ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi Blast: ದೆಹಲಿ ಕಾರು ಸ್ಫೋಟ ಹಫೀಜ್‌ ಸಯೀದ್‌ ಕೃತ್ಯ? ಆಪರೇಶನ್‌ ಸಿಂಧೂರ್‌ಗೆ ಪ್ರತೀಕಾರದ ಶಂಕೆ

Hafiz Saeed: ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಲಷ್ಕರ್ - ಎ -ತೈಬಾ ಸಂಘಟನೆ ಹತ್ತು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಎಚ್ಚರಿಕೆಯನ್ನು ನೀಡಿತ್ತು. ಇದರ ಬೆನ್ನಲ್ಲೇ, ಭಾರತದ ಗುಪ್ತಚರ ಇಲಾಖೆ ಕೂಡ ಈ ಬಗ್ಗೆ ಮಾಹಿತಿ ನೀಡಿತ್ತು. ಕಳೆದ ಅಕ್ಟೋಬರ್ 31ರಂದು ನಡೆದಿದ್ದ ಲಷ್ಕರ್ ಉಗ್ರರ ಸಭೆಯಲ್ಲಿ, ಉಗ್ರ ಹಫೀಜ್ ಸಯೀದ್ ಪರವಾಗಿ ಆತನ ಕಮಾಂಡರ್ ಒಬ್ಬ, ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ. ಪೂರ್ವ ಪಾಕಿಸ್ತಾನದಲ್ಲಿ ಸಕ್ರಿಯರಾಗಿರುವ ಲಷ್ಕರ್ -ಎ-ತೈಬಾ ಉಗ್ರರು, ಬಾಂಗ್ಲಾದೇಶದ ಲಾಂಚ್ ಪ್ಯಾಡ್ ಅನ್ನು ಬಳಸಿಕೊಂಡು, ಭಾರತದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದವು.

ಆಪರೇಶನ್‌ ಸಿಂದೂರ್‌ಗೆ ಪ್ರತೀಕಾರ ತೀರಿಸಿಕೊಂಡನೇ ಹಫೀಜ್‌ ಸಯೀದ್‌?

ದಿಲ್ಲಿ ಕಾರು ಸ್ಫೋಟದ ಹಿಂದೆ ಉಗ್ರ ಹಫೀಜ್‌ ಸಯೀದ್‌ ಕೈವಾಡ ಶಂಕೆ -

ಹರೀಶ್‌ ಕೇರ
ಹರೀಶ್‌ ಕೇರ Nov 11, 2025 6:26 AM

ನವದೆಹಲಿ: ರಾಜಧಾನಿ ದೆಹಲಿಯ ಕೆಂಪು ಕೋಟೆ ಮೆಟ್ರ‍ೋ ಸ್ಟೇಷನ್ ಬಳಿ ನಡೆದ ಭೀಕರ ಕಾರು ಸ್ಪೋಟದಲ್ಲಿ (Delhi Blast) ಇದುವರೆಗೆ ಒಂಬತ್ತು ಜನ ಸಾವನ್ನಪ್ಪಿದ್ದಾರೆ ಮತ್ತು 24ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಇದು ಉಗ್ರರು ನಡೆಸಿದ ಬಾಂಬ್‌ ಸ್ಫೋಟ (Delhi car blast) ಕೃತ್ಯವೇ ಎಂಬುದನ್ನು ಇನ್ನಷ್ಟೇ ಪೊಲೀಸರು ಹೇಳಬೇಕಿದೆ. ಈ ನಡುವೆ, ಭಾರತದಲ್ಲಿ ಸದ್ಯದಲ್ಲೇ ಭೀಕರ ಉಗ್ರ ಕೃತ್ಯದ ಮೂಲಕ ಆಪರೇಶನ್‌ ಸಿಂಧೂರ್‌ಗೆ (Operation Sindoor) ಪ್ರತೀಕಾರಕ್ಕೆ ಕುಖ್ಯಾತ ಭಯೋತ್ಪಾದಕ ಹಫೀಜ್‌ ಸಯೀದ್‌ (hafiz saeed) ಮುಂದಾಗಿದ್ದ ಎಂಬ ಅಂಶವೂ ಮತ್ತೆ ಮುನ್ನೆಲೆಗೆ ಬಂದಿದೆ. ಇದು ಆತ ಕೃತ್ಯವಿರಬಹುದು ಎಂಬ ಅನುಮಾನವೂ ಮೂಡಿದೆ.

ಆಪರೇಷನ್ ಸಿಂಧೂರ್ ಕಾರ್ಯಾಚರಣೆಗೆ ಪ್ರತೀಕಾರ ತೆಗೆದುಕೊಳ್ಳುವುದಾಗಿ ಲಷ್ಕರ್ - ಎ -ತೈಬಾ ಸಂಘಟನೆ ಹತ್ತು ದಿನಗಳ ಹಿಂದೆ ಪಾಕಿಸ್ತಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಎಚ್ಚರಿಕೆಯನ್ನು ನೀಡಿತ್ತು. ಇದರ ಬೆನ್ನಲ್ಲೇ, ಭಾರತದ ಗುಪ್ತಚರ ಇಲಾಖೆ ಕೂಡ ಈ ಬಗ್ಗೆ ಮಾಹಿತಿ ನೀಡಿತ್ತು. ಕಳೆದ ಅಕ್ಟೋಬರ್ 31ರಂದು ನಡೆದಿದ್ದ ಲಷ್ಕರ್ ಉಗ್ರರ ಸಭೆಯಲ್ಲಿ, ಉಗ್ರ ಹಫೀಜ್ ಸಯೀದ್ ಪರವಾಗಿ ಆತನ ಕಮಾಂಡರ್ ಒಬ್ಬ, ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ್ದ.

ಪೂರ್ವ ಪಾಕಿಸ್ತಾನದಲ್ಲಿ ಸಕ್ರಿಯರಾಗಿರುವ ಲಷ್ಕರ್ -ಎ-ತೈಬಾ ಉಗ್ರರು, ಬಾಂಗ್ಲಾದೇಶದ ಲಾಂಚ್ ಪ್ಯಾಡ್ ಅನ್ನು ಬಳಸಿಕೊಂಡು, ಭಾರತದ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಎಚ್ಚರಿಸಿದ್ದವು. ಈ ಹಿನ್ನಲೆಯಲ್ಲಿ ಆಗಲೇ ಭದ್ರತಾ ಪಡೆಗಳು ಆಯಕಟ್ಟಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಿದ್ದವು.

ಭಾರತದ ಮೇಲಿನ ದಾಳಿಗೆ ಈಗಿರುವ ದಾರಿಯನ್ನು ಬಿಟ್ಟು, ಹೊಸ ಮಾರ್ಗವನ್ನು ಲಷ್ಕರ್ ಉಗ್ರರು ಹುಡುಕಿದ್ದರು. ಅದು, ಬಾಂಗ್ಲಾದೇಶದ ಲಾಂಚ್ ಪ್ಯಾಡ್ ಬಳಸಿ, ದಾಳಿಯನ್ನು ನಡೆಸುವುದಾಗಿ, ಲಷ್ಕರ್ ಸಂಘಟನೆಯ ಹಿರಿಯ ಕಮಾಂಡರ್ ಸೈಫುಲ್ಲಾ ಸೈಫ್ ಎಚ್ಚರಿಸಿದ್ದ.

ಕಳೆದ ಸೆಪ್ಟಂಬರ್ ನಲ್ಲಿ ಪಿಒಕೆಯಲ್ಲಿ ಸರಣಿ ಸಭೆಗಳು ನಡೆದಿದ್ದವು. ಜೈಶ್ ಎ ಮೊಹಮ್ಮದ್ ಸೇರಿದಂತೆ ಪಿಒಕೆಯ ಎಲ್ಲಾ ಉಗ್ರ ಸಂಘಟನೆಗಳು, ಪಾಕ್ ಐಎಸ್ಐ ಏಜೆಂಟ್ ಗಳು ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಅಲ್ಲಿಯೂ, ಆಪರೇಷನ್ ಸಿಂಧೂರ್ ವಿರುದ್ಧ ಸೇಡು ತೀರಿಸಿಕೊಳ್ಳುವ ನಿರ್ಧಾರ ಕೈಗೊಳ್ಳಲಾಗಿತ್ತು ಎನ್ನುವ ಮಾಹಿತಿಯಿದೆ.

ಘಟನೆಯ ಬಳಿಕ, ಪ್ರಮುಖವಾಗಿ, ದೆಹಲಿಗೆ ಹೊಂದಿಕೊಂಡಿರುವ ಉತ್ತರ ಪ್ರದೇಶದಲ್ಲಿ ಭದ್ರತೆಯನ್ನು ಕೇಂದ್ರ ಗೃಹ ಇಲಾಖೆಯ ಆದೇಶದ ಮೇರೆಗೆ ಹೆಚ್ಚಿಸಲಾಗಿದೆ. ದೆಹಲಿ - ನೋಯ್ಡಾ ಹೆದ್ದಾರಿಯಲ್ಲಿ ಸಾಗುವ ಎಲ್ಲಾ ವಾಹನಗಳನ್ನು ಪೊಲೀಸರು ತೀವ್ರ ತಪಾಸಣೆಗೆ ಒಳಪಡಿಸಿದ್ದಾರೆ. ದೆಹಲಿ ಮತ್ತು ದೇಶದಾದ್ಯಂತ ಆಯಕಟ್ಟಿನ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ದೆಹಲಿಯಲ್ಲಿ ಕಾರ್ ಸ್ಪೋಟದ ಹೊಣೆಯನ್ನು ಇನ್ನೂ ಯಾರೂ ವಹಿಸಿಕೊಂಡಿಲ್ಲ. ಇದು ಉಗ್ರರ ಕೃತ್ಯವೋ ಅಥವಾ ಇದಕ್ಕೆ ಬೇರೆ ಏನಾದರೂ ಆಯಾಮ ಇದೆಯೋ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಅಪ್ರಾಪ್ತ ಹುಡುಗರನ್ನು ಉಗ್ರ ಸಂಘಟನೆಗಳು ತಮ್ಮ ಉಗ್ರ ಕೃತ್ಯಕ್ಕೆ ಸೇರ್ಪಡೆಗೊಳಿಸುತ್ತಿರುವ ಆಘಾತಕಾರಿ ಮಾಹಿತಿಗಳು ಬರುತ್ತಿವೆ.