ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕರಡು ಮತದಾರರ ಪಟ್ಟಿಯಿಂದ ಕೇರಳದಲ್ಲಿ 24 ಲಕ್ಷ, ಮಧ್ಯಪ್ರದೇಶದಲ್ಲಿ 42.74 ಲಕ್ಷ ಜನರ ಹೆಸರು ಡಿಲಿಟ್‌

draft electoral roll: ಭಾರತೀಯ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯ ನಂತರ ಪ್ರಕಟಿಸಿದ ಕರಡು ಮತದಾರರ ಪಟ್ಟಿಯಲ್ಲಿ ಮಹತ್ವದ ಬದಲಾವಣೆಗಳು ನಡೆದಿವೆ. ಈ ಪರಿಷ್ಕರಣೆ ವೇಳೆ ಕೇರಳದಲ್ಲಿ ಸುಮಾರು 24 ಲಕ್ಷ ಮತ್ತು ಮಧ್ಯಪ್ರದೇಶದಲ್ಲಿ 42.74 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ.

ಮತದಾರರ ಪಟ್ಟಿಯಿಂದ ಹಲವರ ಹೆಸರು ಡಿಲೀಟ್

ಕರಡು ಮತದಾರರ ಪಟ್ಟಿಯಲ್ಲಿ ಮಹತ್ವದ ಬದಲಾವಣೆ -

Priyanka P
Priyanka P Dec 24, 2025 10:46 AM

ತಿರುವನಂತಪುರ: ಕೇರಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (Special Intensive Revision – SIR) ಪ್ರಕ್ರಿಯೆಯ ನಂತರ ಮಂಗಳವಾರ ಭಾರತೀಯ ಚುನಾವಣಾ ಆಯೋಗ (Election Commission of India) ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ರಾಜ್ಯದ ಮತದಾರರ ಪಟ್ಟಿಯಿಂದ 24.08 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ.

ಚುನಾವಣಾ ಆಯೋಗದ ಪ್ರಕಾರ, 2,78,50,855 ಮತದಾರರಲ್ಲಿ 2,54,42,352 ಮತದಾರರು ತಮ್ಮ ಎಣಿಕೆ ನಮೂನೆಗಳನ್ನು ಸಲ್ಲಿಸಿದ್ದಾರೆ. ಕೆಲವರು ಇತರ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿರುವುದು, ಕೆಲವು ಮತದಾರರು ಅಸ್ತಿತ್ವದಲ್ಲಿಲ್ಲವೆಂದು ಪತ್ತೆಯಾಗಿರುವುದು, ಡಿಸೆಂಬರ್ 18ರೊಳಗೆ ಅಗತ್ಯ ಅರ್ಜಿ ನಮೂನೆಯನ್ನು ಸಲ್ಲಿಸದಿರುವುದು ಹಾಗೂ ಕೆಲವರು ಯಾವುದೋ ಕಾರಣದಿಂದ ಮತದಾರರಾಗಿ ನೋಂದಾಯಿಸಲು ಇಚ್ಛಿಸದಿರುವುದು ಮತದಾರರು ಹೆಸರುಗಳನ್ನು ಅಳಿಸಲು ಕಾರಣವೆಂದು ಚುನಾವಣಾ ಆಯೋಗ ಹೇಳಿದೆ.

ಮೊದಲ ಹಂತದ ಎಸ್‌ಐಆರ್ ಮುಕ್ತಾಯ: ಮಧ್ಯ ಪ್ರದೇಶ ಮತದಾರ ಪಟ್ಟಿಯಿಂದ 42 ಲಕ್ಷ ಹೆಸರು ತೆಗೆದುಹಾಕಿದ ಚುನಾವಣಾ ಆಯೋಗ

ಚುನಾವಣಾ ಆಯೋಗದ ಪ್ರಕಾರ, ಅಳಿಸಲಾದ ಹೆಸರುಗಳಲ್ಲಿ 6,49,885 (ಶೇಕಡಾ 2.33) ಮೃತ ಮತದಾರರು, 14,61,769 (ಶೇಕಡಾ 5.25) ಸ್ಥಳಾಂತರಗೊಂಡ ಅಥವಾ ಗೈರುಹಾಜರಾದ ಮತದಾರರು ಮತ್ತು 1,36,029 (ಶೇಕಡಾ 0.49) ಬಹು ಸ್ಥಳಗಳಲ್ಲಿ ನೋಂದಣಿಯಾಗಿರುವ ಮತದಾರರು ಸೇರಿದ್ದಾರೆ.

ಎಣಿಕೆ (enumeration) ಅವಧಿ ಮಂಗಳವಾರ ಅಂತ್ಯಗೊಂಡಿದ್ದರೂ, ಅರ್ಹ ವ್ಯಕ್ತಿಗಳನ್ನು ಪಟ್ಟಿಗೆ ಸೇರಿಸುವುದು ಅಥವಾ ಅನರ್ಹ ಹೆಸರುಗಳನ್ನು ತೆಗೆದುಹಾಕುವ ಕುರಿತು ಯಾವುದೇ ವ್ಯಕ್ತಿ ಡಿಸೆಂಬರ್ 23ರಿಂದ 2026ರ ಜನವರಿ 22ರವರೆಗೆ ನಡೆಯುವ ಹಕ್ಕು ಮಂಡನೆ ಮತ್ತು ಆಕ್ಷೇಪಣೆಗಳ ಅವಧಿಯಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು. ಕೇರಳದ ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 21, 2026 ರಂದು ಪ್ರಕಟಿಸಲಾಗುವುದು.

ಮಧ್ಯಪ್ರದೇಶದ ಕರಡು ಮತದಾರರ ಪಟ್ಟಿಯಲ್ಲಿ 42.74 ಲಕ್ಷ ಹೆಸರುಗಳಿಲ್ಲ

ಮಧ್ಯಪ್ರದೇಶದಲ್ಲಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯ ನಂತರ ಸಿದ್ಧಪಡಿಸಲಾದ ಕರಡು ಮತದಾರರ ಪಟ್ಟಿಯನ್ನು, ರಾಜಕೀಯ ಪಕ್ಷಗಳೊಂದಿಗೆ ನಡೆದ ಸಭೆಯ ಬಳಿಕ ಮಂಗಳವಾರ ಭಾರತೀಯ ಚುನಾವಣಾ ಆಯೋಗ (ECI) ಬಿಡುಗಡೆ ಮಾಡಿದೆ.

ಕರಡು ಪಟ್ಟಿಯಲ್ಲಿ ಮತದಾರರ ಡೇಟಾಬೇಸ್‌ನಲ್ಲಿ ವ್ಯಾಪಕ ಬದಲಾವಣೆಗಳು ನಡೆದಿರುವುದು ಬಹಿರಂಗವಾಗಿದೆ. ಇದರಲ್ಲಿ 42,74,160 ಹೆಸರುಗಳನ್ನು ತೆಗೆದುಹಾಕಲಾಗಿದ್ದು, 8,46,184 ಮತದಾರರು ಗುರುತಿಸದವರು (unmapped) ಎಂದು ಹೆಸರಿಡಲಾಗಿದೆ. ಈ ಅಂಕಿಅಂಶಗಳು ರಾಜಕೀಯ ಪಕ್ಷಗಳು ಹಾಗೂ ನಾಗರಿಕ ಸಮಾಜ ಸಂಘಟನೆಗಳ ಗಮನ ಸೆಳೆದಿವೆ.

ಆಯೋಗದ ಪ್ರಕಾರ, ತೆಗೆದುಹಾಕಲಾದ ಮತದಾರರಲ್ಲಿ 19.19 ಲಕ್ಷ ಪುರುಷರು ಮತ್ತು 23.64 ಲಕ್ಷ ಮಹಿಳೆಯರು ಸೇರಿದ್ದಾರೆ. ನವೆಂಬರ್ 7ರಂದು ಆರಂಭವಾದ 45 ದಿನಗಳ ಮನೆಮನೆಗೆ ತೆರಳಿ ನಡೆಸಿದ ದೈಹಿಕ ಪರಿಶೀಲನಾ ಪ್ರಕ್ರಿಯೆಯ ನಂತರ ಈ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಅವಧಿಯಲ್ಲಿ ಬೂತ್ ಮಟ್ಟದ ಅಧಿಕಾರಿಗಳು (Booth Level Officers) ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಮತದಾರರ ವಿವರಗಳನ್ನು ಪರಿಶೀಲಿಸಿದರು. ಒಟ್ಟು 5,74,06,143 ನೋಂದಾಯಿತ ಮತದಾರರಲ್ಲಿ, ಈ ಪ್ರಕ್ರಿಯೆಯ ವೇಳೆ 5,31,31,983 ಮತದಾರರು ಎಣಿಕೆ ಅರ್ಜಿಗಳನ್ನು ಸಲ್ಲಿಸಿದ್ದಾರೆ.

Bengal SIR Draft List: ಬಂಗಾಳದ SIR ಕರಡು ಪಟ್ಟಿ ಪ್ರಕಟ; 58 ಲಕ್ಷಕ್ಕೂ ಅಧಿಕ ಮತದಾರರ ಹೆಸರು ಡಿಲಿಟ್‌! ಚುನಾವಣಾ ಆಯೋಗ ಹೇಳಿದ್ದೇನು?

ಆಯೋಗದ ಹೇಳಿಕೆಯಂತೆ, 8,46,184 ಮತದಾರರು ಮೃತಪಟ್ಟಿರುವುದಾಗಿ ಪತ್ತೆಯಾಗಿದೆ. 8,42,677 ಮಂದಿ ಪರಿಶೀಲನೆಯ ವೇಳೆ ಗೈರಾಗಿದ್ದಾರೆ ಎಂದು ಗುರುತಿಸಲಾಗಿದೆ ಮತ್ತು 2.77 ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ಇತರೆ ಸ್ಥಳಗಳಲ್ಲಿ ಮತದಾರರಾಗಿ ನೋಂದಾಯಿಸಿಕೊಂಡಿದ್ದಾರೆ. ಜೊತೆಗೆ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಮೊದಲ ಹಂತದಲ್ಲಿ 8.35 ಲಕ್ಷಕ್ಕೂ ಹೆಚ್ಚು ಮತದಾರರನ್ನು ಗುರುತಿಸಿಲ್ಲ. ಅವರ ಪ್ರಕರಣಗಳನ್ನು ಇದೀಗ ಅಧಿಕೃತ ನೋಟಿಸ್‌ಗಳು ಮತ್ತು ದಾಖಲೆಗಳ ಪರಿಶೀಲನೆಯ ಮೂಲಕ ಪ್ರತ್ಯೇಕವಾಗಿ ನಿರ್ವಹಿಸಲಾಗುತ್ತದೆ.

ಎಸ್‌ಐಆರ್‌ನ ಮೊದಲ ಹಂತವು ಈಗ ಪೂರ್ಣಗೊಂಡಿದ್ದು, ಕರಡು ಪಟ್ಟಿಯು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಮತ್ತು ಬೂತ್ ಮಟ್ಟದ ಅಧಿಕಾರಿಗಳ ಮೂಲಕ ಲಭ್ಯವಿದೆ. ಹಕ್ಕು ಮತ್ತು ಆಕ್ಷೇಪಣೆಗಳನ್ನು ಜನವರಿ 22 ರವರೆಗೆ ಸಲ್ಲಿಸಬಹುದು ಮತ್ತು ಹೆಸರು ಕಾಣೆಯಾಗಿರುವ ಯಾವುದೇ ಅರ್ಹ ಮತದಾರರು ಫಾರ್ಮ್-6 ಅನ್ನು ಬಳಸಿಕೊಂಡು ಸೇರ್ಪಡೆಗೆ ಅರ್ಜಿ ಸಲ್ಲಿಸಬಹುದು. ಕುಂದುಕೊರತೆಗಳನ್ನು ನಿರ್ವಹಿಸಲು, 725 ಹೆಚ್ಚುವರಿ ಚುನಾವಣಾ ನೋಂದಣಿ ಅಧಿಕಾರಿಗಳನ್ನು ನೇಮಿಸಲಾಗಿದೆ. ಎರಡನೇ ಹಂತವು ಜನವರಿ 22 ರಿಂದ ಫೆಬ್ರವರಿ 14 ರವರೆಗೆ ನಡೆಯಲಿದ್ದು, ಅಂತಿಮ ಮತದಾರರ ಪಟ್ಟಿಯನ್ನು ಫೆಬ್ರವರಿ 21 ರಂದು ಪ್ರಕಟಿಸಲು ನಿರ್ಧರಿಸಲಾಗಿದೆ.