Massive Protests In PoK: ಪಿಒಕೆಯಲ್ಲಿ ಮುಂದುವರಿದ ಪ್ರತಿಭಟನೆ; ಹಿಂಸಾಚಾರಕ್ಕೆ 8 ಮಂದಿ ಬಲಿ
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಬುಧವಾರ (ಅಕ್ಟೋಬರ್ 1) ಕನಿಷ್ಠ 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಬಾಗ್ ಜಿಲ್ಲೆಯ ಧೀರ್‌ಕೋಟ್‌ನಲ್ಲಿ ನಾಲ್ವರು, ಮುಜಫರಾಬಾದ್ ಮತ್ತು ಮಿರ್ಪುರದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.

-

ಇಸ್ಲಾಮಾಬಾದ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (PoK) ಉದ್ವಿಗ್ನತೆ ಹೆಚ್ಚಾಗಿದ್ದು, ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಇದರಿಂದಾಗಿ ಬುಧವಾರ (ಅಕ್ಟೋಬರ್ 1) ಕನಿಷ್ಠ 8 ಮಂದಿ ನಾಗರಿಕರು ಮೃತಪಟ್ಟಿದ್ದಾರೆ (Massive Protests In PoK). ಬಾಗ್ ಜಿಲ್ಲೆಯ ಧೀರ್‌ಕೋಟ್‌ನಲ್ಲಿ ನಾಲ್ವರು, ಮುಜಫರಾಬಾದ್ ಮತ್ತು ಮಿರ್ಪುರದಲ್ಲಿ ತಲಾ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮುಜಫರಾಬಾದ್‌ನಲ್ಲಿ ಮಂಗಳವಾರ ಇಬ್ಬರು ಮೃತಪಟ್ಟಿದ್ದು, 3 ದಿನಗಳಲ್ಲಿ ಒಟ್ಟು ಸಾವಿನ ಸಂಖ್ಯೆ ಸಂಖ್ಯೆ 10ಕ್ಕೆ ಏರಿದೆ.
ಅವಾಮಿ ಕ್ರಿಯಾ ಸಮಿತಿ (AAC) ನೇತೃತ್ವದಲ್ಲಿ ನಡೆದ ಪ್ರತಿಭಟನೆ ಕೆಲವು ದಿನಗಳಿಂದ ಪಿಒಕೆಯನ್ನು ಸ್ತಬ್ಧಗೊಳಿಸಿದೆ. ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಅದಾಗ್ಯೂ ಸಾರಿಗೆ ಸೇವೆ ಎಂದಿನಂತೆ ಇದೆ ಎಂದು ವರದಿಗಳು ತಿಳಿಸಿವೆ.
#BREAKING: 8 civilians have been killed and more than 100 injured in fresh unrest across Pakistan-Occupied Kashmir (PoK). Pakistani forces opened fire on protestors in Dhirkot, Bagh district, killing 4. Two more deaths were reported in Dadyal, Mirpur and Chamyati village near… pic.twitter.com/ZizklbbPcH
— Aditya Raj Kaul (@AdityaRajKaul) October 1, 2025
ಈ ಸುದ್ದಿಯನ್ನೂ ಓದಿ: P೦K Unrest: ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಸರ್ಕಾರದ ವಿರುದ್ಧ ಪಿಒಕೆಯಲ್ಲಿ ಭಾರೀ ಪ್ರತಿಭಟನೆ!
ಬುಧವಾರ ಬೆಳಗ್ಗೆ ಪ್ರತಿಭಟನಾಕಾರರು ಮುಜಫರಾಬಾದ್‌ಗೆ ತೆರಳುವ ತಮ್ಮ ಮೆರವಣಿಗೆಯನ್ನು ತಡೆಯಲು ಸೇತುವೆಗಳ ಮೇಲೆ ಇರಿಸಲಾಗಿದ್ದ ಕಲ್ಲುಗಳನ್ನು ಎಸೆದು ದೊಡ್ಡ ಕಂಟೇನರ್‌ಗಳನ್ನು ಉರುಳಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಭಾರೀ ಭದ್ರತೆಯ ಹೊರತಾಗಿಯೂ ಎಎಸಿಯ ಲಾಂಗ್ ಮಾರ್ಚ್ ಮುಂದುವರಿದಿದೆ. ಪಾಕಿಸ್ತಾನದಲ್ಲಿ ವಾಸಿಸುವ ಕಾಶ್ಮೀರಿ ನಿರಾಶ್ರಿತರಿಗೆ ಮೀಸಲಾಗಿರುವ ಪಿಒಕೆಯಲಿನ 12 ವಿಧಾನಸಭಾ ಸ್ಥಾನಗಳನ್ನು ರದ್ದುಗೊಳಿಸುವುದು ಸೇರಿದಂತೆ ಒಟ್ಟು 38 ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಲಾಗುತ್ತಿದೆ.
Protests erupt in #POK!
— Kashmiri Voice (@kmr_now) October 1, 2025
Defiant locals tossed away containers placed by Pak forces to block them. The people’s uprising exposes Pakistan’s hollow claims on Kashmir—revealing only oppression, injustice & betrayal. #POKProtests #PakOppression #KashmirTruth pic.twitter.com/cY9nn6dyrw
"70 ವರ್ಷಗಳಿಗೂ ಹೆಚ್ಚು ಕಾಲ ನಮ್ಮ ಜನರಿಗೆ ನಿರಾಕರಿಸಲ್ಪಟ್ಟ ಮೂಲಭೂತ ಹಕ್ಕುಗಳನ್ನು ಮರಳಿ ಒದಗಿಸಲು ಅಭಿಯಾನ ಆರಂಭಿಸಿದ್ದೇವೆ. ಜನರಿಗೆ ಹಕ್ಕುಗಳನ್ನು ಒದಗಿಸದಿದ್ದರೆ ಅವರ ರೋಷವನ್ನು ಎದುರಿಸಲು ಸಜ್ಜಾಗಿʼʼ ಎಂದು ಎಎಸಿ ನಾಯಕ ಶೌಕತ್ ನವಾಜ್ ಮಿರ್ ಹೇಳಿದ್ದಾರೆ. ಪ್ರಧಾನಿ ಶೆಹಬಾಜ್ ಷರೀಫ್ ಆಡಳಿತಕ್ಕೆ ಎಚ್ಚರಿಕೆ ನೀಡಿದ ಅವರು, ʼʼಜನರ ತಾಳ್ಮೆಯ ಕಟ್ಟೆ ಒಡೆದರೆ ಮುಂದಿನ ಪರಿಣಾಮ ಊಹಿಸಲು ಸಾಧ್ಯವಿಲ್ಲʼʼ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಯಾಗಿ ಸರ್ಕಾರ ಭಾರೀ ಶಸ್ತ್ರಸಜ್ಜಿತ ಗಸ್ತು ಪಡೆಗಳನ್ನು ಪಿಒಕೆ ಪಟ್ಟಣಗಳಲ್ಲಿ ನಿಯೋಜಿಸಿದೆ. ನೆರೆಯ ಪಂಜಾಬ್ ಪ್ರಾಂತ್ಯದಿಂದ ಸಾವಿರಾರು ಸೈನಿಕರನ್ನು ಕಳುಹಿಸಲಾಗಿದೆ. ಜತೆಗೆ ಇಸ್ಲಾಮಾಬಾದ್‌ನಿಂದ ಹೆಚ್ಚುವರಿಯಾಗಿ 1,000 ಸಿಬ್ಬಂದಿ ಧಾವಿಸಿದ್ದಾರೆ. ಈ ಪ್ರದೇಶದಲ್ಲಿ ಇಂಟರ್‌ನೆಟ್ ನಿರ್ಬಂಧಿಸಲಾಗಿದೆ. ಕಳೆದ ವಾರ ಪಾಕಿಸ್ತಾನ ವಾಯುಪಡೆಯ ಜೆ-17 ಫೈಟರ್ ಜೆಟ್‌ಗಳು ಖೈಬರ್ ಪಖ್ತುನ್ಖ್ವಾದಲ್ಲಿ ಚೀನಾ ನಿರ್ಮಿತ ಎಲ್‌ಎಸ್-6 ಲೇಸರ್-ಗೈಡೆಡ್ ಬಾಂಬ್‌ಗಳನ್ನು ಬಳಸಿ 30 ನಾಗರಿಕರನ್ನು ಹತ್ಯೆಗೈದ ನಂತರ ಪ್ರತಿಭಟನೆ ಆರಂಭವಾಯಿತು.
ʼʼಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಭದ್ರತಾ ಪಡೆಗಳ ನಿಯೋಜನೆ ಅಗತ್ಯʼʼ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮುದಸ್ಸರ್ ಫಾರೂಕ್ ತಿಳಿಸಿದ್ದಾರೆ. ಅವಾಮಿ ಕ್ರಿಯಾ ಸಮಿತಿಯ ಸಮಾಲೋಚಕರು, ಪಿಒಕೆ ಆಡಳಿತ ಮತ್ತು ಫೆಡರಲ್ ಸಚಿವರ ನಡುವಿನ ಮಾತುಕತೆಗಳು ಮುರಿದುಬಿದ್ದ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಸಮಿತಿಯು ಗಣ್ಯರಿಗೆ ನೀಡುವ ಸವಲತ್ತುಗಳು ಮತ್ತು ನಿರಾಶ್ರಿತರ ಅಸೆಂಬ್ಲಿ ಸ್ಥಾನಗಳನ್ನು ತೆಗೆದುಹಾಕಲು ನಿರಾಕರಿಸಿದ್ದರಿಂದ ಮಾತುಕತೆ ಸಂಪೂರ್ಣ ವಿಫಲವಾಯಿತು.