಯ ನಂತರ ಆಮ್ ಆದ್ಮಿ ಪಕ್ಷವು ಕೂಡ ಪ್ರಶ್ನೆಗಳನ್ನು ಎತ್ತಿದೆ. ಆಪ್ ದೆಹಲಿ ಘಟಕದ ಅಧ್ಯಕ್ಷ ಸೌರಭ್ ಭಾರದ್ವಾಜ್ ಅವರು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ, “ಬಿಜೆಪಿ ಸುವರ್ಣ ಮೋರ್ಚಾ ಆಂದೋಲನದ ಪ್ರಮುಖ ಬೇಡಿಕೆಯು ಮೀಸಲಾತಿಯನ್ನು ಮರುಪರಿಶೀಲಿಸುವುದಾಗಿತ್ತು. ದಯವಿಟ್ಟು ಆ ವಿಷಯದ ಮೇಲೆ ಗಮನ ಕೇಂದ್ರೀಕರಿಸಿ” ಎಂದು ಬರೆದಿದ್ದಾರೆ.

ಮೀಸಲಾತಿ ವಿರೋಧಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದ ಕೇಂದ್ರ ಸಚಿವ ಜೆ.ಪಿ. ನಡ್ಡಾ, “ಆಗಸ್ಟ್ 21 ರಂದು ಜಂತರ್ ಮಂತರ್‌ನಲ್ಲಿ ನಡೆದ ಚಳವಳಿಯ ನಂತರ, ಪೂರ್ವನಿರ್ಧರಿತ ವೇಳಾಪಟ್ಟಿಯಂತೆ, ತಂಡದ ಸದಸ್ಯರಾದ ಹರ್ಷ್ ದುಬೆ, ರಾನ್ ಬಹದ್ದೂರ್ ಸಿಂಗ್ ಚೌಹಾಣ್ ಮತ್ತು ಮೃತ್ಯುಂಜಯ್ ಪಾಠಕ್ ಅವರೊಂದಿಗೆ ಸೌಹಾರ್ದಯುತ ಚರ್ಚೆಗಳು ನಡೆದವು. ನಾವು ಶೀಘ್ರದಲ್ಲೇ ಮತ್ತೆ ಭೇಟಿಯಾಗುತ್ತೇವೆ” ಎಂದು ಹೇಳಿದರು.

ಆಗಸ್ಟ್ 21 ರಂದು ಏನಾಯಿತು?

ಆಗಸ್ಟ್ 21 ರಂದು ದೆಹಲಿಯಲ್ಲಿ ಪ್ರತಿಭಟನೆ ನಡೆಯಿತು. ಜಂತರ್ ಮಂತರ್‌ನಲ್ಲಿ 'ಮೀಸಲಾತಿ ಹಠಾವೋ' ಆಂದೋಲನ ಬ್ಯಾನರ್ ಅಡಿಯಲ್ಲಿ ಅನುಮತಿ ಪಡೆಯದೆ ಹಲವಾರು ಜನರು ಜಮಾಯಿಸಿದರು. ದೆಹಲಿ ಪೊಲೀಸರು ಪ್ರತಿಭಟನಾಕಾರರಿಗೆ ರಾಮಲೀಲಾ ಮೈದಾನದಲ್ಲಿ ಸೇರಲು ಅವಕಾಶ ನೀಡಿದ್ದರು.

ಜಂತರ್ ಮಂತರ್‌ನಲ್ಲಿ ಹಲವಾರು ಪ್ರತಿಭಟನಾಕಾರರನ್ನು ಬಂಧಿಸಲಾಯಿತು. ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ಸೇರಿದಂತೆ ಭಾರಿ ಭದ್ರತೆಯನ್ನು ಆ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.

ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸುತ್ತಿದ್ದಾರೆ. ಸರ್ಕಾರಿ ಬೆಂಬಲ ಮತ್ತು ಮೀಸಲಾತಿಗೆ ಅರ್ಹತೆಯನ್ನು ನಿರ್ಧರಿಸುವಲ್ಲಿ ಜಾತಿಗಿಂತ ಆರ್ಥಿಕ ಮಾನದಂಡಗಳಿಗೆ ಆದ್ಯತೆ ನೀಡಬೇಕು ಎಂದು ಹೇಳುತ್ತಿದ್ದಾರೆ. ಆರ್ಥಿಕವಾಗಿ ದುರ್ಬಲರಾಗಿರುವ ಜನರಿಗೆ ವಿದ್ಯಾರ್ಥಿವೇತನಗಳು, ಶುಲ್ಕ ಸಹಾಯ, ತರಬೇತಿ ಮತ್ತು ಶೈಕ್ಷಣಿಕ ಬೆಂಬಲವನ್ನು ವಿಸ್ತರಿಸುವ ಮೂಲಕ ಉದ್ದೇಶಿತ ಬೆಂಬಲವನ್ನು ಒದಗಿಸುವುದು ಬೇಡಿಕೆಗಳಲ್ಲಿ ಒಂದಾಗಿದೆ.