ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CP Radhakrishnan: ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಆಯ್ಕೆ: ಪ್ರಲ್ಹಾದ್‌ ಜೋಶಿ ಗೃಹಕಚೇರಿ ಎನ್‌ಡಿಎ ʼಶಕ್ತಿಕೇಂದ್ರʼ

CP Radhakrishnan: ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಗೃಹಕಚೇರಿಯಲ್ಲಿ ಸೋಮವಾರ ಸಂಜೆ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲೇ ಎನ್‌ಡಿಎ ಪ್ರಮುಖರ ಮಹತ್ವದ ಸಭೆ ಸಹ ನಡೆಯಿತು. ಚುನಾವಣೆ ಬಗ್ಗೆ ಪರಸ್ಪರ ಚರ್ಚೆ, ಸಮಾಲೋಚನೆ ನಡೆಯಿತು. ಎನ್‌ಡಿಎ ಸಂಪುಟದ ಸಚಿವರು ಹಾಗೂ ಮೈತ್ರಿಕೂಟದ ಸಂಸದರನೇಕರು ಆಗಮಿಸಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಆಯ್ಕೆ: ಜೋಶಿ ನೇತೃತ್ವದಲ್ಲಿ ಸಭೆ

Profile Siddalinga Swamy Aug 18, 2025 10:45 PM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲೀಗ ಸಾಂವಿಧಾನಿಕ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಗರಿಗೆದರಿದೆ. ಅಂತೆಯೇ ಎನ್‌ಡಿಎ (NDA) ಪಾಳಯದಲ್ಲಿ ಉಪರಾಷ್ಟ್ರಪತಿ ಚುನಾವಣೆ ಸಿದ್ಧತೆ ಬಿರುಸುಗೊಂಡಿದ್ದು, ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ಅವರ ಗೃಹಕಚೇರಿ ಶಕ್ತಿಕೇಂದ್ರವಾಗಿ ಪರಿವರ್ತನೆಗೊಂಡಿದೆ. ಬಿಜೆಪಿ ಉಪರಾಷ್ಟ್ರಪತಿ ಹುದ್ದೆಗೆ ಮಹಾರಾಷ್ಟ್ರ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್‌ (CP Radhakrishnan) ಅವರ ಹೆಸರು ಘೋಷಿಸಿದ ಕ್ಷಣದಿಂದಲೇ ಎನ್‌ಡಿಎ ಮೈತ್ರಿಕೂಟದಲ್ಲಿ ಸಂತಸ ಅರಳಿದೆ. ಒಮ್ಮತದಿಂದ ಉಪರಾಷ್ಟ್ರಪತಿ ಆಯ್ಕೆಗೆ ಎದುರು ನೋಡುತ್ತಿದೆ ಎನ್‌ಡಿಎ ಪಡೆ. ಇದಕ್ಕಾಗಿ ಸಚಿವ ಪ್ರಲ್ಹಾದ್‌ ಜೋಶಿ ಅವರ ನೇತೃತ್ವದಲ್ಲಿ ತ್ವರಿತ ಸಭೆ-ಚರ್ಚೆ, ಅಭ್ಯರ್ಥಿ ರಾಧಾಕೃಷ್ಣನ್‌ ಅವರಿಗೆ ಶುಭ ಹಾರೈಕೆ ಜೋರಾಗಿದೆ.

ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್ ಸೋಮವಾರ ಬೆಳಗ್ಗೆ ನವದೆಹಲಿಗೆ ಆಗಮಿಸುತ್ತಲೇ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ ನೇತೃತ್ವದಲ್ಲಿ ಹಲವು ಸಚಿವರು ಅವರನ್ನು ಸಂತಸದಿಂದ ಬರಮಾಡಿಕೊಂಡರು.

ದೆಹಲಿ ವಿಮಾನ ನಿಲ್ದಾಣದಲ್ಲಿ ಜೋಶಿ ಅವರ ನೇತೃತ್ವದಲ್ಲಿ ದೆಹಲಿ ಸಿಎಂ ರೇಖಾ ಗುಪ್ತಾ ಹಾಗೂ ಕಿರಣ್‌ ರಿಜಿಜು, ಬಿ. ಯಾದವ್‌ ಅವರನ್ನೊಳಗೊಂಡ ಸಂಪುಟ ಸಹದ್ಯೋಗಿಗಳ ತಂಡ ಪುಷ್ಪ ಬೊಕ್ಕೆ ನೀಡಿ ಆತ್ಮೀಯ ಸ್ವಾಗತ ನೀಡಿದರಲ್ಲದೆ, ಶುಭಾಶಯ ಕೋರಿದರು. ಬಳಿಕ ಸಚಿವ ಜೋಶಿ ಅವರ ಗೃಹಕಚೇರಿಯಲ್ಲಿ ಸೇರಿ ಚರ್ಚೆ ನಡೆಸಿದರು.

ಸಂಜೆ ಹೊತ್ತಿಗೆ ಪ್ರಲ್ಹಾದ್‌ ಜೋಶಿ ಅವರ ಸಾರಥ್ಯದಲ್ಲಿ ಗೃಹಕಚೇರಿಯಲ್ಲಿ ಎನ್‌ಡಿಎ ಪ್ರಮುಖರೆಲ್ಲ ಸೇರಿ ಉಪರಾಷ್ಟ್ರಪತಿ ಅಭ್ಯರ್ಥಿ ಸಿ.ಪಿ. ರಾಧಾಕೃಷ್ಣನ್‌ ಅವರನ್ನು ಅಭಿನಂದಿಸಿದರು. ಉಪರಾಷ್ಟ್ರಪತಿ ಹುದ್ದೆಗೆ ಸರಳ ವ್ಯಕ್ತಿತ್ವದ ಮಾಹಾರಾಷ್ಟ್ರ ರಾಜ್ಯಪಾಲ ರಾಧಾಕೃಷ್ಣನ್‌ ಹೆಸರನ್ನು ಅಂತಿಮಗೊಳಿಸುತ್ತಲೇ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳಲ್ಲಿ ಸಂಚಲನ ಉಂಟುಮಾಡಿದೆ.

ಉಪರಾಷ್ಟ್ರಪತಿ ಚುನಾವಣೆಯಲ್ಲಿ ರಾಧಾಕೃಷ್ಣನ್‌ ಅವರನ್ನು ಹೆಚ್ಚಿನ ಮತಗಳೊಂದಿಗೆ ಆಯ್ಕೆ ಮಾಡಿಕೊಳ್ಳಲು ಎನ್‌ಡಿಎ ಪ್ರಮುಖರು ನಿರ್ಧರಿಸಿದ್ದು, ಅದಕ್ಕೆ ತಕ್ಕಂತೆ ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ. ಈ ಹಿಂದಿನ ಅವಧಿಯಲ್ಲಿ ಸಂಸದೀಯ ವ್ಯವಹಾರಗಳ ಖಾತೆ ನಿರ್ವಹಿಸಿದ್ದ ಸಚಿವ ಪ್ರಲ್ಹಾದ್‌ ಜೋಶಿ ಅವರ ಹೆಗಲಿಗೆ ತುಸು ಹೆಚ್ಚಿನ ಜವಾಬ್ದಾರಿ ವಹಿಸಿದಂತಿದೆ.

ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ ಸಿಂಗ್‌ ಹೀಗೆ ಬಿಜೆಪಿ ಮತ್ತು ಮಿತ್ರಪಕ್ಷಗಳ ಪ್ರಮುಖರೊಂದಿಗೆ ಸಚಿವ ಪ್ರಲ್ಹಾದ್‌ ಜೋಶಿ ಅನ್ಯೋನ್ಯತೆ ಹೊಂದಿದ್ದರಿಂದ ಅವರ ನೇತೃತ್ವದಲ್ಲೀಗ ಎನ್‌ಡಿಎ ಪಾಳೆಯದಲ್ಲಿ ಉಪರಾಷ್ಟ್ರಪತಿ ಹುದ್ದೆ ಆಯ್ಕೆ ಪ್ರಕ್ರಿಯೆ ಗರಿಗೆದರಿದೆ. ಪರಿಣಾಮ ಪ್ರಲ್ಹಾದ್‌ ಜೋಶಿ ಅವರ ದೆಹಲಿಯ ಗೃಹ ಕಚೇರಿ ರಾಜಕೀಯ ಶಕ್ತಿ ಕೇಂದ್ರವಾಗಿ ಗಮನ ಸೆಳೆಯುತ್ತಿದೆ.

ಈ ಸುದ್ದಿಯನ್ನೂ ಓದಿ | Pralhad Joshi: ಧರ್ಮಸ್ಥಳದಲ್ಲಿ ಸೃಷ್ಟಿಸಿರುವಂತಹ ಅವ್ಯವಸ್ಥೆಗೆ ರಾಜ್ಯ ಸರ್ಕಾರವೇ ನೇರ ಹೊಣೆ ಹೊರಬೇಕು: ಜೋಶಿ

ಸಚಿವ ಜೋಶಿ ಅವರ ಸಾರಥ್ಯದಲ್ಲಿ ಗೃಹಕಚೇರಿಯಲ್ಲಿ ಸೋಮವಾರ ಸಂಜೆ ಉಪರಾಷ್ಟ್ರಪತಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರ ಸಮ್ಮುಖದಲ್ಲೇ ಎನ್‌ಡಿಎ ಪ್ರಮುಖರ ಮಹತ್ವದ ಸಭೆ ಸಹ ನಡೆಯಿತು. ಚುನಾವಣೆ ಬಗ್ಗೆ ಪರಸ್ಪರ ಚರ್ಚೆ, ಸಮಾಲೋಚನೆ ನಡೆಯಿತು. ಎನ್‌ಡಿಎ ಸಂಪುಟದ ಸಚಿವರು ಹಾಗೂ ಮೈತ್ರಿಕೂಟದ ಸಂಸದರನೇಕರು ಆಗಮಿಸಿ ಅಭ್ಯರ್ಥಿ ರಾಧಾಕೃಷ್ಣನ್‌ ಅವರಿಗೆ ಅಭಿನಂದನೆ ಸಲ್ಲಿಸಿದರು.