Tej Pratap Yadav: ಲಾಲು ಕುಟುಂಬಕ್ಕೆ ಗುಡ್‌ನ್ಯೂಸ್, ಅಪ್ಪನಾದ ತೇಜಸ್ವಿ ಯಾದವ್; ದೊಡ್ಡಪ್ಪನಾದೆ ಎಂದು ಟ್ವೀಟ್ ಮಾಡಿದ ತೇಜ್ ಪ್ರತಾಪ್!
ಆರ್‌ಜೆಡಿ (RJD) ಪಕ್ಷದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮದುವೆ ಮತ್ತು ಪ್ರೀತಿ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಯಾಗಿರುವ ತೇಜ್ ಪ್ರತಾಪ್ ಇದೀಗ ( (Tej Pratap Yadav) ದೊಡ್ಡಪ್ಪನಾಗಿದ್ದಾರೆ. ತೇಜಸ್ವಿ ಯಾದವ್ ಅವರ ಪತ್ನಿ ರಾಜ್‌ಶ್ರೀ ಇಂದು ಬೆಳಗ್ಗೆ ತನ್ನ 2ನೇ ಮಗುವಿಗೆ ಜನ್ಮ ನೀಡಿದ್ದಾರೆ.


ಪಟನಾ: ಆರ್‌ಜೆಡಿ (RJD) ಪಕ್ಷದಲ್ಲಿ ನಾಟಕೀಯ ಬೆಳವಣಿಗೆಗಳು ನಡೆಯುತ್ತಿವೆ. ಮದುವೆ ಮತ್ತು ಪ್ರೀತಿ ವಿಚಾರವಾಗಿ ವ್ಯಾಪಕ ವಿವಾದಕ್ಕೆ ಗುರಿಯಾಗಿ ಪಕ್ಷದಿಂದ ಉಚ್ಚಾಟನೆಯಾಗಿರುವ ತೇಜ್ ಪ್ರತಾಪ್ ಇದೀಗ (Tej Pratap Yadav) ದೊಡ್ಡಪ್ಪನಾಗಿದ್ದಾರೆ. ತೇಜಸ್ವಿ ಯಾದವ್ ಅವರ ಪತ್ನಿ ರಾಜ್‌ಶ್ರೀ ಇಂದು ಬೆಳಗ್ಗೆ ತನ್ನ 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಗಂಡು ಮಗುವಿಗೆ ತಂದೆಯಾದ ತೇಜಸ್ವಿ ಯಾದವ್ ಅವರು ಖುಷಿಯಾಗಿದ್ದು, ಸಂತಸದ ಸುದ್ದಿ, ಮಗುವಿನ ಫೋಟೋಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಹನುಮಾನ್ ದೇವರ ಆಶೀರ್ವಾದದಿಂದ ಗಂಡು ಮಗು ಜನಿಸಿದೆ ಎಂದು ಬರೆದು ಕೊಂಡಿದ್ದಾರೆ.
ತಮ್ಮನಿಗೆ ಮಗ ಜನಿಸಿದ ಖುಷಿಯನ್ನು ತೇಜ್ ಪ್ರತಾಪ್ ಯಾದವ್ ಹಂಚಿಕೊಂಡಿದ್ದಾರೆ. "ಶ್ರೀ ಬಂಕೆ ಬಿಹಾರಿ ಜಿ ಅವರ ಅನಂತ ಅನುಗ್ರಹ ಮತ್ತು ಆಶೀರ್ವಾದದಿಂದ, ಗಂಡು ಮಗುವಿನ ಆಗಮನದೊಂದಿಗೆ ನನಗೆ ದೊಡ್ಡಪ್ಪನಾಗುವ ಅನುಗ್ರಹ ದೊರೆಕಿದೆ. ತಮ್ಮ ತೇಜಸ್ವಿ ಮತ್ತು ರಾಜ್ ಶ್ರೀ ಯಾದವ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳು. ನನ್ನ ಮಗನಿಗೆ ಎಲ್ಲಾ ಅನುಗ್ರಹ ಸಿಗಲಿ ಎಂದು ಅವರು ಟ್ವೀಟ್ ಮೂಲಕ ತಿಳಸಿದ್ದಾರೆ.
ತೇಜ್ ಪ್ರತಾಪ್ ಯಾದವ್ ಅವರನ್ನು ಆರ್‌ಜೆಡಿಯಿಂದ ಹೊರಹಾಕಿ ಒಂದು ದಿನದ ನಂತರ ಈ ಟ್ವೀಟ್ ಬಂದಿದೆ. ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ (Lalu Prasad Yadav) ಅವರು ಭಾನುವಾರ ತಮ್ಮ ಹಿರಿಯ ಪುತ್ರ ತೇಜ್ ಪ್ರತಾಪ್ ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿದ್ದಾರೆ. ತೇಜ್ ಅವರ ಗೆಳತಿ ಅನುಷ್ಕಾ ಯಾದವ್ ಅವರೊಂದಿಗಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ, ತೇಜ್ ಪ್ರತಾಪ್ ಯಾದವ್ ಅವರ ಬೇಜವಾಬ್ದಾರಿಯುತ ನಡವಳಿಕೆ ಮತ್ತು ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಯಾದವ್ ಅವರು ಆರೋಪಿಸಿ, ಪಕ್ಷದಿಂದ ಆರು ವರ್ಷಗಳ ಕಾಲ ಉಚ್ಚಾಟಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ರಾಜಕೀಯ, ವೈಯಕ್ತಿಕ ಜೀವನದಲ್ಲಿ ಬಿರುಗಾಳಿ ಎಬ್ಬಿಸಿದ ಆ 1 ಫೇಸ್‌ಬುಕ್ ಪೋಸ್ಟ್; ಮನೆ, ಪಕ್ಷದಿಂದ ಉಚ್ಚಾಟನೆ
ಈ ಕುರಿತು ಲಾಲು ಯಾದವ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ, "ಖಾಸಗಿ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ನಿರ್ಲಕ್ಷಿಸುವುದರಿಂದ ಸಾಮಾಜಿಕ ನ್ಯಾಯಕ್ಕಾಗಿ ನಮ್ಮ ಸಾಮೂಹಿಕ ಹೋರಾಟಗಳು ದುರ್ಬಲಗೊಳ್ಳುತ್ತದೆ. ಅದರಂತೆ, ನನ್ನ ಹಿರಿಯ ಮಗನ (ತೇಜ್ ಪ್ರತಾಪ್ ಯಾದವ್) ಚಟುವಟಿಕೆಗಳು, ಸಾರ್ವಜನಿಕ ನಡವಳಿಕೆ ಮತ್ತು ಬೇಜವಾಬ್ದಾರಿ ವರ್ತನೆಯು ನಮ್ಮ ಕೌಟುಂಬಿಕ ಮೌಲ್ಯಗಳು ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿಲ್ಲ. ಆದ್ದರಿಂದ, ನಾನು ಅವರನ್ನು ಪಕ್ಷ ಮತ್ತು ಕುಟುಂಬದಿಂದ ದೂರವಿಡುತ್ತೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.