ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಅಪಾಯಕಾರಿ ಮಟ್ಟಕ್ಕೆ ತಲುಪಿದ ದೆಹಲಿ ವಾಯುಮಾಲಿನ್ಯ: 450 ದಾಟಿದ AQI

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಮತ್ತಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಂದು ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 450ಕ್ಕೆ ಏರುವ ಮೂಲಕ ಗಂಭೀರ ಹಂತವನ್ನು ತಲುಪಿದೆ. ಇಡೀ ನಗರವು ದಟ್ಟವಾದ ವಿಷಕಾರಿ ಹೊಗೆಯಿಂದ ಆವೃತವಾಗಿದ್ದು, ದೃಷ್ಟಿ ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ.

ಅಪಾಯಕಾರಿ ಮಟ್ಟಕ್ಕೆ ತಲುಪಿದ ದೆಹಲಿ ವಾಯುಮಾಲಿನ್ಯ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Nov 13, 2026 10:52 AM

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯುಮಾಲಿನ್ಯದ ಮಟ್ಟ ಮತ್ತಷ್ಟು ಅಪಾಯಕಾರಿ ಹಂತಕ್ಕೆ ತಲುಪಿದೆ. ಇಂದು ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ (AQI) 450ಕ್ಕೆ ಏರುವ ಮೂಲಕ ಗಂಭೀರ ಹಂತವನ್ನು ತಲುಪಿದೆ. ಇಡೀ ನಗರವು ದಟ್ಟವಾದ ವಿಷಕಾರಿ ಹೊಗೆಯಿಂದ ಆವೃತವಾಗಿದ್ದು, ದೃಷ್ಟಿ ಗೋಚರತೆ ಗಣನೀಯವಾಗಿ ಕಡಿಮೆಯಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕ ಮೂಡಿಸಿದೆ. ನಗರದ ಹಲವು ಪ್ರದೇಶಗಳಲ್ಲಿ AQI 450ರ ಗಡಿ ದಾಟಿದ್ದು, ಗಾಳಿಯ ಗುಣಮಟ್ಟ ತೀವ್ರ ಕಳಪೆ ಹಂತ ತಲುಪಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ತಿಳಿಸಿದೆ ಎಂದು ಎಎನ್‌ಐ ವರದಿ ಮಾಡಿದೆ.

ಐಟಿಒ ಮತ್ತು ಸುತ್ತಮುತ್ತಲಿನ ಪ್ರಮುಖ ವಾಯು ಗುಣಮಟ್ಟ ಮಾಪನ ಕೇಂದ್ರಗಳಲ್ಲಿ AQI 450ಕ್ಕಿಂತ ಹೆಚ್ಚಾಗಿ ದಾಖಲಾಗಿದೆ. ಇದು ಆರೋಗ್ಯವಂತ ವ್ಯಕ್ತಿಗಳ ಮೇಲೂ ತೀವ್ರ ದುಷ್ಪರಿಣಾಮ ಬೀರುವಷ್ಟು ಅಪಾಯಕಾರಿಯಾಗಿದೆ. ದ್ವಾರಕಾ ಎಕ್ಸ್‌ಪ್ರೆಸ್‌ವೇ 369 AQI ದಾಖಲಾಗಿದ್ದು, ಇದನ್ನು ಅತ್ಯಂತ ಕಳಪೆ ಮಟ್ಟ ಎಂದು ವರ್ಗೀಕರಿಸಲಾಗಿದೆ. ಜವಾಹರಲಾಲ್‌ ನೆಹರು ಕ್ರೀಡಾಂಗಣದ ಸುತ್ತಮುತ್ತಿನ ಪ್ರದೇಶವು 374 AQIಗೆ ತಲುಪಿದೆ.

ಕಳೆದ ಕೆಲ ದಿನಗಳಿಂದ ದೆಹಲಿಯ ವಾಯುಮಾಲಿನ್ಯ ತೀರಾ ಹದಗೆಟ್ಟಿದ್ದು, ದೆಹಲಿಯ ಒಟ್ಟಾರೆ ವಾಯುಗುಣ ಸೂಚ್ಯಂಕವು ನವೆಂಬರ್‌ 12ರ ಗುರುವಾರ ಮಧ್ಯಾಹ್ನ 350ಕ್ಕೆ ಏರಿದೆ. ಇದು ದೀಪಾವಳಿ ನಂತರ ದಾಖಲಾದ ಅತ್ಯಂತ ಕೆಟ್ಟ ವಾಯುಮಾಲಿನ್ಯದ ಮಟ್ಟವಾಗಿದೆ ಎಂದು ಸಿಪಿಸಿಬಿ ಅಂಶಗಳ ವರದಿಗಳು ತಿಳಿಸಿವೆ. ಗುರುವಾರ ರಾತ್ರಿ ವೇಳೆಗೆ ಸೂಚ್ಯಂಕವು 387ಕ್ಕೆ ಏರಿತು, 58 ಮೇಲ್ವಿಚಾರಣಾ ಕೇಂದ್ರಗಳಲ್ಲಿ 21 ತೀವ್ರ ಮಾಲಿನ್ಯ ಮಟ್ಟವನ್ನು ವರದಿ ಮಾಡಿವೆ. ವರದಿಗಳ ಪ್ರಕಾರ, ಪಿಎಂ 2.5 ಸಾಂದ್ರತೆಯು 24 ಗಂಟೆಗಳಲ್ಲಿ ದ್ವಿಗುಣಗೊಂಡು ಗುರುವಾರ ಸಂಜೆಯ ವೇಳೆಗೆ ಪ್ರತಿ ಘನ ಮೀಟರ್‌ಗೆ 244 ಮೈಕ್ರೋಗ್ರಾಂಗೆ ತಲುಪಿದೆ, ಇದು ರಾಷ್ಟ್ರೀಯ ಮಾನದಂಡಕ್ಕಿಂತ ಸುಮಾರು ನಾಲ್ಕು ಪಟ್ಟು ಹೆಚ್ಚು.

ಗಾಳಿಯಲ್ಲಿರುವ ಮಾಲಿನ್ಯದ ಕಣಗಳು ಮೇಲಕ್ಕೆ ಹಾರಿ ಚದುರಿಹೋಗಲು ನೆರವಾಗುವ ವಾತಾವರಣದ ಗಾಳಿಯ ಪದರ ಎರಡು ದಿನಗಳ ಹಿಂದೆ 1,400 ಮೀಟರ್‌ಗಳಷ್ಟು ಎತ್ತರದಲ್ಲಿತ್ತು, ಆದರೆ ಗುರುವಾರ ಮಧ್ಯಾಹ್ನದ ವೇಳೆಗೆ ಅದು ಕೇವಲ 400 ಮೀಟರ್‌ಗೆ ಇಳಿದಿದೆ. ಇದರ ಜೊತೆಗೆ ವಾಯುವ್ಯ ದಿಕ್ಕಿನಿಂದ ಬೀಸುತ್ತಿರುವ ಗಾಳಿಯು ಪಂಜಾಬ್ ಮತ್ತು ಹರಿಯಾಣದಲ್ಲಿ ರೈತರು ಕೃಷಿ ತ್ಯಾಜ್ಯ ಸುಡುವುದರಿಂದ ಉಂಟಾಗುವ ದಟ್ಟ ಹೊಗೆಯನ್ನು ಮತ್ತೆ ದೆಹಲಿಯತ್ತ ತರುತ್ತಿದೆ. ಮಾಲಿನ್ಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು 'ಗ್ರಾಪ್' ನಿಯಮಗಳ ಅಡಿಯಲ್ಲಿ ಕಠಿಣ ಕ್ರಮಗಳನ್ನು ಮುಂದುವರಿಸಿದ್ದಾರೆ. ನವೆಂಬರ್ 6ರಂದು ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ 382ಕ್ಕೆ ತಲುಪಿ ಪರಿಸ್ಥಿತಿ ಇನ್ನಷ್ಟು ಹದಗೆಡುವ ಮುನ್ಸೂಚನೆ ಸಿಕ್ಕ ತಕ್ಷಣ, ವಾಯು ಗುಣಮಟ್ಟ ನಿರ್ವಹಣಾ ಆಯೋಗವು ದೆಹಲಿ-ಎನ್‌ಸಿಆರ್ ವ್ಯಾಪ್ತಿಯಲ್ಲಿ GRAP 3ನೇ ಹಂತದ ನಿರ್ಬಂಧಗಳನ್ನು ಜಾರಿಗೊಳಿಸಿತ್ತು. ಹೊಸ ನಿಯಮಗಳ ಪ್ರಕಾರ, AQI ಮಟ್ಟ 401 ರಿಂದ 450ರ ನಡುವೆ ಇದ್ದರೆ ಅದನ್ನು 'ಗಂಭೀರ' ಎಂದೂ, 450ಕ್ಕಿಂತ ಹೆಚ್ಚಾದರೆ 'ಅತಿ ಗಂಭೀರ' ಎಂದೂ ಪರಿಗಣಿಸಲಾಗುತ್ತದೆ; ಈ ಹಂತಗಳಲ್ಲಿ ಕಟ್ಟಡ ನಿರ್ಮಾಣ ಹಾಗೂ ನೆಲಸಮ ಕೆಲಸಗಳಿಗೆ ತಡೆ, ಹೆಚ್ಚು ಹೊಗೆ ಉಗುಳುವ ವಾಹನಗಳ ಸಂಚಾರಕ್ಕೆ ನಿರ್ಬಂಧ ಸೇರಿದಂತೆ ತುರ್ತು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ವಾಯುಮಾಲಿನ್ಯ ಹೆಚ್ಚಳಕ್ಕೆ ಕಾರಣವೇನು?

ವಾಹನಗಳಿಂದ ಹೊರಬರುವ ಹೊಗೆ ಹಾಗೂ ನಿರಂತರವಾಗಿ ನಡೆಯುತ್ತಿರುವ ನಿರ್ಮಾಣ ಕಾಮಗಾರಿಗಳು ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣಗಳಾಗಿವೆ. ಗಾಳಿಯಲ್ಲಿ ಹರಡಿರುವ ಕಲುಷಿತ ಕಣಗಳು ವಾತಾವರಣದಿಂದ ಸುಲಭವಾಗಿ ದೂರವಾಗದೆ ಉಳಿದುಕೊಳ್ಳುತ್ತಿರುವುದರಿಂದ ದೆಹಲಿಯ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಟ್ಟಿದೆ. ಇದರ ಪರಿಣಾಮವಾಗಿ ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ದಟ್ಟವಾದ ಹೊಗೆಯ ಮಂಜಿನಿಂದ ಆವೃತವಾಗಿವೆ.

ಇನ್ನೂ ಕೆಲವು ದಿನ ಇದೇ ಪರಿಸ್ಥಿತಿ ಸಾಧ್ಯತೆ

ಹವಾಮಾನ ಮುನ್ಸೂಚನೆಯ ಪ್ರಕಾರ, ಮುಂದಿನ ಮೂರರಿಂದ ನಾಲ್ಕು ದಿನಗಳವರೆಗೆ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆ ಇಲ್ಲದಿದ್ದರೆ ವಾಯುಮಾಲಿನ್ಯದ ಪ್ರಮಾಣ ಇದೇ ಮಟ್ಟದಲ್ಲಿ ಮುಂದುವರಿಯಬಹುದು. ಈ ಅವಧಿಯಲ್ಲಿ AQI 300ರಿಂದ 400ರ ಆಸುಪಾಸಿನಲ್ಲಿರುವ ಸಾಧ್ಯತೆಯಿದೆ. ದೀಪಾವಳಿ ಬಳಿಕ ದೆಹಲಿಯ ಗಾಳಿಯ ಗುಣಮಟ್ಟ ಮತ್ತೆ ಕುಸಿದಿರುವುದು ರಾಜಧಾನಿಯ ಜನರಲ್ಲಿ ಆತಂಕ ಮೂಡಿಸಿದೆ.