Delhi Blast: ಕೆಂಪು ಕೋಟೆ ಬಳಿ ಸ್ಫೋಟ ಪ್ರಕರಣ; i20 ಕಾರು ಮಾಲೀಕ ತಾರೀಕ್ ಬಂಧನ
ದೆಹಲಿಯ ಕೆಂಪು ಕೋಟೆ ( Red Fort) ಬಳಿ ನವೆಂಬರ್ 10 ರ ರಾತ್ರಿ ಸುಮಾರು 7.30 ರ ಸಂಭವಿಸಿದ ಕಾರು ಸ್ಫೋಟ ಸಂಭವಿಸಿ ಒಂಬತ್ತು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇದೊಂದು ಶಂಕಿತ ಭಯೋತ್ಪಾಕ ಕೃತ್ಯ ಎಂದು ಊಹಿಸಲಾಗಿದ್ದು, ತನಿಖೆ ತೀವೃಗೊಂಡಿದೆ.
ದೆಹಲಿ ಸ್ಫೋಟ ಪ್ರಕರಣದಲ್ಲಿ ಸ್ಫೋಟಗೊಂಡ ಕಾರು ಮಾಲೀಕನ ಬಂಧನ -
ನವದೆಹಲಿ: ದೆಹಲಿಯ ಕೆಂಪು ಕೋಟೆ (Red Fort) ಬಳಿ ನವೆಂಬರ್ 10 ರ ರಾತ್ರಿ (Delhi Blast) ಸುಮಾರು 7.30 ರ ಸಂಭವಿಸಿದ ಕಾರು ಸ್ಫೋಟ ಸಂಭವಿಸಿ ಒಂಬತ್ತು ಜನರು ಮೃತಪಟ್ಟಿದ್ದು, ಹಲವರು ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಇದೊಂದು ಶಂಕಿತ ಭಯೋತ್ಪಾಕ ಕೃತ್ಯ ಎಂದು ಊಹಿಸಲಾಗಿದ್ದು, ತನಿಖೆ ತೀವೃಗೊಂಡಿದೆ. ಮಾಹಿತಿ ಕಲೆ ಹಾಕುತ್ತಿರುವ ತನಿಖಾ ತಂಡಕ್ಕೆ ಸ್ಫೋಟಕ್ಕೆ ಬಳಸಲಾದ ಕಾರು ಮಾಲೀಕ ಮೊಹಮ್ಮದ್ ಸಲ್ಮಾನ್ ಎಂಬಾತನಾಗಿದ್ದು, ನಂತರ ಅದನ್ನು ತಾರಿಕ್ ಎಂಬವರಿಗೆ ಮಾರಾಟ ಮಾಡಿದ್ದರು. ತಾರಿಕ್ (Jammu Kashmir) ಜಮ್ಮು ಮತ್ತು ಕಾಶ್ಮೀರದ (Pulvama) ಪುಲ್ವಾಮಾದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಹರಿಯಾಣ ನೋಂದಣಿ HR26CE7674 ಹುಂಡೈ i20 ಕಾರನ್ನು ಸ್ಫೋಟಕ್ಕೆ ಬಳಸಲಾಗಿದೆ. ಸದ್ಯ ಸಲ್ಮಾನ್ ಹಾಗೂ ತಾರೀಕ್ ಇಬ್ಬರನ್ನೂ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ. ದೆಹಲಿ ಪೊಲೀಸ್ ವಿಶೇಷ ಘಟಕ, ಎನ್‌ಐಎ ಮತ್ತು ಬಾಂಬ್ ನಿಷ್ಕ್ರಿಯ ದಳದ ತಂಡಗಳು ಸ್ಥಳದಲ್ಲಿದ್ದು, ಸಂಪೂರ್ಣ ತನಿಖೆ ನಡೆಸುತ್ತಿವೆ. ವಿಧಿವಿಜ್ಞಾನ ತಜ್ಞರು ಸಹ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ದೆಹಲಿ ಪೊಲೀಸರು ಭಯೋತ್ಪಾದನೆ ಮತ್ತು ಸ್ಫೋಟಕ ಕಾಯ್ದೆ ಸೇರಿದಂತೆ ಹಲವು ಸೆಕ್ಷನ್‌ಗಳನ್ನು ಅನ್ವಯಿಸಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಿದ್ದಾರೆ.
ಎಫ್‌ಐಆರ್‌ನಲ್ಲಿ ಭಯೋತ್ಪಾದಕ ಕೃತ್ಯಗಳು ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವುದಕ್ಕಾಗಿ ಶಿಕ್ಷೆಯನ್ನು ಎದುರಿಸುವ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯ ( ಯುಎಪಿಎ ) ಸೆಕ್ಷನ್ 16 ಮತ್ತು 18 ಸೇರಿವೆ ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಘಟನೆಯಲ್ಲಿ ಸ್ಫೋಟಕಗಳ ಅಕ್ರಮ ಸ್ವಾಧೀನ ಮತ್ತು ಬಳಕೆಯನ್ನು ಪರಿಗಣಿಸಿ, ಪೊಲೀಸರು ಸ್ಫೋಟಕ ವಸ್ತುಗಳ ಕಾಯ್ದೆಯ ಸೆಕ್ಷನ್ 3 ಮತ್ತು 4 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: Delhi Red Fort Blast: ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಪ್ರಧಾನಿ ಮೋದಿ ಭೇಟಿ; ಗಾಯಾಳುಗಳ ಆರೋಗ್ಯ ವಿಚಾರಣೆ
ಸ್ಫೋಟ ಸಂಭವಿಸಿದ್ದೇಗೆ?
ಸೋಮವಾರ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಬಳಿಯ ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಧಾನವಾಗಿ ಚಲಿಸುತ್ತಿದ್ದ ಕಾರೊಂದು ಸ್ಫೋಟಗೊಂಡಿದೆ. ಸ್ಫೋಟದಲ್ಲಿ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದರೆ, ಹಲವು ವಾಹನಗಳು ಸುಟ್ಟು ಕರಕಲಾಗಿವೆ. ಸ್ಫೋಟ ಸಂಭವಿಸಿದ ಕಾರಿನಲ್ಲಿ ಮೂವರು ಇದ್ದರು ಎಂದು ಪೊಲೀಸರು ತಿಳಿಸಿದ್ದು, ಇದು ಆತ್ಮಹತ್ಯಾ ಬಾಂಬರ್ ದಾಳಿಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.
ಸ್ಪೋಟಕ್ಕೂ ಮೊದಲು i20 ಕಾರು ದೆಹಲಿಯಾದ್ಯಂತ ಸಂಚಾರ ನಡೆಸಿರುವುದು ತಿಳಿದು ಬಂದಿದೆ. ಕಾರು ಮಧ್ಯಾಹ್ನ 3:19ಕ್ಕೆ ಕೆಂಪು ಕೋಟೆ ಪಾರ್ಕಿಂಗ್ ಸ್ಥಳ ಪ್ರವೇಶಿಸಿದೆ. 3 ಗಂಟೆಗಳ ಕಾಲ ಅದೇ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದ ಕಾರು, ಸಂಜೆ 6:48ಕ್ಕೆ ಅಲ್ಲಿಂದ ಹೊರಟಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಕಾರು ಸಬ್ಜಿ ಮಂಡಿ ಮತ್ತು ದರಿಯಾಗಂಜ್ ರಸ್ತೆಯ ಮೂಲಕ ತೆರಳಿ ಕೆಂಪು ಕೋಟೆ ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ತಲುಪಿದ್ದು, ಕೆಲವೇ ಕ್ಷಣಗಳಲ್ಲಿ ಸ್ಫೋಟಗೊಂಡಿದೆ.